ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) 2021ನೇ ಇಸವಿಯ ಬ್ಯಾಂಕ್ ಗಳ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ ಗಳಿಗೆ ಭಾನುವಾರ ಹಾಗೂ ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ರಜಾ ಇರುತ್ತದೆ. ಹೊಸ ವರ್ಷದ ಪ್ರಯುಕ್ತ ಜನವರಿ 1, 2021ರಂದು ಚೆನ್ನೈ, ಐಜ್ವಾಲ್, ಗ್ಯಾಂಗ್ಟಕ್, ಇಂಫಾಲ್ ಮತ್ತು ಶಿಲ್ಲಾಂಗ್ ನಲ್ಲಿ ಬ್ಯಾಂಕ್ ಗಳಿಗೆ ರಜಾ ಇದೆ. ಉಳಿದ ಪ್ರಮುಖ ನಗರಗಳಲ್ಲಿ …
Read More »ದೇಶಾದ್ಯಂತ ಕೋವಿಡ್-19 ಸೋಂಕಿನ ಚೇತರಿಕೆ ಪ್ರಮಾಣ ಶೇಕಡ 98.83ಕ್ಕೆ ಏರಿದೆ.
ನವದೆಹಲಿ: ದೇಶಾದ್ಯಂತ ಕೋವಿಡ್-19 ಸೋಂಕಿನ ಚೇತರಿಕೆ ಪ್ರಮಾಣ ಶೇಕಡ 98.83ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 23 ಸಾವಿರಕ್ಕಿಂತ ಅಧಿಕ ಸೋಂಕಿತರು ಗುಣಮುಖರಾಗಿ, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ದೇಶದಲ್ಲಿ ಈವರೆಗೆ ಗುಣಮುಖರಾದವರ ಸಂಖ್ಯೆ 98 ಲಕ್ಷದ 83 ಸಾವಿರಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 23,181 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯೊಂಡಿದ್ದು, ಇದರೊಂದಿಗೆ ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷದ …
Read More »ಕರ್ನಾಟಕದಲ್ಲಿ ಉದ್ಯೋಗಾವಕಾಶಗಳ ಹೆಚ್ಚಿಸಲಿದೆ ತುಮಕೂರು ಕೈಗಾರಿಕಾ ನೋಡ್ : ಜಗದೀಶ್ ಶೆಟ್ಟರ್
ಬೆಂಗಳೂರು : ಕರ್ನಾಟಕವನ್ನು ವಿಶ್ವದರ್ಜೆಯ ಔದ್ಯಮಿಕ ಜಾಲವಾಗಿ ಅಭಿವೃದ್ಧಿ ಪಡಿಸಲು ಚೆನೈ – ಬೆಂಗಳೂರು ಕೈಗಾರಿಕಾ ಕಾರಿಡಾರ್ ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ನೋಡ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 1,701.81 ಕೋಟಿ ರೂ. ಮೀಸಲಿರಿಸಿದ್ದು, ಇದರಿಂದ ಅಂದಾಜು 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡಿದ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಪ್ರಧಾನಿ ನರೇಂದ್ರ ಮೋದಿ …
Read More »ಹೊಸ ವರ್ಷದ ಮೊದಲ ಚಿತ್ರವಾಗಿ ತೆರೆಗಪ್ಪಳಿಸಲಿದೆ ‘ರಾಜತಂತ್ರ’
