ಮಡಿಕೇರಿ: ನಿವೃತ್ತಿ ಹೊಂದಿದ 24 ದಿನದಲ್ಲೇ ಎಎಸ್ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಮಾದೇಗೋಡು ಗ್ರಾಮದಲ್ಲಿ ನಡೆದಿದೆ. ಎಂ.ಎಸ್.ಈರಪ್ಪ ಮೃತ ಸಹಾಯಕ ಸಬ್ ಇನ್ಸ್ಪೆಕ್ಟರ್. ಈರಪ್ಪ ಕಳೆದ ಒಂದು ವರ್ಷದಿಂದ ಶನಿವಾರಸಂತೆ ಪೋಲಿಸ್ ಠಾಣೆಯಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೇ 30 ರಂದು ನಿವೃತ್ತಿ ಹೊಂದಿದ್ದರು. ಇಂದು ಬೆಳಗ್ಗೆ ಈರಪ್ಪ ತಮ್ಮ ಮನೆಯಲ್ಲೇ ಒಂಟಿ ನಳಿಕೆಯ ಬಂದೂಕು ಬಳಸಿ ಗುಂಡು ಹಾರಿಸಿಕೊಂಡು …
Read More »KSRTCಗೂ ಕಾಲಿಟ್ಟ ಕೊರೊನಾ- ಯಲ್ಲಾಪುರದಿಂದ ಬೆಂಗ್ಳೂರಿಗೆ ಬಂದ ಕಂಡಕ್ಟರ್ಗೆ ಪಾಸಿಟಿವ್
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಷ್ಟು ದಿನ ಹೊರ ದೇಶ ಹಾಗೂ ರಾಜ್ಯದಿಂದ ಬಂದವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗುತ್ತಿತ್ತು. ಆದರೆ ಇದೀಗ ಅಂತರ್ ಜಿಲ್ಲಾ ಪ್ರಯಾಣ ಮಾಡಿದ ಬಸ್ ಕಂಡಕ್ಟರ್ಗೆ ಪಾಸಿಟಿವ್ ದೃಢವಾಗಿದ್ದು ಜಿಲ್ಲೆಯ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಬೆಂಗಳೂರಿನ ಬಿಎಂಟಿಸಿ ಬಸ್ಸಿನಲ್ಲಿ ಸವಾರಿ ಮಾಡುತ್ತಿರುವ ಚೀನಾ ಮಾರಿ ಈಗ ಕೆಎಸ್ಆರ್ಟಿಸಿ ಬಸ್ಸಿಗೂ ಕಾಲಿಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದ ನಿರ್ವಾಹಕನಿಗೆ ಕೊರೊನಾ ಸೋಂಕು ದೃಢವಾಗಿದೆ. …
Read More »ತೆಲುಗು ಚಿತ್ರದ ಚಿತ್ರೀಕರಣಕ್ಕೆ ಮರಳಿದ ಬುಲ್ ಬುಲ್ ರಚಿತಾ ರಾಮ್……
ಹೈದರಾಬಾದ್: ಕೊರೊನಾ ಭೀತಿ ನಡುವೆಯೂ ಕನ್ನಡದ ನಟಿ ರಚಿತಾ ರಾಮ್ ತೆಲುಗು ಸಿನಿಮಾವೊಂದರ ಚಿತ್ರೀಕರಣಕ್ಕೆಂದು ಹೈದಾರಾಬಾದ್ಗೆ ತೆರಳಿದ್ದಾರೆ. ಕೇಂದ್ರ ಸರ್ಕಾರ ಕೊರೊನಾ ಲಾಕ್ಡೌನ್ ಅನ್ನು ದಿನದಿಂದ ದಿನಕ್ಕೆ ಸಡಿಲಿಕೆ ಮಾಡುತ್ತಾ ಬರುತ್ತಿದೆ. ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಲೆ ಇದೆ. ಇತ್ತೀಚೆಗಷ್ಟೇ ಸಿನಿಮಾ ಚಿತ್ರೀಕರಣಕ್ಕೂ ಸರ್ಕಾರ ಅನುಮತಿ ನೀಡಿದ್ದು, ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಕಲಾವಿದರು ಶೂಟಿಂಗ್ಗೆ ಹೋಗುತ್ತಿದ್ದಾರೆ. ಸುಮಾರು ಮೂರು ತಿಂಗಳು ಚಿತ್ರದ ಶೂಟಿಂಗ್ ಇಲ್ಲದೇ ಮನೆಯಲ್ಲೇ …
