Breaking News

14 ದಿನಗಳ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ರಾಜ್ಯ ಸರ್ಕಾರ ಇದೀಗ ಚಿತ್ರೀಕರಣವನ್ನು ಸಹ ಬಂದ್ ಮಾಡುವಂತೆ ಆದೇಶ

ಕೊರೊನಾ ಎರಡನೇ ತಡೆಯಲು ರಾಜ್ಯ ಸರ್ಕಾರವು 14 ದಿನಗಳ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಮಾಡಿದೆ. ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ, ಬಹುಪಾಲು ವ್ಯಾಪಾರ ವಹಿವಾಟುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ರಾಜ್ಯದಾದ್ಯಂತ ಚಿತ್ರಮಂದಿರಗಳನ್ನು ಈಗಾಗಲೇ ಬಂದ್ ಮಾಡಿರುವ ರಾಜ್ಯ ಸರ್ಕಾರ ಇದೀಗ ಚಿತ್ರೀಕರಣವನ್ನು ಸಹ ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ಕೊರೊನಾ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಹಲವು ಮಾರ್ಗಸೂಚಿಗಳನ್ನು ಹೊರಡಿಸಿರುವ ರಾಜ್ಯ ಸರ್ಕಾರ ಚಿತ್ರೀಕರಣದ ಮೇಲೆಯೂ ನಿರ್ಬಂಧ ಹೇರಿದೆ. ಸಿನಿಮಾ, ಧಾರಾವಾಹಿ, …

Read More »

ಆಸ್ಪತ್ರೆಗೆ ದಾಖಲಾದ 2-3 ದಿನಕ್ಕೆ ಜನ ಸಾಯುತ್ತಿದ್ದಾರೆ,ನಟ ಜಗ್ಗೇಶ್ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಟ್ವೀಟ್ ಮೂಲಕ ಪ್ರಶ್ನೆ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಂದ ದಿನಕ್ಕೆ ನೂರಾರು ಜನ ಸಾಯುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಹಿರಿಯ ನಟ ಜಗ್ಗೇಶ್ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿ, ಆಸ್ಪತ್ರೆಗಳಲ್ಲಿ ಪಾರದರ್ಶಕತೆ ಇರಲಿ ಎಂದು ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಾದ ಸೋಂಕಿತರು 2 ರಿಂದ 3 ದಿನಕ್ಕೆ ಸಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಏನಾಗುತ್ತಿದೆ ಎಂಬುದು ಸತ್ತವರ ಕುಟುಂಬದವರಿಗೆ ತಿಳಿಯುತ್ತಿಲ್ಲ ಎಂದು ಆಸ್ಪತ್ರೆಗಳ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ಟ್ವೀಟ್ …

Read More »

ಸಿಗದ ಆಯಂಬುಲೆನ್ಸ್: ತಾಯಿ ಶವ ಬೈಕ್ ಮೇಲೆ ಸಾಗಿಸಿದ ಮಗ

ಆಂಧ್ರ ಪ್ರದೇಶ : ಕೋವಿಡ್ ಎರಡನೇ ಅಲೆ ಮತ್ತೊಂದು ಬಾರಿ ಕರುಣಾಜನಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ದೇಶದಲ್ಲಿ ಮಹಾಮಾರಿ ಸೋಂಕು ರಣಕೇಕೆ ಹಾಕುತ್ತಿದ್ದರೆ, ಬಡಜನರು ಅಸಹಾಯಕತೆಯ ನೋಟ ಬೀರುತ್ತ ಜೀವನ ಸಾಗಿಸುತ್ತಿದ್ದಾರೆ. ಇದೀಗ ಆಂಧ್ರ ಪ್ರದೇಶದಲ್ಲಿ ಆಯಂಬುಲೆನ್ಸ್ ಸಿಗದಿದ್ದರಿಂದ ಕೋವಿಡ್ ರೋಗಿಯ ಶವವನ್ನು ಬೈಕ್‍ ಮೇಲೆ ಸಾಗಿಸಿರುವ ಮನಕಲಕುವಂತಹ ಘಟನೆ ನಡೆದಿದೆ. ಆಂಧ್ರದ ಶ್ರೀಕಾಕುಲಂ ಜಿಲ್ಲೆಯ ಮಂದಾಸ್ ಮಂಡಲ್ ಎಂಬ ಗ್ರಾಮ ಈ ಘಟನೆಗೆ ಸಾಕ್ಷಿಯಾಗಿದೆ. ಈ ಗ್ರಾಮದ 50 ವರ್ಷದ …

