ಬೆಂಗಳೂರು, ಆ.20- ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ರೈತರ ಮನೆ ಬಾಗಿಲಿಗೆ ಪಶು ಸಂಜೀವಿನಿ ಯೋಜನೆ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ಗೋವಿನ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಮುಂಗಾರು ಅವೇಶನದಲ್ಲಿ ಕಾಯ್ದೆ ಜಾರಿಗೆ ತರುವ ಯೋಚನೆಯಿದೆ ಎಂದು ತಿಳಿಸಿದರು. ಇದೇ ವೇಳೆ, ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ …
Read More »ಸೆ.21ರಿಂದ 30ರವರೆಗೆ ವಿಧಾನಮಂಡಲ ಅಧಿವೇಶನ..!
ಬೆಂಗಳೂರು,ಆ.20-ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದ್ದ ವಿಧಾನಮಂಡಲದ ಮಳೆಗಾಲದ ಅವೇಶನ ಸೆಪ್ಟೆಂಬರ್ 21ರಿಂದ ಹತ್ತು ದಿನಗಳ ಕಾಲ ಬೆಂಗಳೂರುನಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸೆಪ್ಟೆಂಬರ್ 21ರಿಂದ 30ರವರೆಗೆ ಕಾಲ ಅವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ಹಿಂದೆ ಜೂನ್ ತಿಂಗಳಿನಲ್ಲಿ ಮಳೆಗಾಲದ ಅವೇಶನ ನಡೆಸಬೇಕಾಗಿತ್ತಾದರೂ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು. ವಿಧಾನಸೌಧ ಹೊರತುಪಡಿಸಿ ನಗರದ ಅರಮನೆ ಮೈದಾನ ಸೇರಿದಂತೆ ಮತ್ತಿತರ ಕಡೆ ಸಭೆ ನಡೆಸಲು ಸ್ಥಳ …
Read More »ತಂದೆ-ತಾಯಿ ಕಳೆದುಕೊಂಡು ಅನಾಥಳಾಗಿರುವ ಮೇಘನಾ
ದಾವಣಗೆರೆ, ಆ.20- ತಂದೆ-ತಾಯಿ ಕಳೆದುಕೊಂಡು ಅನಾಥಳಾಗಿರುವ ಮೇಘನಾ ಕೂಲಿನಾಲಿ ಮಾಡಿ ತಮ್ಮನನ್ನು ಸಾಕಿ ಸಲಹುತ್ತಿದ್ದರೂ ನೆತ್ತಿಯ ಮೇಲೊಂದು ಸೂರಿಲ್ಲದೆ ಪರಿತಪಿಸುತ್ತಿದ್ದಾರೆ. ಜಗಳೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗ್ರಾಮವೊಂದರ ಮಳೆ ಸೋರುವ ಹಾಳು ಮನೆಯಲ್ಲಿ ವಾಸಿಸುತ್ತಿರುವ ಮೇಘನಾ ಭವಿಷ್ಯದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿದ್ದಾಳೆ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮೇಘನಾ ಭವಿಷ್ಯದಲ್ಲಿ ಬ್ಯಾಂಕ್ ಅಕಾರಿಯಾಗುವ ಕನಸು ಕಂಡಿದ್ದಾಳೆ. ತನ್ನ ಓದಿನ ಜತೆಗೆ ಕೂಲಿನಾಲಿ ಮಾಡಿ ಜೀವನ …
Read More »ನನ್ನನ್ನು ಅಪರಾಧಿ ಎಂದು ಘೋಷಿಸಿರುವುದು ನನಗೆ ನೋವು ತಂದಿದೆ:ಪ್ರಶಾಂತ್ ಭೂಷಣ್