Read More »ಮಸಾಲ ಎಂದು ಕೀಟನಾಶಕ ಮಿಕ್ಸ್ ಮಾಡಿದ ಅಜ್ಜಿ- ಚಿಕನ್ ಕರ್ರಿ ಸೇವಿಸಿ ಮೊಮ್ಮಕ್ಕಳು ಸಾವು
ಹೈದರಾಬಾದ್: ಚಿಕನ್ ಮಸಾಲ ಎಂದು ಚಿಕನ್ ಕರ್ರಿಗೆ ಕೀಟನಾಶಕ ಮಿಕ್ಸ್ ಮಾಡಿದ್ದು, ಅದೇ ಆಹಾರವನ್ನು ಸೇವಿಸಿ ಮಕ್ಕಳಿಬ್ಬರು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ರೋಹಿತ್ (11) ಮತ್ತು ಜೀವನ್ (8) ಎಂದು ಗುರುತಿಸಲಾಗಿದೆ. ಗುಡಿಪಾಲ ಮಂಡಲದ ಎ.ಎಲ್.ಪುರಂನಲ್ಲಿ ಈ ಘಟನೆ ನಡೆದಿದೆ. ಚಿತ್ತೂರು ಗ್ರಾಮೀಣ ಮಂಡಳಿಯ ಚೆರ್ಲೋಪಳ್ಳಿ ಗ್ರಾಮದ ರೋಹಿತ್ ಮತ್ತು ಜೀವನ ಇಬ್ಬರು ತಮ್ಮ ರಜಾದಿನಗಳನ್ನು ಎಎಲ್ ಪುರಂನಲ್ಲಿರುವ ತಮ್ಮ ಅಜ್ಜಿಯ ಮನೆಯಲ್ಲಿ …
Read More »14 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಾಗಾಟ ಮಾಡುತ್ತಿದ್ದ ಮೂವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ: ಅಕ್ರಮವಾಗಿ ಸುಮಾರು 14 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಾಗಾಟ ಮಾಡುತ್ತಿದ್ದ ಮೂವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಕೆರಲೆ ಗ್ರಾಮದ ಸುಹಾಸ್ ಗಾಯಕವಾಡ್, ಮಗ ಸಂದೀಪ್ ಸುಹಾಸ್ ಗಾಯಕವಾಡ ಹಾಗೂ ಹಿಂಡಲಗಾ ಗೋಕುಲ ನಗರದ ಮಾರುತಿ ಮುರುಗೇಶ್ ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಕ್ರೂಸರ್ ವಾಹನದಲ್ಲಿ ಮಹರಾಷ್ಟ್ರದಿಂದ ಬೆಳಗಾವಿಗೆ ಬೆಳ್ಳಿ ಸಾಗಿಸುತ್ತಿದ್ದರು, ಹತ್ತರಗಿ ಟೋಲ್ ಬಳಿ ಪೊಲೀಸರು ವಾಹನ ತಪಾಸಣೆ ವೇಳೆ ಅಕ್ರಮವಾಗಿ ಬೆಳ್ಳಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ …
Read More »ಸರ್ಕಾರ ವಿದೇಶೀಯರ ಆಗಮನಕ್ಕೆ ಬ್ರೇಕ್ ಹಾಕಿದೆ. ಆದ್ದರಿಂದಲೇ ವರ್ಕಿಂಗ್ ವೀಸಾಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.
