Breaking News

ಮೂವರು ಖತರ್ನಾಕ್ ಕಳ್ಳರ ಬಂಧನ: 28 ಬೈಕ್ ಜಪ್ತಿ

ಕಲಬುರಗಿ:  ನಗರದ ವಿವಿಧ ಕಾಲೋನಿಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರನ್ನು ಸ್ಟೇಷನ್​ ಬಜಾರ್​​ ಠಾಣೆಯ ಪೊಲೀಸರು   ಬಂಧಿಸಿದ್ದಾರೆ. ವಿಶ್ವನಾಥ್​ ಹಂಗರಗಿ (19), ಮಲ್ಲಿಕಾರ್ಜುನ್​ ಮಲಬುದ್ದಿ (23) ಹಾಗು ಭಗವಂತ ಪೂಜಾರಿ(22) ಬಂಧಿತರು. ಆರೋಪಿ ಕಲಬುರಗಿ ನಗರದ ನಿವಾಸಿಗಳಾಗಿದ್ದು ಇಬ್ಬರು ಮೊಬೈಲ್​ ರಿಪೇರಿ ಕೆಲಸ ಮಾಡುತ್ತಿದ್ದರೆ, ಇನ್ನೋರ್ವ ವಿದ್ಯಾರ್ಥಿಯಾಗಿದ್ದ. ಕಳೆದ ಕೆಲ ದಿನಗಳಿಂದ ಮೂವರು ಸೇರಿ ಕಲಬುರಗಿ ನಗರದ ಖೂಬಾ ಪ್ಲಾಟ್​, ಸಿಐಬಿ ಕಾಲೋನಿ, ಗೊದುತಾಯಿ ನಗರ, ಸಾಯಿ ಮುಂದಿರ, ಸಂತೋಷ್​ ಕಾಲೋನಿ, …

Read More »

ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹಕ್ಕೆ ಬ್ರೇಕ್:

ನವದೆಹಲಿ: ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ಪ್ರಕ್ರಿಕೆಯನ್ನು ನಿಲ್ಲಿಸಲಾಗಿದ್ದು ಟ್ರಸ್ಟ್ ಅಂದಾಜಿಸಿದಂತೆ 2,500 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ಇನ್ನು ಮೂವರು ವರ್ಷಗಳ ಕಾಲ ನಿರ್ಮಾಣ ಕಾರ್ಯ ತಡೆಯಿಲ್ಲದೆ ಮುಂದುವರೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ. ದೇಣಿಗೆ ಸಂಗ್ರಹ ಕಾರ್ಯ ನಿಲ್ಲಿಸಿದ್ದರೂ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಹಣ ನೀಡುತ್ತಿದ್ದಾರೆ ಎಂದು ಟ್ರಸ್ಟ್ ನ …

Read More »

ಬೆಳಗಾವಿ – ಧಾರವಾಡ ರೈಲ್ವೆ: ಸಚಿವರ ಉತ್ತರ ಅಸಮರ್ಪಕ ಎಂದ ಕವಟಗಿಮಠ

ಧಾರವಾಡ -ಬೆಳಗಾವಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡುವ ಸಂಬಂಧ ಘೋಷಣೆಯಾದ ಯೋಜನೆಯು ಯಾವ ಹಂತದಲ್ಲಿದೆ ಎನ್ನುವ ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯನ್ನು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸದನದಲ್ಲಿ ಪ್ರಶ್ನೋತ್ತರ ವೇಳೆ ಮೂಲಭೂತ ಸೌಕರ್ಯ ಸಚಿವರಿಗೆ ಕೇಳಿದ್ದರು. ಆದರೆ ಸಚಿವರು ಒದಗಿಸಿದ ಉತ್ತರ ಅಸಮರ್ಪಕವಾಗಿದೆಯೆಂದು ಕವಟಗಿಮಠ ಆಕ್ಷೇಪಿಸಿ, ತುರ್ತಾಗಿ ರಾಜ್ಯ ಸರಕಾರಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಧಾರವಾಡ -ಬೆಳಗಾವಿ ನಡುವೆ ಹೊಸ ರೈಲು ಮಾರ್ಗ …

Read More »

ಬೆಳಗಾವಿ: ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವಿಗೆ ಆಗ್ರಹಿಸಿ ಮಾರ್ಚ್​​​ 8ರಂದು ಎಂ.ಇ.ಎಸ್​ ಪ್ರತಿಭಟನೆ ಹಮ್ಮಿಕೊಂಡಿದೆ.

