Breaking News

ಮೇ.24 ರಿಂದ ಜೂ. 10ರವರೆಗೆ ದ್ವಿತಿಯ ಪಿಯುಸಿ ಪರೀಕ್ಷೆ !

ಬೆಂಗಳೂರು : ದ್ವಿತಿಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾ ಪಟ್ಟಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ.24ರಿಂದ ಜೂನ್ 10ರವರೆಗೆ ಪರೀಕ್ಷೆ ನಡೆಯಲಿವೆ. ಈ ನಡುವೆ, ದಿನಾಂಕ ಬಗ್ಗೆ ಆಕ್ಷೆಪಣೆಗಳಿದ್ದರೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ದ್ವಿತೀಯ PU ಪರೀಕ್ಷೆ ವೇಳಾಪಟ್ಟಿ ಹೀಗಿದೆ 1) ಮೇ 24: ಭೌತಶಾಸ್ತ್ರ, ಇತಿಹಾಸ 2) ಮೇ 25: ಮೈನಾರಿಟಿ ಲಾಂಗ್​ವೇಜಸ್​ 3) ಮೇ 26: …

Read More »

ಮುಂದಿನ ಸಿಎಂ ನಾನೇ: ಶಾಸಕ ಬಸನಗೌಡ ಯತ್ನಾಳ ಘೋಷಣೆ

  ದಾವಣೆಗರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿ ಅಲುಗಾಡುತ್ತಿದೆ. ನಾನು ಮಂತ್ರಿಯಾಗಬೇಕೆಂದು ಯಾರ ಕೈಕಾಲು ಹಿಡಿಯುವವನಲ್ಲ. ”ನಮಗೆ ಬರೋದಿದೆ ಸಿಎಂ ಕುರ್ಚಿ” ಎಂದು ಹೇಳುವ ಮೂಲಕ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಪಾದಯಾತ್ರೆ ಸಮಾವೇಶದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು. ಮುಖ್ಯಮಂತ್ರಿ ಆಗಿದ್ದವರು ಕೈಗಾರಿಕಾ ಮಂತ್ರಿಯಾಗಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ …

Read More »

ಮೋಕ್ಷ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ತರಳು ಗ್ರಾಮದಲ್ಲಿರುವ ಮೋಕ್ಷ ಅಗರಬತ್ತಿ ಕಾರ್ಖಾನೆಯಲ್ಲಿ ಶುಕ್ರವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಾಡ ಸಂಭವಿಸಿದ್ದು, ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರು ಹೊರಗಡೆ ಓಡಿ ಹೋಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಯೊಂದಿಗೆ ಕಾರ್ಖಾನೆಯ ಕಾರ್ಮಿಕರು ಸಹ ಬೆಂಕಿ ನಂದಿಸಲು ಕೈಜೋಡಿಸಿದ್ದಾರೆ. ಕಾರ್ಖಾನೆಯಲ್ಲಿನ ಕೆಲವಸ್ತುಗಳು …

Read More »

ಗೋಕಾಕ ಹೆಸ್ಕಾಂ ಕಚೇರಿ ಮೇಲೆ ಎಸಿಬಿ ದಾಳಿ ಇಬ್ಬರು ಬಲೆ

  ಹೊಲಕ್ಕೆ ಹೊಸದಾಗಿ ಟಿಸಿ ಅಳವಡಿಸಲು ರೈತನಿಂದ ರೂ.60 ಸಾವಿರ ಲಂಚ ಪಡೆಯುತ್ತಿದ್ದ ಗೋಕಾಕ ಹೆಸ್ಕಾಂ ಉಪ ವಿಭಾಗದ ಸೆಕ್ಷನ್ ಆಫೀಸರ್ ಹಾಗೂ ಸಿಬ್ಬಂದಿ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಲೋಳಸೂರ ಸೆಕ್ಷನ್ ಆಫೀಸರ್ ಪ್ರಕಾಶ ಪರೀಟ, ಹಾಗೂ ಸಿಬ್ಬಂದಿ ಮಲ್ಲಯ್ಯ ಹಿರೇಮಠ ಅರೋಪಿಗಳಾಗಿದ್ದಾರೆ. ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅರಭಾವಿಯ ಆನಂದ ಧರ್ಮಟ್ಟಿ ಅವರು ನೀಡಿದ ದೂರಿನ ಆಧಾರದ ಮೇಲೆ ಎಸಿಬಿ …

Read More »