ವಾಷಿಂಗ್ಟನ್: ತೀವ್ರ ಕೋವಿಡ್-19 ಸೋಂಕಿನಿಂದ ತತ್ತರಿಸಿರುವ ಅಮೆರಿಕದಲ್ಲಿ ಈಗ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಹೀಗಾಗಿ ಅಮೆರಿಕ ಸರ್ಕಾರ ವಿದೇಶೀಯರ ಆಗಮನಕ್ಕೆ ಬ್ರೇಕ್ ಹಾಕಿದೆ. ಆದ್ದರಿಂದಲೇ ವರ್ಕಿಂಗ್ ವೀಸಾಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ. ಈ ವರ್ಷದ ಕೊನೆವರೆಗೂ ವರ್ಕಿಂಗ್ ವೀಸಾಗಳ ಮೇಲೆ ನಿರ್ಬಂಧ ಹೇರಿದ್ದಾರೆ. ತಮ್ಮ ದೇಶಕ್ಕೆ ಬರದಂತೆ ವಿದೇಶೀಯರಿಗೆ ಎಚ್- 1ಬಿ ವೀಸಾ ಸೇರಿದಂತೆ ತಾತ್ಕಾಲಿಕ ಉದ್ಯೋಗ ವೀಸಾಗಳ ಮೇಲೆ ಈ ವರ್ಷಾಂತ್ಯದವರೆಗೂ ನಿರ್ಬಂಧ ಹೇರಿ …
Read More »ಇಎಂಐ ಪಾವತಿಯಿಂದ ವಿನಾಯಿತಿ ಪಡೆದವರಿಗೆ ಸಾಲ ಸೌಲಭ್ಯ?
ಲಾಕ್ಡೌನ್ ಘೋಷಣೆ ಆದ ನಂತರ ಅನೇಕರು ಆರ್ಥಿಕ ಬಿಕ್ಕಟ್ಟು ಎದುರುಸಿದ್ದರು. ಈ ವೇಳೆ ಸಾಮಾನ್ಯರಿಗೆ ಸಹಕಾರಿಯಾಗಲಿ ಎನ್ನುವ ಕಾರಣಕ್ಕೆ ಆರ್ಬಿಐ ಇಎಂಐ ಪಾವತಿ ಮಾಡುವುದರ ಮೇಲೆ ವಿನಾಯಿತಿ ನೀಡಿತ್ತು. ಶಾಂಕಿಂಗ್ ವಿಚಾರ ಏನೆಂದರೆ, ಇಎಂಐ ಪಾವತಿ ಮಾಡದೆ ಇರುವವರಿಗೆ ಈಗ ಸಾಲ ಸೀಗೋದು ಕಷ್ಟವಾಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ. ಸಾಲ ನೀಡುವುದಕ್ಕೂ ಮೊದಲು ಬ್ಯಾಂಕ್ನವರು ಸಿಬಿಲ್ ಸ್ಕೋರ್ ನೋಡುತ್ತಾರೆ. ಸರಿಯಾದ …
Read More »ಕೊರೊನಾವನ್ನೇ ಅಸ್ತ್ರ ಮಾಡಿಕೊಂಡು ದುಡ್ಡು ಮಾಡ್ತಿದ್ದಾರೆ. ಅಧಿಕಾರಿಗಳು
ತುಮಕೂರು: ಕೊರೊನಾ ಅದೆಷ್ಟು ಜನರ ಉದ್ಯೋಗ ಕಿತ್ತುಕೊಂಡಿದೆ. ಆದರೆ ಕೆಲ ಅಧಿಕಾರಿಗಳು ಮಾತ್ರ ಕೊರೊನಾವನ್ನೇ ಅಸ್ತ್ರ ಮಾಡಿಕೊಂಡು ದುಡ್ಡು ಮಾಡ್ತಿದ್ದಾರೆ. ಲಾಕ್ಡೌನ್ನಿಂದಾಗಿ ಸ್ಯಾಲರಿ ಆಗಿಲ್ಲ ಅಂತ ಫಲಾನುಭವಿಗಳ ಬಳಿ ಅಧಿಕಾರಿಗಳು ವಸೂಲಿಗೆ ಇಳಿದಿದ್ದಾರೆ. ಹೌದು. ಕೊರಟಗೆರೆ ತಾಲೂಕಿನ ಶಿವಪುರದ ನಿವಾಸಿ ರಮೇಶ್, ಸ್ವಯಂ ಉದ್ಯೋಗಕ್ಕಾಗಿ 1 ಲಕ್ಷ ರೂ. ಮಂಜೂರಾತಿಗೆ ಅರ್ಜಿ ಹಾಕಿದ್ದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅರ್ಜಿ ಪುರಸ್ಕೃತಗೊಂಡಿತ್ತು. ಆದರೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಅಂತಾರಲ್ಲ ಅದೇ …
Read More »ನಂಜನಗೂಡು ಠಾಣೆ, ಡಿವೈಎಸ್ಪಿ ಕಚೇರಿ ಸೀಲ್ಡೌನ್!
