ಹುಬ್ಬಳ್ಳಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಸೌಲಭ್ಯ ಒಳಗೊಂಡ 66 ಬೆಡ್‌ಗಳ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರ ನಿರ್ಮಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಕಿಮ್ಸ್‌ನಲ್ಲಿರುವ ಪಿಎಂಎಸ್‌ಎಸ್‌ವೈ ಸೂಪರ್ ಸ್ಟೆಷಾಲಿಟಿ ಸಮೀಪದ ಜಾಗದಲ್ಲಿಯೇ ಕೇಂದ್ರ ತಯಾರಾಗಲಿದೆ. ಈ ಜಾಗವನ್ನು ಗುರುವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ನಿರ್ಮಿತಿ ಕೇಂದ್ರದಿಂದ ₹66 ಲಕ್ಷ …
Read More »ಆಸ್ಪತ್ರೆಯಲ್ಲೇ ರೆಮಿಡಿಸಿವಿರ್ ಬಳಸಿ
ಹೊಸದಿಲ್ಲಿ: ದೇಶದಲ್ಲಿ ಸೋಂಕು ಪರಿಸ್ಥಿತಿ ಬಿಗಡಾಯಿಸುತ್ತಿರುವಂತೆ ಕೇಂದ್ರ ಸರಕಾರ ಹೋಮ್ ಐಸೊಲೇಶನ್‌ನ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿಶೇಷವಾಗಿ ರೋಗಲಕ್ಷಣ ರಹಿತ ಮತ್ತು ಅಲ್ಪ ಪ್ರಮಾಣದ ಲಕ್ಷಣಗಳು ಇರುವವರಿಗೆ ಇದರಿಂದ ಅನುಕೂಲವಾಗಲಿದೆ. ಮನೆಯಲ್ಲಿ ರೆಮಿಡಿಸಿವಿರ್ ಇಂಜೆಕ್ಷನ್ ಪಡೆಯುವುದನ್ನು ನಿಷೇಧಿಸಲಾಗಿದ್ದು, ಆಸ್ಪತ್ರೆಯಲ್ಲಿ ಮಾತ್ರ ಪಡೆಯಬೇಕು ಎಂದು ಸಲಹೆ ಮಾಡಲಾಗಿದೆ. ಮತ್ತೂಂದು ಗಮನಾರ್ಹ ಅಂಶವೆಂದರೆ ಸೋಂಕು ದೃಢಪಟ್ಟವರು ಮನೆಯಲ್ಲಿರುವಾಗ ಕೂಡ ಮೂರು ಪದರಗಳ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಲಾಗಿದೆ. ಇನ್ನಿತರ ಸಲಹೆಗಳು …
Read More »1.31 ಲಕ್ಷ ಪಡಿತರ ಚೀಟಿಗಳೇ ಅನರ್ಹ: ಉಮೇಶ ಕತ್ತಿ, ಆಹಾರ ಸಚಿವ
ಬೆಂಗಳೂರು: ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್ (ಆದ್ಯತಾ) ಪಡಿತರ ಚೀಟಿಗಳ ಪರಿಶೀಲನಾ ಕಾರ್ಯ ಆರಂಭಿಸಿರುವ ಆಹಾರ ಇಲಾಖೆ, ಮೂರೇ ತಿಂಗಳಲ್ಲಿ 1,31,082 ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಿದೆ. ಇವುಗಳಿಗೆ ಮೇ ತಿಂಗಳಿಂದ ಆಹಾರಧಾನ್ಯ ವಿತರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಅಲ್ಲದೆ, ಕಂದಾಯ ಇಲಾಖೆಯ ಪಿಂಚಣಿದಾರರ ಪರಿಶೀಲನೆ ವೇಳೆ ಮೃತಪಟ್ಟಿದ್ದಾರೆಂದು ಗುರುತಿಸಿದ, ಆದರೆ ಇನ್ನೂ ಪಡಿತರ ಚೀಟಿಗಳಲ್ಲಿ ಹೆಸರು ಇರುವ 4,42,935 ಫಲಾನುಭವಿಗಳ ಆಹಾರಧಾನ್ಯ ಹಂಚಿಕೆಯನ್ನೂ ಸ್ಥಗಿತಗೊಳಿಸಲು ಇಲಾಖೆ …
Read More »ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್: ಮೇ ತಿಂಗಳಿಂದ ರೇಷನ್ ಸ್ಥಗಿತ
ಬೆಂಗಳೂರು: ಆಹಾರ ಇಲಾಖೆ ವತಿಯಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳ ಪರಿಶೀಲನೆ ಕಾರ್ಯ ಆರಂಭಿಸಿದ್ದು, 1.31 ಲಕ್ಷ ಪಡಿತರ ಚೀಟಿಗಳು ಅನರ್ಹ ಎಂದು ಗುರುತಿಸಿದೆ. ಇಂತಹ ಕಾರ್ಡ್ ಗಳಿಗೆ ಮೇ ತಿಂಗಳಿನಿಂದ ಪಡಿತರ ವಿತರಣೆ ನಿಲ್ಲಿಸಲು ತೀರ್ಮಾನಿಸಲಾಗಿದೆ. ರೇಷನ್ ಪಡೆಯುವ ಅರ್ಹರ ಪಟ್ಟಿಯಲ್ಲಿ ಮೃತಪಟ್ಟ 4.43 ಲಕ್ಷ ಫಲಾನುಭವಿಗಳು ಇರುವುದು ಕಂಡುಬಂದಿದೆ. ಬಿಪಿಎಲ್ ಮತ್ತು ಅಂತ್ಯೋದಯ ಅನ್ನ ಯೋಜನೆ ಅಡಿ ಕಾರ್ಡ್ ಪಡೆದುಕೊಂಡಿರುವ ಅನರ್ಹರನ್ನು ಗುರುತಿಸುವ ಕಾರ್ಯ ಮುಂದುವರೆದಿದೆ. …
