ರಾಯಚೂರು: ಉಪಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಪಕ್ಶಗಳು ಬಿರುಸಿನ ಪ್ರಚಾರ ಆರಂಭಿಸಿವೆ. ಈ ನಡುವೆ ರಮೇಶ್ ಜಾರಕಿಹೊಳಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಶೀಘ್ರದಲ್ಲಿ ಅಭ್ಯರ್ಥಿ ಘೋಷಿಸಲಾಗುತ್ತದೆ. ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಖಚಿತ ಎಂದರು. ಸರ್ಕಾರದ ಯೋಜನೆಗಳೇ ಬಿಜೆಪಿ ಗೆಲುವಿನ ಅಸ್ತ್ರವಾಗಲಿದೆ. ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ …
Read More »ರಾಗಿ ಕಾಳು ಎಣಿಸಿ ದಾಖಲೆ ಸೃಷ್ಟಿಸಿದ ಶಿವಮೊಗ್ಗ ಯುವಕ
ಶಿವಮೊಗ್ಗ: ಸಾಮಾನ್ಯವಾಗಿ ಒಂದು ಕೆ.ಜಿ ರಾಗಿಯಲ್ಲಿ ಎಷ್ಟು ಕಾಳುಗಳು ಇರುತ್ತವೆ ಎಂದು ಕೇಳಿದರೆ, ನಿನಗೇನು ಹುಚ್ಚಾ ಎಂದು ಪ್ರಶ್ನೆ ಮಾಡುವ ಮಂದಿಯೇ ಹೆಚ್ಚು. ನಗರದ ಯುವಕ ಒಂದು ಕೆ.ಜಿ. ರಾಗಿಯಲ್ಲಿ ಎಷ್ಟು ಕಾಳುಗಳಿವೆ ಎಂದು ಲೆಕ್ಕ ಹಾಕುವ ಮೂಲಕ ಇಂಡಿಯನ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಶಿವಮೊಗ್ಗದ ಹೊಯ್ಸಳ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ. ವಿಭಾಗದ ವಿದ್ಯಾರ್ಥಿ ಸಚ್ಚಿನ್ ಈ ಸಾಧನೆ ಮಾಡಿದ ಯುವಕ. ಒಂದು ಕೆ.ಜಿ. ರಾಗಿಯಲ್ಲಿ 3,76,083 …
Read More »ಶಿವಸೇನಾ ಪುಂಡಾಟಿಕೆ ನಿಲ್ಲಿಸಲು ಕಠಿಣ ಕ್ರಮ: ಕಂದಾಯ ಸಚಿವ ಅಶೋಕ್
ಬೆಳಗಾವಿ: ‘ರಾಜ್ಯದಲ್ಲಿ ಶಿವಸೇನಾದವರ ಪುಂಡಾಟಿಕೆ ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು. ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶಿವಸೇನಾದವರು ನಿರಂತರವಾಗಿ ಪುಂಡಾಟಿಕೆ ನಡೆಸುತ್ತಿರುವುದನ್ನು ಗಮನಿಸಿದ್ದೇವೆ. ಕಠಿಣ ಕ್ರಮದ ಮೂಲಕ ಅದನ್ನು ನಿಲ್ಲಿಸಲೇಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗೆ ಸೂಚನೆ ಕೊಡಲಾಗಿದೆ. ಅಂಥವರನ್ನು ಮಟ್ಟ ಹಾಕಬೇಕು. ಆಗ ಮಾತ್ರ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ’ ಎಂದರು. ‘ಬೆಳಗಾವಿಯಲ್ಲಿ ಬಹಳ …
Read More »ಗ್ರಾಮ ವಾಸ್ತವ್ಯ ವರದಿಗೆ ತೆರಳಿದ ಪತ್ರಕರ್ತರಿಗೆ ಭಿಕ್ಷುಕರ ವಾಹನದಲ್ಲಿ ಪ್ರಯಾಣ!
ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಹ್ವಾನಿತ ಪತ್ರಕರ್ತರನ್ನು, ಭಿಕ್ಷುಕರನ್ನು ಹಿಡಿದು ಸಾಗಿಸುವ ವಾಹನದಲ್ಲಿ ಕರೆದೊಯ್ದ ಘಟನೆ ನಡೆದಿದೆ. ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿ ಗ್ರಾಮ ವಾಸ್ಯವ್ಯ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಯಲಗೂರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯ ಪತ್ರಕರ್ತರಿಗೆ ವಾರ್ತಾ ಇಲಾಖೆಗೆ ಬಂದಿದ್ದ ಸುಸಜ್ಜಿತ ಹೊಸ ವಾಹನವನ್ನು ಕೆಲ ದಿನಗಳ ಹಿಂದೆ ಗದಗ ಜಿಲ್ಲೆಗೆ ಶಾಶ್ವತವಾಗಿ …
Read More »ಬಸವಕಲ್ಯಾಣ ಬೈಎಲೆಕ್ಷನ್ ಅಖಾಡಲ್ಲಿ ತೊಡೆತಟ್ಟುವರೇ ‘ಬಿಜೆಪಿ ಬಾಹುಬಲಿ’..?
ಬೆಂಗಳೂರು, ಮಾ.20- ಜಿದ್ದಾಜಿದ್ದಿನ ಕಣವಾಗಲಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸಬೇಕೆಂಬ ಅಭಿಪ್ರಾಯ ಇಂದು ನಡೆದ ಕೋರ್ಕಮಿಟಿ ಸಭೆಯಲ್ಲಿ ವ್ಯಕ್ತವಾಗಿದೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕೋರ್ಕಮಿಟಿ ಸಭೆಯಲ್ಲಿ ಬಸವಕಲ್ಯಾಣದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ದಿ.ನಾರಾಯಣರಾವ್ ಅವರ ಪತ್ನಿಗೆ ಟಿಕೆಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅನುಕಂಪ ಸಿಕ್ಕರೆ ಬಿಜೆಪಿಗೆ ಹಿನ್ನಡೆಯಾಗಬಹುದೆಂಬ ಕಾರಣಕ್ಕಾಗಿ …
Read More »ಹುಬ್ಬಳ್ಳಿಯ ಛಬ್ಬಿ ಗ್ರಾಮದಲ್ಲಿ ಸಚಿವ ಅಶೋಕ್ ಗ್ರಾಮ ವಾಸ್ತವ್ಯ: ಅದ್ದೂರಿ ಸ್ವಾಗತ
ಹುಬ್ಬಳ್ಳಿ: ಗ್ರಾಮ ವಾಸ್ತವ್ಯಕ್ಕಾಗಿ ತಾಲೂಕಿನ ಛಬ್ಬಿ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು. ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಗಮಿಸಿದ ಸಚಿವರು ಸಿದ್ದಾರೂಢಸ್ವಾಮಿ ಮಠಕ್ಕೆ ಆಗಮಿಸಿ ದರ್ಶನ ಪಡೆದರು. ನಂತರ ಗ್ರಾಮದ ಸೊಸೈಟಿಗೆ ಆಗಮಿಸಿದ ಸಚಿವರಿಗೆ ನೂರಾರು ಮಹಿಳೆಯರು ಪೂರ್ಣಕುಂಭ, ಆರತಿಗಳೊಂದಿಗೆ ಸ್ವಾಗತ ಕೋರಿದರು. ಅಲಂಕೃತ ಎತ್ತಿನ ಬಂಡಿಯಲ್ಲಿ ಮೆರವಣಿಗೆಯಲ್ಲಿ ಪ್ರಾಥಮಿಕ ಶಾಲೆವರೆಗೂ ಸಾಗಿದರು. ಜಗ್ಗಲಿಗೆ, ಹಲಿಗೆ, ಬ್ಯಾಂಡ್, ಮರಕುದುರೆ …
Read More »1 ನಿಮಿಷದ ವಿಡಿಯೋ ತಯಾರಿಸಿ ಪ್ರತಿ ತಿಂಗಳು ಗಳಿಸಿ 20 ಸಾವಿರ ರೂ.
