Breaking News

ನಡೆದು ನಡೆದು ಸಾವನ್ನಪ್ಪಿದ್ದ ಮಹಿಳೆ-ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ

ರಾಯಚೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಬಳ್ಳಾರಿಯಲ್ಲಿ ಸಾವನ್ನಪ್ಪಿದ್ದ ರಾಯಚೂರಿನ ಸಿಂಧನೂರಿನ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಕುಟುಂಬಕ್ಕೆ ಕೊನೆಗೂ ಕಾರ್ಮಿಕ ಕಲ್ಯಾಣ ಮಂಡಳಿ ಪರಿಹಾರ ನೀಡಿದೆ. ಗಂಗಮ್ಮನ ಇಬ್ಬರು ಮಕ್ಕಳ ಹೆಸರಲ್ಲಿ ತಲಾ 1 ಲಕ್ಷ 50 ಸಾವಿರದಂತೆ ಮೂರು ಲಕ್ಷ ರೂಪಾಯಿಯ ಎರಡು ಭದ್ರತಾ ಠೇವಣಿಯ ಬಾಂಡ್‍ಗಳನ್ನು ನೀಡಲಾಗಿದೆ. ಎರಡು ವರ್ಷದ ಅವಧಿಯ ಎರಡು ಬಾಂಡ್‍ಗಳನ್ನು ನೀಡುವ ಮೂಲಕ ಮಂಡಳಿ ಮಕ್ಕಳ ಸಹಾಯಕ್ಕೆ ಮುಂದಾಗಿದೆ. ಗಂಗಮ್ಮ ಮಂಡಳಿಯ ನೋಂದಾಯಿತ …

Read More »

ಜನಪ್ರತಿನಿಧಿಗಳು ಹಾಗೂ ಅವರ ಕಾರ್ಯದರ್ಶಿಗಳು ಸ್ಪಂದಿಸಿದ ರೀತಿ ನನ್ನನ್ನು ಮಂತ್ರಮುಗ್ದನ್ನಾಗಿಸಿದೆ.

ಬೆಂಗಳೂರು: ನಟ ಅನಿರುದ್ಧ್ ಕಿರುತೆರೆಯ ಧಾರಾವಾಹಿ ಮೂಲಕ ಮನೆ ಮಾತಾಗಿದ್ದು, ಜೊತೆ ಜೊತೆಯಲಿ ಸೀರಿಯಲ್‍ನಿಂದ ಕನ್ನಡಿಗರ ಮನ ಗೆದ್ದಿದ್ದಾರೆ. ಹೀಗಾಗಿ ಅವರಿಗೆ ಫ್ಯಾನ್ ಫಾಲೋವರ್ಸ್ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಧಾರಾವಾಹಿ ಹವಾ ಹೆಚ್ಚಾಗಿದೆ. ನಟ ಅನಿರುದ್ಧ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದ್ದಾರೆ. ನಟ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ತಮ್ಮ ವೃತ್ತಿ ಜೀವನದ ಕುರಿತು ಅಪ್‍ಡೇಟ್ ನೀಡುವುದರ ಜೊತೆಗೆ, ವೈಯಕ್ತಿಕ ವಿಚಾರಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ …

Read More »

ಬೆಂಗಳೂರು:ಹಳ್ಳಿಗರ ನೆರವಿಗೆ ನಿಂತ ಶಾನ್ವಿಶ್ರೀವಾಸ್ತವ್………..

ಬೆಂಗಳೂರು: ಶಾನ್ವಿ ಶ್ರೀವಾಸ್ತವ್ ಉತ್ತರ ಪ್ರದೇಶದ ವಾರಾಣಸಿಯವರಾದರೂ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ಹತ್ತಾರು ಸಿನಿಮಾಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಶಾನ್ವಿ, ತಮ್ಮ ನಟನೆ ಮೂಲಕವೇ ಕನ್ನಡಿಗರನ್ನು ಸೆಳೆದಿದ್ದಾರೆ. ಸ್ಯಾಂಡಲ್‍ವುಡ್ ಪ್ರಸಿದ್ಧ ನಟರೊಂದಿಗೆ ಶಾನ್ವಿ ತೆರೆ ಹಂಚಿಕೊಂಡಿದ್ದು, ಇತ್ತೀಚೆಗೆ ಶ್ರೀಮನ್ನಾರಾಯಣ ಚಿತ್ರದಲ್ಲೂ ಮೋಡಿ ಮಾಡಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು, ತಾರಕ್, ಮಫ್ತಿ, ದಿ ವಿಲನ್ ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ …

Read More »

ತಬ್ಲಿಘಿ ನಂಟು ಹೊರತಾದ ಒಂದೇ ಒಂದು ಪ್ರಕರಣವೂ ಬೆಳಗಾವಿಯಲ್ಲಿಲ್ಲ……

ಬೆಳಗಾವಿ – ಕೊರೋನಾ ಸೋಂಕು ದಿನದಿಂದ ದಿನಕ್ಕೆ ಬೆಳಗಾವಿ ಜಿಲ್ಲೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇಂದು ಒಂದೇ ದಿನ 14 ಪಾಸಿಟಿವ್ ಪ್ರಕರಣ ಬಂದಿದೆ. ಹಿರೇಬಾಗೇವಾಡಿ ಎನ್ನುವ ಒಂದೇ ಊರಲ್ಲಿ 36 ಪ್ರಕರಣ ದೃಢಪಟ್ಟಿದೆ. ಕುಡಚಿ ಮತ್ತು ಸಂಕೇಶ್ವರ ಪಟ್ಟಣವೂ ನಲುಗಿಹೋಗಿದೆ. ಬೆಳಗಾವಿ ನಗರವನ್ನೂ ಸೋಂಕು ಕಂಗೆಡಿಸಿದೆ. ಇಂದಿನವರೆಗೆ ಬೆಳಗಾವಿ ಜಿಲ್ಲೆಯಲ್ಲಿ 69 ಜನರಿಗೆ ಪಾಸಿಟಿವ್ ಬಂದಿದೆ. ವಿಶೇಷವೆಂದರೆ ಇವೆಲ್ಲವೂ ತಬ್ಲಿಘಿಗಳ ನಿಜಾಮುದ್ದೀನ್ ನಂಟಿನಿಂದಲೇ ಬಂದಿದ್ದು. ತಬ್ಲಿಘಿ ನಂಟು ಹೊರತಾದ …

Read More »

ತಹಸೀಲ್ದಾರ್ ಚಾಲಕನ ಮೇಲೆ ಟ್ರಾಕ್ಟರ್ ಹಾಯಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಮಾಡಲು ಪ್ರಯತ್ನ……….

ಅಥಣಿ- ತಹಸೀಲ್ದಾರ್ ಚಾಲಕನ ಮೇಲೆ ಟ್ರಾಕ್ಟರ್ ಹಾಯಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿತರನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಥಣಿ ತಾಲೂಕಿನ ಶಿರೂರ -ಖಿಳೆಗಾಂವ ಮಧ್ಯದ ಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದಾಗ ಅಥಣಿ ತಹಸೀಲ್ದಾರ್ ಮತ್ತು ಅವರ ಚಾಲಕ ಅನಿಲ್ ಮಲ್ಲಪ್ಪ ಗಸ್ತಿ ಹಾಗೂ ಆರ್.ವಿ. ಖಲಾಟೆ ಅವರೊಂದಿಗೆ ದಾಳಿ ಕೈಗೊಂಡಾಗ ತಹಸೀಲ್ದಾರ್ ಮತ್ತು ಅವರ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಒತ್ತಾಯಪೂರ್ವಕವಾಗಿ ಟ್ರ್ಯಾಕ್ಟರನ್ನು ತೆಗೆದುಕೊಂಡು …

Read More »

ಕೊರೊನಾ ವಾರಿಯರ್ಸ್ ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ಪರಿಹಾರ………..

ಬೆಂಗಳೂರು: ಕೊರೊನಾ ವಾರಿಯರ್ಸ್ ಕೋವಿಡ್-19 ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ಪರಿಹಾರ ನೀಡುವುದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇಡೀ ದೇಶವನ್ನೇ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ಸೋಂಕಿನ ವಿರುದ್ಧ ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆರು ಸೇರಿಂದಂತೆ ಜೀವ ಹಂಗು ತೊರೆದು ಹೋರಾಡುತ್ತಿದ್ದಾರೆ. ಹೀಗಾಗಿ ಒಂದು ವೇಳೆ ಕೊರೊನಾ ವಾರಿಯರ್ಸ್ ಸೇವೆ ಸಲ್ಲಿಸುವಾಗ ಸೋಂಕಿಗೆ ಗುರಿಯಾಗಿ ಸಾವನ್ನಪ್ಪಿದ್ದರೆ, ಅವರಿಗೆ 30 ಲಕ್ಷ ಪರಿಹಾರ ನೀಡುವುದಕ್ಕೆ ಸಿಎಂ ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ. …

Read More »

ನಾಲ್ಕು ವರ್ಷದ ಮಗು ಇಂದು ರೋಜಾ ಪೂರ್ತಿ ಪಾಲನೆ ಮಾಡಿದ್ದು ವಿಶೇಷವಾಗಿದೆ.

