Breaking News

ಅರಳಿಮಟ್ಟಿ ಸರಕಾರಿ ಪ್ರಾಥಮಿಕ ಶಾಲೆ ಈಗ ಪಿಎಂ ಶ್ರೀ ಯೋಜನೆಗೆ- ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಮೂಡಲಗಿ ಶೈಕ್ಷಣಿಕ ವಲಯಕ್ಕೆ ಮತ್ತೊಂದು ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯು ಆಯ್ಕೆಯಾಗಿದ್ದು, ತಾಲ್ಲೂಕಿನ ಅರಳಿಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರ ಪುರಸ್ಕೃತ ಪಿಎಂಶ್ರೀ ಶಾಲೆಯನ್ನಾಗಿ ಪರಿವರ್ತನೆಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ದೇಶದಲ್ಲಿನ ಗ್ರಾಮೀಣ ಪ್ರದೇಶದ ಶಾಲೆಗಳನ್ನು ಕೇಂದ್ರೀಯ ಶಾಲೆಗಳ ರೀತಿಯಲ್ಲಿ ಸ್ಥಾಪಿಸಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಪಿಎಂಶ್ರೀ ಹೆಸರಿನ ಶಾಲೆಗಳನ್ನು ಸ್ಥಾಪಿಸಲಾಗುತ್ತಿದ್ದು, ಮೂಡಲಗಿ ವಲಯದಲ್ಲಿ ಒಟ್ಟು …

Read More »

ಧಾರವಾಡ ಕಲಘಟಗಿ ರಸ್ತೆಯ ನುಗ್ಗಿಕೇರಿ ಬಳಿ ಸರಣಿ ಅಪಘಾತ,

ಧಾರವಾಡ ಕಲಘಟಗಿ ರಸ್ತೆಯ ನುಗ್ಗಿಕೇರಿ ಬಳಿ ಸರಣಿ ಅಪಘಾತ, ಹಲವರಿಗೆ ಗಾಯ…. ಅಪಘಾತದಲ್ಲಿ ಕಾರ್ ಅಟೋ ಬೈಕ್‌ಗೆ ಡ್ಯಾಮೇಜ್ ಅಟೋ ಬೈಕ್ ಹಾಗೂ ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಅಟೋ ಚಾಲಕರಿಗೆ ಗಾಯವಾಗಿ ಕಾರ್‌ನಲ್ಲಿದವರು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಧಾರವಾಡ ಹೊರವಲಯದ ಕಲಘಟಗಿ ರಸ್ತೆ ನುಗ್ಗಿಕೇರಿಯಲ್ಲಿ ನಡೆದಿದೆ. ಅಟೋ ಮತ್ತು ಬೈಕ್ ನಡುವೆ ಮೊದಲು‌ ಅಪಘಾತ ನಡೆದಿದ್ದು, ಈ ವೇಳೆ ಹಿಂಬದಿಯೇ ಬರುತ್ತಿದ್ದ ಕಾರ …

Read More »

ಕಾಂಗ್ರೆಸ್ ಸರ್ಕಾರ ಎಂದಿಗೂ‌ ಮಹಿಳೆಯರ ಪರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು*

ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ* *ಬೆಂಗಳೂರು:* ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಮನೆ ಮನೆ ತಲುಪುತ್ತಿವೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಮಹಿಳೆಯರ ಏಳಿಗೆ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಶನಿವಾರ ನಡೆದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷ ಮಹಿಳೆಯರ ಪರ ಇರುವ ಪಕ್ಷ, ಮಹಿಳೆಯರ, ಯುವಕರ, …

Read More »

ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ

ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ ಬೆಳಗಾವಿಯ ರಾಮತೀರ್ಥ ನಗರದ ಸುರೇಶ ಯಾದವ ಪೌಡೇಶನ್ ಹಾಗೂ ರಾಮತೀರ್ಥ ನಗರದ ರಹವಾಸಿಗಳ ಸಂಯುಕ್ತ ಆಶ್ರಯದಲ್ಲಿ ಹೋಳಿ ಹಬ್ಬದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸುರೇಶ ಯಾದವ ಅವರು ಪೂರ್ವದಲ್ಲಿ ತಾರಕಾಸುರನೆಂಭ ರಾಕ್ಷಸನಿದ್ದನು ಆತ ದುರಹಂಕಾರಿಯು ಹಾಗೂ ಕ್ರೂರಿಯು ಆಗಿದ್ದನು. ತಾರಕಾಸುರ ತನಗೆ ಸಾವು ಬಾರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ. …

Read More »

ವಿಕಲಚೇತನರಿಗೆ ಒಂದು ಲಕ್ಷದವರೆಗೂ ವೈದ್ಯಕೀಯ ಪರಿಹಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ರಾಜ್ಯದಲ್ಲಿ ವಿಕಲಚೇತನರಿಗೆ ಸರ್ಕಾರದಿಂದ ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆ, ನಿರಾಮಯ ಆರೋಗ್ಯ ವಿಮಾ ಯೋಜನೆ ಹಾಗೂ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಗಳು ಜಾರಿಯಲ್ಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಶುಕ್ರವಾರ ವಿಧಾನಪರಿಷತ್ ಕಲಾಪದಲ್ಲಿ ವೈ.ಎಂ.ಸತೀಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಕಲಚೇತನರಿಗಾಗಿ ಪ್ರಮುಖ ಮೂರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು. ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ …

Read More »

ವೀರಣ್ಣ ಗುಡಗನಟ್ಟಿ ನಿಧನ

ವೀರಣ್ಣ ಗುಡಗನಟ್ಟಿ ನಿಧನ ಬೆಳಗಾವಿ- ಬೆಳಗಾವಿಯ ಆಂಜನೇಯ ನಗರದ ನಿವಾಸಿ ವೀರಣ್ಣ ಬ ಗುಡಗನಟ್ಟಿ ಅವರು ಇಂದು ಬೆಳಗ್ಗೆ ನಿಧನರಾಗಿದ್ದು ಮೃತರ ಅಂತ್ಯಕ್ರಿಯೆ ಸದಾಶಿವ ನಗರದ ರುದ್ರಭೂಮಿಯಲ್ಲಿ ನಡೆದಿದೆ. ವೀರಣ್ಣ ಬ ಗುಡಗನಟ್ಟಿ ಅವರು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ಹಿರಿಯ ಸಹೋದರರಾಗಿದ್ದು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ನಿಧನರಾದರು.

Read More »

ಹುಬ್ಬಳ್ಳಿಯ ಬೃಹತ್‌ ಕಾಮಣ್ಣ ಮೂರ್ತಿಗಳು 200 ವರ್ಷಗಳ ಇತಿಹಾಸವನ್ನು ಹೊಂದಿವೆ.?

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿ ಹೋಳಿ ಆಚರಣೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಕಾಮಣ್ಣ ಬಣ್ಣದಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಹಳೆ ಮೇದಾರ ಓಣಿ ಮತ್ತು ಹೊಸ ಮೇದಾರ ಓಣಿಯಲ್ಲಿ ಪ್ರತಿಷ್ಠಾಪಿಸಲಾಗುವ ಕಾಮಣ್ಣ ಹುಬ್ಬಳ್ಳಿಯ ಬೃಹತ್‌ ಕಾಮಣ್ಣ ಮೂರ್ತಿಗಳಾಗಿದ್ದು, 200 ವರ್ಷಗಳ ಇತಿಹಾಸವನ್ನು ಹೊಂದಿವೆ. ಹಳೆ ಹುಬ್ಬಳ್ಳಿ ಮೇದಾರ ಓಣಿ ಹಾಗೂ ಹೊಸ ಹುಬ್ಬಳ್ಳಿ ಮೇದಾರ ಓಣಿಯಲ್ಲಿ ಹಲವಾರು ವರ್ಷಗಳಿಂದ ಬಿದಿರಿನಿಂದ ನಿರ್ಮಿಸಿದ ಸುಮಾರು 21 ಅಡಿ ಎತ್ತರದ ಎರಡು ಕಾಮಣ್ಣನ …

Read More »

ಕಾಲು ಜಾರಿ ಬಾವಿಯೊಳಗೆ ಬಿದ್ದು ಬಾಲಕ ಸಾವು, ರಕ್ಷಿಸಲು ಹೋದ ಅಜ್ಜಿಯೂ ನೀರು ಪಾಲು

ವಿಜಯಪುರ : ನೀರು ಕುಡಿಯಲು ಬಾವಿಗೆ ಇಳಿದಿದ್ದ ಬಾಲಕ ಕಾಲು ಜಾರಿ ಮುಳುಗಿದ್ದು, ಬಾಲಕನ ರಕ್ಷಿಸಲು ಹೋದ ಆತನ ಅಜ್ಜಿಯೂ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ತೋಟದಲ್ಲಿ ನಡೆದಿದೆ. ಅಸಾದ್‌ ಮುಲ್ಲಾ (12) ಮೃತ ಬಾಲಕ, ಸಲೀಮಾ‌ ಮುಲ್ಲಾ (55) ಮೃತ ಅಜ್ಜಿ‌ ಎಂಬುದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿರುವ ಹೊರ್ತಿ ಪೊಲೀಸರು ಬಾವಿಯೊಳಗಿದ್ದ ಇಬ್ಬರ ಶವವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ …

Read More »

ಬೈಕ್​ ಡಿಕ್ಕಿ ಹೊಡೆದ ಪರಿಣಾಮ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಗಾಯಗೊಂಡಿದ್ದಾರೆ.

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷರೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರಿಂದ ಹಾವೇರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರಿಂದ ಕೆಳಗಿಳಿದು ನಿಂತಿದ್ದ ರುದ್ರಪ್ಪ ಲಮಾಣಿ ಅವರಿಗೆ ಬೈಕ್​ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ನೆಲಕ್ಕೆ ಬಿದ್ದ ಪರಿಣಾಮ …

Read More »

ಜಲಜೀವನ್​​​ ಮಿಷನ್​​​ ಯೋಜನೆ ಅನುಷ್ಠಾನದಲ್ಲಿನ ತಪ್ಪುಗಳ ಬಗ್ಗೆ ತನಿಖೆ ?

ಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್​​ ಮಿಷನ್​​ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂವರು ಅಧಿಕಾರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದರು. ಇಂದು ಕಾಂಗ್ರೆಸ್​​ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರ ಗಮನ ಸೆಳೆಯುವ ಸೂಚನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್​​ ಖರ್ಗೆ ಅವರ ಪರವಾಗಿ ಉತ್ತರ ನೀಡಿದ ಸಚಿವರು, …

Read More »