ವಿಜಯಪುರ: ‘ನನ್ನ ಮೊಬೈಲ್ ಫೋನ್ ಕರೆನ್ಸಿ ಖಾಲಿಯಾಗಿದೆ, ಯಾರ ಕರೆಯೂ ಬಂದಿಲ್ಲ’ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುಖ್ಯಮಂತ್ರಿಯಿಂದ ಕರೆ ಬಂದಿಲ್ಲ, ಸಂಪುಟದಲ್ಲಿ ಸಚಿವ ಸ್ಥಾನ ಸಿಗುತ್ತಿಲ್ಲ ಎಂದು ಪರೋಕ್ಷವಾಗಿ ನಿರಾಸೆ ವ್ಯಕ್ತಪಡಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಿಮಗೆ ಮುಖ್ಯಮಂತ್ರಿಯಿಂದ ಕರೆ ಬಂದಿದೆಯಾ? ಬೆಂಗಳೂರಿಗೆ ಹೋಗುತ್ತಿದ್ದೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರಿನಲ್ಲಿ ನನಗೇನೂ ಕೆಲಸ ಇಲ್ಲ, ಅಲ್ಲಿಗೆ ನಾನು ಹೋಗುತ್ತಿಲ್ಲ’ …
Read More »ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು
ಮಂಗಳೂರು: ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ನಾಲ್ವರು ಯುವತಿಯರನ್ನು ರಕ್ಷಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕೆ.ಎಸ್.ರಾವ್.ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ನಿರಂತರವಾಗಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಕುರಿತು ಮಾಹಿತಿ ಪಡೆದ ಪೊಲೀಸರ ತಂಡ ದಾಳಿ ನಡೆಸಿತ್ತು. ದಂಧೆ ನಡೆಸುತ್ತಿದ್ದವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ.
Read More »ಉಪೇಂದ್ರ ಅಭಿನಯದ ಕಬ್ಜ ಚಿತ್ರದ ವಿಶೇಷ ಪಾತ್ರದಲ್ಲಿ ಸುದೀಪ್
ಆರ್. ಚಂದ್ರ ನಿರ್ದೇಶನದ ‘ಕಬ್ಜ’ ಚಿತ್ರದಿಂದ ಒಂದು ಭರ್ಜರಿ ಸುದ್ದಿ ಬಂದಿದೆ. ಈ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಸುದೀಪ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.ಈ ಸಂಕ್ರಾಂತಿಗೆ ಒಂದು ಭರ್ಜರಿ ಸುದ್ದಿ ಕೊಡುವು ದಾಗಿ ಆರ್. ಚಂದ್ರು ಘೋಷಿಸಿದ್ದರು. ಈ ಬಾರಿ ನಾಯಕಿಯ ಘೋಷಣೆ ಯಾಗಲಿದೆ, ಪರಭಾಷೆಯ ದೊಡ್ಡ ನಟರೊಬ್ಬರು ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಹರಿದಾಡುತ್ತಿರುವಾಗಲೇ, ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವ …
Read More »ಡಾಬಾ ಬಳಿ ಮಗುವನ್ನ ಬಿಟ್ಟು ಹೋಗಿರೋ ಪೋಷಕರು
ಹಾವೇರಿ: ಹತ್ತು ತಿಂಗಳ ಮುದ್ದಾದ ಗಂಡು ಮಗುವನ್ನ ಪೋಷಕರು ಡಾಬಾ ಬಳಿ ಬಿಟ್ಟು ಹೋಗಿರೋ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಬಳಿ ನಡೆದಿದೆ. ಮುದ್ದಾಗಿರೋ ಗಂಡು ಮಗುವನ್ನ ಪೋಷಕರು ಬಿಟ್ಟು ಹೋಗಿದ್ದಾರೆ. ನಾಲ್ಕರ ಕ್ರಾಸ್ ಬಳಿಯ ಭೂತೇಶ್ವರ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದು, ಪೋಷಕರು ಬಂದು ಮಗುವನ್ನು ಕೊಂಡೊಯ್ಯಬಹುದೆಂದು ಸ್ಥಳೀಯರು 5-6 ಗಂಟೆ ಮಗುವಿನ ಹಿಡಿದು ಕಾಯ್ದಿದ್ದಾರೆ. ಆದರೆ ಯಾರೂ ಬಾರದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. …
