ಬೆಳಗಾವಿ – ರಾಜ್ಯ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಜನರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ಶನಿವಾರ (ಮೇ 2) ಸಂಜೆ 6 ಗಂಟೆಯಿಂದ ಫೇಸ್ ಬುಕ್ ಲೈವ್ ನಲ್ಲಿ ಬರಲಿರುವ ಲಕ್ಷ್ಮಿ ಹೆಬ್ಬಾಳಕರ್, ಕೋವಿಡ್ -19 ಕುರಿತು ಜನರ ಜೊತೆ ಸಂಭಾಷಣೆ ನಡೆಸಲಿದ್ದಾರೆ. ಜೊತೆಗೆ ಜನರ ಸಂದೇಹ, ಸಮಸ್ಯೆಗಳಿಗೆ ಉತ್ತರಿಸಲಿದ್ದಾರೆ. ಕೊರೋನಾ ರೋಗ ಆರಂಭವಾದಾಗಿನಿಂದಲೂ ಜನರ ಮಧ್ಯೆ ಇದ್ದು …
Read More »ಹೊಲಕ್ಕಾಗಿ ದಾಯಾದಿ ಜಗಳ ಕೊಲೆಯಲ್ಲಿ ಪರ್ಯಾವಸನ……
ಮೂಡಲಗಿ – ಗೇಣುದ್ದ ಹೊಲಕ್ಕಾಗಿ ದಾಯಾದಿ ಜಗಳ ಕೊಲೆಯಲ್ಲಿ ಪರ್ಯಾವಸನಗೊಂಡಿದೆ. ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಂತಾಮಣಿ ರಾಮಪ್ಪ ಮೇಟಿ ( 55) ಕೊಲೆಯಾದವರು. ಅವರ ಅಣ್ಣನ ಮಗ ಗೋಪಾಲ ಭೀಮಪ್ಪ ಮೇಟಿ – (35) ಆರೋಪಿ. ಬೆಳೆ ಸಂರಕ್ಷಣೆಗಾಗಿ ಲೈಸನ್ಸ್ ಪಡೆದಿದ್ದ ಬಂದೂಕಿನಿಂದ ಕೊಲೆಗೈಯಲ್ಲಾಗಿದೆ. ಎರಡು ನಳಿಕೆಯ ಬಂದೂಕಿನಿಂದ ನೇರವಾಗಿ ಎದೆಗೆ ಗುಂಡಿಕ್ಕಲಾಗಿದ್ದು, ಎರಡು ಗುಂಡುಗಳು ಎದೆಯೊಳಗೆ ತೂರಿ ಹೋಗಿದೆ. …
Read More »ರಾಜ್ಯದ ರೆಡ್ ಝೋನ್ ,ಆರೆಂಜ್ ಝೋನ್,ಗ್ರೀನ್ ಝೋನ್ ಗಳ ಪರಿಷ್ಕೃತ ಪಟ್ಟಿ……..
ಬೆಂಗಳೂರು : ಮಾರಕ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಏತನ್ಮಧ್ಯೆ, ಕೇಂದ್ರ ಆರೋಗ್ಯ ಇಲಾಖೆ ಇಂದು ದೇಶದ ರೆಡ್, ಆರೆಂಜ್, ಗ್ರೀನ್ ಝೋನ್ ಗಳ ಪರಿಷ್ಕೃತ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪೈಕಿ 130 ಜಿಲ್ಲೆಗಳು ರೆಡ್ ಜೋನ್ ನಲ್ಲಿವೆ.ರಾಜ್ಯದ ಮೂರು ಜಿಲ್ಲೆಗಳು ರೆಡ್ ಝೋನ್ನಲ್ಲಿವೆ. ಸೋಂಕಿನ ತೀವ್ರತೆ ಹೆಚ್ಚಾಗಿರುವ ಜಿಲ್ಲೆಗಳನ್ನು ರೆಡ್ ಜೋನ್ ಗೆ ಸೇರಿಸಿದ್ದು, ಬೆರಳೆಣಿಕೆ ಪ್ರಕರಣಗಳಿರುವ ಜಿಲ್ಲೆಗಳು ಆರೆಂಜ್ ಪಟ್ಟಿಯಲ್ಲಿವೆ. ಕಳೆದ 15 …
Read More »ಬಾಲಚಂದ್ರ ಜಾರಕಿಹೊಳಿ ಮಾಡುತ್ತಿರುವ ಪುಣ್ಯದ ಕೆಲಸದಲ್ಲಿ ನಾವು ಭಾಗಿಯಾಗಿರುವ ಸಾರ್ಥಕದ ಕಾರ್ಯ
