ಬೆಂಗಳೂರು, – ರನ್ನ, ಮುಕುಂದ ಮುರಾರಿ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಕಿಚ್ಚ ಸುದೀಪ್ ಹಾಗೂ ಡಿಂಪಲ್‍ಕ್ವೀನ್ ರಚಿತಾರಾಮ್ ಮುಂಬರುವ ಐಪಿಎಲ್‍ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‍ಸಿಬಿ ತಂಡದ ರಾಯಭಾರಿಯಾಗುತ್ತಾರೆ ಎಂಬ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ. ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ರಲ್ಲಿ ಆರ್‍ಸಿಬಿ ತಂಡಕ್ಕೆ ಕಿಚ್ಚ ಸುದೀಪ್ ಹಾಗೂ ರಚಿತಾರಾಮ್ ತಂಡದ ರಾಯಭಾರಿಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ ಕೂಡ ಇದರ ಬಗ್ಗೆ ಆರ್‍ಸಿಬಿ ತಂಡದ …
Read More »4 ಸಾವಿರ ಅಡಿ ಉದ್ದದ ಅತ್ಯಾಕರ್ಷಕ ಚಿತ್ತಾರಗಳೊಂದಿಗೆ ರಂಗೋಲಿ ಬಿಡಿಸಿ ದೇಶ ಪ್ರೇಮದ ಪಾರಮ್ಯ ಮೆರೆದಿದ್ದಾರೆ.
ಬೆಂಗಳೂರು, ಆ.15- 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಪ್ತಗಿರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ 4 ಸಾವಿರ ಅಡಿ ಉದ್ದದ ಅತ್ಯಾಕರ್ಷಕ ಚಿತ್ತಾರಗಳೊಂದಿಗೆ ರಂಗೋಲಿ ಬಿಡಿಸಿ ದೇಶ ಪ್ರೇಮದ ಪಾರಮ್ಯ ಮೆರೆದಿದ್ದಾರೆ. ವಿದ್ಯಾರ್ಥಿಗಳ ಜತೆ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು ಸಪ್ತಗಿರಿ ಕ್ಯಾಂಪಸ್ ಆಟದ ಮೈದಾನದಲ್ಲಿ ಹಗಲಿರುಳು ಶ್ರಮಿಸಿ ಬೃಹತ್ ತ್ರಿವರ್ಣ ಧ್ವಜ ಬಿಡಿಸಿದ್ದಾರೆ.ವಿನೂತನ ಮಾದರಿಯಲ್ಲಿ ಸ್ವಾತಂತ್ರ್ಯದಿನಾಚರಣೆಗಾಗಿ 2500 ಕೆಜಿ ಉಪ್ಪು ಹಾಗೂ 250 ಕೆಜಿ ಬಿಳಿ, ಕೇಸರಿಹಾಗೂ …
Read More »ಅಮಿತ್ ಶಾಗೆ ಕೊರೊನಾ ನೆಗೆಟಿವ್
ನವದೆಹಲಿ: ಕೇಂದ್ರಗೃಹ ಮಂತ್ರಿ ಅಮಿತ್ ಶಾ ಅವರಿಗೆ ಕೊರೊನಾ ನೆಗೆಟಿವ್ ಬಂದಿದ್ದು, ಅವರು ಇನ್ನಷ್ಟು ದಿನ ಮನೆಯಲ್ಲೇ ಉಳಿಯಲಿದ್ದಾರೆ.ಕಳೆದ ಅಗಸ್ಟ್ 2ರಂದು ಅಮಿತ್ ಶಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ತಮಗೆ ಕೊರೊನಾ ಪಾಸಿಟಿವ್ ಬಂದಿರುವ ವಿಚಾರವನ್ನು ಸ್ವತಃ ಅವರೇ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು. ಈಗ ಮತ್ತೆ ಟ್ವೀಟ್ ಮಾಡಿರುವ ಅವರು ನನ್ನ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಮಾಡಿಸಿದ ನನ್ನ ಕೊರೊನಾ …
Read More »ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ………..
