ಬೆಳಗಾವಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಶಂಕೆ ಹಿನ್ನೆಲೆಯಲ್ಲಿ ಯುವಕನನ್ನು ಪತಿ ಹಾಗೂ ಕುಟುಂಬಸ್ಥರು ಬರ್ಬರವಾಗಿ ಕೊಲೆಗೈದ ಘಟನೆ ಬೈಲಹೊಂಗಲ ತಾಲೂಕಿನ ಹೊಸ ಕುರಗುಂದ ಗ್ರಾಮದಲ್ಲಿ ನಡೆದಿದೆ. ಹೊಸ ಕುರಗುಂದ ಗ್ರಾಮದ ನಿವಾಸಿ ದ್ಯಾಮಪ್ಪ ವಣ್ಣೂರ (22) ಹತ್ಯೆಯಾದ ಯುವಕ. ಅದೇ ಗ್ರಾಮದ ಈರಪ್ಪ ನಾಯ್ಕರ್ ಮತ್ತು ಕುಟುಂಬಸ್ಥರಿಂದ ಕೃತ್ಯ ನಡೆದಿದೆ. ಗ್ರಾಮದಲ್ಲಿ ಬುಧವಾರ ಸಂಜೆ ಘಟನೆ ನಡೆದಿದ್ದು, ದ್ಯಾಮಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದ್ಯಾಮಪ್ಪ ವಣ್ಣೂರ ಪತ್ನಿಯೊಂದಿಗೆ ಅಕ್ರಮ ಸಂಬಂಧ …
Read More »ಅಬುಧಾಬಿಯಲ್ಲಿ ಮಂಗಳೂರಿನ ಅಡ್ಡೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತ,ಮಂಗಳೂರಿನ ಯುವಕನ ಮೃತದೇಹ ತವರೂರಿಗೆ
ಮಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದ, ಸೌಹಾರ್ದತೆಯನ್ನು ಎತ್ತಿಹಿಡಿಯುವಂತಹ ಶ್ಲಾಘನೀಯ ಕಾರ್ಯವನ್ನು ಯುಎಇಯ ಕನ್ನಡಿಗರು ನಡೆಸಿದ್ದು. ಅಬುಧಾಬಿಯಲ್ಲಿ ಮೃತರಾಗಿದ್ದ ಕರಾವಳಿಯ ಯುವಕ ಯಶವಂತ್ ಪೂಜಾರಿಯ ಮೃತದೇಹವನ್ನು ಯುಎಇ ಸರ್ಕಾರದ ಎಲ್ಲಾ ನಿಯಮ ಪಾಲಿಸಿ ತಾಯ್ನಾಡಿಗೆ ರವಾನಿಸಲು ಯಶಸ್ವಿಯಾಗಿದ್ದು. ಈ ಯಶಸ್ವಿಯ ಹಿಂದೆ ಸತತ 13 ದಿನಗಳು ನಡೆಸಿದ ಪರಿಶ್ರಮ ಎಲ್ಲರಿಗೂ ಮಾದರಿಯಾಗಿದೆ. ಅಬುಧಾಬಿಯಲ್ಲಿ ಮಂಗಳೂರಿನ ಅಡ್ಡೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತವಾಗಿದೆ ಎಂದು ಮುಝಮ್ಮಿಲ್ ಎಂಬವರು ಕನ್ನಡಿಗಾಸ್ ಹೆಲ್ಪ್ …
Read More »ಕೋಲಾರದಲ್ಲಿ ಚಿಕಿತ್ಸೆ ಫಕಲಾರಿಯಾಗದೆ ಕೊರೊನಾಗೆಮೊದಲ ಬಲಿ
ಕೋಲಾರ: ಹೆಮ್ಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನು ಮುಂದುರಿಸಿದ್ದು, ಕೋಲಾರದಲ್ಲಿ ಚಿಕಿತ್ಸೆ ಫಕಲಾರಿಯಾಗದೆ ಕೊರೊನಾಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮದ ರೋಗಿ 8495, 43 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಕಳೆದ ಒಂದು ವಾರದಿಂದ ಜಾಲಪ್ಪಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಕೆಜಿಎಫ್ ತಹಶೀಲ್ದಾರ್ ರಮೇಶ್ ಮಾಹಿತಿ ನೀಡಿದ್ದಾರೆ. ಕಳೆದ 10 ದಿನಗಳ ಹಿಂದೆ ದೆಹಲಿಯಿಂದ …
