ಮಂಡ್ಯ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಇಷ್ಟು ದಿನ ಸಕ್ಕರೆ ನಾಡು ಮಂಡ್ಯದಿಂದ ದೂರವೇ ಉಳಿದಿತ್ತು. ಆದರೆ ಈಗ ದೆಹಲಿಯ ನಿಜಾಮುದ್ದೀನ್ ಸಭೆಗೆ ಹೋಗಿದ್ದ ಏಳು ಜನರಿಂದ ಮಂಡ್ಯದಲ್ಲೂ ಸಹ ಕೊರೊನಾ ವೈರಸ್ ಕಂಡು ಬಂದಿದೆ. ಈ ಭಯದಿಂದಲೇ ಜಿಲ್ಲೆಯಲ್ಲಿ ರೈತನೊಬ್ಬ ನೋಟುಗಳನ್ನು ಸೋಪಿನ ನೀರಿನಿಂದ ತೊಳೆದಿದ್ದಾನೆ. ಮಂಡ್ಯ ತಾಲೂಕಿನ ಮಾರಚಾಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೋಟಿನಿಂದ ಕೊರೊನಾ ಹರಡುತ್ತೆ ಎಂದು ನೋಟುಗಳನ್ನು ನೀರಿನಿಂದ ರೈತ ತೊಳೆದಿದ್ದಾನೆ. ರೈತ …
Read More »ತುಮಕೂರು:ಕೊರೊನಾ ಮಹಾಮಾರಿಗೆ ದೇವರ ಪಟ್ಟಕಟ್ಟಿ ಪೂಜೆ
ತುಮಕೂರು: ನಗರ ಸೇರಿದಂತೆ ಜಿಲ್ಲೆಯ ಜನರು ಕೊರೊನಾ ಮಹಾಮಾರಿಗೆ ದೇವರ ಪಟ್ಟಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ. ಮಹಾಮಾರಿಗೆ ‘ಕೊರೊನಾ ಅಮ್ಮ’ ಎಂದು ಹೆಸರಿಟ್ಟು ಪೂಜಿಸಲಾಗುತ್ತಿದೆ. ಗ್ರಾಮಗಳ ಹೊರವಲಯದಲ್ಲಿ ಎಮ್ಮೆಯ ಮುಖದ ರೀತಿಯಲ್ಲಿ ಮಣ್ಣಿನಲ್ಲಿ ಗೊಂಬೆ ತಯಾರಿಸಲಾಗಿದೆ. ಈ ಗೊಂಬೆಯನ್ನು ಕೊರೊನಾ ಅಮ್ಮನ ಪ್ರತಿರೂಪ ಎಂದು ಹೇಳ್ತಿರುವ ಜನರು ತೆಂಗಿನಕಾಯಿ ಒಡೆದು, ಆರತಿ ಬೆಳಗಿ ಪೂಜೆ ಮಾಡುತ್ತಿದ್ದಾರೆ. ಈ ಹಿಂದೆ ಗ್ರಾಮಗಳಲ್ಲಿ ಪ್ಲೇಗ್ ಬಂದಾಗ ಇದೇ ರೀತಿ ಊರಿನ ಹೊರಗಿನ ಕೆರೆ, ಕಟ್ಟೆ …
Read More »ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪಂಚ ಸಲಹೆ
ನವದೆಹಲಿ: ದೇಶಾದ್ಯಂತ ಹದ್ದು ಮೀರುತ್ತಿರುವ ಕೊರೊನಾ ನಿಯಂತ್ರಣಕ್ಕೆ ವಿಪಕ್ಷ ನಾಯಕರ ಸಲಹೆ ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ, ಇವತ್ತು ಪ್ರಧಾನಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಂಸದರ ಶೇ.30ರಷ್ಟು ಸಂಬಳ ಕಡಿತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಟದ ಆರ್ಥಿಕ ಕ್ರೋಢೀಕರಣಕ್ಕಾಗಿ ಐದು ಸಲಹೆ ನೀಡಿದ್ದಾರೆ. ಪ್ರಧಾನಿಗೆ ಸೋನಿಯಾ ‘ಪಂಚ’ ಸಲಹೆ: ಸಲಹೆ …
Read More »ಅಧಿಕಾರಿಗಳ ದಾಳಿ – ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಜಾಲ ಪತ್ತೆ
ಶಿವಮೊಗ್ಗ: ಕೊರೊನಾ ಭೀತಿಯಿಂದ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯಬಾರದು ಎಂಬ ಕಾರಣದಿಂದ ರಾಜ್ಯ ಸರ್ಕಾರ ಕಳೆದ ಎರಡು ದಿನಗಳಿಂದ ಎರಡು ತಿಂಗಳಿನದ್ದು ಪಡಿತರ ಅಕ್ಕಿ, ಗೋಧಿ ವಿತರಿಸುತ್ತಿದೆ. ಆದರೆ ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿ ಇದೀಗ ಸಿಕ್ಕಿಬಿದ್ದಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ನಗರದ ಹೊರ ವಲಯದ ಕಲ್ಲೂರು ಬಳಿಯ ಫಾರಂ ಹೌಸ್‍ವೊಂದರ …
