Breaking News

ಪಿಯು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ

ರಾಮನಗರ: ಕೋವಿಡ್‌-19 ಲಾಕ್‌ಡೌನ್‌ ಕಾರಣಕ್ಕೆ ಕಲಿಕೆಯಿಂದ ವಿಮುಖರಾಗಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯು ಆನ್‌ಲೈನ್‌ ಪಾಠ ಆರಂಭಿಸಿದೆ. ಈ ಮೂಲಕ ಮನೆಯಲ್ಲೇ ಕಲಿಕೆ ಮುಂದುವರಿಸುವ ಅವಕಾಶ ನೀಡಿದೆ.   ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ವಿವಿಧ ವಿಷಯಗಳ ನುರಿತ ಉಪನ್ಯಾಸಕರಿಂದ ಪಠ್ಯದ ವಿವಿಧ ಅಧ್ಯಾಯಗಳನ್ನು ವಿಡಿಯೊ ರೂಪದಲ್ಲಿ ಸಂಗ್ರಹಿಸಿ ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಲಾಗುತ್ತಿದೆ. ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮಗಳೆಡರಲ್ಲೂ ಈ ಪಾಠಗಳು ಲಭ್ಯವಿದೆ. ಕಳೆದ ಜುಲೈನಿಂದಲೇ ಈ …

Read More »

ಬೀದಿ ದೀಪಗಳನ್ನು ಶಾಸಕ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಅರವಿಂದ್ ಕಾರ್ಚಿ ಅವರು ಉದ್ಘಾಟಿಸಿದರು.

ಬೆಳಗಾವಿ : ಯಮಕನಮರಡಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಬೀದಿ ದೀಪಗಳನ್ನು ಶಾಸಕ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಅರವಿಂದ್ ಕಾರ್ಚಿ ಅವರು ಉದ್ಘಾಟಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದ ಮೇರೆಗೆ ಯಮಕನಮರಡಿ  ಕ್ಷೇತ್ರದ ವಿವಿಧ ಗ್ರಾಮಗಳಾದ ಧರನಟ್ಟಿ, ಭರಮ್ಯಾನಟ್ಟಿ ಮತ್ತು ಕರುವಿನಕುಂಪ್ಪಿ ಗ್ರಾಮಗಳಲ್ಲಿ ಬಹು ವೆಚ್ಚದಲ್ಲಿ ನಿರ್ಮಿಸಲಾದ  ಬೀದಿ ದೀಪ ಗಳಿಗೆ ಕಾರ್ಚಿ ಅವರು ಚಾಲನೆ  ನೀಡಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಹಾಲಿ ಹಾಗೂ …

Read More »

ಸಿದ್ದರಾಮಯ್ಯನವರೇ, ನೀವು ಮಾಡಿದ್ದು ತಪ್ಪು ಅಂತ ಈಗ ಗೊತ್ತಾಯ್ತಾ..?

ಬೆಂಗಳೂರು,ಆ.12- ಎಸ್‍ಡಿಪಿಐ ಮತ್ತು ಕೆಐಎಫ್‍ಡಿ 1600 ಪುಂಡರ ವಿರುದ್ಧ ಇದ್ದ 175 ಕ್ರಿಮಿನಲ್ ಕೇಸುಗಳನ್ನು ನೀವು 2015ರಲ್ಲಿ ವಾಪಸ್ಸು ತೆಗೆದುಕೊಂಡಿದ್ದು ತಪ್ಪು ಅಂತ ನಿಮಗೆ ಈಗಲಾದರೂ ಅನ್ನಿಸುತ್ತಿದೆಯೇ ಸಿದ್ದರಾಮಯ್ಯನವರೇ? ಇಷ್ಟಾಗಿಯೂ ಪುಂಡ ಮುಸಲ್ಮಾನರನ್ನು ಖಂಡಿಸಲು ಏಕೆ ನಿಮಗೆ ಮನಸ್ಸು ಬರುತ್ತಿಲ್ಲ ಸಾರ್? ಎಂದು ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮತ್ತೊಂದು ಟ್ವೀಟ್‍ನಲ್ಲಿ ಕಂದಾಯ ಸಚಿವ ಆರ್. ಅಶೋಕ್, ಶಾಂತಿಯಿಂದ ಬದುಕೋಣ ಎಂಬುದು ನಮ್ಮ ಆಶಯ. ಅಶಾಂತಿಯೇ ಕೆಲವರ ರಾಜಮಾರ್ಗ …

