Breaking News

ಕರುನಾಡಲ್ಲಿ ಮತ್ತೆ ವರುಣ ಮತ್ತಷ್ಟು ಭೀತಿ ಹುಟ್ಟಿಸಿದ್ದಾನೆ.

ಬೆಂಗಳೂರು: ಕರುನಾಡಲ್ಲಿ ಮತ್ತೆ ವರುಣ ಮತ್ತಷ್ಟು ಭೀತಿ ಹುಟ್ಟಿಸಿದ್ದಾನೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ.ರಾಜಧಾನಿ ಬೆಂಗಳೂರಲ್ಲಿ 2 ದಿನಗಳ ಹಿಂದೆ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಕೊಂಚು ಬಿಡುವು ಕೊಟ್ಟಿದ್ದಾನೆ. ಆದರೆ ಮೋಡ ಕವಿದ ವಾತಾವರಣವಿದೆ. ಇನ್ನುಳಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಳಗಾವಿಯ ಬೈಲಹೊಂಗಲ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಇಂಗಳಗಿ ಗ್ರಾಮದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ …

Read More »

ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೊನಾ ಗೆದ್ದ 105 ವರ್ಷದ ಅಜ್ಜಿ

ಕೊಪ್ಪಳ: ಕೊರೊನಾ ಹಾಟ್‍ಸ್ಪಾಟ್ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್‍ಗೆ ನಿತ್ಯವೂ ಸಾಲು ಸಾಲು ಸಾವುಗಳು ಸಾಮಾನ್ಯ ಎನ್ನುವಂತಾಗಿದೆ. ಇದರ ಮಧ್ಯೆ 105 ವರ್ಷದ ಅಜ್ಜಿ ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೊನಾ ಗೆದ್ದಿದ್ದಾರೆ. ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ 105 ವರ್ಷ ಭರ್ತಿಯಾಗಿರುವ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಕೊರೊನಾದಿಂದ ಗುಣಮುಖವಾಗಿದ್ದಾರೆ. ಕಳೆದ ವಾರವಷ್ಟೇ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಅವರ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ಹೋಮ್ …

Read More »

ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ, ರಾಗಿಣಿ, ರವಿಶಂಕರ್, ಲೂಮ್ ಪೆಪ್ಪರ್, ಪ್ರಶಾಂತ್ ರಂಕಾ, ರಾಹುಲ್ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದವರೆಗೂ ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲ್ಲಿದ್ದಾರೆ. ಇಂದು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ …

Read More »

ಎಇಇ .ಕೆ.ಡಿ ಕರಮಳ್ಳಿ , ಲಂಚ ಸ್ವೀಕರಿಸುತ್ತಿರುವ ಸಮಯದಲ್ಲಿ ಎಸಿಬಿ ಅಧಿಕಾರಿಗಳ ಬಲೆಗೆ

ಬದಾಮಿ: ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ .ಕೆ.ಡಿ ಕರಮಳ್ಳಿ , ಲಂಚ ಸ್ವೀಕರಿಸುತ್ತಿರುವ ಸಮಯದಲ್ಲಿ ಎಸಿಬಿ ಅಧಿಕಾರಿಗಳ ದಾಳಿ ಬಲೆಗೆ ಬಿದ್ದಿದ್ದಾರೆ. 2018-19 ನೇ ಸಾಲಿನಲ್ಲಿ ಬಾದಾಮಿ ತಾಲೂಕಿನ ಕಾತರಕಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಕೊಳ್ಳಲಾದ ಕಾಮಗಾರಿಗಳಿಗೆ ಸರಬರಾಜು ಮಾಡಿದ ಕಚ್ಚಾವಸ್ತುಗಳು ಸಂಭಂಧಿಸಿದ ವೋಚರ್ ಮತ್ತು ಅಳತೆ ಪುಸ್ತಕಗಳನ್ನು ನೀಡಲು ಗುತ್ತಿಗೆದಾರರಿಗೆ 60 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. …

Read More »

ಕೇಂದ್ರ ರೈಲ್ವೆ ಖಾತೆ ರಾಜ್ಯ  ಸಚಿವ ಸುರೇಶ ಅಂಗಡಿ ಅವರಿಗೂ ಕೊರೋನಾ ಪಾಸಿಟಿವ್ ಬಂದಿದೆ.

