ಮನುಷ್ಯ ಚಿರಂಜೀವಿ ಆಗಲಾರ. ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತದೆ. ಒಂದು ಗಿಡಕ್ಕೆ ನೀರು ಎಷ್ಟು ಅವಶ್ಯಕವೋ ಹಾಗೆಯೇ ಒಂದು ಚಿಂತನೆ ಪ್ರಸರಣವಾಗುವುದು ಅಷ್ಟೇ ಅಗತ. ಇಲ್ಲವಾದರೆ ಎರಡು ಸಾಯುತ್ತವೆ’ ಇದು ಡಾ|ಬಿ.ಆರ್. ಅಂಬೇಡ್ಕರ್ ಅವರ ಮಾತು. ಎಪ್ರಿಲ್ 14ರಂದು ಭಾರತ, ವಿಶ್ವದೆಲ್ಲೆಡೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ಇತ್ತೋ ಚಿನ ದಿನಗಳಲ್ಲಿ ಭೀಮ್ ರಾವ್ ಅವರ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಡಾ| …
Read More »3 ವರ್ಷದ ಬಾಲಕನಿಗೆ ತಂಪು ಪಾನೀಯದ ಜತೆ ಮದ್ಯ ಬೆರೆಸಿ ಕುಡಿಸಿದ್ರು; 2 ಗಂಟೆ ಕಾಲ ಪ್ರಜ್ಞಾಹೀನನಾದ.
ಮಧುಗಿರಿ: ಮೂರು ವರ್ಷದ ಬಾಲಕನಿಗೆ ಕಿಡಿಗೇಡಿಗಳು ತಂಪು ಪಾನೀಯದಲ್ಲಿ ಮದ್ಯವನ್ನು ಬೆರೆಸಿ ಕುಡಿಸಿ ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಏ. 10ರಂದು ಸಂಜೆ 6 ಗಂಟೆ ಸಮಯದಲ್ಲಿ ಗ್ರಾಮದ ಗುರುಸ್ವಾಮಿ ಎಂಬುವವರ ಮಗನಿಗೆ ಕಿಡಿಗೇಡಿಗಳು ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿದ್ದಾರೆ. ತಂಪು ಪಾನೀಯ ಎಂದು ಭಾವಿಸಿ ಮದ್ಯ ಕುಡಿದ ಬಾಲಕ ಸುಮಾರು …
Read More »50 ಲಕ್ಷ ವಂಚನೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಜನಾ ಗಲ್ರಾನಿ ಸಹೋದರಿ
ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ವಾಸ ಅನುಭವಿಸಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿರುವಾಗಲೇ, ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ‘ನನಗೆ ಐವತ್ತು ಲಕ್ಷ ರೂಪಾಯಿ ಹಣ ವಂಚನೆ ಮಾಡಲಾಗಿದೆ’ ಎಂದು ಸಂಜನಾ ಸಹೋದರಿ, ನಟಿ ನಿಕ್ಕಿ ಗಲ್ರಾನಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಿಕ್ಕಿ ಅವರು ನೀಡಿರುವ ದೂರಿನ ಪ್ರಕಾರ ರೆಸ್ಟೊರೆಂಟ್ ನಿರ್ಮಾಣಕ್ಕೆ …
Read More »ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
ಅದ್ಧೂರಿತನಕ್ಕೆ ಮತ್ತೊಂದು ಹೆಸರು ನಟ ವಿ.ರವಿಚಂದ್ರನ್. ಕನ್ನಡ ಸಿನಿಮಾಕ್ಕೆ ಅದ್ಧೂರಿತನ ಪರಿಚಯಿಸಿದ್ದೆ ಅವರು. ರವಿಚಂದ್ರನ್ ಏನೇ ಮಾಡಿದರು ಭಿನ್ನವಾಗಿ ಮಾಡಲು ಪ್ರಯತ್ನಿಸುತ್ತಾರೆ. ಕನ್ನಡದ ಹಲವಾರು ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ, ತಮ್ಮ ಅಭಿಪ್ರಾಯಗಳನ್ನು ಫೇಸ್‌ಬುಕ್, ಟ್ವಿಟ್ಟರ್ ಮೂಲಕ ಹಂಚಿಕೊಳ್ಳುತ್ತಾರೆ, ಅಭಿಮಾನಿಗಳೊಂದಿಗೆ ಸಂವಾದ ಮಾಡುತ್ತಾರೆ. ಆದರೆ ರವಿಚಂದ್ರನ್ ಅವರು ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು. ಈಗ ಅವರೂ ಸಹ ಸಾಮಾಜಿಕ ಜಾಲತಾಣದ ಸೇರಿಕೊಂಡಿದ್ದಾರೆ. ಅದೂ ಬಹಳ ಭಿನ್ನವಾಗಿ ತಮ್ಮ ಸಿನಿಮಾದ ಹಾಡುಗಳಂತೆಯೇ …
Read More »ಯುಗಾದಿ ಹಬ್ಬದಂದೆ ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ.