ಹೊಸದಿಲ್ಲಿ: “ನ್ಯಾಯಾಂಗ ನಿಂದನೆಗಾಗಿ ನನ್ನನ್ನು ಅಪರಾಧಿ ಎಂದು ಘೋಷಿಸಿರುವುದು ನನಗೆ ನೋವು ತಂದಿದೆ. ನನಗೆ ದೊರೆಯಬಹುದಾದ ಶಿಕ್ಷೆಯ ಕುರಿತಂತೆ ನನಗೆ ನೋವಿಲ್ಲ. ಆದರೆ ನನ್ನನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂಬುದಕ್ಕೆ ನೋವಿದೆ. ಪ್ರಜಾಪ್ರಭುತ್ವ ಮತ್ತದರ ಮೌಲ್ಯಗಳನ್ನು ರಕ್ಷಿಸಲು ಬಹಿರಂಗ ಟೀಕೆ ಅಗತ್ಯವಿದೆ ಎಂದು ನಾನು ನಂಬಿದ್ದೇನೆ” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಇಂದು ಸುಪ್ರೀಂ ಕೋರ್ಟ್ ನ ಮುಂದೆ ಹೇಳಿದ್ದಾರೆ. https://youtu.be/gSlF434lvWE “ಸಂಸ್ಥೆ ಇನ್ನೂ ಉತ್ತಮವಾಗಿ ಕಾರ್ಯಾಚರಿಸುವಂತಾಗಲು ನಾನು …
Read More »ಆಸ್ತಿ ವಿಚಾರವಾಗಿ ಅಣ್ಣ- ತಮ್ಮಂದಿರ ಮಧ್ಯೆ ಗಲಾಟೆ,ಸಿನಿಮಾ ಶೈಲಿಯಲ್ಲಿ ಬಡಿದಾಡಿಕೊಂಡ ಘಟನೆ
ಬಳ್ಳಾರಿ: ಆಸ್ತಿ ವಿಚಾರವಾಗಿ ಅಣ್ಣ- ತಮ್ಮಂದಿರ ಮಧ್ಯೆ ಗಲಾಟೆ ನಡೆದಿದ್ದು, ಬಡಿಗೆ ಹಿಡಿದುಕೊಂಡು ಸಿನಿಮಾ ಶೈಲಿಯಲ್ಲಿ ಬಡಿದಾಡಿಕೊಂಡ ಘಟನೆ ಬಳ್ಳಾರಿ ತಾಲೂಕಿನ ಮೋಕಾ ಬಳಿಯ ಯರ್ರಗುಂಡಿ ಗ್ರಾಮದಲ್ಲಿ ನಡೆದಿದೆ.ಹೊನ್ನಾರೆಡ್ಡಿ, ಕೃಷ್ಣಾ ರೆಡ್ಡಿ ಮತ್ತು ಶೇಷರೆಡ್ಡಿ ಎನ್ನುವ ಕುಟುಂಬದ ಸದಸ್ಯರ ನಡುವೆ ಈ ಜಗಳ ನಡೆದಿದ್ದು, ಮಹಿಳೆಯರನ್ನು ಬಿಡದೇ ಕುಟುಂಬದ ಸದಸ್ಯರು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಕುಟುಂಬದ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಮೂವರು ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು, ಆಸ್ತಿಗಾಗಿ ಆಗೊಮ್ಮೆ ಈಗೊಮ್ಮೆ ಜಗಳವಾಡುತ್ತಿದ್ದರು. …
Read More »ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು
ಬೆಳಗಾವಿ: ಕೋವಿಡ್ ನಿರ್ವಹಣೆಯಲ್ಲಿ ವಿಫಲ ಸೇರಿದಂತೆ ರೈತರಿಗೆ ಹಾಗೂ ಕೃಷಿ ಕೂಲಿಕಾರರಿಗೆ ಮಾರಕವಾಗಿರುವ ಭೂ ಸುಧಾರಣಾ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ, ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ …
Read More »ಸಂಗೊಳ್ಳಿ ರಾಯಣ್ಣ ಸೊಸೈಟಿ ಬಹುಕೋಟಿ ವಂಚನೆಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಗಳು
ಬೆಳಗಾವಿ: ಸಂಗೊಳ್ಳಿ ರಾಯಣ್ಣ ಸೊಸೈಟಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಐಡಿ ಡಿವೈಎಸ್ಪಿ ಕೆ.ಪುರುಷೋತ್ತಮ ನೇತೃತ್ವದ ತಂಡ ಸುಮಾರು 2,063 ಪುಟಗಳ ದೋಷಾರೋಪ ಪಟ್ಟಿಯನ್ನು ಬೆಳಗಾವಿ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಚಲನಚಿತ್ರ ನಿರ್ದೇಶಕ ಆನಂದ ಅಪ್ಪುಗೋಳ್ ನೇತೃತ್ವದ ಸಂಗೊಳ್ಳಿ ರಾಯಣ್ಣ ಸೊಸೈಟಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ 35 ಶಾಖೆಗಳನ್ನು ಹೊಂದಿದ್ದು, 26 ಸಾವಿರ ಗ್ರಾಹಕರಿಂದ ₹281.14 …
Read More »ಒಂದು ವರ್ಷ ವಾದರೂ ಇನ್ನೂ ಸಿಕ್ಕಿಲ್ಲ ಪರಿಹಾರ
ಬೆಳಗಾವಿ: ಕಳೆದ ವರ್ಷದ ನೆರೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ವಿತರಿಸುವಂತೆ ಆಗ್ರಹಿಸಿ ಮೂಡಲಗಿ ತಾಲೂಕಿ ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಅವರಾದಿ ಗ್ರಾಮದ ನೆರೆ ಸಂತ್ರಸ್ತರು ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಕಳೆದ ವರ್ಷ ಭೀಕರ ಪ್ರವಾಹದಿಂದ ಅವರಾದಿ ಗ್ರಾಮದ ದಂಡಪ್ಪನವರ ತೋಟ, ದೊಂಬರ ತೋಟ, ಉರಬಿ ತೋಟ, ಮಾಡಲಗಿಯವರ ತೋಟ ಸೇರಿ ಸುಮಾರು 75 ಮನೆಗಳು ಹಾನಿಗೊಳಗಾಗಿವೆ. …
Read More »ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಆಗಸ್ಟ್ 23 ಹಾಗೂ 24ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ. – ಘಟಪ್ರಭಾ ಜಲಾಶಯ ಗರಿಷ್ಠ ಮಟ್ಟ- 662.94 ಮೀಟರ್ ಇಂದಿನ ಮಟ್ಟ- 662.51 ಮೀಟರ್ ಗರಿಷ್ಠ ಸಾಮರ್ಥ್ಯ- 51 ಟಿಎಂಸಿ ಇಂದಿನ ನೀರು ಸಂಗ್ರಹ- 49.53 ಟಿಎಂಸಿ ಇಂದಿನ ಒಳಹರಿವು- 34,308 ಕ್ಯೂಸೆಕ್ಸ್ ಇಂದಿನ ಹೊರ …
Read More »ನೀರಿನ ರಬಸಕ್ಕೆ ಕಸ ಕಡ್ಡಿಗಳು ಸೇತುವೆ ಮೇಲೆ ಬಂದಿವೆ. ಸೇತುವೆಗೆ ಸ್ವಲ್ಪ ಮಟ್ಟಿಗೆ ಹಾನಿ
ಗೋಕಾಕ: ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣದಲ್ಲಿ ಕಡಿತವಾಗಿರುವದರಿಂದ ಘಟಪ್ರಭಾ ನದಿಯ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸೋಮವಾರದಿಂದ ಬಂದ್ ಆಗಿದ್ದ ಲೋಳಸುರ ಸೇತುವೆ ಈಗ ಮುಕ್ತವಾಗಿದೆ. ಆದ್ರೆ ನೀರಿನ ರಬಸಕ್ಕೆ ಕಸ ಕಡ್ಡಿಗಳು ಸೇತುವೆ ಮೇಲೆ ಬಂದಿವೆ. ಸೇತುವೆಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದು ಜನರು ಸಂಚರಿಸುತ್ತಿದ್ದಾರೆ. ಗೋಕಾಕ ನಗರಕ್ಕೆ ಮಹಾರಾಷ್ಟ್ರ ಮತ್ತು ವಿಜಯಪುರಕ್ಕೆ ರಸ್ತೆ ಕಲ್ಪಿಸುವ ಲೋಳಸುರ ಸೇತುವೆ ಬಂದ್ ಆಗಿದ್ದರಿಂದ ನಿತ್ಯ ಸಂಚರಿಸುವ ಜನರು ಪರದಾಡುವಂತಾಗಿತ್ತು. …
Read More »