Breaking News

ಬಲವಂತದ ಸಾಲ ವಸೂಲಾತಿ: ಬಜಾಜ್ ಫೈನಾನ್ಸ್‌ಗೆ 2.5 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ

ನವದೆಹಲಿ, ಜನವರಿ 06: ಗ್ರಾಹಕರಿಂದ ಸಾಲವನ್ನು ವಸೂಲಿ ಮಾಡಲು ಬಲವಂತದ ವಿಧಾನಗಳನ್ನು ಅನುಸರಿದ್ದಕ್ಕಾಗಿ ಹಾಗೂ ಸಾಮಾನ್ಯ ಮಾರ್ಗಸೂಚಿಗಳ ಉಲ್ಲಂಘನೆಯಿಂದಾಗಿ ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಜಾಜ್‌ ಫೈನಾನ್ಸ್‌ಗೆ 2.50 ಕೋಟಿ ರೂ. ದಂಡ ವಿಧಿಸಿದೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಅನ್ವಯವಾಗುವ ನ್ಯಾಯಯುತವಾದ ನಿಯಮಗಳನ್ನು ಮತ್ತು ನೀತಿ ಸಂಹಿತೆಯನ್ನು ನಿರ್ವಹಿಸುವ ನಿರ್ದೇಶನಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಆರ್‌ಬಿಐ ಈ ದಂಡ ವಿಧಿಸಿದೆ. ಇದಲ್ಲದೆ, ಬಜಾಜ್ ಫೈನಾನ್ಸ್ ಸಹ ಪತ್ರ …

Read More »

ಬ್ರಾಹ್ಮಣ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ : BSY

ಬೆಂಗಳೂರು,ಜ.6- ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಯೋಜನೆಗಳ ಲೋಕಾರ್ಪಣೆ, ವಿಪ್ರ ಗಣ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು. ಶಂಕರಾಚಾರ್ಯ, ಮಧ್ವಾಚಾರ್ಯ ಸೇರಿದಂತೆ …

Read More »

ಮೂವತ್ತು ವರ್ಷ ನಾನು ರಾಜಕೀಯ ಮಾಡಿದವನು. ಯಾರಿಗೂ ಹೆದರೋ ಮಗ ನಾನಲ್ಲ :ಯತ್ನಾಳ

ಬೆಂಗಳೂರು(ಜ.06): ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಸಿದ್ದೇನೆ. ಅಭಿವೃದ್ದಿ ಬಗ್ಗೆ ಮಾತನಾಡಿದರೆ ಅದು ಪಕ್ಷ ವಿರೋಧಿ ಹೇಳಿಕೆ ಹೇಗಾಗುತ್ತೆ? ನಾನೇನು ಮಂತ್ರಿ ಮಾಡಿ ಅಂತ ಯಡಿಯೂರಪ್ಪನವರ ಮನೆಗೆ ಹೋಗಿಲ್ಲ. ಮೂವತ್ತು ವರ್ಷ ನಾನು ರಾಜಕೀಯ ಮಾಡಿದವನು. ಯಾರಿಗೂ ಹೆದರೋ ಮಗ ನಾನಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಗುಡುಗಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಪಕ್ಷೀಯರ ವಿರುದ್ಧ ತಿರುಗಿ ಬಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿರುದ್ಧವೂ …

Read More »

ಪಲ್ಸ್‌ ಪೋಲಿಯೊ ಲಸಿಕೆ ಜ.17ರಂದು

ಹಾವೇರಿ: ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಡಿ ಜ.17ರಂದು ಜಿಲ್ಲೆಯಾದ್ಯಂತ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಸಹಭಾಗಿತ್ವ ಹಾಗೂ ವಿಶ್ವಾಸದಿಂದ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಪಲ್ಸ್ ಪೋಲಿಯೊ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ ಹಿನ್ನೆಲೆಯಲ್ಲಿ ಗರಿಷ್ಠ …

Read More »

