ತುಮಕೂರು: ಸಿದ್ದಗಂಗಾ ಮಠದಲ್ಲಿ ಯಾರಿಗೂ ಕೊರೊನಾ ಪಾಸಿಟಿವ್ ಲಕ್ಷಣಗಳು ಇಲ್ಲ ಎಂದು ಸಿದ್ದಲಿಂಗ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ. ಮಠದಲ್ಲಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಇದೆ ಎಂದು ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಖುದ್ದು ಸ್ಪಷ್ಟನೆ ನೀಡಿದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಆಂಧ್ರದಿಂದ ಬಂದ ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬುದಾಗಿ ಪ್ರಚಾರವಾಗಿತ್ತು. ಆ ವಿದ್ಯಾರ್ಥಿಯನ್ನ ಜಿಲ್ಲಾಡಳಿತ ಪರೀಕ್ಷೆ ನಡೆಸಿತು. ಆತನ ಪರೀಕ್ಷೆಯಲ್ಲಿ ಎಲ್ಲಾ ವರದಿಗಳು ನೆಗೆಟಿವ್ ಬಂದಿದೆ ಎಂದು …
Read More »ಕೊರೊನಾ ವಿರುದ್ಧ ಹೋರಾಡಲು ಯೋಗ ಮುಖ್ಯ………..?
ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ ಯೋಗ ದಿನಾಚರಣೆ ಆಚರಿಸದಿರಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಜನರಿಗೆ ತಮ್ಮ ತಮ್ಮ ಮನೆಯಲ್ಲೇ ಕುಟುಂಬಸ್ಥರ ಜೊತೆ ಯೋಗ ಮಾಡುವಂತೆ ಮೋದಿ ಕರೆ ನೀಡಿದ್ದಾರೆ. ದೇಶದ್ಯಾಂತ ಬೆಳಗ್ಗೆ ಏಳು ಗಂಟೆಗೆ ಮನೆಯಲ್ಲಿ ಯೋಗ ದಿನ ಆಚರಿಸಲು ಕರೆ ನೀಡಿರುವ ಪ್ರಧಾನಿ ಮೋದಿ ಸ್ವತಃ ತಾವು ಮನೆಯಲ್ಲಿ ಯೋಗ ಮಾಡುತ್ತಿದ್ದಾರೆ. ದೆಹಲಿಯ ಲೋಕ ಕಲ್ಯಾಣ ಮಾರ್ಗ್ …
Read More »ಚಿತ್ರದುರ್ಗದ ಕೋವಿಡ್ ಆಸ್ಪತ್ರೆ ಶೀಲ್ ಡೌನ್
ಚಿತ್ರದುರ್ಗ: ಕೋವಿಡ್ ಆಸ್ಪತ್ರೆ ಹತ್ರಚಸುಳಿದಾಡೋಕೂ ಜನ್ರು ಹೆದರುತ್ತಾರೆ. ಆದರೆ ಕೋಟೆ ನಾಡಿನ ಜನರು ಮಾತ್ರ ಇಲ್ಲಿ ಹೋಗಿ ಸೆಲ್ಫಿ ತೆಗೆಯೋದು, ಒಳಗೆ ಹೋಗಿ ಬರೋದು ಮಾಡ್ತಾರಂತೆ ಅದಕ್ಕೆ ಆರೋಗ್ಯಾಧಿಕಾರಿಗಳು ಆಸ್ಪತ್ರೆಯನ್ನೆ ಸೀಲ್ ಡೌನ್ ಮಾಡಿದ್ದಾರೆ ಕೋಟೆ ನಾಡಿನ ಜನರು ಬೆಚ್ಚೋದಿಲ್ಲ. ಕೋರೋನಾ ಸೋಂಕಿಗೂ ಬಗ್ಗೋಲ್ಲ ಎನ್ನೋದನ್ನು ಸಾಬೀತು ಮಾಡಿದ್ದಾರೆ. ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿದ್ದ ಪಾಸಿಟಿವ್ ಪ್ರಕರಗಳು ಒಂದೂ ಇಲ್ಲದೆ ಕೋರೋನಾ ಮುಕ್ತವಾಗಿದೆ. ಇದಕ್ಕಾಗಿ ಆಸ್ಪತ್ರೆ ಹಾಗೂ ಅದರ ಮುಂದಿನ ರಸ್ತೆಯನ್ನು …
Read More »ರಾಮಲಿಂಗಾರೆಡ್ಡಿಗೆ ಉಪಮುಖ್ಯಮಂತ್ರಿ ಸ್ಥಾನ ಇಲ್ಲವೇ, ರಾಜ್ಯಸಭೈ ಸದಸ್ಯ ಆಫ ರ್?