ಬೆಳಗಾವಿ: ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವಿಗೆ ಆಗ್ರಹಿಸಿ ಮಾರ್ಚ್​​​ 8ರಂದು ಎಂ.ಇ.ಎಸ್​ ಪ್ರತಿಭಟನೆ ಹಮ್ಮಿಕೊಂಡಿದೆ. ಎಂ.ಇ.ಎಸ್ ಪ್ರತಿಭಟನೆಯಲ್ಲಿ ಸಂಘದ ಮುಖಂಡರು ಪ್ರಚೋದನಕಾರಿ ಭಾಷಣ ಮತ್ತು ಹೇಳಿಕೆಗಳನ್ನು ನೀಡುವ ಸಾಧ್ಯತೆ ಸಹ ಇದೆ. ಇವುಗಳಿಂದ ಶಾಂತಿ ‌ಭಂಗವಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ 2 ದಿನಗಳ ಕಾಲ ಮಹಾರಾಷ್ಟ್ರ ನಾಯಕರ ಪ್ರವೇಶವನ್ನು ನಿಷೇಧಿಸಲಾಗಿದೆ. ನಾಳೆ ಬೆಳಗ್ಗೆ 6ರಿಂದ ಮಾ.9ರವರೆಗೂ ಗಡಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ …

Read More »

ಸಚಿವ ಉಮೇಶ್ ಕತ್ತಿ ಯಡಿಯೂರಪ್ಪ ಮಟ್ಟದಲ್ಲಿ ವರ್ಕೌಟ್ ಮಾಡುತ್ತಿದ್ದರೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ಬೆಳಗಾವಿ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ‌ ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಜಟಾಪಟಿ ಶುರುವಾಗಿದೆ. ಬೆಳಗಾವಿಯ ಇಬ್ಬರು ಸಚಿವರಿಂದ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ದೊಡ್ಡ ಮಟ್ಟದಲ್ಲಿ ಲಾಬಿ ನಡೆದಿದ್ದು, ಬೆಳಗಾವಿ ಜಿಲ್ಲೆಯನ್ನು ತಮ್ಮ ಕಂಟ್ರೋಲ್​ಗೆ ತೆಗೆದುಕೊಳ್ಳಲು ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಉಮೇಶ್ ಕತ್ತಿಯಿಂದ ದೆಹಲಿ ಮಟ್ಟದಲ್ಲೂ ಲಾಬಿ ನಡೆದಿದೆ. ಸಚಿವ ಉಮೇಶ್ ಕತ್ತಿ ಯಡಿಯೂರಪ್ಪ ಮಟ್ಟದಲ್ಲಿ ವರ್ಕೌಟ್ ಮಾಡುತ್ತಿದ್ದರೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ …

Read More »

ಸಪ್ತಾಹ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ

ಸಪ್ತಾಹ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡಕರರ 79 ನೇ ವಾರ್ಷಿಕೋತ್ಸವದ ಸಪ್ತಾಹ ಸಮಾರಂಭವು ದಿ.7 ಮತ್ತು 8 ರಂದು ನಡೆಯಲಿದೆ. ದಿ.7ರಂದು ಅಭಿಷೇಕ ಕಾರ್ಯಕ್ರಮವು ಸಿದ್ದಯ್ಯಸ್ವಾಮಿ ಹಿರೇಮಠ ಇವರಿಂದ ಜರುಗಲಿದೆ. ಸಂಜೆ 5 ಗಂಟೆಗೆ ಸಾಧಕರಿಗೆ ಮತ್ತು ಗ್ರಾಮ ಪಂಚಾಯತ ನೂತನ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಶಿಂದಿಕುರಬೇಟ ಐಡಿಯಲ್ ಅರ್ಪಿಸುವ ಎಸ್.ಬಿ.ಇವೆಂಟ್ಸ್ ಮುರಗೋಡ ಇವರಿಂದ ಸಾಂಸ್ಕøತಿಕ ಕಾರ್ಯಕ್ರಮ …

Read More »