ನವದೆಹಲಿ: ಇಂದು 74 ಸ್ವಾತಂತ್ರ್ಯ ದಿನಾಚರಣೆ. ಕೊರೊನಾ ಭೀತಿ ನಡುವೆ ಮುನ್ನೆಚ್ಚರಿಕೆ ವಹಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಅವರು ಧ್ವಜಾರೋಹಣ ಮಾಡಿದ್ದಾರೆ. ಈ ಬಾರಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಕೆಂಪುಕೋಟೆಯನ್ನು ಮದುವಣಗಿತ್ತಿಯಂತೆ ಶೃಂಗಾರ ಮಾಡಲಾಗಿದೆ. ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಮಹಾತ್ಮ ಗಾಂಧಿ ಸಮಾಧಿ ರಾಜ್‍ಘಾಟ್‍ಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ನಂತರ ಕೆಂಪು ಕೋಟೆಯ ಮುಖ್ಯ ದ್ವಾರಕ್ಕೆ ಆಗಮಿಸುತ್ತಿದ್ದಂತೆ ಮೂರು …
Read More »ಸ್ವಯಂಕೃತ ಅಪರಾಧದಿಂದ ‘ಕಾವೇರಿ’ ಕೋಪಕ್ಕೆ ತುತ್ತಾದರಾ ಕೊಡಗಿನ ಜನ?
ಮಡಿಕೇರಿ: ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಭಕ್ತರು ನಾಡಿನೆಲ್ಲೆಡೆ ಇದ್ದಾರೆ. ತಲಕಾವೇರಿಯಲ್ಲಿ ಹುಟ್ಟಿ ನಾಡಿನುದ್ದಕ್ಕೂ ಜೀವಕಳೆ ತುಂಬುವ ಜೀವನದಿ. ಆದರೆ ಕೊಡಗಿನ ಜನರಿಗೆ ಮಾತ್ರ ಕಣ್ಣೀರು ತರಿಸುತ್ತಿದ್ದಾಳೆ. ಕಾವೇರಿ ನದಿ ಹೀಗೆ ತನ್ನೊಡಲ ಜನರಿಗೆ ಸಂಕಷ್ಟ ತಂದಿಟ್ಟಿರುವುದಕ್ಕೆ ಜನರ ಸ್ವಯಂಕೃತ ಅಪರಾಧವೇ ಕಾರಣ ಎಂದು ತಲಕಾವೇರಿ ಮೂಲಸ್ವರೂಪ ರಕ್ಷಣಾ ಸಮಿತಿ ಆರೋಪ ಮಾಡಿದೆ. 2005 ರಲ್ಲಿ ತಲಕಾವೇರಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಲವು ಕಾಮಗಾರಿಗಳನ್ನು ಮಾಡಲಾಯಿತು. ಇದರ ಪರಿಣಾಮ ಬ್ರಹ್ಮಗಿರಿ ಬೆಟ್ಟದಲ್ಲಿ …
Read More »ಸ್ವಾತಂತ್ರ್ಯ ಹೋರಾಟಗಾರ ಶ್ರೀರಾಮ್ ವಿಷ್ಣು ಪಂತ್ ತೆಂಬೆಗೆ ಸನ್ಮಾನ
ಹುಬ್ಬಳ್ಳಿ: ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ, ಹುಬ್ಬಳ್ಳಿ ಸಾಯಿನಗರದ ಟೀಚರ್ಸ್ ಕಾಲನಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಶ್ರೀರಾಮ್ ವಿಷ್ಣು ಪಂತ್ ತೆಂಬೆ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು. ಶ್ರೀರಾಮ್ ವಿಷ್ಣು ಪಂತ್ ತೆಂಬೆ ಅವರು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ ಕಾರ್ಡಿನಡಿ ಲಭ್ಯವಾಗುವ ಔಷಧಗಳನ್ನು ಬೆಂಗಳೂರಿನಿಂದ ತೆಗೆದುಕೊಂಡು ಬರುವುದು ಕಷ್ಟವಾಗುತ್ತದೆ. ಕಾರ್ಡನ್ನು ಹುಬ್ಬಳ್ಳಿಗೆ ವರ್ಗಾಯಿಸುವಂತೆ ಇದೇ ವೇಳೆ ಮನವಿ ಮಾಡಿಕೊಂಡರು. ಇದಕ್ಕೆ …
Read More »ಸಿಂಡಿಕೇಟ್ ಬ್ಯಾಂಕ್ ಲಾಕರಿನಲ್ಲಿ ಈ ರಾಷ್ಟ್ರಧ್ವಜವನ್ನು ಇಡುತ್ತಾರೆ. ಇದನ್ನು ಆಗಸ್ಟ್ 15 ಬಂದಾಗ ಮಾತ್ರ ಅಲ್ಲಿಂದ ತಂದು ಧ್ವಜಾರೋಹಣ ಮಾಡುತ್ತಾರೆ.
