ಚಿತ್ರದುರ್ಗ: ಪ್ರತಿ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆಯೂ ನಿರಾಸೆ ಅನುಭವಿಸಿ, ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುನಿಸಿಕೊಳ್ಳುವ ಚಿತ್ರದುರ್ಗದ ಹಿರಿಯ ಶಾಸಕ ತಿಪ್ಪಾರೆಡ್ಡಿಯನ್ನು ದೇವರಾಜ್ ಅರಸು ನಿಗಮದ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಸಮಾಧಾನ ಪಡಿಸುವ ಸಿಎಂ ತಂತ್ರಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ನನ್ನಂತಹ ಹಿರಿಯ ಶಾಸಕನನ್ನು ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಿಸಿ, ಸಿಎಂ ಯಡಿಯೂರಪ್ಪ ನನಗೆ ಅವಮಾನ ಮಾಡಿದ್ದಾರೆ. ನಾನು 1998 ರಲ್ಲೇ ಹೌಸಿಂಗ್ ಬೋರ್ಡ್ ಅಧ್ಯಕ್ಷ …
Read More »ಸೊಸೆ, ಮೊಮ್ಮಗಳು ಡಿಸ್ಚಾರ್ಜ್ ಖುಷಿಯಿಂದ ಕಣ್ಣೀರಿಟ್ಟ ಬಿಗ್ ಬಿ
ಮುಂಬೈ: ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸಂತಸದ ವಿಷಯ ಕೇಳಿ ಬಿಗ್ ಬಿ ಅಮಿತಾಬ್ ಬಚ್ಚನ್ ಕಣ್ಣೀರಿಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, ಮೊಮ್ಮಗಳು ಮತ್ತು ಸೊಸೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸುದ್ದಿ ಕೇಳಿದ ಕೂಡಲೇ ಕಣ್ಣಂಚಲಿ ನೀರು ಬಂತು. ಓ ದೇವರೆ ನಿನ್ನ ಕೃಪೆ ಹೀಗೆ ಇರಲಿ ಎಂದು ಭಾವನಾತ್ಮಕವಾಗಿ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ.ಸೋಮವಾರ ಸಂಜೆ ಪುತ್ರಿ …
Read More »ಸುಮಾರು 780 ಕೆ.ಜಿ. ತೂಕದ ಅಪರೂಪದ ಮೀನೊಂದು ಸಿಕ್ಕಿದೆ.
ಕೋಲ್ಕತ್ತಾ: ಸುಮಾರು 780 ಕೆ.ಜಿ. ತೂಕದ ಅಪರೂಪದ ಮೀನೊಂದು ಪಶ್ಚಿಮ ಬಂಗಾಳದ ದಿಘಾದಲ್ಲಿ ಸಿಕ್ಕಿದೆ. ಚಿಲ್‍ಶಂಕರ್ ಮೀನು ಎಂದು ಕರೆಯಲಾಗುತ್ತದೆ. ಇದು ಸುಮಾರು 780 ಕೆ.ಜಿ ತೂಕ ಇದೆ. ಚಿಲ್‍ಶಂಕರ್ ಮೀನು ಅಪರೂಪದ ಜಾತಿಯಾಗಿದ್ದು, ಟ್ರಾಲರ್ ಬೋಟ್‍ನಲ್ಲಿ ಈ ಮೀನು ಸಿಕ್ಕಿದೆ. ಈ ಮೊದಲು ಇಂತಹ ಮೀನನ್ನು ನೋಡಿಲ್ಲ ಎಂದು ಮೀನುಗಾರರು ಹೇಳಿದ್ದಾರೆ. ಸೋಮವಾರ ಒರಿಸ್ಸಾದ ವ್ಯಕ್ತಿಯೊಬ್ಬನ ಒಡೆತನದ ಟ್ರಾಲರ್ ಬೋಟ್‍ನಲ್ಲಿ ಈ ಮೀನು ಸೆರೆ ಸಿಕ್ಕಿದೆ. ಅದರಲ್ಲೂ ಪಶ್ಚಿಮ …
Read More »ಮುಂದಿನ ವರ್ಷ ಜೂನ್ ಅಂತ್ಯದ ವರೆಗೆ ಮನೆಯಿಂದಲೇ ಕೆಲಸ: ಗೂಗಲ್ ಉದ್ಯೋಗಿಗಳಿಗೆ
ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಗೂಗಲ್ ತನ್ನೆಲ್ಲ ಉದ್ಯೋಗಿಗಳಿಗೆ ಮುಂದಿನ ವರ್ಷ ಜೂನ್ ಅಂತ್ಯದ ವರೆಗೆ ಮನೆಯಿಂದಲೇ ಕೆಲಸ ಮಾಡಬಹುದು ಎಂದು ತಿಳಿಸಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಭಾರತ ಸೇರಿ ವಿಶ್ವಾದ್ಯಂತ ಗೂಗಲ್ ಹಾಗೂ ಅಲ್ಫಾಬೆಟ್ ಸಂಸ್ಥೆಯ 2 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಇದು ಅನುಕೂಲವಾಗಲಿದ್ದು, 5 ಸಾವಿರಕ್ಕೂ ಕಡಿಮೆ ಉದ್ಯೋಗಿಗಳಿರುವ ಕಚೇರಿಗಳಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಿದೆ. ಈ ಕುರಿತು …
Read More »ರಾಜಕೀಯ ನಾಯಕರು, ಸಿನಿಮಾ ನಟರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ- ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಬೆಂಗಳೂರು: ರಾಜಕೀಯ ನಾಯಕರು, ಸಿನಿಮಾ ನಟರೇ ಕೊರೊನಾ ಮಾರ್ಗಸೂಚಿ, ನಿಯಮ ಉಲ್ಲಂಘಿಸುತ್ತಿದ್ದಾರೆ. ಆದರೂ ಯಾಕೆ ಕ್ರಮ ಕೈಗೊಂಡಿಲ್ಲ ಅಂತ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರಾಕರಿಸಿದ್ದು, ಸಂಸದೆ ಶೋಭಾ ಕರಂದ್ಲಾಜೆ, ನಟ ದರ್ಶನ್‍ಗೆ ಯಾಕೆ ಅವಕಾಶ ಕೊಟ್ರಿ. ಸೆಲೆಬ್ರಿಟಿಗಳು, ರಾಜಕಾರಣಿಗಳಿಗೆ ಪ್ರತ್ಯೇಕ ಕಾನೂನು ಇದೆಯಾ ಎಂದು ಮುಜರಾಯಿ ಇಲಾಖೆಗೆ ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆಕೆಂಪೇಗೌಡ ಪುತ್ಥಳಿ ಶಿಲಾನ್ಯಾಸ ಕಾರ್ಯಕ್ರಮ, ಡಿಕೆಶಿ ಪುತ್ರಿ ವಿವಾಹ ನಿಶ್ಚಿತಾರ್ಥ …
Read More »‘ಶಾಸಕರಿಗೆ ಉಡುಗೊರೆ, ಜನತೆಗೆ ಬರೆ’ ಎಳೆಯುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಲಜ್ಜ : H.D.K.
ಬೆಂಗಳೂರು: ರಾಜ್ಯದ ಜನತೆಗೆ ಉಡುಗೊರೆ ಕೊಡಬೇಕಾಗಿದ್ದ ಸರ್ಕಾರ ಶಾಸಕರ ತೃಪ್ತಿಪಡಿಸುವ ಅನಾಚಾರ ಪ್ರದರ್ಶಿಸಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೊರೊನಾ ಸಂಕಷ್ಟ ಸಮಯದಲ್ಲಿ ಬದುಕಿಗಾಗಿ ಜನತೆ ಹೋರಾಟ ಮಾಡುತ್ತಿದ್ದರೆ. ವರ್ಷಾಚರಣೆಯ ಸಂಭ್ರಮದಲ್ಲೂ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ತನ್ಮಯವಾಗಿರುವ ಬಿಜೆಪಿ ಸರ್ಕಾರ, 24 ಶಾಸಕರಿಗೆ ನಿಗಮ …
Read More »ಬೆಂಗಳೂರು ಹೋಮ್ ಐಸೋಲೇಷನ್‍ಗೆ ಹೊಸ ರೂಲ್ಸ್
ಬೆಂಗಳೂರು: ಸಿಲಿಕಾನ್ ಸಿಟಿ ಅರ್ಧ ಲಕ್ಷ ಕೊರೊನಾ ಪ್ರಕರಣಗಳ ಮೈಲಿಗಲ್ಲಿಗೆ ಸನಿಹದಲ್ಲಿದ್ದು, ನಗರದಲ್ಲಿ ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ ಇದೀಗ 15 ಸಾವಿರ ದಾಟಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಕೊರೊನಾ ಹತ್ತಿಕ್ಕಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ನಿಯಂತ್ರಣಕ್ಕೆ ಸಿಗದೆ ಗಲ್ಲಿಗಲ್ಲಿಯಲ್ಲಿ ಆರ್ಭಟಿಸುತ್ತಿರುವ ಕೊರೊನಾ ಹತ್ತಿಕ್ಕುವ ನೆಪದಲ್ಲಿ ಸರ್ಕಾರ ದಿನಕ್ಕೊಂದು ನಿಯಮ ಜಾರಿಗೆ ತರುತ್ತಿದ್ದು, ಇಂದು ಸಹ ಹಲವು ರೂಲ್ಸ್ ಜಾರಿ ಮಾಡಲಾಗಿದೆ. ಹೋಮ್ ಐಸೋಲೇಷನ್ ಕುರಿತು ನಿಯಮ ರೂಪಿಸಿದ್ದು, …