ಬಿಜೆಪಿ-ಜೆಡಿಎಸ್‍ನ ಮೈತ್ರಿಗೆ ಜಯ : ಉಪಸಭಾಪತಿಯಾಗಿ ಪ್ರಾಣೇಶ್ ಆಯ್ಕೆ

ಬೆಂಗಳೂರು,ಜ.29-ಬಿಜೆಪಿ-ಜೆಡಿಎಸ್‍ನ ಮೈತ್ರಿಗೆ ವಿಧಾನಪರಿಷತ್‍ನಲ್ಲಿ ಮದಲ ಹಂತದ ಯಶಸ್ಸು ಸಿಕ್ಕಿದ್ದು, ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಉಪಸಭಾಪತಿಯಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ವಿಧಾನಪರಿಷತ್ ಸುಪಸಭಾಪತಿ ಸ್ಥಾನಕ್ಕೆ ನಿನ್ನೆ ಎಂ.ಕೆ.ಪ್ರಾಣೇಶ್ ಮತ್ತು ಕಾಂಗ್ರೆಸ್‍ನ ಕೆ.ಸಿ.ಕೊಂಡಯ್ಯ ನಾಮಪತ್ರ ಸಲ್ಲಿಸಿದ್ದರು. ಇಂದು ಬೆಳಗ್ಗೆ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಎಂ.ಕೆ.ಪ್ರಾಣೇಶ್ 41 ಮತಗಳನ್ನು ಪಡೆದು ಚುನಾಯಿತರಾದರು. ಕಾಂಗ್ರೆಸ್‍ನ 24 ಸದಸ್ಯರು ವಿರುದ್ಧವಾಗಿ ಮತ ಹಾಕಿದರು. ಪ್ರಾಣೇಶ್ ಪರವಾಗಿ ಜೆಡಿಎಸ್‍ನ ಸದಸ್ಯರು ಮತ ಚಲಾಯಿಸಿದ್ದು ವಿಶೇಷವಾಗಿತ್ತು.ಮೂರು ಪಕ್ಷಗಳು ಉಪಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ …

Read More »

ತೆಲುಗಿನಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾದರೂ ಅಲ್ಲಿ ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ.

ಬೆಂಗಳೂರು: ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ಸಿಡಿದೆದ್ದ ಚಾಲೇಂಜಿಂಗ್ ಸ್ಟಾರ್ ದರ್ಶನ್, ಕನ್ನಡ ಚಿತ್ರಗಳ ಬಿಡುಗಡೆ ತಡೆದು, ತೆಲುಗಿನ ಚಿತ್ರವನ್ನು ಬಿಡಿಗಡೆ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ತೆಲುಗಿನಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾದರೂ ಅಲ್ಲಿ ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಸಣ್ಣಪುಟ್ಟ ಸಿನಿಮಾ ರಿಲೀಸ್ ಇದ್ರೂ ಕನ್ನಡ ಚಿತ್ರಗಳ ಬಿಡುಗಡೆಯನ್ನು ತಡೆ ಹಿಡಿಯಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ತೆಲುಗಿನ ಯಾವ ಚಿತ್ರವನ್ನು, ಯಾವಾಗಬೇಕಾದರೂ ಬಿಡುಗಡೆ …

Read More »

ಕರ್ನಾಟಕದ ಬಸ್ ಗಳ ಮೇಲೆ ಮರಾಠಿ ಪೋಸ್ಟರ್ ಹಚ್ಚಿ ಪುಂಡರು ಉದ್ಧಟತನ

ಬೆಳಗಾವಿ: ಗಡಿ ವಿಚಾರವಾಗಿ ಮಹಾರಾಷ್ಟ್ರದ ಪುಂಡಾಟ ಮುಂದುವರೆದಿದ್ದು, ಕರ್ನಾಟಕದ ಬಸ್ ಗಳ ಮೇಲೆ ಮರಾಠಿ ಪೋಸ್ಟರ್ ಹಚ್ಚಿ ಪುಂಡರು ಉದ್ಧಟತನ ಮೆರೆದಿದ್ದಾರೆ. ಬೆಳಗಾವಿಯಿಂದ ಪುಣೆ ಹೋಗುವ ಬಸ್ ಗಳ ಮೇಲೆ‌ ಕಿಡಿಗೇಡಿಗಳು ಪೋಸ್ಟರಗಳನ್ನು ಅಂಟಿಸಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಆಗವುದು ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ ಪುಣೆ ಹೆಸರಿನಲ್ಲಿ ಈ ಪೋಸ್ಟರಗಳನ್ನು ಬರೆಯಲಾಗಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ ಎಂದು ಮಹಾರಾಷ್ಟ್ರ …

Read More »