Read More »ಫುಲ್ ಸೈಲೆಂಟ್ ಆದ ಬಿಜೆಪಿ ಚಾಣಕ್ಯ-ಮುಖ್ಯ ವಾಹಿನಿಯಲ್ಲಿಲ್ಲ ಗೃಹ ಸಚಿವ ಅಮಿತ್ ಶಾ
ನವದೆಹಲಿ: ಇಡೀ ದೇಶ ಕೊರೊನಾ ಸೋಂಕಿಗೆ ತತ್ತರಿಸಿ ಹೋಗಿದೆ. ಈ ವೈರಸ್ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ದೇಶದ ಜನರನ್ನ ಉದ್ದೇಶಿಸಿ ಪ್ರಧಾನಿ ಮೋದಿ ಮೂರು ಬಾರಿ ಮಾತನಾಡಿದ್ದಾರೆ. ಆದರೆ ಗೃಹ ಸಚಿವ ಅಮಿತ್ ಶಾ ಮಾತ್ರ ಈ ನಡುವೆ ನಾಪತ್ತೆಯಾಗಿದ್ದಾರೆ. ಕೊರೊನಾ ಸೋಂಕು ದೇಶವನ್ನು ಕಿತ್ತು ತಿನ್ನುತ್ತಿದೆ. ಭಾರತ ಲಾಕ್‍ಡೌನ್ ಆದ್ರೂ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡು ಬರ್ತಿಲ್ಲ. ಈ ನಡುವೆ ಲಾಕ್ …
Read More »ಕೆಟ್ಟ ದಾಖಲೆ ಬರೆದ ‘ಮಹಾ’- 1 ಸಾವಿರ ಸೋಂಕಿತರ ಗಡಿ ದಾಟಿದ ಮೊದಲ ರಾಜ್
ಮುಂಬೈ: ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆ ಒಂದು ಸಾವಿರ ಸೋಂಕಿತರ ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನದಲ್ಲಿ 150 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,018ಕ್ಕೆ ಕಂಡಿದೆ. ದೇಶದಲ್ಲಿ ಈವರೆಗೂ ಯಾವುದೇ ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಒಂದು …
Read More »ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮೇಲೆ ಕಿಡಿಗೇಡಿಗಳು ಹಲ್ಲೆ ನಡಿಸಿದರು
ರಾಯಬಾಗ ತಾಲೂಕಿನ ಕುಡಚಿಯಲ್ಲಿ ಕೊರೋನಾ ವೈರಸ್ 4 ಪ್ರಕರಣಗಳು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮೊದಲ ಹಂತ ಅಂದರೆ ಪ್ರಾಥಮಿಕವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದ 40 ಜನರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಇನ್ನೂ ಎರಡನೇ ಹಂತದಲ್ಲಿ ಇರುವ ಜನರನ್ನು ಪತ್ತೆ ಹಚ್ಚಲು ಹಾಗೂ ಆರೋಗ್ಯ ವಿಚಾರದಲ್ಲಿ ಸಮೀಕ್ಷೆ ಕಾರ್ಯ ನಡೆಸಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮುಂದಾದ ಸಂದರ್ಭದಲ್ಲಿ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನಲೆಯಲ್ಲಿ ಕುಡಚಿ …
Read More »ಪ್ರಿಯಕನೊಂದಿಗೆ ಸೇರಿ ಗಂಡನ ಕೊಂದ ಹೆಂಡತಿ