ಗೋಕಾಕ: ಮುಸ್ಲಿಂ ಸಮುದಾಯದ ‌ಪವಿತ್ರ ರಮಜಾನ್ ತಿಂಗಳಿನ ರೋಜಾವನ್ನು ಯುವಕರು ವೃದ್ಧರು ಸೇರಿ ಬಾಲಕರೂ ಪಾಲನೆ‌ ಮಾಡುವುದು ಸಾಮಾನ್ಯವಾಗಿದೆ. ನಗರದ ಹಾಜಿ ಆರೀಪ್ ಪೀರಜಾದೆ ಅವರ ನಾಲ್ಕು ವರ್ಷದ ಮಗು ಇಂದು ರೋಜಾ ಪೂರ್ತಿ ಪಾಲನೆ ಮಾಡಿದ್ದು ವಿಶೇಷವಾಗಿದೆ. ರಾಹುಲ್ ಸತೀಶ್ ಜಾರಕಿಹೊಳಿಯವರು ಈ ಮಗುವಿಗೆ ರಮಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು ಇಂತಹ ಬಿಸಿಲಿನಲ್ಲೂ ಅರಾಪತ್ ಪೀರಜಾದೆ ಇಡೀ ದಿನ ನೀರು ತಿಂಡಿ ಇಲ್ಲದೆ ಅಲ್ಲಾಹನ ಕೃಪೆಗಾಗಿ ಉಪವಾಸ ವೃತ …

Read More »

ಧಾನ್ಯಗಳ ಕಿಟ್‍ಗಳನ್ನು ಬುಧವಾರದಂದು ರಾಜಾಪೂರ, ದಂಡಾಪೂರ, ದುರದುಂಡಿ, ಗಣೇಶವಾಡಿ, ಬಡಿಗವಾಡ ಗ್ರಾಮಗಳಲ್ಲಿ ವಿತರಿಸಲಾಯಿತು.

ಘಟಪ್ರಭಾ: ತುಕ್ಕಾನಟ್ಟಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಡಮಾಡಿರುವ ಆಹಾರ ಧಾನ್ಯಗಳ ಕಿಟ್‍ಗಳನ್ನು ಬುಧವಾರದಂದು ರಾಜಾಪೂರ, ದಂಡಾಪೂರ, ದುರದುಂಡಿ, ಗಣೇಶವಾಡಿ, ಬಡಿಗವಾಡ ಗ್ರಾಮಗಳಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಬಸವಂತ ಕಮತಿ ಅವರು, ಕೊರೋನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಅನುಭವಿಸುತ್ತಿದ್ದೇವೆ. ಇದರಿಂದ ನಮಗೆಲ್ಲಾ ದಿನನಿತ್ಯದ ಗೃಹ ಬಳಕೆಗೆ ಬೇಕಾಗುವ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಜನರ ಸಮಸ್ಯೆಗಳನ್ನು ಅರಿತು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅರಭಾಂವಿ …

Read More »

ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ನಾವೇ ಖರೀದಿ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಪ್ರತಿ ಕ್ವಿಂಟಲ್‍ಗೆ 1760 ರೂ.ಗಳನ್ನು ನಿಗದಿಪಡಿಸಲಾಗಿದೆ

ಬೆಂಗಳೂರು : ಪಶು ಆಹಾರ ಉತ್ಪಾದನೆಗೆ ಅಗತ್ಯವಿರುವ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ನಾವೇ ಖರೀದಿ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಪ್ರತಿ ಕ್ವಿಂಟಲ್‍ಗೆ 1760 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಈ ಬಗ್ಗೆ ಗುರುವಾರ ಸಂಜೆ ಹೊರಡಿಸಿದ ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಕೋವಿಡ್-19 ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಮೆಕ್ಕೆಜೋಳವನ್ನು ಬೆಳೆದ ರೈತರು ಸೂಕ್ತ ಮಾರುಕಟ್ಟೆ ಇಲ್ಲದೇ, ಯೋಗ್ಯ ದರವು ಸಿಗದೇ ತೊಂದರೆಯಲ್ಲಿರುವುದಾಗಿ ತಿಳಿದುಬಂದಿದ್ದರಿಂದ ಸ್ವತಃ …

Read More »