ಹೊಸದಿಲ್ಲಿ: ದೇಶದಲ್ಲಿ ಸತತ 15 ನೇ ದಿನವೂ ಪೆಟ್ರೋಲ್ ಡಿಸೇಲ್ ದರ ಏರಿಕೆಯಾಗಿದೆ. ಭಾನುವಾರ ಪೆಟ್ರೋಲ್ ಗೆ 35 ಪೈಸೆ, ಡಿಸೇಲ್ ಗೆ 60 ಪೈಸೆ ಏರಿಕೆ ದಾಖಲಿಸಿವೆ. ಕಳೆದ ಎರಡು ವಾರಗಳ ಅವಧಿಯಲ್ಲಿ ಈವರೆಗೂ ಪೆಟ್ರೋಲ್ 7. 97 ರೂ. ಏರಿಕೆಯಾದ್ರೆ, ಡಿಸೇಲ್ 8.88 ರೂ ಹೆಚ್ಚಿಗೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 79.23 ರೂ. ಡೀಸೆಲ್ ದರ 77.67 ದಾಖಲಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 86.06 …
Read More »ಕೋವಿಡ್ -19ರಿಂದ ರಕ್ಷಣೆ ಪಡೆಯಲು ಸ್ವಯಂ ಪ್ರೇರಣೆಯಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದೊಂದೇ ದಾರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಬೆಳಗಾವಿ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್ -19ರಿಂದ ರಕ್ಷಣೆ ಪಡೆಯಲು ಸ್ವಯಂ ಪ್ರೇರಣೆಯಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದೊಂದೇ ದಾರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಶೀನಪ್ಪ ಎಂ. ಹೇಳಿದರು. ಖಾಸಬಾಗದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕಾರ್ಯಕ್ರಮದಡಿ ಮುಚ್ಚಂಡಿಯ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಕೋವಿಡ್-19 ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋವಿಡ್ ಮಹಾಮಾರಿಯನ್ನು ಎಲ್ಲರೂ ಧೈರ್ಯದಿಂದ ಒಂದಾಗಿ ಎದುರಿಸಬೇಕಿದೆ. ನಮ್ಮ ನಿರ್ಲಕ್ಷ್ಯದಿಂದ ಸೋಂಕಿಗೆ ಒಳಗಾದರೆ …
Read More »ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ,
ಗೋಕಾಕ: ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಕುಟುಂಬ ಸದಸ್ಯರು ಮತ್ತು ಕಾರ್ಯಕರ್ತರೊಂದಿಗೆ ಉಪಹಾರ ಸೇವಿಸಿದರು. ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಭಾನುವಾರ ತಮ್ಮ ಮಕ್ಕಳಾದ ಪ್ರಿಯಾಂಕಾ ಹಾಗೂ ರಾಹುಲ್ ಜತೆಗೆ ಉಪಹಾರ ಸೇವಿದರು. ಇದೇ ವೇಳೆ ‘ಉದಯನಾಡು’ದೊಂದಿಗೆ ಮಾತನಾಡಿದ ಅವರು, ಸೂರ್ಯ, ಚಂದ್ರ ಗ್ರಹಣ ಗೋಚರ ಇದೊಂದು ಸಹಜ ಪ್ರಕ್ರಿಯೆ, ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಜನರಲ್ಲಿ …
Read More »ಮೌಢ್ಯಕ್ಕೆ ಸೆಡ್ಡು ಹೊಡೆದು ಮಾನವ ಬಂಧುತ್ವ ವೇದಿಕೆಯ ಸಂಚಾಲಕರು ಇಲ್ಲಿನ ಕೇಂದ್ರ ಕಚೇರಿಯಲ್ಲಿ ಭಾನುವಾರ ಬಾಡೂಟ ಸೇವಿಸಿದರು.
