ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉದ್ದೇಶಿಸಿ ಸಂಜೆ 4.30ಕ್ಕೆ ಮಾತನಾಡಲಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಈ ಕುರಿತು ಪ್ರಧಾನಿ ಮೋದಿ ಭಾಷಣದಲ್ಲಿ ಮಾತನಾಡಲಿದ್ದಾರೆ ಎಂದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ತಿಳಿಸಿದೆ. ಅಲ್ಲದೇ ಕೊರೊನಾ ಅನ್‍ಲಾಕ್ 3.0 ನಾಳೆಯಿಂದ ಜಾರಿ ಆಗಲಿದೆ. ಈ ವೇಳೆಯಲ್ಲೇ ಪ್ರಧಾನಿಗಳು ಭಾಷಣ ಮಾಡುತ್ತಿರುವುದು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.ಮಾತೃಭಾಷೆಯಲ್ಲೇ …
Read More »ಕೊರೊನಾ ಗೆದ್ದು ಬಂದ ಸಂಚಾರಿ ಪೊಲೀಸ್ ಠಾಣೆ ಸೇನಾನಿಗಳಿಗೆ ಸ್ವಾಗತ ಸನ್ಮಾನ
ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಶತಾಯ ಗತಾಯ ಹೋರಾಟ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಬೆನ್ನುಬಿಡದೇ ಕಾಡುತಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡಿ ಜಯಗಳಿಸಿದ ಜಿಲ್ಲೆಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಪೂರ್ವ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಪಿ.ಬಿ.ಕಾಟೆ, ಎನ್.ಸಿ.ಪೂಜಾರ, ಗದಿಗೆಪ್ಪ ಕಿತ್ತೂರ ಅವರು ಕೊರೊನಾ ವೈರಸ್ ನಿಂದ ಗುಣಮುಖರಾಗಿ ಇಂದು ವೃತ್ತಿಗೆ ಆಗಮಿಸಿದ್ದು, ಎಲ್ಲರಲ್ಲಿಯೂ ಸಂತೋಷದ ವಾತಾವರಣ ನಿರ್ಮಾಣವಾಯಿತು …
Read More »ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್ ಫಿನಾಲೆಗೆ ಆಯ್ಕೆ
ಚಿಕ್ಕೋಡಿ: ನಿಪ್ಪಾಣಿ ವಿ.ಎಸ್.ಎಂ. ಸೋಮಶೇಖರ್ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಎರಡು ಯೋಜನೆಗಳು ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್ 2020ರ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿವೆ. ಭಾರತ ಸರಕಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಹೊಸ ದೆಹಲಿಯ ಎಐಸಿಟಿಇ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಸಸ ಸ ಸ ಸಸಾಫ್ಟ್‌ವೇರ್‌ನ ವಿಶ್ವದ ಅತಿ ದೊಡ್ಡ ಮುಕ್ತ ನಾವಿನ್ಯತೆ ಮಾದರಿ ಸ್ಪರ್ಧೆಯಲ್ಲಿ ವಿಎಸ್‌ಎಂಎಸರ್ ಆರ್‌ಕೆಐಟಿ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಗೈದ್ದಾರೆ. ಪ್ರೊ| ಮಹಾದೇವ ಹರಕುಡೆ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ …
Read More »ಬೆಳಗಾವಿ: ಕೊರೋನಾ ಸೋಂಕಿತರ ಅಂತ್ಯಕ್ರಿಯೆ ವೇಳೆ ಕಣ್ಣೀರು ಹಾಕಿದ ಪಾಲಿಕೆ ಅಧಿಕಾರಿ!
