ಗೋಕಾಕ ನಗರದ ವಾರ್ಡ ನಂಬಯ 31 ರಲ್ಲಿ ಇರುವ ಕ್ರಶ್ಚಿಯನ್ ಸಮುದಾಯದ ರುದ್ರಭೂಮಿಯು ಅಧಿಕೃತವಾಗಿದೆ ಆದರೂ ಕೆಲವರು ಅದನ್ನು ರದ್ದು ಮಾಡುವಂತೆ ಮನವಿ ಮಾಡಿದ್ದು ಅದನ್ನು ತಿರಸ್ಕರಿಸಬೇಕೆಂದು ಗೋಕಾಕ ಕ್ರೈಸ್ಥ ಸಮುದಾಯದ ಟ್ರಸ್ಟ ವತಿಯಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು ಇಂದು ಮನವಿ ಸಲ್ಲಿಸಿದ ಅವರು ಗೋಕಾಕ ನಗರದಲ್ಲಿರ ವಾರ್ಡ್ ನಂ 31 ರಲ್ಲಿ ಬರುವ ಜ್ಞಾನ ಮಂದಿರ ಹತ್ತಿರದ ಕ್ರೈಸ್ಥರ 0.10 ಗುಂಟೆ ರುದ್ರ ಭೂಮಿಯು …
Read More »ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ತಳ್ಳಿ ಹಾಕಿರುವ ಹೈಕೊರ್ಟ್
ಬೆಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ತಳ್ಳಿ ಹಾಕಿರುವ ಹೈಕೊರ್ಟ್, ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸದಂತೆ ನಿರ್ದೇಶನ ಕೋರಿ ವಕೀಲ ಲೋಕೇಶ್ ಎಂಬುವವರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸದಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ …
Read More »ಕಿರಣ ಜಾಧವ ನೇತೃತ್ವದ ಫೌಂಡೇಶನ್ ಗೆ ಎಲ್ಲ ಸಹಕಾರ ನೀಡಿವ ಭರವಸೆ:ರಮೇಶ ಜಾರಕಿಹೊಳಿ
ಬೆಳಗಾವಿ – ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬುಧವಾರ ನಗರದ ವಿಮಲ್ ಫೌಂಡೇಶನ್ ಕಚೇರಿಗೆ ಭೇಟಿ ನೀಡಿ ಫೌಂಡೇಶನ್ ಕಾರ್ಯವನ್ನು ಪ್ರಶಂಸಿಸಿದರು. ವಿಮಲ್ ಫೌಂಡೇಶನ್ ಚೇರಮನ್ ಕಿರಣ ಜಾಧವ ಮತ್ತು ತಂಡ ಕಳೆದ ಬಾರಿ ಪ್ರವಾದ ಸಂದರ್ಭದಲ್ಲಿ ಮತ್ತು ಈಚಿನ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾಡಿದ ಜನಪರ ಕಾರ್ಯವನ್ನು ರಮೇಶ ಜಾರಕಿಹೊಳಿ ಶ್ಲಾಘಿಸಿದರು. ಸಂಸ್ಥೆಯ ಎಲ್ಲ ಒಳ್ಳೆಯ ಕೆಲಸದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ ರಮೇಶ ಜಾರಕಿಹೊಳಿ, ಮುಂಬರುವ ಮಳೆಗಾಲದಲ್ಲಿ …
Read More »ಐರ್ಲೆಂಡ್‍ನ ದುಬ್ಲಿನ್ ನಿಂದ ಬೆಂಗಳೂರಿಗೆ ಬಂದಿಳಿದ 136 ಪ್ರಯಾಣಿಕರು ……
ಬೆಂಗಳೂರು, ಮೇ 28- ಐರ್ಲೆಂಡ್‍ನ ದುಬ್ಲಿನ್‍ನಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಪ್ಪತ್ತನೇ ಏರ್ ಇಂಡಿಯಾ ವಿಮಾನದಲ್ಲಿ 136 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ ಬಂದಿಳಿದ ಒಟ್ಟು 136 ಮಂದಿ ಪ್ರಯಾಣಿಕರಲ್ಲಿ ಒಂದು ಮಗು ಸೇರಿದಂತೆ 75 ಪುರುಷರು ಮತ್ತು 61 ಮಹಿಳೆಯರು ಇದ್ದಾರೆ. ನಂತರ ಏರ್ ಇಂಡಿಯಾ …
Read More »ಬಾಲಿವುಡ್ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಭೋಪಾಲ್: ಬಾಲಿವುಡ್ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ನಟಿ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ ಮಾಡಿಕೊಂಡ ನಟಿ. ಮೆಹ್ತಾ ಸೋಮವಾರ ರಾತ್ರಿ ಮಧ್ಯಪ್ರದೇಶದ ಇಂದೋರ್ ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಹ್ತಾ ತಮ್ಮ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬವರು ಮಂಗಳವಾರ ಬೆಳಗ್ಗೆ ಆಕೆ ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮೆಹ್ತಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ …
Read More »ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ- ಧೋನಿ ನಿವೃತ್ತಿ ಎಂದವ್ರಿಗೆ ಸಾಕ್ಷಿ ತಿರುಗೇಟು
ನವದೆಹಲಿ: ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಎಂ.ಎಸ್ ಧೋನಿ ಅವರ ನಿವೃತ್ತಿಯ ಬಗ್ಗೆ ಮಾತನಾಡಿರುವರ ವಿರುದ್ಧ ಪತ್ನಿ ಸಾಕ್ಷಿ ಧೋನಿ ಕಿಡಿಕಾರಿದ್ದಾರೆ. ಇತ್ತೀಚೆಗೆ ಭಾರತದ ಕ್ರಿಕೆಟ್ ಅಂಗಳದಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ ಅವರ ನಿವೃತ್ತಿ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ. ಧೋನಿ ಅವರು ಮತ್ತೆ ಟೀಂ ಇಂಡಿಯಾಗೆ ವಾಪಸ್ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಬಿಟ್ಟರೇ ಧೋನಿ ಮತ್ತೆ ಯಾವ ಪಂದ್ಯವನ್ನು ಆಡಿಲ್ಲ. …
Read More »ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ…….