ಪಕ್ಷದ್ರೋಹಿಗಳ ಮೇಲೆ ಅನುಕಂಪ ಬರಲು ಸಾಧ್ಯವೇ: ಸಿದ್ಧರಾಮಯ್ಯ ಪ್ರಶ್ನೆ

ಬೆಂಗಳೂರು: ‘ಮೈತ್ರಿ ಸರ್ಕಾರವನ್ನು ಬೀಳಿಸಿ ಹೋದವರ ಮೇಲೆ ಮತ್ತು ಪಕ್ಷ ದ್ರೋಹ ಮಾಡಿದವರ ಮೇಲೆ ಅನುಕಂಪ ಬರಲು ಸಾಧ್ಯವಾ?’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ರಮೇಶ್ ಜಾರಕಿಹೊಳಿ ವಿರುದ್ಧದ ಸಿ.ಡಿ ಪ್ರಕರಣ ಬಹಿರಂಗವಾದ ಬೆನ್ನಲ್ಲೇ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳನ್ನು ನಿರ್ಬಂಧಿಸಬೇಕೆಂದು ಕೋರಿ ಆರು ಸಚಿವರು ಕೋರ್ಟ್ ಮೊರೆ ಹೋಗಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ‘ಕೋರ್ಟ್ ಮೆಟ್ಟಿಲು ಹತ್ತುತ್ತಿದ್ದಾರೆ ಎಂದರೆ ಅವರಿಗೆ …

Read More »

ಕಲಬುರಗಿ ಸರ್ಕಾರಿ ಶಾಲೆಯ 15 ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಧೃಡ ; ಒಂದು ವಾರ ಶಾಲೆಗೆ ರಜೆ ಘೋಷಣೆ

ಕಲಬುರಗಿ : : ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ 15 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಧೃಡವಾಗಿದ್ದು, ಶಾಲೆಯನ್ನು ಸೀಲ್ ಡೌನ್ ಮಾಡಿ ಒಂದು ವಾರ ರಜೆ ಘೋಷಿಸಲಾಗಿದೆ. 9 ಮತ್ತು 10ನೇ ತರಗತಿಯ 15 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಧೃಡವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, 63 ಪೈಕಿ 22 ವಿದ್ಯಾರ್ಥಿಗಳ ವರದಿ ಬಂದಿದ್ದು, ಅದರಲ್ಲಿ 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಧೃಡವಾಗಿದೆ., ಇನ್ನೂ 41 ವಿದ್ಯಾರ್ಥಿಗಳ ವರದಿಗಳು ಬಾಕಿ ಇವೆ. …

Read More »

ಅರಿವಿಲ್ಲದೇ ಮಾತನಾಡುವ ರಾಜಕಾರಣಿ ರಾಹುಲ್: ಸುರೇಶ್ ಕುಮಾರ್ ಟೀಕೆ

ಸುಬ್ರಹ್ಮಣ್ಯ: ‘ತಾನು ಏನು ಮಾತನಾಡುತ್ತಿದ್ದೇನೆ ಎನ್ನುವ ಅರಿವಿಲ್ಲದೇ ಮಾತನಾಡುವ ದೇಶದ ಒಬ್ಬನೇ ರಾಜಕಾರಣಿ ರಾಹುಲ್‌ ಗಾಂಧಿ’ ಎಂದು ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್ ಟೀಕಿಸಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಆರ್‌ಎಸ್‌ಎಸ್ ನೇತೃತ್ವದ ಶಾಲೆಗಳು ಪಾಕಿಸ್ತಾನದ ಮದರಸಾಗಳಿಗೆ ಸಮ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಆರ್‌ಎಸ್‌ಎಸ್ ಏನು ಎಂದು ಅರಿಯಲು ಅದರ ಒಳಗನ್ನು ತಿಳಿಯಬೇಕು’ ಎಂದರು. ‘ಆರ್ಥಿಕ …

Read More »

ತ್ನಿಗೆ ವಂಚಿಸಿ ಮತ್ತೊಂದು ಮದುವೆ; ಕಾನ್ಸ್‌ಟೇಬಲ್ ವಿರುದ್ಧ ದೂರು

ಮೈಸೂರು, ಮಾರ್ಚ್ 6: ಮೈಸೂರು ನಗರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬ ಪತ್ನಿಗೆ ವಂಚಿಸಿ ಮತ್ತೊಂದು ಹುಡುಗಿಯನ್ನು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಮಹಿಳಾ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ ಲಷ್ಕರ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿರುವ ಸಮೀವುಲ್ಲಾ, 2017 ರಲ್ಲಿ ಎಚ್.ಡಿ ಕೋಟೆಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿಯನ್ನು ಮದುವೆಯಾಗಿದ್ದ. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ಬೈಕ್ ಹಾಗೂ ಚಿನ್ನಾಭರಣ ಪಡೆದುಕೊಂಡಿದ್ದ.   ಆರು ತಿಂಗಳು ಪತ್ನಿಯೊಂದಿಗೆ ಅನ್ಯೋನ್ಯವಾಗಿ …

Read More »