ಬೆಂಗಳೂರು. ಜು.07 : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿಗೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಇಲ್ಲವೇ, ರಾಜ್ಯಸಭೈ ಸದಸ್ಯ ಸ್ಥಾನ ನೀಡುವಆಫ ರ್?ನ್ನು ಬಿಜೆಪಿ ನೀಡಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಒಂದು ವೇಳೆ ಉಪ ಮುಖ್ಯಮಂತ್ರಿಯಾಗಲು ಒಪ್ಪದೆ ಇದ್ದರೆ ರಾಜ್ಯಸಭೈಗೆ ನೇಮಕ ಮಾಡುವ ಭರವಸೆಯನ್ನು ಬಿಜೆಪಿ ಕೊಟ್ಟಿದೆ ಎನ್ನಲಾಗ್ತಿದೆ. ಇನ್ನು ರಾಮಲಿಂಗಾರೆಡ್ಡಿ ರಾಜ್ಯಸಭೈಗೆ ಆಯ್ಕೆಯಾದರೆ, ಅವರ ಪುತ್ರಿಯಾದ ಸೌಮ್ಯರೆಡ್ಡಿ ಅವರಿಗೆ ಸಚಿವ …
Read More »ಸಿನಿಮಾ ತಾರೆಯರು ಅಖಾಡಕ್ಕೆ ಇಳಿದಿಲ್ಲವೇಕೆ..?
ಸದ್ಯದಲ್ಲೇ ಚಿತ್ರ ಪ್ರದರ್ಶನ ಪುನರಾರಂಭ ಗೊಳ್ಳುವ ಸಾಧ್ಯತೆ ಇದೆ. ಪ್ರದರ್ಶನ ಪ್ರಾರಂಭ ವಾದ ಕೂಡಲೇ ಸಿನಿಮಾ ನೋಡಲು ಜನ ಚಿತ್ರ ಮಂದಿರಕ್ಕೆ ಬರುತ್ತಾರೆಯೇ? ಇಲ್ಲ. ಥಿಯೇಟರ್ ಪ್ರಾರಂಭವಾದ ತರುಣದಲ್ಲೇ ಜನ ಖಂಡಿತವಾಗಿ ಬರುವುದಿಲ್ಲ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‍ಕುಮಾರ್ (ಡಿ.ಕೆ.ರಾಮಕೃಷ್ಣ) ಮತ್ತು ಹಿರಿಯ ನಿಮಾಪಕ ಎಂ.ಬಿ.ಬಾಬು ಹೇಳುತ್ತಾರೆ. ಈ ವಿಷಯದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಭಿಪ್ರಾಯವೇ ಬೇರೆ. ಸದ್ಯಕ್ಕೆ ಜನರು ಒಟಿಟಿ ಮಾಧ್ಯಮದಲ್ಲಿ ಸಿನಿಮಾ ನೋಡುತ್ತಿರು ವುದು ನಿಜ. …
Read More »ಬೇಡಿದಷ್ಟು ಹಣ ಕೊಡದಿದ್ದರೆ ಖಲ್ಲಾಸ್ ಮಾಡುತ್ತೇವೆ,ಎಂದು ಬೆದರಿಸುತ್ತಿದ್ದ,ಇಬ್ಬರು ರೌಡಿಗಳನ್ನು ಬೆಳಗಾವಿಯ ಖಡೇಬಝಾರ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ.
ಬೆಳಗಾವಿ-ಬಿಲ್ಡರ್ ಗಳಿಗೆ,ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಫೋನ್ ಮಾಡಿ, ಬೇಡಿದಷ್ಟು ಹಣ ಕೊಡದಿದ್ದರೆ ಖಲ್ಲಾಸ್ ಮಾಡುತ್ತೇವೆ,ಎಂದು ಬೆದರಿಸುತ್ತಿದ್ದ,ಇಬ್ಬರು ರೌಡಿಗಳನ್ನು ಬೆಳಗಾವಿಯ ಖಡೇಬಝಾರ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೋಲೀಸ್ ಠಾಣೆ ಸೇರಿದಂತೆ ನಗರದ ಹಲವಾರು ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದ ಇಬ್ಬರು ರೌಡಿಗಳು ಫೋನ್ ಮುಖಾಂತರವೇ ಹಣವಂತರನ್ನು ಬೆದರಿಸುತ್ತ,ತಲೆಮರೆಸಿಕೊಂಡಿದ್ದರು. ಖಡೇಬಝಾರ್ ಪೋಲೀಸರು ಹಿರಿಯ ಪೋಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಲೆ ಬೀಸಿ ಇಬ್ಬರು ಆರೋಪಿಗಳನ್ನು ಬಂಧಿಸಿ,ಒಂದು …
Read More »ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ವಿಂಡೋ ಸೀಟ್ ಚಿತ್ರದ ಫಸ್ಟ್ ಪೋಸ್ಟರ್ ಲುಕ್…………
ಸಿನಿಮಾಗಳಲ್ಲಿ ಒಂದಷ್ಟು ಪಾತ್ರಗಳನ್ನು ನಿರ್ವಹಿಸುತ್ತಲೇ ನಟಿಯಾಗಿ ರೂಪುಗೊಂಡಿದ್ದವರು ಶೀತಲ್ ಶೆಟ್ಟಿ. ಈ ಹಿಂದೆ ಎರಡು ಕಿರುಚಿತ್ರಗಳನ್ನು ನಿರ್ದೇಶನ ಮಾಡೋ ಮೂಲಕ ಅವರು ನಿರ್ದೇಶಕಿಯಾಗುತ್ತ ಗಂಭೀರವಾಗಿ ಹೆಜ್ಜೆಯಿಡುತ್ತಿರುವ ಮುನ್ಸೂಚನೆ ನೀಡಿದ್ದರು. ಇದೀಗ ಯಾವ ಸದ್ದುಗದ್ದಲವೂ ಇಲ್ಲದೆ ಅವರೊಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಂಡೋ ಸೀಟ್ ಎಂಬ ಆಕರ್ಷಕವಾದ ಈ ಚಿತ್ರದ ಅತ್ಯಾಕರ್ಷಕ ಟೈಟಲ್ ಪೋಸ್ಟರ್ ಇದೀಗ ಲಾಂಚ್ ಆಗಿದೆ. ಇದು ಮಂಜುನಾಥ್ ಗೌಡ (ಜಾಕ್ ಮಂಜು) ನಿರ್ಮಾಣದ ಚಿತ್ರ. ಬಹುಕಾಲದಿಂದಲೂ ಈ …
Read More »ಪತ್ನಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆಗೆ ಶರಣಾದ ಪೇದೆ……….