Read More »60 ವರ್ಷದ ವೃದ್ಧೆ ಕೊರೊನಾ ಪಾಸಿಟಿವ್ ದೃಢಪಟ್ಟುನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರು: ಮಹಾಮಾರಿ ಕೊರೊನಾ ರಾಜ್ಯವನ್ನು ಒಕ್ಕರಿಸಿದ ಬಳಿಕ ಜನ ಜೀವನ ಅಸ್ತವ್ಯಸ್ತವಾಗಿದ್ದಲ್ಲದೇ, ಕೆಲವರು ಸೋಂಕಿಗೆ ಹೆದರಿ ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ನಗರದ ಕೆ.ಸಿ ಜನರಲ್ ಆಸ್ಪತೆಯಲ್ಲಿಯೂ ಕೂಡ ಅಂತದ್ದೇ ಘಟನೆಯೊಂದು ನಡೆದಿದೆ. ಹೌದು. ಕುಣಿಗಲ್ ಮೂಲದ 60 ವರ್ಷದ ವೃದ್ಧೆ ಕೊರೊನಾ ಪಾಸಿಟಿವ್ ದೃಢಪಟ್ಟು ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಬಾತ್ ರೂಮ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. …
Read More »ಬೆಂಗಳೂರು ನಗರದಲ್ಲಿ ಸೀಲ್ಡೌನ್ ಏರಿಯಾದಿನೇ ದಿನೇ ಹೆಚ್ಚಾಗುತ್ತಿವೆ.
ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಝೋನ್ಗಳು ಸಹ ಅಧಿಕವಾಗುತ್ತಿವೆ. ಹೀಗಾಗಿ ಬ್ಯಾರಿಕೇಡ್ಗಳ ಸಮಸ್ಯೆ ಎದುರಾಗುತ್ತಿದೆ. ಬೆಂಗಳೂರು ನಗರದಲ್ಲಿ ಸೀಲ್ಡೌನ್ ಏರಿಯಾಗಳೇನು ಕಡಿಮೆ ಆಗುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಿವೆ. ಅಲ್ಲದೇ ಕಂಟೈನ್ಮೆಂಟ್, ಸೀಲ್ಡೌನ್ ಏರಿಯಾಗಳಿಂದ ಒಂದಿಲ್ಲ ಒಂದು ಸಂಕಷ್ಟ ಬರುತ್ತಲೆ ಇದೆ. ಈಗ ಸೀಲ್ಡೌನ್, ಕಂಟೈನ್ಮೆಂಟ್ ಝೋನ್ಗಳು ಹೆಚ್ಚಾಗಿರುವುದರಿಂದ ಸೀಲ್ ಮಾಡುವುದಕ್ಕೆ ಬ್ಯಾರಿಕೇಡ್ಗಳೇ ಇಲ್ಲದಂತಾಗಿದೆ. ಸೀಲ್ ಮಾಡುವಾಗ ಬ್ಯಾರಿಕೇಡ್ಗಳ ಅವಶ್ಯಕತೆ …
Read More »ಅಮೆರಿಕದಲ್ಲಿ ಮೃತರ ಸಂಖ್ಯೆ 1.24 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ 24.62 ಲಕ್ಷ ದಾಟಿದೆ.
ವಾಷಿಂಗ್ಟನ್/ನ್ಯೂಯಾರ್ಕ್, ಜೂ.25- ಡೆಡ್ಲಿ ಕೋವಿಡ್-19 ವೈರಸ್ ದಾಳಿಯಿಂದ ದಿಕ್ಕೆಟ್ಟಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 1.24 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ 24.62 ಲಕ್ಷ ದಾಟಿದೆ. ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈವರೆಗೆ 1,24,281 ಮಂದಿ ಮೃತಪಟ್ಟಿದ್ದು, 24,62,554 ಅಮೆರಿಕನ್ನರು ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ. ಇವರಲ್ಲಿ 16,500ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಮುಂದುವರಿದಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 10,40,606 …
Read More »ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ…….