ಧಾರವಾಡ: ಬ್ಯಾಂಕ್ ಲಾಕರಿನಲ್ಲಿ ಸಹಜವಾಗಿ ಚಿನ್ನದ ಒಡವೆ, ಹಣ ಅಥವಾ ಆಸ್ತಿ ದಾಖಲೆಗಳನ್ನು ಇಟ್ಟಿರುವುದನ್ನ ನೋಡಿದ್ದೆವೆ. ಆದರೆ ಧಾರವಾಡ ನಗರದ ಗಾಂಧಿನಗರ ನಿವಾಸಿಯೊರ್ವರು ರಾಷ್ಟ್ರಧ್ವಜವನ್ನು ತಮ್ಮ ಬ್ಯಾಂಕ್ ಲಾಕರಿನಲ್ಲಿ ಇಟ್ಟಿರುತ್ತಾರೆ. ಗಂಗಾಧರ ಕುಲಕರ್ಣಿ(86) ಅವರು ತಮ್ಮ ಸಿಂಡಿಕೇಟ್ ಬ್ಯಾಂಕ್ ಲಾಕರಿನಲ್ಲಿ ಈ ರಾಷ್ಟ್ರಧ್ವಜವನ್ನು ಇಡುತ್ತಾರೆ. ಇದನ್ನು ಆಗಸ್ಟ್ 15 ಬಂದಾಗ ಮಾತ್ರ ಅಲ್ಲಿಂದ ತಂದು ಧ್ವಜಾರೋಹಣ ಮಾಡುತ್ತಾರೆ. ಕಳೆದ 7 ವರ್ಷಗಳಿಂದ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ. ಒಟ್ಟು 73 ವರ್ಷಗಳ …
Read More »ಕೋವಿಡ್‍ನಿಂದ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ,ಬೆಳಗ್ಗೆ 9 ಗಂಟೆಗೆ ಸಿಎಂ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಂಗಳೂರು: ಇಂದು 74ನೇ ಸ್ವಾತಂತ್ರ್ಯ ದಿನಾಚರಣೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಸರ್ಕಾರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ.ರಾಜ್ಯ ರಾಜಧಾನಿಯಲ್ಲಿ ಸಿಎಂ ಯಡಿಯೂರಪ್ಪ ಧ್ವಜಾರೋಹಣ ಮಾಡಲಿದ್ದಾರೆ. ಉಳಿದ ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಲಿದ್ದಾರೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಡಿಸಿಗಳಿಂದ ಧ್ವಜಾರೋಹಣ ಆಗಲಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಬೆಳಗ್ಗೆ 9 …
Read More »ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ- ಐಸಿಯುನಲ್ಲಿ ಚಿಕಿತ್ಸೆ
ಚೆನ್ನೈ: ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ.ಎಸ್‍ಪಿಬಿ ಆರೋಗ್ಯ ಸ್ಥಿತಿಗತಿ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಎಂಜಿಎಂ ಹೆಲ್ತ್ ಕೇರ್, ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತಜ್ಞ ವೈದ್ಯರ ತಂಡದ ಅವರ ಆರೈಕೆ …
Read More »ಜೂಜಾಟ ಆಡುತ್ತಿದ್ದ 17 ಜನರನ್ನು ಕಾರವಾರದ ಹಳಿಯಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಾರವಾರ: ಜೂಜಾಟ ಆಡುತ್ತಿದ್ದ 17 ಜನರನ್ನು ಕಾರವಾರದ ಹಳಿಯಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ದುಸಗಿ ಬ್ರಿಡ್ಜ್ ನ ಕೆಳಭಾಗದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 17 ಜನರನ್ನು ಕಾರವಾರದ ಡಿ.ಸಿ.ಐ.ಬಿ ಅಧೀಕ್ಷಕ ನಿಶ್ಚಲ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ 1,43,650 ರಪಾಯಿಯನ್ನು ಹಾಗೂ ಇಸ್ಪೀಟ್ ಕಾರ್ಡ್ ವಶಕ್ಕೆ ಪಡೆದು ಬಂಧಿಸಿದೆ.ಜಿಲ್ಲೆಯ ಹಳಿಯಾಳದಲ್ಲಿ ಹಲವು ದಿನಗಳಿಂದ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಡಿಸಿಐಬಿ ತಂಡ …
Read More »