Breaking News

ಒಂದಲ್ಲ, ಎರಡಲ್ಲ ಬರೋಬ್ಬರಿಗೆ 12 ಸೀರಿಯಲ್ ನಟಿಯರಿಗೆ ಡ್ರಗ್ಸ್ ಲಿಂಕ್

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ದಂಧೆಯಲ್ಲಿ ಕೇವಲ ಸಿನಿಮಾ ತಾರೆಯರು ಮಾತ್ರವಲ್ಲದೇ ಸೀರಿಯಲ್ ನಟಿಯರಿಗೂ ಡ್ರಗ್ಸ್ ಲಿಂಕ್ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ತನಿಖೆ ವೇಳೆ ಸಾಕಷ್ಟು ಮಾಹಿತಿ ಲಭಿಸಿದೆ. ಇದರ ಅನ್ವಯ ಕೆಲ ಸ್ಯಾಂಡಲ್‍ವುಡ್ ನಟಿಯರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. …

Read More »

ಪಬ್‌ಜಿ ನಿಷೇಧ – ಚೀನಾದ ಟೆನ್ಸೆಂಟ್‌ ಕಂಪನಿಗೆ 14 ಶತಕೋಟಿ ಡಾಲರ್‌ ನಷ್ಟ

ಬೀಜಿಂಗ್‌: ಭಾರತದ ಸರ್ಕಾರ ಜನಪ್ರಿಯ ಗೇಮಿಂಗ್‌ ಅಪ್ಲಿಕೇಶನ್‌ ಪಬ್‌ಜಿಯನ್ನು ನಿಷೇಧ ಮಾಡಿದ ಬೆನ್ನಲ್ಲೇ ಚೀನಾ ಟೆನ್ಸೆಂಟ್‌ ಕಂಪನಿಯ ಷೇರು ಭಾರೀ ಇಳಿಕೆಯಾಗಿದೆ. ಚೀನಾದ ದೈತ್ಯ ಇಂಟರ್‌ನೆಟ್‌ ಕಂಪನಿ ಟೆನ್ಸೆಂಟ್‌ ಷೇರು ಶೇ.2ರಷ್ಟು ಇಳಿಕೆಯಾಗಿದೆ. ಪರಿಣಾಮ ಮಾರುಕಟ್ಟೆ ಮೌಲ್ಯದಲ್ಲಿ 14 ಶತಕೋಟಿ ಡಾಲರ್‌ ಕರಗಿ ಹೋಗಿದೆ. ಪಬ್‌ಜಿ ಆಟಕ್ಕೆ ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, 17.5 ಕೋಟಿ ಜನ ಬಳಕೆ ಮಾಡುತ್ತಿದ್ದರು. ಲಡಾಖ್‌ ಗಡಿಯಲ್ಲಿ ಚೀನಾ ಕಿರಿಕ್‌ ಮಾಡಿದ ಬೆನ್ನಲ್ಲೇ ದೇಶದ ಭದ್ರತೆ …

Read More »

ಪ್ರತೀಕ್ ಶೆಟ್ಟಿ ದೊಡ್ಡ ಡ್ರಗ್ ಪೆಡ್ಲರ್: ಅಲೋಕ್ ಕುಮಾರ್

ಬೆಂಗಳೂರು: ಈಗ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಪ್ರತೀಕ್ ಶೆಟ್ಟಿ ಒಬ್ಬ ದೊಡ್ಡ ಪೆಡ್ಲರ್ ಆಗಿದ್ದ ಎಂದು ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಕೇಸಿನಲ್ಲಿ ದಿನಕ್ಕೊಂದು ವ್ಯಕ್ತಿಯ ಹೆಸರು ಕೇಳಿ ಬರುತ್ತಿದೆ. ಸಿಸಿಬಿ ಪೊಲೀಸರು ಈಗಾಗಲೇ, ನಟಿ ರಾಗಿಣಿ ಅಪ್ತ ರವಿಶಂಕರ್ ನನ್ನು ಬಂಧಿಸಿದ್ದಾರೆ. ಜೊತೆಗೆ ಹೈಟೆಕ್ ಡ್ರಗ್ ದಂಧೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಕಾರ್ತಿಕ್ ರಾಜು, ರಾಹುಲ್, ಪ್ರತೀಕ್ …

Read More »