Read More »ಕೊರೊನಾ ವಿಚಾರದಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಿತಿಯಲ್ಲಿದೆ:ಪ್ರಧಾನಿ
ನವದೆಹಲಿ: ಕೊರೊನಾ ವಿಚಾರದಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೊಯ್ಡಾ, ಮುಂಬೈ ಹಾಗೂ ಕೊಲ್ಕತ್ತಾಗಳಲ್ಲಿ ಅತ್ಯಾಧುನಿಕ ಕೊರೊನಾ ಪರೀಕ್ಷಾ ಕೇಂದ್ರಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ದಿನ 50 ಸಾವಿರದ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಇತರೆ ದೊಡ್ಡ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಕಡಿಮೆ ಇದೆ. ಅಲ್ಲದೆ …
Read More »ಪ್ರೇಯಸಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿತಿನ್……….
ಹೈದರಾಬಾದ್: ಟಾಲಿವುಡ್‍ನ ಖ್ಯಾತ ನಟ ನಿತಿನ್ ತಮ್ಮ ಗೆಳತಿ ಶಾಲಿನಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದ್‍ನ ತಾಜ್ ಫಲಕ್ನುಮಾ ಅರಮನೆಯಲ್ಲಿ ಭಾನುವಾರ ನಟ ನಿತಿನ್ ಮತ್ತು ಶಾಲಿಯ ಮದುವೆ ಸಮಾರಂಭ ನಡೆದಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ವಿಧಿಸಿರುವ ನಿಯಮಗಳನ್ನು ಅನುಸರಿಸಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿತಿನ್ ಮತ್ತು ಶಾಲಿನಿ ಮದುವೆಗೆ ಟಾಲಿವುಡ್ ಸ್ಟಾರ್ ನಟ-ನಟಿಯರು ಬಂದು ನವ ಜೋಡಿಗೆ ಶುಭಾ …
Read More »ರಾಜ್ಯದಲ್ಲಿ 1 ಲಕ್ಷ ದಾಟಿದ ಸೋಂಕು – 1 ಲಕ್ಷ ಏರಿದ್ದು ಹೇಗೆ? ಟಾಪ್ 10 ಕಾರಣ ಇಲ್ಲಿದೆ
ಬೆಂಗಳೂರು: ರಾಜ್ಯದ ಜನತೆ ಪಾಲಿಗೆ ಕೊರೊನಾ ಪ್ರಕರಣ 1 ಲಕ್ಷ ದಾಟಿದ ದುರ್ದಿನ. ಒಂದೇ ದಿನ 5,324 ಮಂದಿಗೆ ಸೋಂಕು ಬರುವ ಮೂಲಕ ದಾಖಲೆ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಕೊರೋನಾ ಹೆಮ್ಮಾರಿ ಕಾಣಿಸಿಕೊಂಡು ಇಂದಿಗೆ ಬರೋಬ್ಬರಿ 150 ದಿನ. ಮಾರ್ಚ್ 8ರಂದು ಮೊದಲ ಪ್ರಕರಣ ಬೆಂಗಳೂರಿನಲ್ಲಿ ಕಾಣಿಸಿಕೊಂಡಿತ್ತು. ಮೊದಲ ಮೂರು ತಿಂಗಳು ತೆವಳುತ್ತಾ ಹರಡಿದ್ದ ಕೊರೊನಾ ಸೋಂಕು, ನಂತರ ತೋರಿಸಿದ್ದು ತನ್ನ ರಾಕ್ಷಸಿ ಸ್ವರೂಪ. ಮೊದ ಮೊದಲು ರಾಜ್ಯ ಸರ್ಕಾರ ಕೊರೊನಾ …
Read More »