Read More »

ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ   ಸಚಿವ  ರಮೇಶ ಜಾರಕಿಹೊಳಿ ಅವರನ್ನು ಭೇಟಿ

ಬೆಂಗಳೂರು: ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ   ಸಚಿವ  ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದ ನಿಯೋಗ  ಸಮುದಾಯದ ಮತ್ತು ಜ್ವಲಂತ ವಿಷಯಗಳ  ಕುರಿತು ಚರ್ಚೆ ನಡೆಸಿದರು. ನಗರದ ಸಚಿವರ ಮನೆಯಲ್ಲಿ ನಡೆದ ಈ ಸಭೆಯಲ್ಲಿ ಹೊಸದುರ್ಗದ ಉಪ್ಪಾರ ಗುರುಪೀಠದ ಪುರುಷೋತ್ತಮಾನಂದ ಮಹಾಸ್ವಾಮಿಗಳು, ಕುಂಚಿಟಿಗರ ಮಠದ ಶಾಂತವೀರ ಮಹಾಸ್ವಾಮಿಗಳು,ಮಡಿವಾಳ ಮಾಚಿದೇವ ಮಹಾಸ್ವಾಮಿಗಳು, ಕಾಗಿನೆಲೆ ಗುರುಪೀಠದ ಈಶ್ವರಾನಂದ ಮಹಾಸ್ವಾಮಿಗಳು, ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಮತ್ತು ಹರಳಯ್ಯ …

Read More »

ರಷ್ಯಾದಿಂದ ಕೊರೊನಾ ಲಸಿಕೆಯ ವೆಬ್ ಸೈಟ್ ಬಿಡುಗಡೆ

ಕೊನೆಗೂ ಕೊರೊನಾ ಲಸಿಕೆ ಬಂದಿದೆ. ರಷ್ಯಾ ಈ ಲಸಿಕೆ ತಯಾರಿಸಿದೆ. ಈ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಕ ಕಂಪನಿ ಅಸ್ಟ್ರಾಜೆನೆಕಾ ತಯಾರಿಸಿದೆ. ಈ ಲಸಿಕೆ ತಯಾರಿಸಲು ರಷ್ಯಾ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಹಣ ಸಹಾಯ ಮಾಡುತ್ತಿದೆ. ಈಗ ರಷ್ಯಾದ ಆರ್‌ಡಿಐಎಫ್ ಕೊರೊನಾ ಲಸಿಕೆ ಬಗ್ಗೆ ವೆಬ್ ‌ಸೈಟ್ ಪ್ರಾರಂಭಿಸಿದೆ. ಕೊರೊನಾ ಲಸಿಕೆಗೆ ಸ್ಪುಟ್ನಿಕ್ ವಿ ಎಂದು ಹೆಸರಿಡಲಾಗಿದೆ. ಆರ್‌ಡಿಐಎಫ್ ಪ್ರಾರಂಭಿಸಿದ ವೆಬ್‌ಸೈಟ್‌ಗೆ sputnikvaccine.com ಎಂದು ಹೆಸರಿಡಲಾಗಿದೆ. ಭಾರತದ …

Read More »

Googleನ ಹೊಸ ಫೀಚರ್: ಇನ್ನು ನಿಮ್ಮ ಮೊಬೈಲೇ ನೀಡಲಿದೆ ಭೂಕಂಪನದ ಎಚ್ಚರಿಕೆ!