ಉಡುಪಿ: ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಮೂರು ಕಡೆ ಆನ್‍ಲೈನ್ ಪೂಜೆಗೆ ಅವಕಾಶ ನೀಡಲಾಗಿದೆ. ಕೊಲ್ಲೂರಿನಲ್ಲಿ ಈಗಾಗಲೇ ಭಕ್ತರಿಗೆ ಅವಕಾಶವಿದ್ದು, ಕೋಟ ಅಮೃತೇಶ್ವರಿ ಮತ್ತು ಮಂದಾರ್ತಿ ಕ್ಷೇತ್ರ ಹೊಸ ಸೇರ್ಪಡೆಯಾಗಿದೆ. ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ಆನ್‍ಲೈನ್ ಪೂಜೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮುಜರಾಯಿ ಇಲಾಖೆಯಿಂದ ಉಡುಪಿ ಜಿಲ್ಲೆಯೊಳಗೆ ಮೂರು ದೇವಸ್ಥಾನಗಳಿಗೆ ಅವಕಾಶವಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಈಗಾಗಲೇ ಭಕ್ತರಿಗೆ ಬುಕ್ ಮಾಡಿ ಪೂಜೆ ಮಾಡಿಸಿ, ಪೋಸ್ಟ್ …
Read More »ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ
ಮಂಗಳೂರು: ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ ಎಂಬ ಆರೋಪವೊಂದು ವೈದ್ಯರ ವಿರುದ್ಧ ಕೇಳಿಬಂದಿದೆ. ಮೇ 12ರಂದು ದುಬೈನಿಂದ ಗರ್ಭಿಣಿ ಏರ್ ಲಿಫ್ಟ್ ಆಗಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಆಕೆಯನ್ನು ಹೊಟೇಲ್ ಕ್ವಾರಂಟೈನ್ ಆಗಿದ್ದರು. ಮರುದಿನ ನಡೆದ ತಪಾಸಣೆಯಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು. ಆದರೂ ಗರ್ಭಿಣಿಗೆ ಚಿಕಿತ್ಸೆ ನೀಡಲು ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಗರ್ಭಿಣಿಯ ಆರೋಗ್ಯ ತಪಾಸಣೆ ವಿಚಾರದಲ್ಲಿ ವೈದ್ಯರು ನಿರ್ಲಕ್ಷ್ಯ …
Read More »ಲಾಕ್‍ಡೌನ್ 5.Oಗೆ ತಯಾರಿ- ಇಂದು ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ಮಹತ್ವದ ಸಭೆ
ನವದೆಹಲಿ: ನಾಲ್ಕನೇ ಹಂತದ ಲಾಕ್‍ಡೌನ್ ಮುಕ್ತಾಯಕ್ಕೆ ಇನ್ನು 4 ದಿನಗಳು ಮಾತ್ರ ಬಾಕಿ ಉಳಿದುಕೊಂಡಿದೆ. ಈ ನಡುವೆ ಮೇ 31 ಬಳಿಕ ಮುಂದೇನು ಅನ್ನೊ ಲೆಕ್ಕಾಚಾರದಲ್ಲಿರುವ ಕೇಂದ್ರ ಸರ್ಕಾರ ಮತ್ತೆರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ ಮಾಡುವ ಲೆಕ್ಕಾಚಾರದಲ್ಲಿದೆಯಂತೆ. ಜೂನ್ 1ರಿಂದ 14ರ ವರೆಗೂ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ ಆಗಲಿದ್ದು ಮೇ 31ರ ‘ಮನ್ ಕೀ ಬಾತ್’ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು …
Read More »ಕೊರೊನಾ ಸಮಯದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಜನರ ಪ್ರಾಣಕ್ಕಿಂತ ಆದಾಯವೇ ಹೆಚ್ಚಾಯ್ತಾ
ಬೆಂಗಳೂರು: ಕೇವಲ ಏಳು ದಿನಕ್ಕೆ ಬಿಎಂಟಿಸಿ ಲಾಕ್‍ಡೌನ್ ನಿಯಮಗಳನ್ನು ಬ್ರೇಕ್ ಮಾಡಿದೆ. ಇದನ್ನ ಸರಿ ಮಾಡಬೇಕಾದ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರು ಮಾತ್ರ ಅವ್ಯವಸ್ಥೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಸಚಿವರ ಮಾತುಗಳನ್ನು ಕೇಳಿದ್ರೆ ಜನರ ಪ್ರಾಣಕ್ಕಿಂತ ಆದಾಯವೇ ಹೆಚ್ಚಾಯ್ತಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ರಾಜ್ಯದಲ್ಲಿ ಲಾಕ್‍ಡೌನ್ ರಿಲೀಫ್ ಸಿಕ್ಕಾಗ ಜನ ಬಿಂದಾಸ್ ಆಗಿ ಎಲ್ಲೆಂದರಲ್ಲಿ ಓಡಾಡೋಕೆ ಶುರುಮಾಡಿದರು. ನಂತರದ ದಿನಗಳಲ್ಲಿ ಒಂದಷ್ಟು ನಿಯಮಗಳನ್ನ ಹಾಕಿ ಸಾರ್ವಜನಿಕ ಸಾರಿಗೆ …
Read More »