ಹಕ್ಕಿ ಜ್ವರ: ಕರ್ನಾಟಕದಲ್ಲಿ ಹೈ ಅಲರ್ಟ್​ ಘೋಷಣೆ

ಬೆಂಗಳೂರು: ಕರೊನಾ ಸೋಂಕಿನ ಭೀತಿಯಿಂದ ಹೊರಬರಲು ಇನ್ನೂ ಆಗಿಲ್ಲ. ಅದರ ಬೆನ್ನಲ್ಲೇ ಕರೊನಾ ರೂಪಾಂತರಿ ಆವರಿಸಿಕೊಂಡಿದೆ. ಈಗ ಹಕ್ಕಿ ಜ್ವರ! ನೆರೆಯ ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರ (H5N8) ಸೋಂಕು ದೃಢಪಟ್ಟಿದ್ದು, ಕರ್ನಾಟಕದಲ್ಲೂ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ. ಹಾಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಚಿವ ಪ್ರಭು ಚವ್ಹಾಣ್ ಹೈ ಅಲರ್ಟ್​ ಘೋಷಿಸಿದ್ದಾರೆ. ಹಕ್ಕಿ ಜ್ವರದ ಸರ್ವೇಕ್ಷಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ …

Read More »

ಮರುಕಳಿಸಿದೆ ನಿರ್ಭಯಾ ಕೇಸ್​: ಕಬ್ಬಿಣದ ರಾಡ್​ ನೂಕಿಸಿ ಅತ್ಯಾಚಾರ ಎಸಗಿ ಕೊಲೆ!

ಬದೌನ್ (ಉತ್ತರ ಪ್ರದೇಶ): ಕಾಮುಕರ ಅಟ್ಟಹಾಸಕ್ಕೆ, ಕ್ರೌರ್ಯಕ್ಕೆ ಕೊನೆಯೇ ಇಲ್ಲವೇನೋ ಎನ್ನುವಂಥ ಭಯಾನಕ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇದೆ. ಅಂಥದ್ದೇ ಒಂದು ಭಯಾನಕ ಘಟನೆ ಉತ್ತರ ಪ್ರದೇಶ ಬದೌನ್​ನಲ್ಲಿ ನಡೆದಿದೆ. ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಕೊನೆಗೂ ಗಲ್ಲುಶಿಕ್ಷೆಯಾಗಿದೆ. ಆದರೆ ಅದರ ಬೆನ್ನಲ್ಲೇ ಥೇಟ್​ ಇದೇ ಘಟನೆ ನೆನಪಿಸುವ ಅತ್ಯಂತ ಕ್ರೌರ್ಯವಾದ ಅತ್ಯಾಚಾರ ಘಟನೆ ಬದೌನ್​ನಲ್ಲಿ ನಡೆದಿದೆ. 50 ವರ್ಷದ ಮಹಿಳೆಯೊಬ್ಬರ ಗುಪ್ತಾಂಗಕ್ಕೆ ರಾಡ್​ ಹಾಕಿ ಅತ್ಯಾಚಾರ …

Read More »

ಹಾಸನ: ಹತ್ತು ಶಿಕ್ಷಕರಿಗೆ ಕೋವಿಡ್‌ 19 ದೃಢ, ಏಳು ಶಾಲೆಗಳಿಗೆ ರಜೆ

ಹಾಸನ: ಜಿಲ್ಲೆಯಲ್ಲಿ ಶಾಲೆಗಳು ಆರಂಭಗೊಂಡ ಬಳಿಕ ಹತ್ತು ಶಿಕ್ಷಕರಿಗೆ ಕೋವಿಡ್‌ 19 ದೃಢಪಟ್ಟಿರುವುದರಿಂದ ಏಳು ಶಾಲೆಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. ‌ ಪ್ರಾಥಮಿಕ ಶಾಲೆಯ ಏಳು ಮತ್ತು ಪ್ರೌಢಶಾಲೆಯ ಮೂವರು ಶಿಕ್ಷಕರಿಗೆ ಸೋಂಕು ತಗುಲಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ. ಶಾಲೆ ಆರಂಭಕ್ಕೂ ಮುನ್ನ ಮೂವರು ಶಿಕ್ಷಕರಿಗೆ ಪಾಸಿಟಿವ್‌ ಪತ್ತೆಯಾಗಿತ್ತು. ಹಾಗಾಗಿ ಸೋಂಕಿತ ಶಿಕ್ಷಕರು ಶಾಲೆಗೆ ಹಾಜರಾಗಿರಲಿಲ್ಲ. ‘ಚನ್ನರಾಯಪಟ್ಟಣ ತಾಲ್ಲೂಕಿನ ಮೂವರು, ಹಾಸನ ತಾಲ್ಲೂಕಿನ ಇಬ್ಬರು ಹಾಗೂ …