ಹೊಸ ವರ್ಷದ ಮೊದಲ ಚಿತ್ರವಾಗಿ ರಾಜತಂತ್ರ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ. ಕೊರೊನಾ ಹಾವಳಿಯಿಂದ ಇಡೀ ಚಿತ್ರೋದ್ಯಮವೇ ಕಂಗಾಲಾಗಿದ್ದು , ಈಗಷ್ಟೆ ಕೆಲವು ಹೊಸಬರ ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಸ್ಟಾರ್ ನಟರಗಳ ಚಿತ್ರ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆ ಹುಮ್ಮಸ್ಸಿನೊಂದಿಗೆ ರಾಜ್ಯ ಪ್ರಶಸ್ತಿ ವಿಜೇತ ರಾಘವೇಂದ್ರ ರಾಜಕುಮಾರ್ ನಟಿಸಿರುವ ರಾಜತಂತ್ರ ಸಿನಿಮಾ ಇದೀಗ ರಾಜ್ಯಾದ್ಯಂತ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆP್ಸï ಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು …
Read More »ಹೊಸ ವರ್ಷದ ಆರಂಭದ ದಿನವಾದ ಇಂದಿನಿಂದ ಕರ್ನಾಟಕದಲ್ಲಿ SSLC ಹಾಗೂ Second PUC ತರಗತಿಗಳು ಆರಂಭವಾಗಲಿವೆ
ಬೆಂಗಳೂರು (ಜ. 1): ಹೊಸ ವರ್ಷದ ಆರಂಭದ ದಿನವಾದ ಇಂದಿನಿಂದ ಕರ್ನಾಟಕದಲ್ಲಿ SSLC ಹಾಗೂ Second PUC ತರಗತಿಗಳು ಆರಂಭವಾಗಲಿವೆ. ಸಕಲ ಸಿದ್ಧತೆಗಳೊಂದಿಗೆ ವಿಧ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಸಜ್ಜಾಗಿವೆ. ಇಂದು ಬೆಳಗ್ಗೆ 10 ಗಂಟೆಯಿಂದ ತರಗತಿಗಳು ಆರಂಭವಾಗಲಿವೆ. ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ. ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಖಾಸಗಿ ಸಂಸ್ಥೆ ಹಾಗೂ ಅನುದಾನ ರಹಿತ ಸಂಸ್ಥೆಗಳಿಗೆ ಎಸ್ಒಪಿ ಕೊಟ್ಟು ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಲಾಗಿದೆ. …
Read More »ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ
ಗೋಕಾಕ: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 1 ರಿಂದ 5ರವರೆಗೆ ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 1 ರಂದು ಮಧ್ಯಾಹ್ನ 2.30 ಗಂಟೆಗೆ ಗುವಾಹಟಿಯಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಅಲ್ಲಿಂದ ರಸ್ತೆ ಮೂಲಕ ಗೋಕಾಕ ಆಗಮಿಸಿ ವಾಸ್ತವ್ಯ ಮಾಡುವರು. ದಿ. 2 ರಂದು ಮುಂಜಾನೆ 11.15 ಗಂಟೆಗೆ ತಾಲೂಕಿನ ಕೊಣ್ಣೂರ ಪುರಸಭೆ ವ್ಯಾಪ್ತಿಯಲ್ಲಿ …
Read More »ನಮ್ಮ ಮನೆಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಪರಾಜಿತ ಅಭ್ಯರ್ಥಿ ಹಾಗೂ ಆತನ ಕುಟುಂಬಸ್ಥರ ಮೇಲೆ ಹಲ್ಲೆ.
ವಿಜಯಪುರ ಬ್ರೇಕಿಂಗ್: ಸೋತವರ ಮನೆಮುಂದೆ ಬಂದು ಪಟಾಕಿ ಹಚ್ಚಿದ ಗೆದ್ದ ಅಭ್ಯರ್ಥಿಗಳು. ನಮ್ಮ ಮನೆಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಪರಾಜಿತ ಅಭ್ಯರ್ಥಿ ಹಾಗೂ ಆತನ ಕುಟುಂಬಸ್ಥರ ಮೇಲೆ ಹಲ್ಲೆ. ಗೆದ್ದ ಅಭ್ಯರ್ಥಿಗಳ ಬೆಂಬಲಿಗರಿಂದ ಸೋತವರ ಮೇಲೆ ಹಲ್ಲೆ ಆಗಿದೆ ಎಂದು ಹಲ್ಲೆಗೊಳಗಾದವರ ಆರೋಪ. ಚಡಚಣ ತಾಲೂಕಿನ ಧುಮಕನಾಳ ಗ್ರಾಮದಲ್ಲಿ ಘಟನೆ. ಪರಾಜಿತ ಅಭ್ಯರ್ಥಿ ಶಿವಪ್ಪ ಕನಾಳ, ರಾಯಪ್ಪ ಕನಾಳ, ಶ್ರೀಶೈಲ ಕನಾಳ, ಪುತಳಾಬಾಯಿ ಕನಾಳ, ಭೀಮಕ್ಕ ಕನಾಳ ಮೇಲೆ ಹಲ್ಲೆ. …