ಬೆಳಗಾವಿ: ಕೊರೋನಾ ಸೋಂಕಿನಿಂದ ಮೃತಪಟ್ಟ ಇಬ್ಬರು ವ್ಯಕ್ತಿಗಳ ಮೃತದೇಹದ ಅಂತ್ಯಕ್ರಿಯೆ ಪ್ರಕ್ರಿಯೆ ವೇಳೆ ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಬಸವರಾಜ ದಬಾಡೆ ಕಣ್ಣೀರು ಹಾಕಿದ ಪ್ರಸಂಗ ಇಲ್ಲಿನ ಸದಾಶಿವ ನಗರದ ಸ್ಮಶಾನಭೂಮಿಯಲ್ಲಿ ಗುರುವಾರ ನಡೆದಿದೆ. ಯಾವ ಜನ್ಮದ ಋುಣವೂ ಇಲ್ಲದ ಮೃತರ ಅಂತ್ಯಕ್ರಿಯೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದು, ಎಲ್ಲರ ಮನಕಲಕುವಂತಿದೆ. ಮೃತರ ಕುಟುಂಬಸ್ಥರು ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಂತ್ಯಕ್ರಿಯೆ ಮಾಡುವಂತೆ ಮನವಿ ಮಾಡಿದ್ದರು. ಬೆಳಗಾವಿ: ಕೊರೋನಾ ವಾರಿಯರ್ಸ್‌ಗೂ …
Read More »ಕೊರೊನಾ ನಿಯಂತ್ರಣಕ್ಕೆ ಜಿಲ್ಲಾವಾರು ಬಿಡುಗಡೆಯಾದ ಹಣದ ಲೆಕ್ಕ ಕೊಟ್ಟ ಸರ್ಕಾರ
ಬೆಳಗಾವಿ: ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾವಾರು ಬಿಡುಗಡೆ ಮಾಡಲಾದ ಹಣದ ಲೆಕ್ಕವನ್ನು ಸರ್ಕಾರ ಇಂದು ಬಹಿರಂಗಪಡಿಸಿದೆ. ನ್ಯಾಯವಾದಿ ಸುರೇಂದ್ರ ಉಗಾರೆ ಕೊರೊನಾ ಸಂದರ್ಭದಲ್ಲಿ ಖರ್ಚಾದ ಹಣದ ಕುರಿತು ಮಾಹಿತಿ ಕೇಳಿದ್ದರು. ಕೊರೊನಾ ಸಾಮಗ್ರಿ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆರೋಪ ಮಾಡಿದ್ದವು. ಈ ಹಿನ್ನೆಲೆ ಸರ್ಕಾರ ಇಂದು ಜಿಲ್ಲಾವಾರು ಬಿಡುಗಡೆ ಮಾಡಲಾದ ಹಣದ ಲೆಕ್ಕ ಕೊಟ್ಟಿದೆ. ಇದುವರೆಗೆ ಸರ್ಕಾರದಿಂದ ಕೊರೊನಾ ನಿಯಂತ್ರಣಕ್ಕಾಗಿ ಎಲ್ಲಾ …
Read More »ಶಾಸಕ ರಾಘವೇಂದ್ರ ಹಿಟ್ನಾಳ್‍ಗೆ ಕೋವಿಡ್ 19 ದೃಢ
ಕೊಪ್ಪಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಾಸಕರಿಗೆ ಕೊರೊನಾ ದೃಢಪಟ್ಟ ಮಾಹಿತಿಯನ್ನು ಜಿಲ್ಲಾಧಿಕಾರಿ ಸೂರಳ್ಕರ್ ವಿಕಾಸ್ ಕಿಶೋರ್ ಬಹಿರಂಗಪಡಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಶಾಸಕ ರಾಘವೇಂದ್ರ ಹಿಟ್ನಾಳ್‍ಗೆ ಕೊರೊನಾ ಸೊಂಕು ತಗಲಿರುವ ಬಗ್ಗೆ ಕ್ಷೇತ್ರದಾದ್ಯಂತ ಹರಿದಾಡಿತ್ತು.ಈಗ ಸ್ವತಃ ಜಿಲ್ಲಾಧಿಕಾರಿಗಳೇ ಶಾಸಕರಿಗೆ ಸೋಂಕು ತಗಲಿರುವುದನ್ನು ದೃಢಪಡಿಸಿದ್ದಾರೆ. ಕೆಲದಿನಗಳ ಹಿಂದೇ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿರವರಿಗೆ ಕೊರೊನಾ ದೃಢಪಟ್ಟಿತ್ತು. ಗಂಗಾವತಿ ಶಾಸಕರ ಪಕ್ಕದಲ್ಲಿಯೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ …
Read More »ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತರಲಾಗಿದ್ದ ಎರಡು ಒಂಟೆಗಳ ರಕ್ಷಣೆ