Read More »

ಬೆಂಗಳೂರಿನಲ್ಲಿ ‘ಆಸ್ಪತ್ರೆ’ಯಲ್ಲಿ ಸತ್ತ ಸೋಂಕಿತರಿಗೆ ಮಾತ್ರವೇ ‘ಅಂತ್ಯ ಸಂಸ್ಕಾರ’ಕ್ಕೆ ಅವಕಾಶ.?

ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರು ಗತಿಯಲ್ಲಿ ಸಾಗುತ್ತಿದೆ. ಸೋಂಕಿನ ಪ್ರಕರಣಗಳ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆಗೆ ಬೆಡ್ ಸಿಗೋದು ಒಂದು ಸಮಸ್ಯೆ ಆದ್ರೇ.. ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ಚಿತಾಗಾರದ ಮುಂದೆ ಸಾಲು ಗಟ್ಟಿರೋ ಅಂಬುಲೆನ್ಸ್ ಕೂಡ ಕಂಡು ಬರ್ತಾ ಇದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸತ್ತವರಿಗೆ ಮಾತ್ರವೇ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ, ಮನೆಯಲ್ಲಿ ಸತ್ತವರಿಗೆ ಇಲ್ಲ ಎಂಬುದಾಗಿ ಬಿಬಿಎಂಪಿ …

Read More »

ಬೆಡ್ ಗಾಗಿ ರಾತ್ರಿ ಇಡೀ ಪರದಾಡಿದ ಕೋವಿಡ್ ಸೋಂಕಿತ, ಕುಳಿತ ಚೇರ್ ನಲ್ಲೇ ಸಾವು

ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿತರಿಗೆ ಬೆಡ್ ಸಿಗದ ಪರಿಸ್ಥಿತಿ ಮುಂದುವರೆದಿದೆ. ಕೊರೋನಾ ಸೋಂಕಿತ ತಂದೆಗೆ ಚಿಕಿತ್ಸೆ ಕೊಡಿಸೋದಕ್ಕಾಗಿ ರಾತ್ರಿಯಿಡೀ ಪರದಾಡಿದ್ರೂ, ಬೆಡ್ ಸಿಗದೇ ಬೆಳಗಾಗೋ ವೇಳೆಗೆ ಸಾವನ್ನಪ್ಪಿರುವಂತ ಧಾರುಣ ಘಟನೆ ನಡೆದಿದೆ. ಯಲಹಂಕದ 62 ವರ್ಷದ ವ್ಯಕ್ತಿಗೆ ಕೊರೋನಾ ತಗುಲಿತ್ತು. ಇಂತಹ ತಂದೆಗೆ ಚಿಕಿತ್ಸೆಗಾಗಿ ಐಸಿಯು ಬೆಡ್ ಅವಶ್ಯಕತೆ ಇತ್ತು. ರಾತ್ರಿಯಿಡೀ ಪರದಾಡಿದ್ರೂ ಚಿಕಿತ್ಸೆಗಾಗಿ ಬೆಡ್ ಸಿಕ್ಕಿಲ್ಲ. ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚೇರಿನಲ್ಲೇ ಕುಳಿತು, ಆಕ್ಸಿಜನ್ ಹಾಕಿಸಿಕೊಂಡು ನರಳಾಡುತ್ತಿದ್ದಂತ …

