ನವದೆಹಲಿ: ಜನವರಿ 1 ರಿಂದ ಲ್ಯಾಂಡ್‌ಲೈನ್ ಫೋನಿನಿಂದ ಯಾವುದೇ ಕಂಪನಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಬೇಕಾದರೆ ಆರಂಭದಲ್ಲಿ ‘0’ ಸಂಖ್ಯೆ ಒತ್ತುವುದನ್ನು ಕಡ್ಡಾಯ ಮಾಡಲಾಗಿದೆ. ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆ ಮಾಡುವ ಮುನ್ನ ʼ0ʼಯನ್ನು ಡಯಲ್ ಮಾಡಬೇಕೆಂದು ದೂರಸಂಪರ್ಕ ಸಚಿವಾಲಯಕ್ಕೆ ಮೇ 29 ರಂದು ಶಿಫಾರಸು ಮಾಡಿತ್ತು. ನವೆಂಬರ್ 20 ರಂದು ಸುತ್ತೋಲೆ ಹೊರಡಿಸಿ ಟ್ರಾಯ್ ಈ ಶಿಫಾರಸನ್ನು ಜಾರಿಗೆ ತರುವುದಾಗಿ ಹೇಳಿದೆ.ಗ್ರಾಹಕರು ಆರಂಭದಲ್ಲಿ …
Read More »40 ಚೀಲದ ಬಾಸುಮತಿ ಭತ್ತದ ಬಣವೆಗೆ ದುಷ್ಕರ್ಮಿಗಳ ಬೆಂಕಿ
ಬೆಳಗಾವಿ – ಶಿಂದೊಳ್ಳಿ ಗ್ರಾಮದ ಚಂದ್ರಗೌಡ ಬಾಬಾಗೌಡ ಪಾಟೀಲ ಇವರ ಜಮೀನಲ್ಲಿ ರಾಶಿ ಮಾಡಲು ಕೂಡಿಟ್ಟಿದ್ದ ಸುಮಾರು 40 ಚೀಲದ ಬಾಸುಮತಿ ಭತ್ತದ ಬಣವೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸುವರ್ಣ ಸೌಧದ ಹಿಂದುಗಡೆ ಶೆಗಣಮಟ್ಟಿ ರಸ್ತೆಯ ಭೀಮನ ಪಾದದ ಹತ್ತಿರ ಇರುವ 138/ಬಿ ಸರ್ವೆ ನಂಬರಿನ ಜಮೀನಲ್ಲಿ ಈ ದುರ್ಘಟನೆ ನಡೆದಿದೆ. ಎರಡು ಭತ್ತದ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೇನು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ತಡರಾತ್ರಿಯಲ್ಲಿ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ …
Read More »ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ ಯಾಕೆ? ನನ್ನ ಮೇಲೆ ನಡೆಯುತ್ತಿರುವ ತನಿಖೆ ದ್ವೇಷದ ರಾಜಕಾರಣವಲ್ಲವೇ?: ಡಿ.ಕೆ ಶಿ
ಬೆಂಗಳೂರು: ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ ಯಾಕೆ? ನನ್ನ ಮೇಲೆ ನಡೆಯುತ್ತಿರುವ ತನಿಖೆ ದ್ವೇಷದ ರಾಜಕಾರಣವಲ್ಲವೇ? ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ನನ್ನ ವಿರುದ್ಧ ತನಿಖೆ ಮಾಡುವಂತೆ ಸಿಬಿಐಗೆ ಅನುಮತಿ …
Read More »ರಮೇಶ್ ಜಾರಕಿಹೊಳಿ ಸೇರಿದಂತೆ ಇತರ ಶಾಸಕರ ವಿರುದ್ಧ ವಿಧಾನಸೌಧದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಬೆಂಗಳೂರು: ಮೊದಲು 105 ಶಾಸಕರು. ನಂತರ ಕಾಂಗ್ರೆಸ್, ಜೆಡಿಎಸ್‍ನಿಂದ ಬೇಸತ್ತು 17 ಜನ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನನ್ನಿಂದಲೇ ಸರ್ಕಾರ ಬಂದಿದೆ ಅಂತಾ ಯಾರು ಹೇಳ್ತಾರೋ ಅವರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿಗೆ ಸೇರ್ಪಡೆಯಾಗಿ ಸರಕಾರ ರಚನೆಗೆ ಕಾರಣವಾಗಿದ್ದ ರಮೇಶ್ ಜಾರಕಿಹೊಳಿ ಸೇರಿದಂತೆ ಇತರ ಶಾಸಕರ ವಿರುದ್ಧ ವಿಧಾನಸೌಧದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಹದಿನೇಳು ಜನರಿಂದ ಬಿಜೆಪಿ ಸರ್ಕಾರ ಬಂದಿದೆ ಎಂಬುದು ಸುಳ್ಳು. ಪಕ್ಷದ ಕಾರ್ಯಕರ್ತರ …
Read More »ಬೆಳಗಾವಿ ಜಿಲ್ಲೆಯ 18 ಜನ ಶಾಸಕರ ಪೈಕಿ 13 ಜನ ಬಿಜೆಪಿ ಶಾಸಕರಿದ್ದಾರೆ. ಈ ಪೈಕಿ ಇದೀಗ 9 ಜನರಿಗೆ ಸರ್ಕಾರದಲ್ಲಿ ಸಚಿವ, ನಿಗಮ ಸೇರಿ ಮಹತ್ವ ಹುದ್ದೆ
ಬೆಳಗಾವಿ : ಜಿಲ್ಲೆಯ 18 ಜನ ಶಾಸಕರ ಪೈಕಿ 13 ಜನ ಬಿಜೆಪಿ ಶಾಸಕರಿದ್ದಾರೆ. ಈ ಪೈಕಿ ಇದೀಗ 9 ಜನರಿಗೆ ಸರ್ಕಾರದಲ್ಲಿ ಸಚಿವ, ನಿಗಮ ಸೇರಿ ಮಹತ್ವ ಹುದ್ದೆ ಪಡೆದುಕೊಂಡಿದ್ದಾರೆ. ಈಗ ಮತ್ತೆ ಹಾಲಿ ಹಾಗೂ ಮಾಜಿ ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಗಳು ಒಲಿದು ಬಂದಿದ್ದು, ಬೆಳಗಾವಿ ಜಿಲ್ಲೆ. ಈಗ, ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಡುತ್ತಿದೆ. ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಎಲಿಲ್ಲದ ಪ್ರಶಸ್ತ್ಯ ದೊರೆಯುತ್ತಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ …
Read More »ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಡಿ.1ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ
ಬೆಂಗಳೂರು, ನ.25- ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರ ಸವಾಲು ಸ್ವೀಕರಿಸಿರುವ ಕನ್ನಡಪರ ಸಂಘಟನೆಗಳು ಡಿ.1ರಂದು ವಿಜಯಪುರದ ಜಿಲ್ಲಾಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಘೋಷಣೆ ಮಾಡಿವೆ. ಮರಾಠ ಸಮುದಾಯ ಅಭಿವೃದ್ಧಿ ನಿಗಮ ರಚನೆಯನ್ನು ವಿರೋಧಿಸಿ ಹೋರಾಟಕ್ಕಿಳಿದಿರುವ ಕನ್ನಡಪರ ಸಂಘಟನೆಗಳನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರೋಲ್‍ಕಾಲ್ ಮತ್ತು ನಕಲಿ ಹೋರಾಟಗಾರರು ಎಂದು ಟೀಕಿಸುವ ಜತೆಗೆ ವಿಜಯಪುರದಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸವಾಲು ಹಾಕಿದ್ದರು. ಇದಕ್ಕೆ …
Read More »ನಿಗಮ ಮಂಡಳಿಗಳ ಅಧ್ಯಕ್ಷ ಯಾರಿಗೆ ಯಾವ ಮಂಡಳಿಯ ಅಧ್ಯಕ್ಷ ಸ್ಥಾನ..?