ರಾಯ್‍ಪುರ: ಪೊಲೀಸ್ ಪೇದೆಯೋರ್ವ ಪತ್ನಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಛತ್ತೀಸ್‍ಗಢದ ರಾಜನಂದಗಾಂವ್‍ನ ಮನ್‍ಪುರನಲ್ಲಿ ನಡೆದಿದೆ. ಜಂಜಗೀರ್-ಚಂಪಾ ಜಿಲ್ಲೆಯ ಅಮ್ಲಿಡಿಹ್ ನಿವಾಸಿ ಮುಖೇಶ್ ಮನ್ಹಾರ್ (38), ಪತ್ನಿ ಬಬಿತಾ ಮನ್ಹಾರ್ (32) ಗುಂಡಿಕ್ಕಿ ಹತ್ಯೆ ಮಾಡಿ ತಾನೂ ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದಾರೆ. ಮುಖೇಶ್ ಅವರನ್ನು ನಕ್ಸಲ್ ಪೀಡಿತ ಪ್ರದೇಶದ ಮನ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 3 ವರ್ಷಗಳ ಕಾಲ ನಿಯೋಜಿಸಲಾಗಿತ್ತು. ಹೀಗಾಗಿ ಅವರು ಪತ್ನಿ ಬಬಿತಾ ಮನ್ಹಾರ್ ಮತ್ತು …
Read More »ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಇಲ್ಲ- ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ಕ್ವಾರಂಟೈನ್ ಮೊಹರು ಅಳಿಸಿ ಪರೀಕ್ಷೆಗೆ ಹಾಜರಾಗಿದ್ದಾಳೆಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದು ಸತ್ಯಕ್ಕೆ ದೂರವಾಗಿದೆ. ಈಗಾಗಲೇ ವಿದ್ಯಾರ್ಥಿನಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಹಾಗಾಗಿ ಆಕೆ ಪರೀಕ್ಷೆ ಬರೆದ ಕೊಠಡಿಯಲ್ಲಿ ಹಾಜರಿದ್ದ …
Read More »ನರೇಗಾ ಯೋಜನೆ ಸಂಜೀವಿನಿಯಾಗಿದ್ದು ಬಡ ಕುಟುಂಬಗಳ ನಿವಾ೯ಹಣೆಗೆ ಸಹಕಾರಿಯಾಗಿದೆ : ಕೆ.ಎಸ್.ಈಶ್ವರಪ್ಪ
ಹನೂರು: ಪ್ರಪಂಚವು ಇಂದು ಕೊರೋನೊ ಎಂಬ ಮಹಾಮಾರಿಯಿಂದ ತತ್ತರಿಸಿರುವಾಗ ನಮ್ಮ ದೇಶದ ಜನ ಸಂಕಷ್ಟದಲ್ಲಿದ್ದಾರೆ ಇವರಿಗೆ ನರೇಗಾ ಯೋಜನೆ ಸಂಜೀವಿನಿಯಾಗಿದ್ದು ಬಡ ಕುಟುಂಬಗಳ ನಿವಾ೯ಹಣೆಗೆ ಸಹಕಾರಿಯಾಗಿದೆ. ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಚಾ.ನಗರ ಜಿಲ್ಲೆಯ ಪ್ರಸಿದ್ದ ಪುಣ್ಯಕ್ಷೇತ್ರ ಶ್ರೀ ಮಲೈ ಮಹದೇಶ್ವರಬೆಟ್ಟ ಮಾದಪ್ಪನ ಸನ್ನಿಧಿಗೆ ಬೇಟಿ ನೀಡಿ ದಶ೯ನ ಮಾಡಿದ ಅವರು ಮ.ಬೆಟ್ಠ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ನರೇಗಾ ಕಾಮಾಗಾರಿ ವೀಕ್ಷಣೆ ಮಾಡಿ ರಸ್ತೆ …
Read More »