Breaking News

ಕೊರೊನಾ ಭಯಕ್ಕೆ ಗಂಟುಮೂಟೆ ಸಮೇತ ಊರಿಗೆ ಹೊರಟ ಜನ

ಬೆಂಗಳೂರು: ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಇತ್ತ ಕೊರೊನಾ ಭಯದಿಂದ ಮತ್ತು ಭಾನುವಾರ ಕರ್ಫ್ಯೂ ಜಾರಿಯಾಗುವ ಹಿನ್ನೆಲೆಯಲ್ಲಿ ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಬೆಂಗಳೂರಿಗರು ಮತ್ತೆ ಲಾಕ್‍ಡೌನ್ ಆಗುತ್ತೆ ಎಂಬ ಭಯದಲ್ಲಿ ತಮ್ಮ ತಮ್ಮ ಸ್ವ-ಗ್ರಾಮಕ್ಕೆ ತೆರಳುತ್ತಿದ್ದಾರೆ. ಅನೇಕರು ಗಂಟು ಮೂಟೆ ಸಮೇತ ಊರುಗಳತ್ತ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನವಯುಗ ಟೋಲ್ ಬಳಿ ಕಿಲೋಮೀಟರ್ ದೂರದವರೆಗೂ …

Read More »

ರಾಯಚೂರಿನ ಸರ್ಕಾರಿ ಕಚೇರಿಗಳಿಗೆ ಎದುರಾದ ಕೊರೊನಾ ಭೀತಿ

ರಾಯಚೂರು: ನಗರದ ಜಿಲ್ಲಾ ಪಂಚಾಯತ್ ಕಚೇರಿಗೆ ಕೊರೊನಾ ಸೋಂಕಿನ ಭೀತಿ ಎದುರಾಗಿದೆ. ಕೊರೊನಾ ಸೋಂಕಿತನ ಸಂಪರ್ಕಿತನೋರ್ವ ಕಚೇರಿ ತುಂಬಾ ಓಡಾಡಿರುವ ವಿಷಯ ತಿಳಿದ ಬಳಿಕ ಕಚೇರಿ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪಂಚಾಯತಿ ಕಚೇರಿ ಹಾಗೂ ಆವರಣವನ್ನ ಡಿಸ್ ಇನ್ಫೆಕ್ಷನ್ ಮಾಡಲಾಗಿದೆ. ಸೋಂಕಿತನ ಸಂಪರ್ಕಿತ ಬಂದು ಹೋದಮೇಲೆ ರಾಸಾಯನಿಕ ಸಿಂಪಡಣೆ ಮೂಲಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಚೇರಿಯ ಎಲ್ಲಾ ಕೊಠಡಿ, ಸಭಾಂಗಣದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಅಗ್ನಿಶಾಮಕ …

Read More »

ತೈಲ ಬೆಲೆ ಏರಿಕೆ ಖಂಡಿಸಿ ಎತ್ತಿನ ಮೂಲಕ ಕೈ ಪ್ರತಿಭಟನೆ…..?

    ಅಥಣಿ: ಕೇಂದ್ರದಲ್ಲಿ ಅಂದು ಕಾಂಗ್ರೆಸ್ ಸರಕಾರದ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಒಂದೆರಡು ರುಪಾಯಿ ತೈಲ ಬೆಲೆ ಹೆಚ್ಚಳ ಮಾಡಿದಾಗ ಬಿಜೆಪಿಯ ಸ್ಮೃತಿ ಇರಾಣಿ ಅವರು ಬಳೆಗಳನ್ನು ಕಳುಹಿಸಿಕೊಟ್ಟಿದ್ದರು. ಆದರೆ ಸುಮಾರು ೭-೪ ರುಪಾಯಿಗಳಷ್ಟು ತೈಲ ಬೆಲೆ ಏರಿಕೆಯಾಗಿದೆ. ಈಗೆಲ್ಲಿದ್ದಾರೆ ಎಂದು ಸ್ಮೃತಿ ಇರಾಣಿಗೆ ಕಾಂಗ್ರೆಸ್ ಮುಖಂಡ ಗಜಾನನ್ ಮಂಗಸೂಳೆ ಪ್ರಶ್ನೆ ಮಾಡಿದ್ದಾರೆ.. ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ತೈಲ ಬೆಲೆ ಖಂಡಿಸಿ ಚಕ್ಕಡಿ ಗಾಡಿಯಲ್ಲಿ ದ್ವೀಚಕ್ರವಾಹನ ಇಟ್ಟುಕೊಂಡು …