ಬೆಳಗಾವಿ: ಇಂದು ಯುಗಾದಿ ಹಬ್ಬ. ಹೊಸ ಯುಗದ ಆರಂಭ. ಎಲ್ಲರ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಆದ್ರೆ ಇಂತಹ ಹಬ್ಬದ ದಿನದಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಸೇವಂತಾ ಹರದಾರೆ(90) ಮಹಾರಾಷ್ಟ್ರದ ಕೊಲ್ಹಾಪುರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಹಬ್ಬದ ದಿನದಂದೇ ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ ಉಂಟಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೇವಂತಾ ಹರದಾರೆಯವರು ಕೆಲ ದಿನಗಳಿಂದ ಮಹಾರಾಷ್ಟ್ರದ …
Read More »ಕಸಾಪ ಚುನಾವಣೆ: ಅಂತಿಮ ಕಣದಲ್ಲಿ 21 ಮಂದಿ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರಲ್ಲಿ ಒಬ್ಬರು ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದಾಗಿ ಅಂತಿಮ ಚುನಾವಣೆ ಕಣದಲ್ಲಿ 21 ಅಭ್ಯರ್ಥಿಗಳಿದ್ದಾರೆ. ಪರಿಷತ್ತಿನ ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿತ್ತು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬೆಂಗಳೂರಿನ ಕೆ.ಎಂ. ರೇವಣ್ಣ ನಾಮಪತ್ರ ಹಿಂಪಡೆದಿದ್ದಾರೆ. ಕಣದಲ್ಲಿ ಮ.ಚಿ. ಕೃಷ್ಣ, ವ.ಚ. ಚನ್ನೇಗೌಡ, …
Read More »ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರು ಭಾವನಾತ್ಮಕವಾಗಿ ಮತ ಯಾಚನೆ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ದಿನ ಸಮೀಪಿಸುತ್ತಿದ್ದಂತೆಯೇ, ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರು ಭಾವನಾತ್ಮಕವಾಗಿ ಮತ ಯಾಚನೆ ಮಾಡುತ್ತಿದ್ದಾರೆ. ‘ಅವರನ್ನ (ಪತಿ ಸುರೇಶ ಅಂಗಡಿ) ಮಧ್ಯ ದಾರಿಯಲ್ಲೇ ದೇವರು ಕರೆಸಿಕೊಂಡ. ಅವರು ನನ್ನ ಬಿಟ್ಟು ಹೊರಟ್ರು. ಅವರು ಜೀವನ ಪೂರ್ತಿ ನಿಮಗಾಗಿ ದುಡಿದವರು, ನೀವು ನನ್ನ ಕೈ ಬಿಡಬೇಡಿ’ ಎಂದು ಮತದಾರರನ್ನು ಕೋರುತ್ತಿದ್ದಾರೆ. ಹೀಗೊಂದು ಪೋಸ್ಟ್ ಅನ್ನು ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದೆ. …
Read More »ಉಪ ಚುನಾವಣೆ: ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಠಿಕಾಣಿ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಪ್ರಚಾರ ಮಾಡುವುದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏ. 14 ಮತ್ತು 15ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಯಾಚಿಸಲಿದ್ದಾರೆ. 14ರಂದು ಮಧ್ಯಾಹ್ನ 1.15ಕ್ಕೆ ಮೂಡಲಗಿಯಲ್ಲಿ, ಸಂಜೆ 5.15ಕ್ಕೆ ಗೋಕಾಕದಲ್ಲಿ ನಡೆಯುವ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 9ಕ್ಕೆ ಬೆಳಗಾವಿಗೆ ಬಂದು ತಂಗಲಿದ್ದಾರೆ. 15ರಂದು ನಗರದಲ್ಲಿ ಮುಖಂಡರ ಸರಣಿ ಸಭೆಗಳು …
Read More »ಕೋವಿಡ್ ಪರಿಸ್ಥಿತಿ; ಸರ್ವಪಕ್ಷಗಳ ಸಭೆ ಕರೆದ ಯಡಿಯೂರಪ್ಪ
ಬೆಂಗಳೂರು, ಏಪ್ರಿಲ್ 13; “ಕೋವಿಡ್ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಏಪ್ರಿಲ್ 18ರಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಸದ್ಯಕ್ಕೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ” ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು. ಬಸವಕಲ್ಯಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, “ಮೇ 2ರ ತನಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ” ಎಂದರು. ತಾಂತ್ರಿಕ ಸಹಲಾ ಸಮಿತಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ …
Read More »ಮೋದಿ ಅಂಗಡಿಯಲ್ಲಿ ಗ್ಯಾಸ್, ಗೊಬ್ಬರ ಸೇರಿ ಎಲ್ಲವೂ ಕಡಿಮೆ ದರದಲ್ಲಿ ಸಿಗುತ್ತಿದೆ. ಆ ಅಂಗಡಿ ಎಲ್ಲಿದೆ ಎಂಬುದನ್ನು ಜನರು ಹುಡುಕಬೇಕಿದೆ’: ಸತೀಶ್ ಜಾರಕಿಹೊಳಿ
ಸವದತ್ತಿ, ಏಪ್ರಿಲ್ 12: “ಪ್ರಧಾನಿ ನರೇಂದ್ರ ಮೋದಿ ಅಂಗಡಿಯಲ್ಲಿ ಗ್ಯಾಸ್, ಗೊಬ್ಬರ ಸೇರಿ ಎಲ್ಲವೂ ಕಡಿಮೆ ದರದಲ್ಲಿ ಸಿಗುತ್ತಿದೆ. ಆ ಅಂಗಡಿ ಎಲ್ಲಿದೆ ಎಂಬುದನ್ನು ಜನರು ಹುಡುಕಬೇಕಿದೆ’ ಎಂದು ಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ಬೆಳಗಾವಿ ಜಿಲ್ಲೆಯ ಸವದತ್ತಿ ಮತ ಕ್ಷೇತ್ರದ ಕಡಬಿ, ಶಿವಾಪುರ, ಯರಝರ್ವಿ ಗ್ರಾಮಗಳಲ್ಲಿ ಸೋಮವಾರ ಬೆಳಗಾವಿ ಲೋಕಸಭಾ ಉಪ ಚುನಾವಣಾ ಪ್ರಚಾರ ನಡೆಸಿ, ಅವರು ಮಾತನಾಡಿದರು. “ಚುನಾವಣೆಗೂ ಮೊದಲು ಬಿಜೆಪಿಯವರು, ಪೆಟ್ರೋಲ್, …
Read More »