ನವದೆಹಲಿ: ಭೂಕಂಪನದ ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಮೊಬೈಲ್ ಫೀಚರ್ ಒಂದನ್ನು ಬಳಕೆಗೆ ತರುವ ಕುರಿತು ಗೂಗಲ್ ಮಾಹಿತಿ ನೀಡಿದೆ. ಈಗಾಗಲೇ ಆಯಂಡ್ರಾಯ್ಡ್ ಆಧಾರಿತ ಭೂಕಂಪನ ಪತ್ತೆ ಹಚ್ಚುವ ಫೀಚರ್ ಅನ್ನು ಆಯ್ದ ಸ್ಮಾರ್ಟ್ ಫೋನ್ ಗಳಲ್ಲಿ ಜಾರಿಗೊಳಿಸಲಾಗಿದೆ. ಆಯಂಡ್ರಾಯ್ಡ್ ಪೋನ್ ಗಳು ಭೂಕಂಪನ ಅಲರ್ಟ್ ಸಿಸ್ಟಮ್ ಅನ್ನು ಒಳಗೊಂಡಿರಲಿದ್ದು, ಈ ಸೌಲಭ್ಯ ಜಗತ್ತಿನಾದ್ಯಂತ ಜನರಿಗೆ ದೊರೆಯುತ್ತದೆ. ಇದರ ಪ್ರಕಾರ ಪ್ರತಿ ಆಯಂಡ್ರಾಯ್ಡ್ ಫೋನ್ ಗಳು ಮಿನಿ ಸಿಸ್ಮೋಮೀಟರ್ ಆಗಿ ಬದಲಾಗುತ್ತದೆ. ಆ …

Read More »

ಹುಟ್ಟಿ ಬೆಳೆದ ಮನೆ ಸುಟ್ಟು ಹಾಕಿದ್ದಕ್ಕೆ ಕಣ್ಣೀರಿಟ್ಟ ಅಖಂಡ ಶ್ರೀನಿವಾಸಮೂರ್ತಿ: ಸೂಕ್ತ ತನಿಖೆಗೆ ಆಗ್ರಹ

ಬೆಂಗಳೂರು: ತಾವು ಹುಟ್ಟಿಬೆಳೆದ ಮನೆಯನ್ನು ದುಷ್ಕರ್ಮಿಗಳು ಸುಟ್ಟುಹಾಕಿದ್ದಕ್ಕೆ ಕಣ್ಣೀರಿಟ್ಟಿರುವ ಪುಲಕೇಶಿನಗರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಸರ್ಕಾರ ಸಿಬಿಐ, ಸಿಐಡಿ ಯಾವುದಾದರೊಂದು ತನಿಖೆಯನ್ನು ಸೂಕ್ತವಾಗಿ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆಯಲು ಕಂದಾಯ ಸಚಿವ ಆರ್.ಅಶೋಕ್ ಅಖಂಡ ಶ್ರೀನಿವಾಸಮೂರ್ತಿ ನಿವಾಸಕ್ಕೆ ಭೇಟಿ ನೀಡಿದರು. ಭೇಟಿ ವೇಳೆ ತಮಗೂ ಕುಟುಂಬದ ಸದಸ್ಯರಿಗೆ ಸೂಕ್ತ ಕಾನೂನು ಭದ್ರತೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. …

Read More »