Read More »

ವಿಶೇಷ ಪ್ಯಾಕೇಜ್ ಇಲ್ಲದೇ ಲಾಕ್‍ಡೌನ್ – ಸರ್ಕಾರದ ನಿಲುವೇನು? ಕೆಲವು ದುಡಿಯುವ ವರ್ಗಗಳಿಗೆ ದೊಡ್ಡ ಪ್ರಮಾಣದಲ್ಲಿಯೇ ಆರ್ಥಿಕ ಹೊಡೆತ ಬೀಳಲಿದೆ

ಬೆಂಗಳೂರು: ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡದೇ ರಾಜ್ಯದಲ್ಲಿ ಸರ್ಕಾರ 16 ದಿನ ಲಾಕ್‍ಡೌನ್ ಮಾಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಕ್ಕೆ ಲಾಕ್‍ಡೌನ್ ಅನಿವಾರ್ಯವಾಗಿತ್ತು. ಆದ್ರೆ ಆರ್ಥಿಕ ಹೊಡೆತಕ್ಕೆ ಸಿಲುಕುವ ವಲಯಗಳಿಗೆ ಸರ್ಕಾರ ಯಾವುದೇ ಪ್ಯಾಕೇಜ್ ಘೋಷಣೆ ಮಾಡಿಲ್ಲ. 16 ದಿನದ ಜನತಾ ಲಾಕ್‍ಡೌನ್ ನಲ್ಲಿ ಕೆಲವು ದುಡಿಯುವ ವರ್ಗಗಳಿಗೆ ದೊಡ್ಡ ಪ್ರಮಾಣದಲ್ಲಿಯೇ ಆರ್ಥಿಕ ಹೊಡೆತ ಬೀಳಲಿದೆ. ಕಳೆದ ವರ್ಷದ ಲಾಕ್‍ಡೌನ್ ನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಲಾಕ್‍ಡೌನ್ ಘೋಷಣೆಯಾಗಿದೆ. ಗಾರ್ಮೆಂಟ್ಸ್ ಉದ್ಯೋಗಿಗಳು, …

Read More »

ಜಿಂದಾಲ್‍ಗೆ 3,667 ಎಕರೆ ಭೂಮಿ ಮಾರಾಟ ,ಕದ್ದು ಮುಚ್ಚಿ ಮಾರೋದು ಬಿಜೆಪಿಯ ಸಂಸ್ಕೃತಿ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಜಿಂದಾಲ್ ಕಂಪನಿಗೆ ಸರ್ಕಾರ 3,667 ಎಕರೆ ಭೂಮಿ ಮಾರಾಟಕ್ಕೆ ಬಿಎಸ್‍ವೈ ಸರ್ಕಾರಕ್ಕೆ ಮುಂದಾಗಿರುವ ನಡೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಈ ನಿರ್ಧಾರವನ್ನ ವಿರೋಧಿಸಿದ್ದ ಬಿಜೆಪಿ, ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ.ಪಾಟೀಲ್ ಅವರ ಮುಂದೆ ಸಾಲು ಸಾಲು ಪ್ರಶ್ನೆಗಳನ್ನಿರಿಸಿದ್ದಾರೆ. ‘ಬಿಎಸ್‍ವೈ ಅಹೋರಾತ್ರಿ ಧರಣಿ, ಬಿಜೆಪಿ ಯುವ ಮೋರ್ಚಾದಿಂದ ವಿಧಾನಸೌಧ ಮುತ್ತಿಗೆ, ಮೈತ್ರಿ ಸರ್ಕಾರದ ಮೇಲೆ ಕಿಕ್ ಬ್ಯಾಕ್ ಆರೋಪ…’ ಜಿಂದಾಲ್‍ಗೆ 3,677 ಎಕರೆ ಭೂಮಿ ಮಾರಾಟ …

Read More »

ಪಂಜಾಬ್‌ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದ ಕೆಕೆಆರ್..!