ಮೂಡಲಗಿ: ಲಾಕ್ ಡೌನ್ದಂತಹ ಸಂಕಷ್ಟದ ವೇಳೆಯಲ್ಲಿ ಕ್ಷೇತ್ರದ ಜನರ ಸಹಾಯಕ್ಕೆ ಮುಂದೆ ಬಂದು ಅರಭಾಂವಿ ಕ್ಷೇತ್ರದ ಎಲ್ಲ ಕುಟುಂಬಗಳಿಗೆ ದಿನ ನಿತ್ಯದ ಆಹಾರ ಧಾನ್ಯಗಳನ್ನು ನೀಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಮಾದರಿಯಾಗಿದೆ. ಇವರು ಮಾಡುತ್ತಿರುವ ಪುಣ್ಯದ ಕೆಲಸದಲ್ಲಿ ನಾವು ಭಾಗಿಯಾಗಿರುವ ಸಾರ್ಥಕದ ಕಾರ್ಯವಾಗಿದೆ ಎಂದು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ತಿಳಿಸಿದರು. ಶುಕ್ರವಾರದಂದು ತಾಲೂಕಿನ ನಾಗನೂರ ಪಟ್ಟಣದಲ್ಲಿ ಶಾಸಕ ಮತ್ತು ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು …
Read More »ಲಾಕ್ ಡೌನ್ ನಿಂದಾಗಿ ಸಂಕಷ್ಟಕೀಡಾಗಿದ್ದ ಗೋವಾದ ಕನ್ನಡಿಗರಿಗೆಅಗತ್ಯ ವಸ್ತುಸತೀಶ ಜಾರಕಿಹೊಳಿ ವಿತರಿಸಿದ್ದಾರೆ.
ಬೆಳಗಾವಿ: ಲಾಕ್ ಡೌನ್ ನಿಂದಾಗಿ ಸಂಕಷ್ಟಕೀಡಾಗಿದ್ದ ಗೋವಾದ ಕನ್ನಡಿಗರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಸಹಾಯ ಹಸ್ತ ಕೋರಿದ್ದು, ಆಹಾರ ಧಾನ್ಯ ಸೇರಿ ಅಗತ್ಯವಸ್ತುಗಳನ್ನು ವಿತರಿಸಿದ್ದಾರೆ. ಗೋವಾದಲ್ಲಿ ನೆಲೆಸಿರುವ ಯಮಕನಮರಡಿ ಕ್ಷೇತ್ರದ ಚಿಕ್ಕಾಲಗುಡ್ಡ ಗ್ರಾಮದ ಸುಮಾರು ಮೂವತ್ತಕ್ಕೂ ಹೆಚ್ಚು ಕುಟುಂಬಗಳು ತೊಂದರೆಗೀಡಾಗಿದ್ದರು. ಈ ವಿಷಯವನ್ನು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಸತೀಶ ಜಾರಕಿಹೋಳಿ ತಕ್ಷಣ ಅಲ್ಲಿಯೇ ದಿನಸಿ ಖರೀದಿಸಿ ತೊಂದರೆಯಲ್ಲಿರುವ ಕನ್ನಡಿಗರಿಗೆ ಮುಟ್ಟಿಸುವ ಕಾರ್ಯ …
Read More »:ಚಿಕ್ಕಬಳ್ಳಾಪುರ:ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್ಗೆ ಕಿಂಡಿ ಕೊರೆದು ಮದ್ಯ ಕಳವು
ಚಿಕ್ಕಬಳ್ಳಾಪುರ: ನಗರ ಹೊರವಲಯದ ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್ಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್ನ ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿರುವ ಖದೀಮರು, ಬಾರ್ ಹಿಂಭಾಗದಲ್ಲಿ ಗೋಡೆಗೆ ಕಿಂಡಿಕೊರೆದು ಮದ್ಯ ಕಳವು ಮಾಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ನಂದಿಗಿರಿಧಾಮ ಪಿಎಸ್ಐ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾಕ್ಡೌನ್ ಹಿನ್ನಲೆ ಮದ್ಯದಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದ್ದು, ಜಿಲ್ಲೆಯಲ್ಲಿ ಮದ್ಯದಂಗಡಿಗಳ ಕಳ್ಳತನ ಮುಂದುವರಿದಿದೆ. ಏಪ್ರಿಲ್ 15ರಂದು …
Read More »ಎಲ್ಪಿಜಿ ದರ ಇಳಿಕೆ- ಗ್ರಾಹಕರ ಹೊರೆ ಮತ್ತಷ್ಟು ಕಡಿಮೆ…………..