Read More »

ಬಿಟ್ಟು ಬಿಡದೆ ಸುರಿಯುತ್ತಿರೋ ಮಳೆ- ರಸ್ತೆ ತುಂಬೆಲ್ಲಾ ನೀರು

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಆಗ್ಗಾಗೆ ಬರುತ್ತಿದ್ದ ಮಳೆ ಇಂದು ಬಿಟ್ಟು ಬಿಡದೆ ಸುರಿಯುತ್ತಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲೂ ಮಳೆ ಎಡೆಬಿಡದೆ ಸುರಿಯುತ್ತಿದೆ. ಪರಿಣಾಮ ನದಿ, ಹೊಳೆಗಳೆಲ್ಲಾ ಮೈತುಂಬಿ ಹರಿಯುತ್ತಿದೆ. ಮುಂಗಾರು ಆರಂಭವಾಗಿ ತಿಂಗಳುಗಳೇ ಕಳೆದರೂ ಈ ಬಾರಿ ಮಳೆ ಮಾತ್ರ ಬಿರುಸಾಗಿರಲಿಲ್ಲ. ಆದರೆ ಇಂದಿನಿಂದ ಮುಂಗಾರು ಅಬ್ಬರಿಸುತ್ತಿದೆ. ಮಂಗಳೂರು ನಗರದಲ್ಲೂ …

Read More »

1.03 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ವಶ

ಹೈದರಾಬಾದ್: ಅಕ್ರಮವಾಗಿ ಸಂಗ್ರಹಿಸಿ ಸಾಗಿಸಲಾಗುತ್ತಿದ್ದ ವಿದೇಶಿ ಸಿಗರೇಟನ್ನು ಟಾಸ್ಕ್ ಫೋರ್ಸ್ ಪೊಲೀಸರು ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಳಿಯಿಂದ ಸುಮಾರು 1.03 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಸಿದ್ದಿಯಂಬಾರ್ ಬಜಾರ್‌ನ ಸಮೀಪದಲ್ಲಿ ಆಟೋವೊಂದನ್ನು ಪೊಲೀಸರು ತಡೆದು ತಪಾಸಣೆ ಮಾಡಿದ್ದಾರೆ. ಆಗ ಆಟೋದಲ್ಲಿ ವಿವಿಧ ಬ್ರಾಂಡ್‍ಗಳ ಅಕ್ರಮವಾಗಿ ಆಮದು ಮಾಡಿಕೊಂಡ ವಿದೇಶಿ ಸಿಗರೇಟ್‍ಗಳ 503 ಪೆಟ್ಟಿಗೆ ಪತ್ತೆಯಾಗಿವೆ. ತಕ್ಷಣ ಆಟೋ …

Read More »

ಸಾಂಬ್ರಾ ವಿಮಾನ ನಿಲ್ದಾಣದಲ್ಲಿಸತೀಶ್ ಜಾರಕಿಹೊಳಿಅವರಿಗೆ ಅದ್ಧೂರಿ ಸ್ವಾಗತ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಅದ್ದೂರಿಯಾಗಿ ಸ್ವಾಗತಿಸಿದರು. ಜುಲೇ 2 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕೃತವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿದ ಬಳಿಕ ಇದೇ ಮೊದಲ ಬಾರಿಗೆ  ಜಿಲ್ಲೆಗೆ ಆಗಮಿಸಿದ್ದು,ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.  ಕಾರ್ಯಾಧ್ಯಕ್ಷ , ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿ, …

Read More »