Read More »ಬೆಂಗಳೂರು, ಬೆಳಗಾವಿಗೆ ಮಾತ್ರ ಸಚಿವ ಸ್ಥಾನ ಸೀಮಿತನಾ? ರೇಣುಕಾಚಾರ್ಯ
ದಾವಣಗೆರೆ: ಮುಖ್ಯಮಂತ್ರಿಗಳಿಂದ ಈ ವರೆಗೆ ಯಾವುದೇ ಕರೆ ಬಂದಿಲ್ಲ. ಸಂಜೆ ವರೆಗೆ ಕಾದು ನೋಡುತ್ತೇನೆ. ಸಚಿವ ಸ್ಥಾನ ನೀಡದಿದ್ದರೆ ಸೂಕ್ತ ಕಾಲದಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ರೆಬೆಲ್ ಆಗುವ ಸುಳಿವು ನೀಡಿದ್ದಾರೆ. ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವನಾಗಬೇಕು ಎಂಬುದು ಜನರ ಅಪೇಕ್ಷೆ. ಸಿಎಂ ಅವರಿಂದ ಈವರೆಗೆ ಯಾವುದೇ ಕರೆ ಬಂದಿಲ್ಲ. ದಾವಣಗೆರೆ ಜಿಲ್ಲೆ ಮಧ್ಯ ಕರ್ನಾಟಕ, ಅವಕಾಶ ಕೊಡಲೇ ಬೇಕು …
Read More »ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಜಾಲವನ್ನು ಬೇಧಿಸಿದ ಪೊಲೀಸರು
ಬೆಂಗಳೂರು: ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಜಾಲವನ್ನು ಸೂರ್ಯಸಿಟಿ ಪೊಲೀಸರು ಬೇಧಿಸಿದ್ದಾರೆ. ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಸುರೇಶ್ ಅಲಿಯಾಸ್ ನಂಜಪ್ಪ ಹಾಗೂ ನರೇಶ್ ಅಲಿಯಾಸ್ ಜೋಗರಾಂನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ ಮಷೀನ್ ಹಾಗೂ 6 ಸಾವಿರ ರೂ. ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 100, 200 ಹಾಗೂ 500 ಮುಖಬೆಲೆಯ ನಕಲಿ ನೋಟುಗಳು ಇವೆ. ವಂಚಕರು ಕಲರ್ …
Read More »ಇಲ್ಲಿದೆ ಫೈನಲ್ ಆಗಿರುವ ಸಂಭವನೀಯ ಸಚಿವರ ಪಟ್ಟಿ ಕೋಟಾಶ್ರೀನಿವಾಸ್ ಪೂಜಾರಿ ಹಾಗೂ ಶಶಿಕಲಾ ಜೊಲ್ಲೆ ಕೋಕ್
ಬೆಂಗಳೂರು,ಜ.12- ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಾಳೆ ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿದ್ದು, ಹೊಸದಾಗಿ 7 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಾಜಿ ಸಚಿವರಾದ ಉಮೇಶ್ ಕತ್ತಿ, ರಾಜುಗೌಡ ನಾಯಕ್, ಸಿ.ಪಿ.ಯೋಗೇಶ್ವರ್, ಆರ್. ಶಂಕರ್, ಎಂ.ಟಿ.ಬಿ.ನಾಗರಾಜ್, ಅರವಿಂದ ಲಿಂಬಾವಳಿ ಹಾಗೂ ಎಸ್. ಅಂಗಾರ ಮತ್ತು ಮುನಿರತ್ನ, ಹಾಲಪ್ಪ ಆಚಾರ್ ಸಚಿವರಾಗುವ ಸಂಭವನೀಯ ಪಟ್ಟಿಯಲ್ಲಿದ್ದಾರೆ.ನಾಳೆ ಸಂಜೆ 4 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ …
Read More »ಮೂರನೇ ಬಾರಿಗೆ ಕತ್ತಿ ಕೈ ಹಿಡಿದ ಸಿಎಂ ಬಿಎಸ್ವೈ; ಶಾಸಕ ಉಮೇಶ್ ಕತ್ತಿಗೆ ಮಂತ್ರಿಗಿರಿ ಪಕ್ಕಾ?