Read More »ಊರಿನ ಜನ ತನಗೆ ಮತ ಹಾಕಿಲ್ಲವೆಂದು ಕೋಪಗೊಂಡ ಪರಾಜಿತ ಅರ್ಥಿಯೊಬ್ಬ ರಸ್ತೆ ಬಂದ್ ಮಾಡಿ ದರ್ಪ ಮೆರೆದಿದ್ದಾನೆ
ಕೋಲಾರ: ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ನಡೆದು ಫಲಿತಾಂಶ ಪ್ರಕಟವಾದ ಅದರ ಎಫೆಕ್ಟ್ ಈ ಊರಿನವರಿಗೆ ಸಂಕಷ್ಟ ತಂದಿದೆ. ಊರಿನ ಜನ ತನಗೆ ಮತ ಹಾಕಿಲ್ಲವೆಂದು ಕೋಪಗೊಂಡ ಪರಾಜಿತ ಅರ್ಥಿಯೊಬ್ಬ ರಸ್ತೆ ಬಂದ್ ಮಾಡಿ ದರ್ಪ ಮೆರೆದಿದ್ದಾನೆ. ಇಂತಹ ಘಟನೆ ಮಾಲೂರು ತಾಲೂಕಿನ ಅಗ್ರಹಾರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ ಚುನಾವಣೆಗೆ ಸ್ಪರ್ಧಿಸಿದ್ದ ಗಿರಿಗೌಡ ಎಂಬಾತ ಸೋಲು ಕಂಡಿದ್ದಾರೆ. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಅಂದರೆ ನಿನ್ನೆ (ಬುಧವಾರ) …
Read More »ಭಾರತದಲ್ಲಿ ತಯಾರಾದ ಲಸಿಕೆಗಳನ್ನು ಜನರಿಗೆ ನೀಡಲಾಗುವುದು
ಅಹ್ಮದಾಬಾದ್: 2021ನೇ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಜನರು ಕೊರೋನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ, ಕಾಳಜಿಯನ್ನು ಮರೆಯದೆ ಶಿಷ್ಠಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕೊರೋನಾ ಲಸಿಕೆ ಬಂದ ನಂತರವೂ ಇದನ್ನು ಮುಂದುವರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕಿವಿಮಾತು ಹೇಳಿದ್ದಾರೆ. ರಾಜ್ ಕೋಟ್ ನಲ್ಲಿ ಏಮ್ಸ್ ಸಂಸ್ಥೆ ನಿರ್ಮಾಣಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಹೊಸ ಕೊರೋನಾ ಕೇಸುಗಳು ದೇಶದಲ್ಲಿ …
Read More »ಜಿಯೋ ಗ್ರಾಹಕರು ಭಾರತದ ಯಾವುದೇ ನೆಟ್ವರ್ಕ್ ಗೆ ವಾಯ್ಸ್ ಕಾಲ್ ಕರೆ ಉಚಿತ
ನವದೆಹಲಿ : ದೇಶೀಯ ಧ್ವನಿ ಕರೆಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ವಿಧಿಸುತ್ತಿದ್ದಂತ ಇಂಟರ್ ಕನೆಕ್ಟ್ ಬಳಕೆ ಶುಲ್ಕ ಜನವರಿ 1, 2021ಕ್ಕೆ ಕೊನೆಗೊಳ್ಳಲಿದೆ. ಇದರಿಂದಾಗಿ ಐಸಿಯು ಶುಲ್ಕ ರದ್ದುಗೊಳ್ಳುವ ಕಾರಣದಿಂದಾಗಿ, ಜನವರಿ 1, 2021ರಿಂದ ಜಿಯೋ ಗ್ರಾಹಕರು ಭಾರತದ ಯಾವುದೇ ನೆಟ್ವರ್ಕ್ ಗೆ ವಾಯ್ಸ್ ಕಾಲ್ ಕರೆ ಉಚಿತವಾಗಿ ನೀಡಲಾಗುತ್ತದೆ ಎಂಬುದಾಗಿ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ತಿಳಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಜಿಯೋ, ಭಾರತೀಯ …
Read More »