Read More »

ಇಂದು ಮತ್ತೆ ಇಬ್ಬರಿಗೆ ರೂಪಾಂತರಿ ಕೊರೊನಾ ಸೋಂಕು ದೃಢ

ನವದೆಹಲಿ: ದೇಶದಲ್ಲಿ ಬ್ರಿಟನ್‌ ಕೊರೊನಾ ಹವಾಳಿ ಹೆಚ್ಚುತ್ತಿದ್ದು, ದೇಶದಲ್ಲಿ ಇಂದು ಮತ್ತೆ ಇಬ್ಬರಿಗೆ ರೂಪಾಂತರಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ರೂಪಾಂತರಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ. ಅದ್ರಂತೆ, ಬೆಂಗಳೂರಿನ ನಿಮ್ಹಾನ್ಸ್‌ʼನಲ್ಲಿ 11 ಪ್ರಕರಣಗಳು ದಾಖಲಾಗಿದ್ರೆ, ಎನ್‌ʼಐವಿ ಪುಣೆ 30 ಪ್ರಕರಣಗಳು, ಇನ್ನು ಸಿಸಿಎಂಬಿ ಹೈದ್ರಾಬಾದ್‌ನಲ್ಲಿ 3 ಪ್ರಕರಣಗಳು ಹಾಗೂ ಎನ್ಸಿಡಿಸಿ ಕೊಲ್ಕತ್ತಾದಲ್ಲಿ 1 ಪ್ರಕರಣ ಸೇರಿ ದೇಶದಲ್ಲಿ ಒಟ್ಟು 73 ಪ್ರಕರಣಗಳು ದಾಖಲಾಗಿದೆ ಎಂದು …

Read More »

ಮತ್ತೆ ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ವಿಸ್ತರಣೆ

ಧಾರವಾಡ, ಜನವರಿ 6: ಧಾರವಾಡ ಜಿ.ಪಂ ಸದಸ್ಯ ಯೋಗೀಶ್ ಗೌಡ ಅವರ ಕೊಲೆ ಪ್ರಕರಣದ ಆರೋಪದಡಿ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ. ಬುಧವಾರದಂದು ಧಾರವಾಡ ಹೈಕೋರ್ಟ್ ನಲ್ಲಿ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಅಷ್ಟೆ ಅಲ್ಲ ಇಂದು ಜಾಮೀನು ಸಿಗುವ ನಿರೀಕ್ಷೆ ಕೂಡ ಅವರ ಮಾಜಿ ಸಚಿವರ ಅಭಿಮಾನಿಗಳಿಗೆ ಇತ್ತು.   ಆದರೆ ಸಿಬಿಐ ಅಧಿಕಾರಿಗಳು ವಿನಯ್ …

Read More »

ಕೊರೊನಾ ಎಫೆಕ್ಟ್: ಖಾಯಂ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ ಘೋಷಿಸಿದ ಹೋಂಡಾ

ಕೊರೊನಾ ಸಾಂಕ್ರಾಮಿಕದಿಂದಾಗಿ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಹೋಂಡಾ ಮೋಟಾರ್​ ಕಂಪನಿ ತನ್ನ ಸಂಸ್ಥೆಯ ಕೆಲ ಖಾಯಂ ನೌಕರರಿಗೆ ಸ್ವಯಂ ಪ್ರೇರಿತ ನಿವೃತ್ತಿಯ ಆಫರ್​ ನೀಡುತ್ತಿದೆ. ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್​ ಸೈಕಲ್ಸ್ ಹಾಗೂ ಸ್ಕೂಟರ್ಸ್ ಇಂಡಿಯಾ ಕೊರೊನಾ ಸಾಂಕ್ರಾಮಿಕದ ಬಳಿಕ ಮಂದಗತಿಯ ಬೇಡಿಕೆ ಹಾಗೂ ಆರ್ಥಿಕ ಕುಸಿತವನ್ನ ಅನುಭವಿಸುತ್ತಿದೆ ಎಂದು ತಿಳಿಸಿದೆ. ಬೇಡಿಕೆ ನಿಧಾನವಾಗುತ್ತಿರೋದ್ರಿಂದ ನೋಯ್ಡಾ ಕಾರು ಪ್ಲಾಂಟ್​ನ್ನ ಬಂದ್​ ಮಾಡಿದ …

Read More »