ಬೆಂಗಳೂರು; ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ನಾಳೆ ವಿಸ್ತರಣೆಯಾಗಲಿದೆ. ಈಗಾಗಲೇ ನೂತನ ಸಚಿವ ಪಟ್ಟಿಯನ್ನು ಸಿಎಂ ಬಿಎಸ್ವೈ ರಾಜ್ಯಪಾಲರಿಗೆ ಕಳುಹಿಸಿದ್ದು, ನಾಳೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಯಾರಿಗೆಲ್ಲಾ ಸಚಿವ ಸ್ಥಾನ ಸಿಕ್ಕಿದೆ ಎಂಬುದು ಈಗಲೂ ನಿಗೂಢವಾಗಿದೆ. ಏತನ್ಮಧ್ಯೆ, ಕಳೆದ ಎರಡು ಬಾರಿ ಸಂಪುಟ ವಿಸ್ತರಣೆಯಾದಾಗ ಅವಕಾಶ ವಂಚಿತರಾಗಿದ್ದ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅವರಿಗೆ ಈ ಬಾರಿ ಸಚಿವ ಸ್ಥಾನ ಪಕ್ಕಾ ಎಂದು …
Read More »ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭ
ಬೆಂಗಳೂರು: ಕೊರೊನಾ ಮಹಾಮಾರಿಗೆ ಬ್ರಹ್ಮಾಸ್ತ್ರವಾಗಿರುವ ಕೋವಿಶೀಲ್ಡ್ ಲಸಿಕೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ತಲುಪಿದೆ. ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪೂರೈಕೆ ಆರಂಭವಾಗಿದೆ. ಪುಣೆಯ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯದಲ್ಲಿ ಎರಡು ಪ್ರಮುಖ ಸ್ಥಳಗಳಿಗೆ ರವಾನಿಸಲಾಗುತ್ತಿದ್ದು, ಈಗಾಗಲೇ ಪುಣೆಯಿಂದ ಸ್ಪೈಸ್ ಜೆಟ್ ವಿಶೇಷ ವಿಮಾನದಲ್ಲಿ Z+ ಭದ್ರತೆಯ ಮೂಲಕ ಕೋವಿಶೀಲ್ಡ್ ಲಸಿಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ …
Read More »ಅಮಿತ್ ಶಾ ರಾಜ್ಯ ಪ್ರವಾಸ ಪಟ್ಟಿ ಪ್ರಕಟ: ಬೆಳಗಾವಿಯಲ್ಲಿ 4 ಕಾರ್ಯಕ್ರಮದಲ್ಲಿ ಭಾಗಿ
ನವದೆಹಲಿ – ಇದೇ 16 ಮತ್ತು 17ರಂದು ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಯಲ್ಲಿ 4 ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬಿಜೆಪಿಯ ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ, ಕೆಎಲ್ಇ ಆಸ್ಪತ್ರೆ ಮತ್ತು ದಿವಂಗತ ಸುರೇಶ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಪಕ್ಷದ ಪದಾಧಿಕಾರಿಗಳ ಸಭೆಯನ್ನೂ ನಡೆಸಲಿದ್ದಾರೆ. ಜ.16ರಂದು ಬೆಳಗ್ಗೆ 9 ಗಂಟೆಗೆ ನವದೆಹಲಿಯಿಂದ ಹೊರಡುವ ಅಮಿತ್ ಶಾ 11.30ಕ್ಕೆ ಬೆಂಗಳೂರು ವಿಮಾನ …
Read More »