ಮೈಸೂರು: ಕೊರೊನಾ ಮುಕ್ತ ಆಯ್ತು ಅಂತ ನಿಟ್ಟುಸಿರು ಬಿಡುವ ಸಮಯದಲ್ಲಿ ಮತ್ತೆ ಮೈಸೂರಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಸದ್ಯ ಡೆಡ್ಲಿ ವೈರಸ್ ಮೈಸೂರು ಪೊಲೀಸರ ಬೆನ್ನತ್ತಿದೆ. ಬೆಂಗಳೂರು ಪೊಲೀಸರಷ್ಟೇ ಅಲ್ಲ. ಮೈಸೂರು ಪೊಲೀಸರಿಗೂ ಕೊರೊನಾ ಸೋಂಕು ಬಂದಿದೆ. ಇಲ್ಲಿವರೆಗೂ ಮೈಸೂರು ಜಿಲ್ಲೆಯೊಂದರಲ್ಲೇ 23 ಮಂದಿ ಪೊಲೀಸರು ಸೋಂಕು ಬಾಧಿತರಾಗಿದ್ದಾರೆ. ಜ್ಯುಬಿಲಿಯಂಟ್ ಕೊರೊನಾ ಮುಕ್ತವಾದ ಬಳಿಕ ಇಡೀ ಮೈಸೂರು ನೆಮ್ಮದಿ ನಿಟ್ಟುಸಿರು ಬಿಟ್ಟಿತ್ತು. ಅಷ್ಟರಲ್ಲೆ ಕಿಲ್ಲರ್ ಕೊರೊನಾ ಪೊಲೀಸರ ಹೆಗಲೇರಿ ಕುಳಿತುಬಿಟ್ಟಿದೆ. ನಂಜನಗೂಡು …
Read More »ಭಾರತೀಯ ವ್ಯವಹಾರಗಳ ಮೇಲೆ ಚೀನಾ ಹ್ಯಾಕರ್ಸ್ ಗುರಿ!,ಮುಂದಿನ ಹತ್ತು ದಿನಗಳು ಹುಷಾರ್!
ನವದೆಹಲಿ: ಲಡಾಕ್ ಗಡಿಯಲ್ಲಿನ ಉದ್ವಿಗ್ನತೆ ಕಡಿಮೆಯಾಗ್ತಿಲ್ಲ. ಮಾತುಕತೆ ನಡುವೆ ಯುದ್ಧ ಸಿದ್ದತೆಗಳು ನಡೆದಿದ್ದು ಗಾಲ್ವಾನ್ ಗಡಿಯಲ್ಲಿ ಕದನ ಕಾರ್ಮೋಡ ಕವಿದಿದೆ. ಡ್ರ್ಯಾಗನ್ ದೇಶ ದಾಳಿಯ ಆತಂಕ ನಡುವೆ ಈಗ ಭಾರತದಲ್ಲಿ ಚೀನಾ ಮತ್ತೊಂದು ಕೃತ್ಯ ಎಸೆಸಲು ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗುತ್ತಿದೆ. ಜೂನ್ 15ರಂದು ಗಾಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಮೇಲೆ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಎಲ್ಲೆಡೆ ಚೀನಾ ವಸ್ತುಗಳು ಮತ್ತು …
Read More »