ಬೆಳಗಾವಿ ನಗರದಲ್ಲಿ ಮನೆ ಮನೆಗೆ ತೆರಳಿ ಬಳೆ ತೊಡಿಸುವ ಮಹಿಳೆಗೆ ಕೊರೋನಾ

ಬೆಳಗಾವಿ: ಮನೆ ಮೆನೆಗೆ ತೆರಳಿ ಬಳೆ ತೋಡಿಸುತ್ತಿದ್ದ ಮಹಿಳೆಗೆ ಕೊರೋನಾ ಸೋಂಕು ಧೃಡಪಟ್ಟ ಬಳಿಕ ಮಹಿಳೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಜನರನ್ನು ಪತ್ತೆ ಹಚ್ಚಲು ಅಧಿಕಾರಿಗಳು ಪರದಾಡುತ್ತಿದ್ದಾರೆ. 58 ವರ್ಷದ ಸೊಂಕೀತ ಮಹಿಳೆ ಪ್ರತಿ ದಿನ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ 200 ಕ್ಕೂ ಹೆಚ್ಚು ಮನೆಗಳ ಮಹಿಳೆಯರಿಗೆ ಬಳೆ ತೊಡೆಸಿದ್ದಾಳೆ ಎಂದು ತಿಳಿದು ಬಂದಿದ್ದು ಈ ಮಹಿಳೆಯ ಟ್ರಾವಲ್ ಹಿಸ್ಟರಿ ನೋಡಿ ಅಧಿಕಾರಿಗಳು ಹೈರಾನಾಗಿದ್ದಾರೆ. ಸೊಂಕು ತಗಲಿರುವ ಈ ಮಹಿಳೆ …

Read More »

ಇಬ್ಬರು ಆಂಕರ್ ಗಳಿಗೆ ಹಾಗೂ ಇಬ್ಬರು ಕ್ಯಾಮರಾಮನ್ ಗಳಿಗೆ ಸೋಂಕು

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು,  ಇಬ್ಬರು ಆಂಕರ್ ಗಳಿಗೆ ಹಾಗೂ ಇಬ್ಬರು ಕ್ಯಾಮರಾಮನ್ ಗಳಿಗೆ ಸೋಂಕು ತಗುಲಿದೆ. ರಾಜ್ಯಮಟ್ಟದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಮಹಿಳಾ ಆಂಕರ್ ಗಳಿಗೆ ಮತ್ತು ಇಬ್ಬರು ಕ್ಯಾಮರಾ ಮನ್ ಗಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಅವರನ್ನು ನಿಗದಿತ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಗುರುತಿಸಿ ಕ್ವಾರಂಟೈನ್ ಗೆ …

Read More »

ರಾಜ್ಯಾದ್ಯಂತ ಜುಲೈ 4 ರಿಂದ 7 ರವರೆಗೆ ಭಾರೀ ಮಳೆ: ಹವಾಮಾನ ಇಲಾಖೆ

ಹವಾಮಾನ ಇಲಾಖೆ ರಾಜ್ಯದ ಜನತೆಗೆ ಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಜುಲೈ 4 ರಿಂದ 7 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಇನ್ನೂ, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಉತ್ತರ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, …

Read More »

ಕೊರೋನಾದಿಂದ ದುಡ್ಡು ಮಾಡುವ ದರಿದ್ರ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ.

ಬೆಂಗಳೂರು(ಜು.04): ಕೊರೋನಾದಿಂದ ದುಡ್ಡು ಮಾಡುವ ದರಿದ್ರ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ. ವೈದ್ಯಕೀಯ ಸಲಕರಣೆಗಳ ದರ ಆರಂಭದಲ್ಲಿ ಹೆಚ್ಚಿತ್ತು. ಈಗ ಸಲಕರಣೆಗಳ ದರ ಇಳಿಕೆಯಾಗಿದೆ. ಮೊದಲಿನ ದರಗಳಿಗೆ ಹೋಲಿಸಿ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ತಿರುಗೇಟು ನೀಡಿದ್ದಾರೆ. 2200 ಕೋಟಿ ಭ್ರಷ್ಟಾಚಾರ: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ …

Read More »