ನವದೆಹಲಿ – ಕೇಂದ್ರ ರೈಲ್ವೆ ಖಾತೆ ರಾಜ್ಯ  ಸಚಿವ ಸುರೇಶ ಅಂಗಡಿ ಅವರಿಗೂ ಕೊರೋನಾ ಪಾಸಿಟಿವ್ ಬಂದಿದೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ನಿನ್ನೆಯಷ್ಟೆ ಬೆಳಗಾವಿಯಿಂದ ದೆಹಲಿಗೆ ತೆರಳಿರುವ ಅವರು ಅಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ರೋಗ ಲಕ್ಷಣಗಳಿಲ್ಲದಿದ್ದರೂ ಪಾಸಿಟಿವ್ ಕಾಣಿಸಿಕೊಂಡಿದ್ದು, ವೈದ್ಯರ ಸಲಹೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಪರೀಕ್ಷೆಗೆ ಒಳಪಡುವಂತೆ ಅವರು ವಿನಂತಿಸಿದ್ದಾರೆ. ಸುರೇಶ ಅಂಗಡಿ ಬೆಳಗಾವಿಯಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದರು. ಅಲ್ಲದೆ ಅವರು …

Read More »

6 ಕೋಟಿ ಗಾಂಜಾ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಕಾರ್ಯಕರ್ತ

ಕಲಬುರಗಿ: ಬೆಂಗಳೂರಿನ ಪೊಲೀಸರು ಕಾರ್ಯಚರಣೆ ನಡೆಸಿ ಕಲಬುರಗಿಯಲ್ಲಿ 1,300 ಕೆಜಿ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದಲ್ಲಿ ಬಂಧಿತ ಪ್ರಮುಖ ಆರೋಪಿ ಚಂದ್ರಕಾಂತ್ ಚೌವ್ಹಾಣ್ ಬಿಜೆಪಿ ಕಾರ್ಯಕರ್ತ ಎಂಬುದು ದೃಢಪಟ್ಟಿದೆ. ಆತ ಬಿಜೆಪಿಯ ಇತರೆ ಕಾರ್ಯಕರ್ತರ ಜೊತೆ ತೆಗೆದುಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನು ಉಪಯೋಗಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ಮುಖಂಡರು ಸಜ್ಜಾಗಿದ್ದಾರೆ. ಈ ಕುರಿತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ …

Read More »

ನಾನು ಹಾಗೂ ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡುತ್ತಿದ್ದೆವು ಎಂದು ಸಿಸಿಬಿ ಮುಂದೆ ಆರೋಪಿ ರವಿಶಂಕರ್ ಸ್ಫೋಟಕ ಮಾಹಿತಿ

ಬೆಂಗಳೂರು: ನಾನು ಹಾಗೂ ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡುತ್ತಿದ್ದೆವು ಎಂದು ಸಿಸಿಬಿ ಮುಂದೆ ಆರೋಪಿ ರವಿಶಂಕರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿ ರವಿಶಂಕರ್ ಬಾಯಿಬಿಡಿಸಿದ್ದಾರೆ. ಈ ವೇಳೆ ಆತ ನಾನು ರಾಗಿಣಿ ಒಟ್ಟಿಗೆ ಡ್ರಗ್ ಸೇವನೆ ಮಾಡಿದ್ವಿ. ಒಂದು ಮಾತ್ರೆಯ ‘ಕಾಲು ಭಾಗ’ ಇಬ್ಬರು ತಗೊಂಡಿದ್ವಿ. ವೈಭವ್ ಜೈನ್ ಮೂಲಕ ಡ್ರಗ್ಸ್ ತರಿಸಿಕೊಂಡಿದ್ವಿ ಎಂಬುದಾಗಿ ಹೇಳಿದ್ದಾನೆ …

Read More »