ಸಾಮಾಜಿಕ ಜಾಲತಾಣದ ಮೂಲಕ ಹಣ ಸಂಪಾದಿಸಲು ಬಯಸಿದರೆ ನಿಮಗೆ ಖುಷಿ ಸುದ್ದಿ ಇದೆ. ಮನೆಯಲ್ಲಿ ಕುಳಿತು ಗಳಿಸಲು ಇದು ಒಳ್ಳೆ ಅವಕಾಶ. ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಗಳಿಕೆಗೆ ಅವಕಾಶ ನೀಡ್ತಿದೆ. ಇತ್ತೀಚೆಗೆ ಫೇಸ್ಬುಕ್ ಇಂಕ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಕಂಟೆಂಟ್ ಕ್ರಿಯೇಟರ್ ಗಳಿಗೆ ಸಣ್ಣ ವೀಡಿಯೊಗಳನ್ನು ಹಾಕಿ, ಜಾಹೀರಾತುಗಳ ಮೂಲಕ ಹಣ ಗಳಿಸಲು ಅನುಮತಿ ನೀಡಿದೆ. ಇದಲ್ಲದೆ ಜನರು ಯಾವ ರೀತಿ ಫೇಸ್ಬುಕ್ನಲ್ಲಿ ಸಂಪಾದಿಸಬಹುದು …
Read More »ಎಚ್ಚರ.! ಹ್ಯಾಕರ್ ಗಳು ನಿಮ್ಮ ವಯಕ್ತಿಕ ಮಾಹಿತಿಯನ್ನು ಹೀಗೂ ಸಹ ಹ್ಯಾಕ್ ಮಾಡಬಹುದು !
ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್ ಲೈನ್ ನಲ್ಲಿ ನಡೆಯುವಾಗ ಹ್ಯಾಕ್ ಗಳು ಆಗೋದು ಹೆಚ್ಚುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ಹ್ಯಾಕರ್ ಗಳು ಬ್ಯಾಂಕ್, ಸೋಶಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ಹಾಗಂತ ನಿಮ್ಮ ಒಟಿಪಿ ಸೇಫ್ ಎಂದು ಕೊಂಡರೆ ಅದು ತಪ್ಪು. ಈಗ ನಿಮ್ಮ ಎಸ್ ಎಂಎಸ್, ಒಟಿಪಿ ಕೂಡ ಸೇಫ್ ಅಲ್ಲ, ಹ್ಯಾಕರ್ ಗಳು ನಿಮ್ಮ ವಾಟ್ಸ್ ಆಪ್ ಖಾತೆಯ ಮೇಲೂ ಪರಿಣಾಮ ಬೀರಬಹುದು. ಒಂದು ವರದಿಯ …
Read More »ಬಿಗ್ ನ್ಯೂಸ್ : ರಾಜ್ಯದಲ್ಲಿ ಮತ್ತೆ ಎರಡು ವಾರ ‘ಶಾಲಾ-ಕಾಲೇಜು’ ಬಂದ್.?
ಬೆಂಗಳೂರು : ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಕಂಡಿತು ಎನ್ನುವಾಗಲೇ, ಈಗ ಕೊರೋನಾ ಎರಡನೇ ಅಲೆಯ ಮುನ್ಸೂಚನೆ ರಾಜ್ಯದಲ್ಲಿ ಎದ್ದಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ಸೋಂಕಿನ ನಿಯಂತ್ರಣದ ಸಲುವಾಗಿ ರಾಜ್ಯದಲ್ಲಿ ಮತ್ತೆ ಎರಡು ವಾರ ಶಾಲಾ-ಕಾಲೇಜು ಬಂದ್ ಆಗಲಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚು ಹೆಚ್ಚುಗೊಳ್ಳುತ್ತಿರುವ ಬೆನ್ನಲ್ಲೇ, ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ, ಮಹತ್ವದ ನಿರ್ಧಾರ ಕೈಗೊಳ್ಳೋದಕ್ಕೆ, ವೈದ್ಯಕೀಯ ಹಾಗೂ ಆರೋಗ್ಯ ಸಚಿವರಿಗೆ …
Read More »ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಫಿಕ್ಸ್..? ಸುಳಿವು ಕೊಟ್ಟ ಸಿಎಂ..!
ತುಮಕೂರು, ಮಾ.20- ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ನಿಯಂತ್ರಣಕ್ಕೆ ಬಾರದಿದ್ದರೆ ಲಾಕ್ಡೌನ್ ಹಾಗೂ ರಾತ್ರಿ ಕಫ್ರ್ಯೂ ವಿಧಿಸುವುದು ಸೇರಿದಂತೆ ಒಂದು ವಾರದೊಳಗೆ ನಿರ್ಧಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಈ ಮೂಲಕ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿಮಾಡುವ ಸುಳಿವನ್ನು ಸಿಎಂ ನೀಡಿದ್ದಾರೆ. ತಿಪಟೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಲಾಕ್ಡೌನ್ ಜಾರಿ ಇಲ್ಲವೆ ರಾತ್ರಿ ಕಫ್ರ್ಯೂ ವಿಸುವ ಕುರಿತಾಗಿ …
Read More »
Laxmi News 24×7