ಬೆಂಗಳೂರು : ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಅಂತಾ ತಿಳಿಯುತ್ತಿದ್ದಂತೆ ಶಾಸಕರ ಲಾಬಿ ಹಾಗೂ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಲೆ ಇದೆ. ಈ ನಡುವೆ ಸಿಎಂ ಗುರುವಾರವೇ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಿದ್ದಾರೆ. ನಿನ್ನೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಸಭೆ ನಡೆಸಿದ್ದರು. ಇದರ ಬೆನ್ನಲ್ಲೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನ ಭರ್ತಿ ಮಾಡಿದ್ದು, ಈ ಮೂಲಕ ಮುಂದೆ ಬರಬಹುದಾಗಿದ್ದ ಅಪರಸ್ವರಕ್ಕೆ ಕಡಿವಾಣ ಹಾಕಿದಂತಾಗಿದೆ. ಈ …
Read More »ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಹಾಡಹಗಲೇ ಚಾಕು ಇರಿದ ವ್ಯಕ್ತಿ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಹಾಡಹಗಲೇ ನೆತ್ತರು ಹರಿದಿದೆ. ಕಟಿಂಗ್ ಶಾಪ್‍ಗೆ ಆಗಮಿಸಿದ್ದ ಮಾಜಿ ರೌಡಿಶೀಟರ್ ಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ಬಾಬಾಸಾನ್ ಗಲ್ಲಿಯಲ್ಲಿ ನಡೆದಿದೆ. ಕಮರಿಪೇಟೆಯ ಹಳೇ ರೌಡಿ ಶೀಟರ್ ರಮೇಶ್ ಭಾಂಡಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ರಮೇಶ್ ಭಾಂಡಗೆ ಹಲವು ಅಕ್ರಮ ಧಂದೆಯಲ್ಲಿ ಈ ಹಿಂದೆ ಭಾಗಿಯಾಗಿದ್ದ, ಇಂದು ಮಧ್ಯಾಹ್ನ ಕಟಿಂಗ್ ಶಾಪ್ ಗೆ ಬಂದಿದ್ದ ವೇಳೆ ವ್ಯಕ್ತಿಯೊಬ್ಬ ಚಾಕು …
Read More »ಟ್ರೋಲ್ ಮಾಡಿದ ನೆಟ್ಟಿಗನಿಗೆ ಗಾಯಕಿ ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ತರಾಟೆಗೆ
ಮುಂಬೈ: ಬಾಲಿವುಡ್ ಗಾಯಕಿ ಸೋನಾ ಮೋಹಪತ್ರಾ ಅವರು ಡ್ರೆಸ್ ಬಗ್ಗೆ ಕಾಮೆಂಟ್ ಮಾಡಿ ನೆಟ್ಟಿಗನ ಚಳಿ ಬಿಡಿಸಿದ ಘಟನೆಯೊಂದು ನಡೆದಿದೆ. ಹೌದು. ‘ಐ ನೆವರ್ ಆಸ್ಕ್ ಫಾರ್ ಇಟ್’ ಎಂಬ ಟ್ವಿಟ್ಟರ್ ಅಭಿಯಾನವೊಂದಕ್ಕೆ ಕೈ ಜೋಡಿಸಿರುವ ಸೋನಾ, ತಮ್ಮ ಕಾಲೇಜು ದಿನಗಳಲ್ಲಿ ಚುಡಾಯಿಸುವ ಹಾಗೂ ಲೈಂಗಿಕ ಕಿರುಕುಳ ಎದುರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಟ್ರೋಲ್ ಮಾಡಿದ ನೆಟ್ಟಿಗನಿಗೆ ಗಾಯಕಿ ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. …
Read More »ಕಾಡು ಪ್ರಾಣಿಗಳ ಬೇಟೆಯಾಡಲು ಬಂದ ಯುವಕ ಸ್ಫೋಟಕ ಸಿಡಿದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ
ಬೆಳಗಾವಿ : ಕಾಡು ಪ್ರಾಣಿಗಳ ಬೇಟೆಯಾಡಲು ಬಂದ ಯುವಕನೇ ತಾನು ತಂದಿದ್ದ ಸ್ಫೋಟಕ ಸಿಡಿದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಮಾಚಿಗಡ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಗಜೇಂದ್ರ ರಜಪೂತ (17)ಮೃತ ಯುವಕ. ದ್ವಿಚಕ್ರದಲ್ಲಿ ಗಜೇಂದ್ರ ಹಾಗೂ ಶಿವಕುಮಾರ್ ಇಬ್ಬರು ಪ್ರಾಣಿಗಳ ಭೇಟೆಯಾಡಲು ಬಂದಿದ್ದರು. ಗಜೇಂದ್ರ ತಾನು ತಂದಿದ್ದ ಸ್ಫೋಟಕ ವಸ್ತುಗಳನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದನು. ಅಲ್ಲಿಗೆ ಬಂದ ವೇಳೆ ಬೈಕಿಗೆ ಟ್ಯಾಕ್ಟರ್ ಡಿಕ್ಕಿ …
Read More »