Breaking News

ಕ್ವಾರಿ ಸ್ಪೋಟ ಪಿಎಸ್ಐ ಅಮಾನತ್

ಬೆಂಗಳೂರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಹಿರೇನಾಗವಲ್ಲಿ ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆ ಪಿಎಸ್ ಐ ಆರ್ ಗೋಪಾಲ ರೆಡ್ಡಿ ಅಮಾನತು ಮಾಡಲಾಗಿದೆ. ,ಈ ಕುರಿತಂತೆ ಗೃಹ ಇಲಾಖೆ ಆದೇಶ ಜಾರಿ ಮಾಡಿದೆ ಕ್ವಾರಿಯ ಮೇಲೆ ದಾಳಿ ನಡೆದ ನಂತರ ಆರೋಪಿಗಳನ್ನು ದಸ್ತಗಿರಿ  ಮಾಡಲು   psi ಗೋಪಾಲ ರೆಡ್ಡಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಪ್ರಕರಣ ದಾಖಲಿಸಿದ ಬಗ್ಗೆ ಪೊಲೀಸ್ ಐಟಿ ತಂತ್ರಾಂಶದಲ್ಲಿ ನಮೂದಿಸಿಲ್ಲ ಎಂದು ಹೇಳಲಾಗಿದೆ‌   ಪ್ರಕರಣದ …

Read More »

ನೀರಾವರಿ ಬಗ್ಗೆ ಚರ್ಚೆ……..?

ನವದೆಹಲಿ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌  ; ಕೃಷ್ಣಾ, ಕಾವೇರಿ ಮತ್ತು ಮಹದಾಯಿ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿದರು. ನವದೆಹಲಿಯ ಕೇಂದ್ರ ಜಲಶಕ್ತಿ  ಸಚಿವರ ಕಾರ್ಯಾಲಯದಲ್ಲಿ ಈ ಚರ್ಚೆ ನಡೆಯುತ್ತಿದೆ. ..

Read More »

ಇಂಧನ ದರ ಇಳಿಸುವಂತೆ ಯುವ ಮುಖಂಡ ರಾಹುಲ್ ಜಾರಕಿಹೊಳಿ ಆಗ್ರಹ

ಗೋಕಾಕ: “ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಬೇಕು. ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು” ಎಂದು ಯುವ ಮುಖಂಡ ರಾಹುಲ್ ಜಾರಕಿಹೊಳಿ ಆಗ್ರಹಿಸಿದರು. ನಗರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕೋವಿಡ್ ನಿಂದಾಗಿ ಜನರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈಗ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗುತ್ತದೆ. ಹೀಗಾಗಿ, …

Read More »

ಕ್ಷಮೆ ಯಾಚಿಸಿದ ನಿರ್ದೇಶಕ ನಂದಕಿಶೋರ್ :’ಪೊಗರು’ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುವ ಭರವಸೆ

ಮಹದೇವಪುರ: ಮಹದೇವಪುರದ ವೈಟ್ ಫೀಲ್ಡ್​ನ ಫೋರಂ ಮಾಲ್​ನಲ್ಲಿ ಪೊಗರು ಚಿತ್ರತಂಡ, ರಾಜೇಶ್ ಮತ್ತು ಡಬ್ಲ್ಯೂಟಿಎಫ್​ನ ಸದಸ್ಯರು ಹಾಗೂ ಸಚಿವ ಅರವಿಂದ ಲಿಂಬಾವಳಿ ಸಿನಿಮಾ ವೀಕ್ಷಣೆ ಮಾಡಿದರು. ಇದಕ್ಕೂ ಮುನ್ನ ವೈಟ್ ಫೀಲ್ಡ್​ನ ಫೋರಂ ಮಾಲ್​ಗೆ ಭೇಟಿ ನೀಡಿದ್ದ ಪೋಗರು ಚಿತ್ರತಂಡ, ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರ ನೀಡಿತು. ಅಭಿಮಾನಿಗಳ ಕೋರಿಕೆ ಮೇರೆಗೆ ಸಿನಿಮಾದ ಡೈಲಾಗ್ ಹೇಳಿ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ನಟ ಧ್ರುವ ಸರ್ಜಾ ರಂಜಿಸಿದರು. ಇದೇ ವೇಳೆ ರಾಜೇಶ್ ಮತ್ತು …