ಬೆಳಗಾವಿ | ನಿಂಬಾಳ್ಕರ್ ಟ್ವೀಟ್‌ಗೆ ಕರವೇ ಖಂಡನೆ

ಬೆಳಗಾವಿ: ‘ಖಾನಾಪುರ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಮಣಗುತ್ತಿ ಘಟನೆಯ ವಾಸ್ತವ ತಿಳಿಯದೆ ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಕನ್ನಡಿಗರಿಗೆ ಅಪಮಾನ ಎಸಗಿದ್ದಾರೆ’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಟೀಕಿಸಿದ್ದಾರೆ. ‘ಸಮಗ್ರ ಮಾಹಿತಿ ಪಡೆದು ಟ್ವೀಟ್ ಮಾಡಬೇಕಿತ್ತು. ಆ ಗ್ರಾಮದಲ್ಲಿ ಸರ್ಕಾರ, ಜಿಲ್ಲಾಡಳಿತ ಅಥವಾ ಕನ್ನಡಿಗರಿಂದ ಶಿವಾಜಿ ಪ್ರತಿಮೆಗೆ ಅವಮಾನವಾಗಿಲ್ಲ. ಪ್ರತಿಷ್ಠಾಪಿಸಿದರೆ ತೆರವುಗೊಳಿಸಿದ್ದಾರೆ. ಆದಾಗ್ಯೂ ಕರ್ನಾಟಕ ಸರ್ಕಾರ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಮಹಾರಾಷ್ಟ್ರ …

Read More »

ಪಿಎಸ್‌ಎಸ್​ಕೆ ಸಕ್ಕರೆ ಕಾರ್ಖಾನೆಗೆ ಕೊನೆಗೂ ಕಾಯಕಲ್ಪ ; ನಿರಾಣಿ ಒಡೆತನದಲ್ಲಿ ವಿದ್ಯುಕ್ತ ಆರಂಭ

ಮಂಡ್ಯ: ಕಳೆದ ನಾಲ್ಕು ವರ್ಷಗಳ ಹಿಂದೆ ನಷ್ಟದಿಂದ ಸ್ಥಗಿತ ಗೊಂಡಿದ್ದ ಆಗಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರದ ಪಿಎಸ್​ಎಸ್​ಕೆ ಸಕ್ಕರೆ ಕಾರ್ಖಾನೆಗೆ ಕೊನೆಗೂ ಕಾಯಕಲ್ಪ ದೊರೆತಿದೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಷುಗರ್ಸ್ ಒಡೆತನದಲ್ಲಿ ಇಂದು ಕಾರ್ಖಾನೆ ವಿದ್ಯುಕ್ತವಾಗಿ ಆರಂಭಗೊಂಡಿದೆ. ರಾಜ್ಯದ ಹಲವು ಮಠಾಧೀಶರು ಕಾರ್ಖಾನೆಯ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಾಲನೆ ನೀಡಿ ಶುಭಕೋರಿದ್ದಾರೆ. ಪಾಂಡವಪುರ ತಾಲೂಕಿನಲ್ಲಿರುವ ಪಿಎಸ್​ಎಸ್​ಕೆ ಸಕ್ಕರೆ ಕಾರ್ಖಾ ನೆ. ರಾಜ್ಯದಲ್ಲಿ ಪ್ರಪ್ರಥಮವಾಗಿ ಸ್ಥಾಪಿತವಾಗಿದ್ದ ಸಹಕಾರಿ …

Read More »

ಯೂರಿಯಾ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ: ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಿಸುವಂತೆ ಆಗ್ರಹಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ‘ಸಂಘದಿಂದ ಅವಶ್ಯ ಪ್ರಮಾಣದಲ್ಲಿ ಯೂರಿಯಾ ನೀಡುತ್ತಿಲ್ಲ. ಇದರಿಂದ ತೊಂದರೆಯಾಗಿದೆ. ಇತರ ಗೊಬ್ಬರಗಳ ಬದಲಿಗೆ ಯೂರಿಯಾವನ್ನೇ ಕೊಡಬೇಕು’ ಎಂದು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾ ಸಂಚಾಲಕ ಲಕ್ಕಪ್ಪ ಬಿಜ್ಜನ್ನವರ, ರಾಜು ಗಾಣಗಿ, ವಿಠ್ಠಲ ದೊಡಗೌಡ್ರ, ಬಸಪ್ಪ ದಳವಾಯಿ, ಮಲ್ಲಪ್ಪ ದಳವಾಯಿ, ವಿಠ್ಠಲ …

Read More »