ಬೆಳಗಾವಿ: ಸೂರ್ಯಗ್ರಹಣ ಹಿನ್ನಲೆಯಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆದು ಮಾನವ ಬಂಧುತ್ವ ವೇದಿಕೆಯ ಸಂಚಾಲಕರು ಇಲ್ಲಿನ ಕೇಂದ್ರ ಕಚೇರಿಯಲ್ಲಿ ಭಾನುವಾರ ಬಾಡೂಟ ಸೇವಿಸಿದರು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ನೇತೃತ್ವದಲ್ಲಿ ವೇದಿಕೆಯ ಸಂಚಾಲಕರು, ಪ್ರಗತಿಪರರು, ಮುಂತಾದವರು ಭಾಗಿಯಾಗಿ ಊಟ ಸೇವಿಸಿದರು. ಯುವಕರು ಮೌಢ್ಯದಿಂದ ಹೊರಬರಬೇಕು. ವೈಚಾರಿಕ ಚಿಂತನೆಯತ್ತ ಹೆಜ್ಜೆ ಹಾಕಬೇಕು. ವರ್ಷಕ್ಕೊಮ್ಮೆ ಸಂಭವಿಸುವ ಸೂರ್ಯ, ಚಂದ್ರಗ್ರಹಣ ಗೋಚರಿಸುವ ಅದ್ಭುತ ಕ್ಷಣಗಳನ್ನು ಕಣ್ಣತುಂಬಿಕೊಳ್ಳಬೇಕು. ಸೂರ್ಯ, ಚಂದ್ರ ಗ್ರಹಣ ಪ್ರಕೃತಿಯಲ್ಲಿ …
Read More »ಕೊರೊನಾ ಸಮಯದಲ್ಲಿ ಕೆಎಸ್‍ಆರ್ ಟಿಸಿ ಹೊಸ ಆದೇಶ……!
ಬೆಂಗಳೂರು: ಕೊರೊನಾ ಸಮಯದಲ್ಲಿ ಕೆಎಸ್‍ಆರ್ ಟಿಸಿ ಹೊಸ ಆದೇಶವನ್ನು ಹೊರಡಿಸಿ ಸಿಬ್ಬಂದಿಯ ಆಕ್ರೋಶಕ್ಕೆ ಗುರಿಯಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ಡಿಪೋ ನಿಗದಿತ ಆದಾಯ ತರುವಂತೆ ಆದೇಶ ಹೊರಡಿಸಿದೆ. ಕೊರೊನಾ ಆತಂಕದ ನಡುವೆಯೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಈಗಾಗಲೇ ಬಿಎಂಟಿಸಿ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಸಿಬ್ಬಂದಿ ತಮ್ಮ ಒಂದು ಶಿಫ್ಟ್ ನಲ್ಲಿ ನಿಗದಿತ ಆದಾಯ ತರಬೇಕು. ಇಲ್ಲವಾದಲ್ಲಿ ಸಿಬ್ಬಂದಿಗೆ ಹಾಜರಾತಿ ನೀಡಲ್ಲ. ಡೀಸೆಲ್ ದರ ಏರಿಕೆಯ ನಷ್ಟ ತಪ್ಪಿಸಲು …
Read More »: 14 ವರ್ಷದ ಬಾಲಕಿಯನ್ನು ತಂದೆಯೇ ಗರ್ಭಿಣಿ ಮಾಡಿರುವ ವಿಕೃತ ಘಟನೆ…….