ನಟಿ ಸಂಜನಾ ಆಪ್ತನ ಜೊತೆ ಖ್ಯಾತ ರಾಜಕಾರಣಿಯ ಪುತ್ರನಿಗೂ ಲಿಂಕ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಮಾಜಿ ಸಂಸದರೊಬ್ಬರ ಮಗನ ಹೆಸರು ಕೇಳಿಬಂದಿದೆ. ಹೌದು. ನಟಿ ಸಂಜನಾ ಆಪ್ತ ರಾಹುಲ್‌ನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತನ ಮೊಬೈಲ್‌ನಲ್ಲಿರುವ ವಿಡಿಯೋದಲ್ಲಿರುವ ಪಾರ್ಟಿಯಲ್ಲಿ ಮಾಜಿ ಸಂಸದನ ಪುತ್ರ ಭಾಗಿಯಾಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ವಿಡಿಯೋವನ್ನು ಇಟ್ಟುಕೊಂಡು ಮತ್ತಷ್ಟು ಪ್ರಶ್ನೆಗಳನ್ನು ರಾಹುಲ್‌ಗೆ ಕೇಳಿದಾಗ ವಾರಕ್ಕೊಮ್ಮೆ ನಾನು ಆತನ ಜೊತೆ ಮಾತನಾಡುತ್ತಿದ್ದೆಎಂದಿದ್ದಾನೆ. ಈಗ ಸಿಸಿಬಿ ಪೊಲೀಸರು ರಾಜಕಾರಣಿಯ ಪುತ್ರನ ಪಾತ್ರದ ಬಗ್ಗೆ …

Read More »

ಚಿತ್ರರಂಗ ಅಂತಲ್ಲಾ ಎಲ್ಲಾ ಕಡೆ ಈ ಡ್ರಗ್ಸ್ ಮಾಫಿಯಾ ಇದೆ: ಸಂಸದೆ ಸುಮಲತಾ

ಬೆಂಗಳೂರು: 40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು ಕಂಡಿಲ್ಲ ಎಂದು ನಟಿ ಮತ್ತು ಮಂಡ್ಯ ಸಂಸದೆ ಸುಮಲತಾ ಅವರು ಹೇಳಿದ್ದಾರೆ. ಇಂದು ಸ್ಯಾಂಡಲ್‍ವುಡ್‍ನಲ್ಲಿ ಖ್ಯಾತ ಗಾಯಕ ಎಸ್‍ಪಿಬಿಯವರು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನ ಕಾರ್ಯಕ್ರಮವನ್ನು ಆಯೋಚಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಿದ ಸುಮಲತಾ ಅವರು, ಯುವಜನರು ದುಶ್ಚಟಗಳ ದಾಸರಾಗುವುದು ತಪ್ಪು ಎಂದು ತಿಳಿಸಿದರು. 40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು …

Read More »

ಕೇಂದ್ರ ಸರ್ಕಾರದ ವಿಶ್ವಾಸದ್ರೋಹಕ್ಕೆ ತಲೆಬಾಗಿರುವ B.S.Y.: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಕೇಂದ್ರ ಸರ್ಕಾರದ ವಿಶ್ವಾಸದ್ರೋಹಕ್ಕೆ ತಲೆಬಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಿಎಸ್ ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್ ಬಿ ಐನಿಂದ ಸಾಲ ಪಡೆಯಲು ತೀರ್ಮಾನಿಸುವ ಮೂಲಕ ರಾಜ್ಯದ ಜನತೆಯನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಸಾಲಮಾಡಿಯಾದರೂ ಕೊರೊನಾ ನಿಯಂತ್ರಿಸುತ್ತೇನೆ, ಪ್ರವಾಹ ಪೀಡಿತರ ಪರಿಹಾರ ನೀಡುತ್ತೇನೆ, ಸರ್ಕಾರಿ ನೌಕರರ ಸಂಬಳಕ್ಕೆ ಸಾಲ ಮಾಡುತ್ತೇನೆ… ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರತಿಯೊಂದಕ್ಕೂ …

Read More »

ಅಕ್ಕ ಮತ್ತು ತಮ್ಮ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ………..

ಬೆಳಗಾವಿ- ಬೆಳಗಾವಿ ನಗರದ ಶಹಾಪೂರ ಪ್ರದೇಶದ ಆಚಾರಿಗಲ್ಲಿಯಲ್ಲಿ ವಯಸ್ಕರ ಅಕ್ಕ ಮತ್ತು ತಮ್ಮ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನದ ಹಿಂದೆ ಆಚಾರಿಗಲ್ಲಿಯ ಮನೆಯಲ್ಲಿ ಅಕ್ಕ ಮತ್ತು ತಮ್ಮ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,ಮನೆಯಿಂದ ದುರ್ವಾಸನೆ ಬಂದು,ಪ್ರಕರಣ ಇವತ್ತು ಬೆಳಕಿಗೆ ಬಂದಿದೆ. 61 ವರ್ಷ ವಯಸ್ಸಿನ ಯದುಕುಲೇಶ ನಾಯಿಕ,70 ವರ್ಷದ ಪಂಕಜಾ ರಾಮಚಂದ್ರ ನಾಯಿಕ,ಆತ್ಯಹತ್ಯೆ ಮಾಡಿಕೊಂಡಿದ್ದು,ಇಬ್ಬರೂ ಅವಿವಾಹಿತರಾಗಿದ್ದರು,ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವದರಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ …

Read More »

ಕಾರ್ತಿಕ್ ರಾಜ್ ಮತ್ತು ಪೆಡ್ಲರ್ ಪ್ರತೀಕ್ ಶೆಟ್ಟಿ ಸೇರಿ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು…………!