ಅಹಮದಾಬಾದ್​: ಉತ್ತಮ ಬೌಲಿಂಗ್ ಪ್ರದರ್ಶನ, ರಾಹುಲ್ ತ್ರಿಪಾಠಿ ಹಾಗೂ ನಾಯಕ ಇಯಾನ್ ಮೋರ್ಗಾನ್ ಅಬ್ಬರದ ಬ್ಯಾಟಿಂಗ್‌ನಿಂದ ಪಂಜಾಬ್ ಕಿಂಗ್ಸ್‌ಅ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 124 ರನ್‌ಗಳ ಗುರಿ ನೀಡಿತ್ತು. ಈ ಸಾಧಾರಣ ಟಾರ್ಗೆಟ್ ಗುರಿ ಬೆನ್ನಟ್ಟಿದ ಕೆಕೆಆರ್ 20 ಎಸೆತಗಳು ಬಾಕಿ ಇರುವಂತೆ 5 …

Read More »

ನಟಿ ಮಾಲಾಶ್ರೀ ಪತಿ ರಾಮು ಕೊರೊನಾಗೆ ಬಲಿ

ಸ್ಯಾಂಡಲ್‍ವುಡ್ ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು (52) ಅವರು ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಕೊರೊನಾ ದೃಢಪಟ್ಟಿದ್ದು, ಉಸಿರಾಟದ ತೊಂದರೆಯಿಂದಾಗಿ 3 ದಿನಗಳ ಹಿಂದೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಎಕೆ 47, ಲಾಕಪ್ ಡೆತ್, ಕಲಾಸಿಪಾಳ್ಯ, ಸಿಬಿಐ ದುರ್ಗಾ, ಅರ್ಜುನಗೌಡ ಸೇರಿ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ಇವರು ಸ್ಯಾಂಡಲ್‍ವುಡ್‍ನಲ್ಲಿ ಕೋಟಿ ರಾಮು ಎಂದೇ ಹೆಸರು …

Read More »

ಬಾಗಲಕೋಟೆ: ಕಾರಾಗೃಹಕ್ಕೂ ಒಕ್ಕರಿಸಿದ ಕೋವಿಡ್; ಓರ್ವ ಸಿಬಂದಿ ಸೇರಿ 39 ಕೈದಿಗಳಿಗೆ ಸೋಂಕು

ಬಾಗಲಕೋಟೆ : ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೊರೊನಾ ದಾಳಿ ಇಟ್ಟಿದ್ದು, ಓರ್ವ ಸಿಬ್ಬಂದಿ ಸೇರಿ 40 ಜನರಿಗೆ ದೃಢಪಟ್ಟಿದೆ. ಜೈಲಿನಲ್ಲಿದ್ದ 39 ವಿಚಾರಣಾಧೀನ ಖೈದಿಗಳಿಗೆ ಹಾಗೂ ಓರ್ವ ಜೈಲಿನ ಸಿಬ್ಬಂದಿಗೂ ಕೊರೊನಾ ತಗುಲಿದೆ. ಎಪ್ರಿಲ್ 24 ರಂದು ಓರ್ವ ಖೈದಿಗೆ ಕೋವಿಡ್ ದೃಢವಾಗಿತ್ತು. ಆ ಹಿನ್ನೆಲೆ ಖೈದಿಗಳು ,ಸಿಬ್ಬಂದಿ ಸೇರಿದಂತೆ 200 ಜನರ ಟೆಸ್ಟ್ ಮಾಡಲಾಗಿತ್ತು. ಕೋವಿಡ್ ಹೇಗೆ ಬಂತು ಯಾವ ಮೂಲದಿಂದ ಬಂತು ಎಂದು ಆರೋಗ್ಯ ಇಲಾಖೆ …

Read More »