Read More »ಸಚಿವರ ಹಾಗೂ 1 ವರ್ಷದ ಸಂಬಳ, ಶಾಸಕರ 1 ತಿಂಗಳ ಸಂಬಳ ಕೋವಿಡ್ ನಿಯಂತ್ರಣಕ್ಕಾಗಿ.”: ಆರ್.ಅಶೋಕ್
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಲಸಿಕೆ ಹಾಗೂ ಆಕ್ಸಿಜನ್ ವ್ಯವಸ್ಥೆಗಳ ನಿರ್ವಹಣೆಗೂ ಕೂಡ ಯಾವೆಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಿಎಂ ನಿರ್ದೇಶನ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ನಿಯಂತ್ರಣಕ್ಕಾಗಿ ಸಚಿವರ 1 ವರ್ಷದ ಸಂಬಳ ಹಾಗೂ ಶಾಸಕರ 1 ತಿಂಗಳ …
Read More »ಸಮಾಜಕ್ಕೆ ಮಾರಕವಾಗಿರುವ 6000 ಕೆ.ಜಿ. ತಂಬಾಕು ಉತ್ಪನ್ನಗಳನ್ನು ವಶಕ್ಕೆ: ಅಶೋಕ ತೇಲಿ
ಬೆಳಗಾವಿ : ಬೆಳಗಾವಿ ಉಪವಿಭಾಗಾಧಿಕಾರಿ ಅಶೋಕ ತೇಲಿ ಇಂದು ಖಾನಾಪುರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 6,000 ಕೆಜಿ ಅಕ್ರಮ ತಂಬಾಕು ವಶಕ್ಕೆ ಪಡೆಯಲಾಗಿದೆ. ಖಾನಾಪುರದ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿರುವ ಸಮಾಜಕ್ಕೆ ಮಾರಕವಾಗಿರುವ 6000 ಕೆ.ಜಿ. ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರು ಸಾವಿರ ಕೆಜಿ ಬಿಡಿ ತಂಬಾಕು ವಶಪಡಿಸಿಕೊಂಡಿದ್ದು, ಇದರಲ್ಲಿ ಲೇಬಲ್, ಪ್ಯಾಕಿಂಗ್ ಇರಲಿಲ್ಲ. ಇನ್ನೂ ಮೂರು ಸಾವಿರ ಕೆಜಿ ಅಕ್ರಮ ತಂಬಾಕನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಎಪ್ಪತ್ತು ಕೆಜಿ ಪ್ಲಾಸ್ಟಿಕ್ ವಶ ಪಡಿಸಿಕೊಳ್ಳಲಾಗಿದೆ. …
Read More »ಇಲ್ಲೊಬ್ಬ ಹೆಣ್ಮಗಳು ತನ್ನ ಪತಿಯನ್ನು ಉಳಿಸಿಕೊಳ್ಳಲು ಪಟ್ಟ ಪಾಡು ಕೇಳಿದರೆ ಎದೆ ಝಲ್ಲೆನ್ನುತ್ತದೆ.
ಬೆಂಗಳೂರು – ಕೊರೋನಾ ದಿನದಿಂದ ದಿನಕ್ಕೆ ಎಂತೆಂತವರ ಜೀವವನ್ನು ಕಸಿದುಕೊಳ್ಳುತ್ತಿದೆ ಎಂದು ನೋಡಿದಾಗ ನಿಂತಲ್ಲೇ ಕುಸಿದು ಬೀಳುವಂತಾಗಿದೆ. ಪತ್ನಿ ಪತಿಯನ್ನು ಉಳಿಸಿಕೊಳ್ಳಲು, ತಾಯಿ ಮಗನನ್ನು ಉಳಿಸಿಕೊಳ್ಳಲು, ಮಗ ತಂದೆ-ತಾಯಿಯನ್ನು ಉಳಿಸಿಕೊಳ್ಳಲು ಹೆಣಗಾಡುವುದನ್ನು ಕೇಳಿದರೆ ಈ ಜೀವನದ ಮೇಲಿನ ಭರವಸೆಯೇ ಹೊರಟು ಹೋಗುವಂತಾಗಿದೆ. ಇಲ್ಲೊಬ್ಬ ಹೆಣ್ಮಗಳು ತನ್ನ ಪತಿಯನ್ನು ಉಳಿಸಿಕೊಳ್ಳಲು ಪಟ್ಟ ಪಾಡು ಕೇಳಿದರೆ ಎದೆ ಝಲ್ಲೆನ್ನುತ್ತದೆ. ಇದು ಒಬ್ಬ ಹೆಣ್ಮಗಳ ಕಥೆಯಲ್ಲ, ಸಾವಿರಾರು ಜನರು ಕ್ಷಣ 7ಣವೂ ಪಡುತ್ತಿರುವ ಪಾಡು. …
Read More »ಬೆಳಗಾವಿಯಲ್ಲಿ ಕೊರೋನಾ ಅಟ್ಟಹಾಸ ಮೆರದಿದ್ದು, ಮೊದಲಬಾರಿಗೆ 500ರ ಗಡಿ ದಾಟಿದೆ.