ಗೋಕಾಕ ನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶೆಟ್ಟೆವ್ವನ ತೋಟದ ಹತ್ತಿರ ನದಿಯಲ್ಲಿ ಅನುಮಾನಸ್ಪದವಾಗಿ ಶವ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ಎಸ್, ಪಿ, ಮತ್ತು ಹೆಚ್ಚುವರಿ ಎಸ್,ಪಿ,ಹಾಗೂ ಗೋಕಾಕ ವಲಯ ಡಿ,ವಾಯ್,ಎಸ್,ಪಿ,ಇವರ ಮಾರ್ಗದರ್ಶನದಲ್ಲಿ ಗೋಕಾಕ ಪೋಲಿಸ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿ ಕೊನೆಗೂ ಕೊಲೆಯ ರಹಸ್ಯ ಬೇದಿಸಿ ಆರೋಪಿಯನ್ನು ಬಂದಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಸಂಶಯಾಸ್ಪದ ಮೇಲೆ ಮೆಳವಂಕಿ ಗ್ರಾಮದಲ್ಲಿನ ವಿರೂಪಾಕ್ಷಿ ಚಂದ್ರಯ್ಯಾ ಮಠಪತಿಯನ್ನು ಪೋಲಿಸರು ವಿಚಾರಿಸಿದಾಗ ಕೊಲೆಯಾದ ಅಪ್ಪಣ್ಣ …
Read More »ಏಪ್ರಿಲ್ 14ರವರೆಗೆ ಬಡ ಕುಟುಂಬಗಳಿಗೆ ಉಚಿತವಾಗಿ ಒಂದು ಲೀಟರ್ ಹಾಲನ್ನು ವಿತರಿಸಲಾಗುತ್ತಿದೆ..
ಮೂಡಲಗಿ: ಮಹಾಮಾರಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅರಭಾವಿ ಕ್ಷೇತ್ರದ ಪಟ್ಟಣ ಪಂಚಾಯತಿಗಳಾದ ಅರಭಾವಿ, ಕಲ್ಲೋಳಿ ಹಾಗೂ ನಾಗನೂರ ಪಟ್ಟಣದ ಬಡ ಕುಟುಂಬಗಳು ಮತ್ತು ಕೊಳಗೇರಿ ನಿವಾಸಿಗಳಿಗೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉಚಿತವಾಗಿ 2450 ಲೀಟರ್ ನಂದಿನಿ ಹಾಲನ್ನು ಉಚಿತವಾಗಿ ವಿತರಿಸಲು ಸೂಚನೆ ನೀಡಿದ್ದಾರೆ ಎಂದು ಯುವ ಧುರೀಣ ನಾಗೇಶ ಶೇಖರಗೋಳ ತಿಳಿಸಿದರು. ಅರಭಾವಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೆ.ಎಮ್.ಎಫ್ ದಿಂದ ಉಚಿತ ನಂದಿನಿ …
Read More »ಬೆಂಗ್ಳೂರಿನಿಂದ ಮಂಗ್ಳೂರಿನವರೆಗೂ ಬಂದು ಜೈಲು ಸೇರಿದ ಅಸಾಮಿ…..
ಮಂಗಳೂರು: ಪ್ರೆಸ್ ಅಂತ ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಲಾಯಿಸುತ್ತಿದ್ದ ಮಧ್ಯ ವಯಸ್ಕನೊಬ್ಬ ಮಂಗಳೂರಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ಹುಸೈನ್ ಅಲಿ (58) ಬಂಧಿತ ನಕಲಿ ಪತ್ರಕರ್ತ. ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಯಾರು ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಆದರೆ ತುರ್ತು ಸೇವೆಯಲ್ಲಿ ಇರುವವರಿಗೆ, ವಿವಿಧ ಮಾಧ್ಯಮಗಳಲ್ಲಿ ವೃತ್ತಿ ಮಾಡುವವರಿಗೆ ವಿನಾಯಿತಿ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಪ್ರೆಸ್ ಅಂತ ನಕಲಿ ಗುರುತಿನ ಚೀಟಿ ಅಂಟಿಸಿ …
Read More »