ಬ್ಲೂ ಫಿಲಂ ನೋಡುವವರು ಡಿಸಿಎಂ ಆಗುತ್ತಿದ್ದಾಗ ಜನರಿಗೂ ನಗು, ದುಃಖ ಆಗಿತ್ತು: ಸಾರಾ ಮಹೇಶ್

ಮೈಸೂರು: ಡ್ರಗ್ಸ್ ದಂಧೆ ಕುರಿತು ತನಿಖೆ ನಡೆಯುತ್ತಿರುವಾಗಲೇ ಈ ವಿಚಾರ ರಾಜಕೀಯವಾಗಿದ್ದು, ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಇದೀಗ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಗೆ ಮಾಜಿ ಸಚಿವ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಕಿಡಿ ಕಾರಿರುವ ಅವರು, ಡ್ರಗ್ಸ್ ದಂಧೆಕೋರರೇ ಸರ್ಕಾರ ಬೀಳಿಸಿದರು ಎಂಬ ಮಾಜಿ ಸಿಎಂ ಎಚ್‍ಡಿಕೆ ಅವರ ಆರೋಪ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನಗು ತರಿಸಿತ್ತಂತೆ. ಬ್ಲೂ ಫಿಲಂ ನೋಡುವ ಅಡಿಕ್ಷನ್ …

Read More »

ಚಿಗರಿ ಬಸ್‍ಗಳ ಮಾಸಿಕ ಪಾಸ್, ಸ್ಮಾರ್ಟ್ ಕಾರ್ಡ್ ಸೇವೆ ಪ್ರಾರಂಭ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಐಷಾರಾಮಿ ಚಿಗರಿ ಬಸ್ ಓಡಾಟ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಲಾಕ್‍ಡೌನ್ ಸಡಿಲಿಕೆಯಿಂದ ಬಸ್ ಸಂಚಾರ ಪುನರಾಂಭಗೊಂಡಿದ್ದು, ಈಗ ಮತ್ತೆ ಸಂಚಾರ ಪ್ರಾರಂಭಿಸಿವೆ. ಅಲ್ಲದೇ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸಲು ಲಭ್ಯವಿರುವ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಬಿ.ಆರ್.ಟಿ.ಎಸ್ ಮುಂದಾಗಿದೆ. ಪ್ರತಿನಿತ್ಯ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸುವ ನೌಕರರಿಗೆ ಹಾಗೂ ಇತರೇ ಶೈಕ್ಷಣಿಕ ವಾಣಿಜ್ಯ ಕೆಲಸ ಕಾರ್ಯಗಳಿಗಾಗಿ ಮೇಲಿಂದ ಮೇಲೆ ಪ್ರಯಾಣಿಸುವ ಪ್ರಯಾಣಿಕರ …

Read More »

ಪತಿ ಅಂಗಡಿಯಲ್ಲಿ, ಅತ್ತೆ-ಮಾವ ದೇವಸ್ಥಾನದಲ್ಲಿ, ಇತ್ತ ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಗೆ ಕಾದಿತ್ತು ಶಾಕ್

ಆನೇಕಲ್ (ಬೆಂಗಳೂರು): ಒಂಟಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದಲ್ಲಿ ಗುರುವಾರ ರಾತ್ರಿ ನಡೆದಿದೆ. ಶ್ವೇತಾ(35) ಮೃತ ಮಹಿಳೆ. ಕಳ್ಳತನಕ್ಕೆ ಬಂದಿದ್ದ ಕಳ್ಳರಿಂದ ಭೀಕರ ಕೃತ್ಯ ನಡೆದಿದೆ ಎನ್ನಲಾಗಿದೆ. ಶ್ವೇತಾ ಮನೆಯಲ್ಲಿ ಒಬ್ಬಳೆ ಇದ್ದಿದ್ದನ್ನು ಗಮನಿಸಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಶ್ವೇತಾಳ ಆನೇಕಲ್ ತಾಲ್ಲೂಕಿನ ಚಂದಾಪುದಲ್ಲಿ ಮೆಡಿಕಲ್ ಶಾಪ್ ಹೊಂದಿದ್ದಾರೆ. ಶ್ವೇತಾಳ ಅತ್ತೆ ಹಾಗೂ ಕುಟುಂಬಸ್ಥರು ಮಲೆಮಹದೇಶ್ವರ ದೇವಾಲಯಕ್ಕೆ ತೆರಳಿದ್ದರು. ಹೀಗಾಗಿ ರಾತ್ರಿ ವೇಳೆಯಲ್ಲಿ …

Read More »