ಬೆಳಗಾವಿ – 2 ಅಲೆಯಲ್ಲಿ ಬೆಳಗಾವಿಯಲ್ಲಿ ಕೊರೋನಾ ಅಟ್ಟಹಾಸ ಮೆರದಿದ್ದು, ಮೊದಲಬಾರಿಗೆ 500ರ ಗಡಿ ದಾಟಿದೆ. ಇಂದು 545 ಜನರಿಗೆ ಜಿಲ್ಲೆಯಲ್ಲಿ ಕೊರೋನಾ ದೃಢಪಟ್ಟಿದೆ. ಬೆಳಗಾವಿ ನಗರದಲ್ಲಿ 157, ಗೋಕಾಕ ತಾಲೂಕಲ್ಲಿ 104 ಜನರಿಗೆ ಸೋಂಕು ಪತ್ತೆಯಾಗಿದೆ. ಅಥಣಿಯಲ್ಲಿ 76, ಬೈಲಹೊಂಗಲ 50, ಚಿಕ್ಕೋಡಿ 30, ಹುಕ್ಕೇರಿ 18, ಖಾನಾಪುರ 10, ರಾಮದುರ್ಗ 15, ರಾಯಬಾಗ 38, ಸವದತ್ತಿ 30 ಹಾಗೂ ಇತರೆ 17 ಜನರಿಗೆ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ …
Read More »ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ: ಡಾ.ಕೆ.ಹರೀಶ್ ಕುಮಾರ್
ಬೆಳಗಾವಿ: ಲೋಕಸಭಾ ಉಪ ಚುನಾವಣೆಯ ಮತ ಎಣಿಕೆಯು ಭಾನುವಾರ (ಮೇ.02) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕೋವಿಡ್-19 ಮಾರ್ಗಸೂಚಿಗಳನ್ನು ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಿದೆ. ಅಭ್ಯರ್ಥಿ ಹಾಗೂ ಏಜೆಂಟರುಗಳಿಗೆ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯ : ಮತ ಎಣಿಕೆ ಕೇಂದ್ರ ಪ್ರವೇಶಿಸುವ ಅಭ್ಯರ್ಥಿಗಳು ಕೊರೋನಾ ನೆಗೆಟಿವ್ ವರದಿ ಅಥವಾ ಎರಡು ಡೋಸ್ ಲಸಿಕೆ ಪಡೆದಿರುವ ಬಗ್ಗೆ ದಾಖಲೆ ಸಲ್ಲಿಸಬೇಕು. ಏಜೆಂಟರು ಕೂಡ 48 …
Read More »ಮಾಸ್ಕ್ ಧರಿಸಿ ಪೇಟೆಗೆ ಬಂದ ನಾಯಿ!
ಮಂಗಳೂರು, ಏಪ್ರಿಲ್ 29; ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಂತಾ ಸರ್ಕಾರ ಕಠಿಣ ನಿಯಮಗಳನ್ನು ಮಾಡಿದೆ. ಜನ ಮಾತ್ರ ಕೊರೊನಾ ಬಂದು ವರ್ಷ ಕಳೆದರೂ ಇನ್ನೂ ಮಾಸ್ಕ್ ಧರಿಸುತ್ತಿಲ್ಲ. ಮಾಸ್ಕ್ ಬಳಕೆಯ ಗಂಭೀರತೆಯೂ ಜನರಿಗೆ ಅರ್ಥವಾಗಿಲ್ಲ. ಹೀಗಾಗಿ ಪ್ರತಿದಿನ ಮಾಸ್ಕ್ ಧರಿಸದೇ ದಂಡವನ್ನು ಕಟ್ಟುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶ್ವಾನದ ಮಾಲಿಕರೊಬ್ಬರು ತನ್ನ ಪ್ರೀತಿಯ ಶ್ವಾನಕ್ಕೆ ಮಾಸ್ಕ್ ಹಾಕಿಸಿ ಕರೆದುಕೊಂಡು ಬಂದಿದ್ದರು. ಗುರುವಾರ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ …
Read More »