ಮುಂಬೈ, ಜೂ. 25- ಅಮೆರಿಕಾ ಹಾಗೂ ಚೀನಾದ ನಡುವಿನ ಸಂಘರ್ಷ, ವ್ಯಾಪಾರ ಬಿಕ್ಕಟ್ಟು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿರುವುದರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ನಿರಂತರ 19 ದಿನಗಳಿಂದಲೂ ಏರಿಕೆಯಾಗುತ್ತಿದ್ದು ಇದರ ನಡುವೆಯೇ ಚಿನ್ನ ಹಾಗೂ ಬೆಳ್ಳಿ ಬೆಲೆಯು ಗಗನಮುಖಿಯಾಗುತ್ತಿರುವುದು ಜನರ ಜೇಬಿಗೆ ಹೊರೆಯಾಗಿದೆ. ಲಾಕ್ಡೌನ್ ವೇಳೆ ಚಿನ್ನ ಹಾಗೂ ಬೆಳ್ಳಿ ಖರೀದಿಸುವವರೇ ಇಲ್ಲದೆ ಅದರ ಬೆಲೆಯಲ್ಲಿ …
Read More »ಮಳೆ ಬಿದ್ದ ಪ್ರಮಾಣವನ್ನು ತಿಳಿಯಲು ಹವಾಮಾನ ಇಲಾಖೆ ನೀಡುವ ಮಾಹಿತಿಗಾಗಿ ಕಾಯಬೇಕಿಲ್………..
ಬೆಂಗಳೂರು,ಜೂ.25- ಯಾವುದೇ ವೆಚ್ಚವಿಲ್ಲದೆ ನಿರುಪಯುಕ್ತ ವಸ್ತುಗಳನ್ನು ಬಳಸಿ ಸುಲಭವಾಗಿ ಮಳೆಯ ನೀರಿನ ಪ್ರಮಾಣವನ್ನು ಅಳೆಯುವ ಸರಳ ವಿಧಾನವನ್ನು ಪರಿಚಯಿಸಲಾಗಿದೆ. ಮಳೆ ಬಿದ್ದ ಪ್ರಮಾಣವನ್ನು ತಿಳಿಯಲು ಹವಾಮಾನ ಇಲಾಖೆ ನೀಡುವ ಮಾಹಿತಿಗಾಗಿ ಕಾಯಬೇಕಿಲ್ಲ. ಯಾರ ನೆರವೂ ಇಲ್ಲದೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಹಾಗೂ ಜಮೀನಿನಲ್ಲಿ ಬೀಳುವ ಮಳೆಯ ನೀರಿನ ಪ್ರಮಾಣವನ್ನು ಅಳೆಯುವ ಸರಳ ಹಾಗೂ ಸುಲಭ ವಿಧಾನದ ಪ್ರಾತ್ಯಕ್ಷಿಕೆಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ಪರಿಚಯಿಸಿದ್ದಾರೆ. …
Read More »ಕೊರೋನಾ ಜವಾಬ್ದಾರಿ ಆರ್.ಅಶೋಕ್ ಹೆಗಲಿಗೆ
ಬೆಂಗಳೂರು : ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ನಿರ್ವಹಿಸುತ್ತಿರುವ ಬೆಂಗಳೂರು ಕೋವಿಡ್ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ವಹಿಸಲಾಗಿದೆ. ಕುಟುಂಬ ಸದಸ್ಯರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಸಚಿವ ಡಾ. ಸುಧಾಕರ್ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ಅವರು ನಿರ್ವಹಿಸುತ್ತಿರುವ ಕೋವಿಡ್ ಜವಾಬ್ದಾರಿಯನ್ನು ಸುಧಾಕರ್ ಕ್ವಾರಂಟೈನ್ ನಿಂದ ವಾಪಸ್ ಬರುವವರೆಗೂ ತಾತ್ಕಾಲಿಕವಾಗಿ ನಿರ್ವಹಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ …
Read More »ಶಾಸಕರ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು
ಬೆಂಗಳೂರು : ಶಾಸಕರ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ಈ ಸಂಬಂಧ ಇಂದು ವಿಧಾನಪರಿಷತ್ ಸಭಾಪತಿ ಮತ್ತು ವಿಧಾನಸಭೆ ಸಭಾಧ್ಯಕ್ಷರ ಜಂಟಿ ಅಧ್ಯಕ್ಷತೆಯಲ್ಲಿ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಹಾಗೂ ಪೊಲೀಸ್ ಆಯುಕ್ತರ ಜೊತೆ ನಡೆಸಿದ ಸಭೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ …
Read More »