ನನ್ನ ಮನೆಗೆ ಬೆಂಕಿ ಹಾಕಿದ್ರೂ ಸುಮ್ಮನಿದ್ರಿ: ಅಖಂಡ ಆಕ್ರೋಶ

ಬೆಂಗಳೂರು: ‘ಡಿ.ಜಿ.ಹಳ್ಳಿ ಗಲಭೆ ಸಂದರ್ಭದಲ್ಲಿ ನನ್ನ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿದರೂ ನನ್ನ ಪರವಾಗಿ ಒಂದೂ ಹೇಳಿಕೆ ನೀಡಲಿಲ್ಲ. ಪ್ರತಿಭಟನೆ ಮಾಡಲಿಲ್ಲ. ಆದರೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಪರವಾಗಿ ಹೇಳಿಕೆ ಮತ್ತು ಹೋರಾಟ ನಡೆಸುತ್ತಿದ್ದೀರಿ’ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ. ಇತ್ತೀಚೆಗೆ ಕಾಂಗ್ರೆಸ್‌ ಪ್ರತಿಭಟನೆ ವೇಳೆ ಶಾಸಕಿ ಸೌಮ್ಯ ರೆಡ್ಡಿ ಮಹಿಳಾ ಪೊಲೀಸ್‌ವೊಬ್ಬರಿಗೆ ಹೊಡೆದಿದ್ದು ವಿವಾದಕ್ಕೆ …

Read More »

ಕಲಾಪ ಸಲಹಾ ಸಮಿತಿ ಸಭೆಯನ್ನು ಬಹಿಷ್ಕರಿಸಲು ಕಾಂಗ್ರೇಸ್ ನಿರ್ಧಾರ : ಸಿದ್ದರಾಮಯ್ಯ

ಬೆಂಗಳೂರು : ವಿಧಾನ ಮಂಡಲದ ಕಲಾಪ ಸಲಹಾ ಸಮಿತಿ ಸಭೆ ಬಹಿಷ್ಕರಿಸಲು ವಿಪಕ್ಷ ಕಾಂಗ್ರೆಸ್‌ ನಿರ್ಧರಿಸಿದೆ. ಕಳೆದ ಅಧಿವೇಶನ ಸಂದರ್ಭದಲ್ಲಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನವಾದಂತೆ ಸದನ ನಡೆಯಲಿಲ್ಲ. ಹೀಗಾಗಿ ಈ ಬಾರಿ ಸಭೆಗೆ ಹೋಗುವುದು ಬೇಡ ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಗುರುವಾರ ನಡೆದ ಕಾಂಗ್ರೆಸ್‌ ಶಾಸ ಕಾಂಗ ಸಭೆಯಲ್ಲಿ ಈ ತೀರ್ಮಾನಕ್ಕೆ ಬರ ಲಾಗಿದೆ. ಈ ಬಗ್ಗೆ ಸ್ಪೀಕರ್‌ ಅವರಿಗೂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಉಭಯ ಸದನಗಳ ಕಲಾಪದ …

Read More »

ಪ್ರತಿಭಟನಾ ಸ್ಥಳದಲ್ಲಿ ಮತ್ತೆ ರೈತರ ಜಮಾವಣೆ.. ಗಾಜಿಪುರ್ ಬಾರ್ಡರ್ ಕ್ಲೋಸ್

ನವದೆಹಲಿ: ದೆಹಲಿ- ಉತ್ತರಪ್ರದೇಶ ನಡುವಿನ ಗಡಿ ಪ್ರದೇಶ ಗಾಜಿಪುರ್ ಬಾರ್ಡರ್​ನಲ್ಲಿ ರಾತ್ರೋರಾತ್ರಿ ಮತ್ತೆ ರೈತರು ಜಮಾವಣೆಗೊಂಡಿದ್ದಾರೆ. ಉತ್ತರಪ್ರದೇಶದ ಮುಜಾಫ್ಪರ್​ನಗರ್​ನಿಂದ ರೈತರ ದಂಡು ಹರಿದುಬಂದ ಹಿನ್ನೆಲೆ ಗಾಜಿಪುರ್ ಬಾರ್ಡರ್​ ಕ್ಲೋಸ್ ಆಗಿದೆ. ಗಾಜಿಪುರ್​ ಬಾರ್ಡರ್ ಕ್ಲೋಸ್ ಆದ ಹಿನ್ನೆಲೆ ರಸ್ತೆ ಮಾರ್ಗವನ್ನ NH-24, NH-9, ರಸ್ತೆ ನಂಬರ್ 56, 57A, ಕೊಂಡ್ಲಿ, ಪೇಪರ್ ಮಾರ್ಕೆಟ್, ಟೆಲ್ಕೋ ಟಿ ಪಾಯಿಂಟ್, EDM ಮಾಲ್, ಅಕ್ಷರಧಾಮ್, ನಿಜಾಮುದ್ದೀನ್ ಖಟ್ಟಾ ಕಡೆಗೆ ಬದಲಿಸಲಾಗಿದೆ. ವಿಕಾಸ್ ಮಾರ್ಗ …

Read More »