ಕೋಲಾರ: ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತರಲಾಗಿದ್ದ ಎರಡು ಒಂಟೆಗಳ ರಕ್ಷಣೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬಾಲಕೃಷ್ಣ ಬಡಾವಣೆಯಲ್ಲಿ ನಡೆದಿದೆ. ಫಾಸಿಲ್ ಎಂಬಾತನಿಗೆ ಸೇರಿದ ಎರಡು ಒಂಟೆಗಳನ್ನು ಮದೀನ ಮಸೀದಿಯಲ್ಲಿ ಇರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಒಂಟೆಗಳನ್ನು ರಕ್ಷಿಸಿ, ಮಾಲೂರಿನ ಗೋ ಶಾಲೆಗೆ ರವಾನೆ ಮಾಡಿದೆ. ಬಕ್ರೀದ್ ಹಬ್ಬದಲ್ಲಿ ಒಂಟೆ ಮಾಂಸ ದಾನ ಮಾಡುವುದು ಬಕ್ರೀದ್ ಹಬ್ಬದ ಪ್ರತೀತಿ. ಆದ್ರೆ ಈ …
Read More »ಲಕ್ಷಾಂತರ ರೂ. ಅಂದರ್ ಬಾಹರ್ ಆಡ್ತಾರೆ ಶ್ರೀಮಂತರು
ಕೋಲಾರ: ಜಿಲ್ಲೆಯಲ್ಲಿ ಅಂತರ್ ರಾಜ್ಯ ಹೈಟೆಕ್ ಜೂಜು ಅಡ್ಡೆಯೊಂದು ತಲೆ ಎತ್ತಿದ್ದು, ಪ್ರತಿದಿನ ಲಕ್ಷಾಂತರ ರೂಪಾಯಿ ಜೂಜಾಟ ನಡೆಯುವ ಈ ಅಡ್ಡೆಗೆ ಪೊಲೀಸರ ಕುಮ್ಮಕ್ಕು ಸಹ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅಂದರ್ ಬಾಹರ್ ಜೂಜು ನಿರಾಂತಕವಾಗಿ ನಡೆಯುತ್ತಿದೆ. ಪ್ರತಿ ನಿತ್ಯ ನೂರಾರು ಮಂದಿ ಒಂದೆಡೆ ಸೇರಿ ಎರಡು ಪಾಳಿಗಳಲ್ಲಿ ಜೂಜು ಕೇಂದ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ನಿತ್ಯವೂ ಲಕ್ಷಾಂತರ ರೂಪಾಯಿ ವರೆಗೆ ವಹಿವಾಟು ನಡೆಯುತ್ತಿದೆ. ಶ್ರೀನಿವಾಸಪುರ ತಾಲೂಕಿನ …
Read More »3.50 ಲಕ್ಷ ರೂ. ಮೌಲ್ಯದ ಗೋಮಾಂಸ ಸಾಗಾಟ ಮಾಡ್ತಿದ್ದವರ ಬಂಧನ
ಕಾರವಾರ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿ ಸೇರಿ ವಾಹನ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹಿರೇಗುತ್ತಿ ಚೇಕ್ ಪೋಸ್ಟ್ ಬಳಿ ನಡೆದಿದೆ. ಆರೋಪಿಗಳನ್ನು ಅಮೂಲ (36), ಜಮೀರ್ ಸಯ್ಯದ್(29) ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ಭಟ್ಕಳಕ್ಕೆ ಸಾಗಾಟವಾಗುತ್ತಿದ್ದ ಗೋಮಾಂಸವನ್ನು ರಾಷ್ಟ್ರೀಯ ಹೆದ್ದಾರಿ 66 ರ ಹಿರೆಗುತ್ತಿ ಚೆಕ್ ಪೋಸ್ಟ್ ನಲ್ಲಿ ಗೋಕರ್ಣ ಪಿಎಸ್‍ಐ ನವೀನ್ ಕುಮಾರ ನೇತೃತ್ವದ ತಂಡ ತಪಾಸಣೆ ನಡೆಸಿದ ವೇಳೆ …
Read More »ವೈದ್ಯ, ನರ್ಸ್ ಕಾವಲಿನಲ್ಲಿ ಸಿಇಟಿ ಬರೆದ ಸೋಂಕಿತ ವಿದ್ಯಾರ್ಥಿ
ಚಿಕ್ಕಮಗಳೂರು: ವೈದ್ಯ ಹಾಗೂ ನರ್ಸ್ ಕಾವಲಿನ ಮಧ್ಯೆ ಕೊರೊನಾ ಸೋಂಕಿತ ವಿದ್ಯಾರ್ಥಿ ಪ್ರತ್ಯೇಕ ಕೊಠಡಿಯಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ವಿದ್ಯಾರ್ಥಿಗೆ ಬುಧವಾರ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಜಿಲ್ಲಾಡಳಿತ ವಿದ್ಯಾರ್ಥಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು. ವಿದ್ಯಾರ್ಥಿಗೆ ಕೊರೊನಾ ಲಕ್ಷಣಗಳು ತೀರಾ ಕಡಿಮೆ ಇದ್ದ ಕಾರಣ ಹೋಮ್ ಐಸೋಲೇಷನ್‍ನಲ್ಲಿ ಚಿಕಿತ್ಸೆಗೆ ಅವಕಾಶ ನೀಡಲಾಗಿತ್ತು. ಇಂದು ಬೆಳಗ್ಗೆ ಅರ್ಧ ಗಂಟೆ …
Read More »