ಬೆಂಗಳೂರು: ಸ್ಯಾಂಡಲ್‍ವುಡ್‍ಗೆ ಡ್ರಗ್ ಮಾಫಿಯಾ ನಂಟು ಇರೋದು ಸಿಸಿಬಿ ತನಿಖೆಯಿಂದ ಗೊತ್ತಾಗುತ್ತಿದೆ. ಇದರ ನಡುವೆಯೇ ಈ ಹಿಂದೆಯೇ ಪೆಡ್ಲರ್ ಪ್ರತೀಕ್ ಶೆಟ್ಟಿಯನ್ನು ಅರೆಸ್ಟ್ ಮಾಡಿದ್ದೇವು ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆಮಾತನಾಡಿದ ಅಲೋಕ್ ಕುಮಾರ್, 2018ರಲ್ಲೇ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ಬಂಧನವಾಗಿತ್ತು. ಆದರೆ ಪ್ರತಿಕ್ ಶೆಟ್ಟಿ ಮತ್ತು ಕಾರ್ತಿಕ್ ರಾಜ್ ನಂಟಿನ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಸದ್ಯ ಸಿಸಿಬಿ ಪೊಲೀಸರ ವಶದಲ್ಲಿರುವ …

Read More »

ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

ಬೆಂಗಳೂರು: ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮೆಟ್ರೋ ಓಟಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಕೋವಿಡ್‌ 19 ಕಾರಣದಿಂದ ಮಾರ್ಚ್ 22 ರಿಂದ ಮೆಟ್ರೋ ಸೇವೆ ರದ್ದುಪಡಿಸಲಾಗಿತ್ತು. ಈಗ ಪ್ರಯಾಣಿಕರಿಗೆ ಕೆಲ ಷರತ್ತಗಳನ್ನು ವಿಧಿಸಿ ಮೆಟ್ರೋ ಓಡಿಸಲು ಸಿದ್ಧತೆ ನಡೆಸಿದೆ. ಸೆಪ್ಟೆಂಬರ್ 7 ರಿಂದ 10ನೇ ತಾರೀಖಿನವರೆಗೆ ನೇರಳೆ ಮಾರ್ಗದಲ್ಲಿ ಬೆಳಗ್ಗೆ 3 ಗಂಟೆ ಕಾಲ ಸಂಜೆ 3 ಗಂಟೆ ಕಾಲ ಮಾತ್ರ ಮೆಟ್ರೋ ಕಾರ್ಯಾಚರಣೆ …

Read More »

ಯಾವುದೇ ರಂಗದಲ್ಲಿದ್ದರು, ಎಷ್ಟೇ ದೊಡ್ಡವರ ಮಕ್ಕಳಾಗಿದ್ದರು ಶಿಕ್ಷೆ ವಿಧಿಸುತ್ತೇವೆ

ಬೆಂಗಳೂರು:  ಯಾವುದೇ ರಂಗದಲ್ಲಿದ್ದರು, ಎಷ್ಟೇ ದೊಡ್ಡವರ ಮಕ್ಕಳಾಗಿದ್ದರು, ಎಷ್ಟೇ ಪ್ರಭಾವಿಗಳಾಗಿದ್ದರು ಸಹಿತ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರೆ, ಅಂತಹವರಿಗೆ  ಶಿಕ್ಷೆ ವಿಧಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಡ್ರಗ್ಸ್ ದಂಧೆ ವಿಚಾರವಾಗಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಡ್ರಗ್ಸ್ ವಿರುದ್ಧ ಕಳೆದ ಆರು ತಿಂಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಆರೋಪಿಗಳಿಗೆ ನೋಟಿಸ್ ಕೊಟ್ಟು ಕರೆಸಿ ವಿಚಾರಣೆ ಮಾಡ್ತಿದ್ದೇವೆ.  ಸುಮ್ ಸುಮ್ಮನೆ ಹೆಸರುಗಳನ್ನು ಹೇಳೋದು ತಪ್ಪಾಗುತ್ತೆ. …

Read More »