ನವದೆಹಲಿ: ಕೊರೊನಾ ವೈರಸ್ನ ಲಾಕ್ಡೌನ್ ನಡುವೆ ಅಡುಗೆ ಅನಿಲ (ಎಲ್ಪಿಜಿ) ಗ್ರಾಹಕರಿಗೆ ಸಮಾಧಾನಕರ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ. ಮೇ 1ರಿಂದ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು 162 ರೂ.ಗೆ ಇಳಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ ಹೊಸ ದರವು ಇಂದಿನಿಂದ ಜಾರಿಗೆ ಬಂದಿದೆ. ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 162.50 ರೂ. ಕಡಿಮೆ ಮಾಡಲಾಗಿದೆ. ಹೀಗಾಗಿ ಇಂದಿನಿಂದ ಒಂದು ಸಿಲಿಂಡರ್ಗೆ 581.50 ರೂ. ನೀಡಿ ಗ್ರಾಹಕರು …
Read More »ಗದಗನಲ್ಲಿ ಮೊದಲ ಬಾರಿಗೆ ಕೊರೊನಾದಿಂದ ಗುಣಮುಖವಾಗಿ ಮಹಿಳೆ ಡಿಸ್ಚಾರ್ಜ್………
ಗದಗ: ನಗರದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತ ರೋಗಿ 304ರ 59 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇಂದು ಜಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಿಬ್ಬಂದಿ ಚೆಪ್ಪಾಳೆ ತಟ್ಟುವುದರ ಮೂಲಕ ಆಸ್ಪತ್ರೆಯಿಂದ ಹೊರ ಕರೆತಂದರು. ನಂತರ ಮಹಿಳೆಗೆ ರೇಷ್ಮೆ ಸೀರೆ, ಮಾಸ್ಕ್, ಸ್ಯಾನಿಟೈಸರ್, ಆಹಾರ ಸಾಮಗ್ರಿಗಳನ್ನ ನೀಡಿದರು. ಆಸ್ಪತ್ರೆಯಿಂದ ಹೊರಗಡೆ ಬಂದ ಮಹಿಳೆ ವೈದ್ಯರಿಗೆ, ಜಿಲ್ಲಾಡಳಿತ ಸಿಬ್ಬಂದಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು. ಈ …
Read More »ಕೊರೊನಾದಿಂದ ಗುಣಮುಖರಾದ ಹೊಸಪೇಟೆ ಮೂಲದ ಇಬ್ಬರು ಐಸೋಲೇಷನ್ನಿಂದ ಡಿಸ್ಚಾರ್ಜ್
ಬಳ್ಳಾರಿ: ಕೊರೊನಾ ವೈರಸ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ಇಬ್ಬರನ್ನು ಐಸೋಲೇಷನ್ನಿಂದ ಬಿಡುಗಡೆ ಮಾಡಲಾಯಿತು. ಪಿ-333 ಹಾಗೂ ಪಿ-337 ಸಂಖ್ಯೆಯ ಈ ಇಬ್ಬರಲ್ಲಿ ಕೊರೊನಾ ವೈರಸ್ ಪಾಸಿಟಿವ್ ದಾಖಲಾಗಿತ್ತು. ಸತತ 14 ದಿನಗಳ ಕಾಲ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಈ ಇಬ್ಬರನ್ನ ಜಿಲ್ಲಾ ಸರ್ಕಾರಿ ಕೋವಿಡ್-19 ಅಸ್ಪತ್ರೆಯಿಂದ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡಲಾಯಿತು. ಈವರೆಗೂ ಒಟ್ಟಾರೆಯಾಗಿ ಏಳು ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. …
Read More »ನರ್ಸ್ ಪತಿ ಲಾಕ್ಡೌನ್ ಹೊತ್ತಲ್ಲೇ ನಾಪತ್ತೆಯಾಗಿದ್ದಾನೆ. ಇದೀಗ ನರ್ಸ್ ನನಗೆ ನನ್ನ ಗಂಡ ಬೇಕು, ನ್ಯಾಯ ಕೊಡಿಸಿ ಎಂದು ಕಣ್ಣೀರು
ಬೆಂಗಳೂರು: ಕೊರೊನಾ ಶುರುವಾದಾಗಿನಿಂದ ನರ್ಸ್ ಗಳು ಹಗಲಿರುಳು ಎನ್ನದೇ ಜನರ ಜೀವ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಇಂತಹ ಕೊರೊನಾ ವಾರಿಯರ್ಸ್ ನರ್ಸ್ ಪತಿ ಲಾಕ್ಡೌನ್ ಹೊತ್ತಲ್ಲೇ ನಾಪತ್ತೆಯಾಗಿದ್ದಾನೆ. ಇದೀಗ ನರ್ಸ್ ನನಗೆ ನನ್ನ ಗಂಡ ಬೇಕು, ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ದಾವಣಗೆರೆ ಮೂಲದ ನರ್ಸ್ ಶಾಂತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಪತಿ ಸಿದ್ದರಾಜು ನಾಪತ್ತೆಯಾಗಿದ್ದಾನೆ. ಫೋನ್ ಮಾಡಿದರೆ ಸ್ವಿಚ್ ಆಫ್ …
Read More »