Read More »

ಕೊನೆಗೂ ಯುವರತ್ನ ಮೂರನೇ ಹಾಡಿಗೆ ಮುಹೂರ್ತ ಕೂಡಿಬಂತು

ಬೆಂಗಳೂರು: ಯುವರತ್ನ ಸಿನಿಮಾದ ಮೂರನೇ ಹಾಡಿನ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಕಳೆದ ಭಾನುವಾರ ಬಿಡುಗಡೆಯಾಗಬೇಕಿದ್ದ ಈ ಹಾಡು ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ಊರಿಗೊಬ್ಬ ರಾಜ ಎನ್ನುವ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಹಾಡಿದ್ದಾರೆ. ಈ ಹಾಡು ಫೆಬ್ರವರಿ 25 ರಂದು ಅಂದರೆ ನಾಳೆ 3.33 ಕ್ಕೆ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ತೆಲುಗಿನಲ್ಲೂ ಈ ಹಾಡು ಬಿಡುಗಡೆಯಾಗುತ್ತಿದೆ. ತಮನ್ ಸಂಗೀತ ಸಂಯೋಜಿಸಿರುವ …

Read More »

ಬ್ರಾಹ್ಮಣರ ಅವಹೇಳನ ಖಂಡನೀಯ: ಸಚಿವ ಹೆಬ್ಬಾರ

ಕಾರವಾರ: ‘ಪೊಗರು ಚಲನಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿರುವುದು ಅತ್ಯಂತ ಖಂಡನೀಯ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ. ‘ಚಲನಚಿತ್ರದಲ್ಲಿ ಮಾತ್ರ ಪೊಗರು ತೋರಿಸಲಿ. ಅದರ ಹೊರತಾಗಿ ಬ್ರಾಹ್ಮಣರ ಮೇಲೆ ಅಥವಾ ಬೇರೆ ಯಾವುದೇ ಸಮಾಜದ ಮೇಲೆ ಪೊಗರು ತೋರಿಸುವುದು ಸರಿಯಲ್ಲ. ರಾಜ್ಯದ ಸಚಿವನಾಗಿಯೂ ನಾನು ಈ ರೀತಿಯ ಕೃತ್ಯವನ್ನು ಖಂಡಿಸುತ್ತೇನೆ. ಬ್ರಾಹ್ಮಣರ ಅವಹೇಳನ ಮಾಡುವ ದೃಶ್ಯಗಳನ್ನು ತೆಗೆದು ಹಾಕಿಯೇ ಚಲನಚಿತ್ರವನ್ನು ಬಿಡುಗಡೆ ಮಾಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ಚಿತ್ರ …

Read More »

ಯಾರೇನು ಮಾಡಲಿಕ್ಕಾಗುತ್ತದೆ? ಅಂದರೆ ರಾಜೀನಾಮೆ ಕೊಟ್ಟು ಹೋಗಿ! ಡಿಕೆ ಶಿವಕುಮಾರ್ಆಕ್ರೋಶ

ಬೆಂಗಳೂರು, ಫೆ. 23: ಚಿಕ್ಕಬಳ್ಳಾಪುರ ಸ್ಪೋಟ ಘಟನೆ ಕುರಿತು ಸಿಎಂ ಯಡಿಯೂರಪ್ಪ ಅವರ, ನಾವು ನೀವು ಏನ್ ಮಾಡೋಕೆ ಆಗುತ್ತೆ ರೀ..? ನಮ್ಮ ಜಾಗದಲ್ಲಿ ನೀವು ಇದ್ದರೆ ನೀವು ಏನ್ ಮಾಡ್ತಿದ್ರಿ ಹೇಳಿ..? ಬೆಳಗಿನ ಜಾವ ಹೋಗಿ ಅದನ್ನೆಲ್ಲಾ ಮಾಡಿ ಅಂತಾ ನಾವು ಅವರಿಗೆ ಹೇಳಿದ್ವಾ..? ಎಂಬ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪದೇ ಪದೆ ಇಂತಹ ಘಟನೆಗಳಿಗೆ ಯಾರು ಹೊಣೆ …

Read More »