ಕೊಪ್ಪಳ: 14 ವರ್ಷದ ಬಾಲಕಿಯನ್ನು ಆಕೆಯ ತಂದೆಯೇ ಗರ್ಭಿಣಿ ಮಾಡಿರುವ ವಿಕೃತ ಘಟನೆ ನಡೆದಿದ್ದು, ಅಪ್ಪಂದಿರ ದಿನವೇ ಇಂತಹದ್ದೊಂದು ನೀಚ ಕೃತ್ಯ ಬಯಲಿಗೆ ಬಂದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಕೊಪ್ಪಳದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಖಾಸಗಿ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಮಗುವಿಗೆ ಜನ್ಮ ನೀಡಲು ಅವಳ ತಂದೆಯೇ ಕಾರಣ ಎಂದು ತಿಳಿದು ಬಂದಿದೆ. ಕುಡಿದ ಆಮಲಿನಲ್ಲಿ …
Read More »ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಆಯುಕ್ತ ಭಾಸ್ಕರ್ ರಾವ್ ಅವರು ಠಾಣೆಗಳಿಗೆ ಹತ್ತು ಸೂಚನೆ ರವಾನಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತ ಕೊರೊನಾ ವಾರಿಯರ್ಸ್ ಪೊಲೀಸರಿಗೂ ಸೋಂಕು ತಗುಲುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ನಗರದಲ್ಲಿ ಪೊಲೀಸರಿಗೆ ಸೋಂಕು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಆಯುಕ್ತ ಭಾಸ್ಕರ್ ರಾವ್ ಅವರು ಠಾಣೆಗಳಿಗೆ ಹತ್ತು ಸೂಚನೆ ರವಾನಿಸಿದ್ದಾರೆ. ಈ ಮೂಲಕ ಕೊರೊನಾ ವೈರಸ್‍ಗೆ ಇಲಾಖೆ ಮತ್ತಷ್ಟು ಸಿಬ್ಬಂದಿ ಒಳಗಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಏನು ಸೂಚನೆ?: 1. ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸಬೇಕು. ಗಾಬರಿಯಾಗಬೇಡಿ, …
Read More »ಗಡಿಯಲ್ಲಿ ಪುಂಡಾಟಿಕೆ ಮಾಡುವ ಚೀನಾಕ್ಕೆ ಸೂಕ್ತ ಉತ್ತರ ನೀಡಲು ಭಾರತೀಯ ಸೇನಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ
ನವದೆಹಲಿ: ಗಡಿಯಲ್ಲಿ ಪುಂಡಾಟಿಕೆ ಮಾಡುವ ಚೀನಾಕ್ಕೆ ಸೂಕ್ತ ಉತ್ತರ ನೀಡಲು ಭಾರತೀಯ ಸೇನಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಪೂರ್ವ ಲಡಾಕ್‍ನಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡೆಸಿದ ಮಹತ್ವದ ಸಭೆಯಲ್ಲಿ ಈ ಮಹತ್ವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಚೀನಾ ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜನೆ ಮಾಡಿಕೊಳ್ಳುತ್ತಿದ್ದು, ಮತ್ತೆ ಆಕ್ರಮಣ ಮಾಡುವ ಸಾಧ್ಯತೆಗಳಿದೆ. ಚೀನಾ ಗಡಿಯುದ್ಧಕ್ಕೂ …
Read More »International Yoga Day: ಬಿಜೆಪಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ………
ಬೆಂಗಳೂರು(ಜೂ.21): ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಯ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಿಡಕ್ಕೆ ನೀರು ಹಾಕುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಯೋಗ ಭಾರತೀಯ ಸಂಸ್ಕೃತಿಯಲ್ಲಿ ಅಮೂಲ್ಯವಾದ ಪದ್ಧತಿ. ಜಗತ್ತಿಗೆ ಮಹತ್ತರ ಕೊಡುಗೆಯನ್ನು ದೇಶ ಕೊಟ್ಟಿದೆ. ವಿಜ್ಞಾನ, ತಂತ್ರಜ್ಞಾನ, ಗಣಿತದಿಂದ ಹಿಡಿದು ಹಲವು ವಲಯಗಳಲ್ಲಿ ಕೊಡುಗೆಯನ್ನು ಕೊಟ್ಟಿದೆ. …
Read More »ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಜತೆ ನಾನು ಯಾವುದೇ ಪೈಪೋಟಿ ನಡೆಸುವುದಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ.21- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಜತೆ ನಾನು ಯಾವುದೇ ಪೈಪೋಟಿ ನಡೆಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷವೇ ಒಂದು ಶಕ್ತಿ. ನಾನು ಅಧ್ಯಕ್ಷ ಹುದ್ದೆಯಲ್ಲಿದ್ದರೆ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿದ್ದಾರೆ. ಅವರ ಹಿರಿತನ ಹಾಗೂ ಅನುಭವವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಅವರ ಜತೆ ನಾನು ಪೈಪೋಟಿಗಿಳಿಯುವುದಿಲ್ಲ ಎಂದು ಹೇಳಿದ್ದಾರೆ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಈ …
Read More »