ಸರ್ಕಾರಿ ನೌಕರರ ವಿರುದ್ಧ ದೂರು ನೀಡುವವರು ತಮ್ಮ ಮಾಹಿತಿ ನೀಡಲೇಬೇಕು

ಬೆಂಗಳೂರು,ಫೆ.24- ಸರ್ಕಾರಿ ನೌಕರರ ವಿರುದ್ಧ ಅನಾಮಧೇಯ ದೂರುಗಳು ಕೇಳಿಬಂದಲ್ಲಿ, ದೂರು ನೀಡಿದವರ ಹೆಸರು ಮತ್ತು ಪೂರ್ಣ ವಿಳಾಸವನ್ನೊಳಗೊಂಡ ದಾಖಲೆಗಳಿದ್ದರೆ ಮಾತ್ರ ತನಿಖೆ ನಡೆಸಲು ಅನುವಾಗುವಂತೆ ಸುತ್ತೋಲೆ ಹೊರಡಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದಾರೆ. ದೂರು ನೀಡುವ ವ್ಯಕ್ತಿಗಳ ಪೂರ್ಣ ಹೆಸರು ಮತ್ತು ವಿಳಾಸವನ್ನು ಖಚಿತಪಡಿಸಿಕೊಂಡು ಪೂರಕ ದಾಖಲೆಗಳನ್ನು ಒದಗಿಸಿದ ನಂತರ ತನಿಖೆಗೆ ಮುಂದಾಗಬೇಕು. ಈ ಬಗ್ಗೆ ಸುತ್ತೋಲೆ ಹೊರಡಿಸುವಂತೆ ಸೂಚಿಸಿದ್ದಾರೆ. ಈ ಸಂಬಂಧ …

Read More »

ಶಾರದಾ ಚಿಟ್ ಫಂಡ್ ಹಗರಣ: ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ವಿಚಾರಣೆ 2 ವಾರ ಮುಂದೂಡಿದ ಸುಪ್ರೀಂ ಕೋರ್ಟ್

ದೆಹಲಿ: ಇಡೀ ದೇಶದ ಗಮನವನ್ನು ಸೆಳೆದಿದ್ದ ಶಾರದಾ ಚಿಟ್ ಫಂಡ್ ಹಗರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೋಲ್ಕತ್ತಾ ಪೋಲಿಸ್ ಆಯುಕ್ತ ರಾಜೀವ್ ಕುಮಾರ್ ಮತ್ತು ಇತರೆ ಆರೋಪಿಗಳ ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಿದೆ. ಸಿಬಿಐ ಸಲ್ಲಿಸಿದ್ದ ಮನವಿ ಆಧರಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸರ್ವೋಚ್ಛ ನ್ಯಾಯಾಲಯ ಈ ಹಗರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ. ಅತಿ ಹೆಚ್ಚು ಬಡ್ಡಿ ದರ ನೀಡುವ ಆಮಿಷವೊಡ್ಡಿ ನಡೆಯುತ್ತಿದ್ದ ಹಗರಣ 2013 …

Read More »

ಜಾರಕಿಹೊಳಿಯನ್ನು ನಾವೇ ಮಂತ್ರಿ ಮಾಡಿದ್ದು, ಮಂದಿರ ನಿರ್ಮಾಣಕ್ಕೆ 2 ಲಕ್ಷ ರು. ನೀಡಿದ್ದೇನೆ: ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ರಮೇಶ್ ಜಾರಕಿಹೊಳಿಯನ್ನು ನಾವೇ ಮಂತ್ರಿ ಮಾಡಿದ್ದೇವೆ. ಮಂತ್ರಿ ಮಾಡುವಂತೆ ನಾವೇ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದೇವೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್ ಗೆಲ್ಲಿಸಿದ್ದು ನಾನೇ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದ್ವೇಷದ ರಾಜಕಾರಣ ಯಾರಿಗೂ ಶೋಭೆ ತರುವುದಿಲ್ಲ. ಅಭಿವೃದ್ಧಿ ಪರ ರಾಜಕಾರಣ ಬೆಂಬಲಿಸಬೇಕು. ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ ಎಂದು ಹೇಳಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್​ನ ಬಸ್ ನಿಲ್ದಾಣದಲ್ಲಿ ಹುಡುಕಬೇಕಾಗುತ್ತೆ ಎಂಬ ರಮೇಶ್ …

Read More »