Breaking News

ಜೀವಂತ ಇದ್ದರೂ ಸತ್ತನೆಂದು ಬೇರೆಯವರ ಮೃತದೇಹ ಕೊಟ್ಟು ಆಸ್ಪತ್ರೆ ಎಡವಟ್ಟು

ಬೆಳಗಾವಿ: ಕೋವಿಡ್ ಸೋಂಕಿನಿಂದ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಮೃತಪಟ್ಟಿದ್ದಾನೆ ಎಂದು ಹೇಳಿ ಅವರ ಕುಟುಂಬದವರಿಗೆ ಬೇರೆ ಮೃತದೇಹ ನೀಡಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ ಘಟನೆ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ. ಮೋಳೆ ಗ್ರಾಮದ ಪಾಯಪ್ಪ ಸತ್ಯಪ್ಪ ಹಳ್ಳೋಳ್ಳಿ (82) ಈ ವೃದ್ಧ ಕೆಲ ಹೊತ್ತಿನ ನಂತರ ಮನೆಯವರಿಗೆ ಕರೆ ಮಾಡಿ ಇನ್ನೂ ಏಕೆ ಊಟ ತಂದು ಕೊಟ್ಟಿಲ್ಲ ಎಂದು ಕೇಳಿದಾಗ ಆಸ್ಪತ್ರೆ ಸಿಬ್ಬಂದಿ ಮಾಡಿರುವ ಎಡವಟ್ಟು …

Read More »

ನನ್ನ ತಾಯಿಗೇ ಬೆಡ್ ಕೊಡ್ತಿಲ್ಲ ಎಂದು ಸಿದ್ದರಾಮಯ್ಯ ಬಳಿ ಕಣ್ಣೀರಿಟ್ಟ ಶಾಸಕಿ ಕುಸುಮಾ ಶಿವಳ್ಳಿ!

ಬೆಂಗಳೂರು: ಕರ್ನಾಟಕದ ಪಾಲಿಗೆ ಇಂದು ಕರಾಳ ದಿನ. ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್​​ ಕೊರತೆ ಉಂಟಾಗಿ 24 ಮಂದಿ ರೋಗಿಗಳು ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಇನ್ನು ಸೋಂಕಿತರಿಗೆ ಬೆಡ್​ ಸಿಗದೇ ಪರದಾಡುತ್ತಿರುವುದು ಸಾಮಾನ್ಯವೇನೋ ಎನ್ನುವಂತಾಗಿದೆ. ಸಚಿವರು, ಶಾಸಕರು, ಸೆಲೆಬ್ರೆಟಿಗಳು ಕೂಡ ತಮ್ಮವರಿಗಾಗಿ ಬೆಡ್​​​ ಹೊಂದಿಸಲಾಗದೇ ದಿಕ್ಕೆಟ್ಟಿದ್ದಾರೆ. ತಮ್ಮೆಲ್ಲಾ ಪ್ರಭಾವನ್ನು ಬಳಸಿದರೂ ಆಸ್ಪತ್ರೆಗಳಲ್ಲಿ ಒಂದು ಬೆಡ್​ ಸಿಗುತ್ತಿಲ್ಲ. ಇದಕ್ಕೆ ಕುಂದಗೋಳ ಕ್ಷೇತ್ರದ ಕಾಂಗ್ರೆಸ್​ ಶಾಸಕಿ ಕುಸುಮಾ ಶಿವಳ್ಳಿಯೂ ಹೊರತಾಗಿಲ್ಲ. ತಮ್ಮ ಸೋಂಕಿತ ತಾಯಿಗೆ …

Read More »

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಸುರೇಶ್ ಕುಮಾರ್ ವಿರುದ್ಧ ಸಿಎಂ ಗರಂ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 24 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ನಾಳೆ ಸಂಜೆ 4 ಗಂಟೆಗೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದು, ಜಿಲ್ಲಾಸ್ಪತ್ರೆಗಳ ಸ್ಥಿತಿಗತಿ, ಆಕ್ಸಿಜನ್ ವ್ಯವಸ್ಥೆ, ಬೆಡ್, ಚಿಕಿತ್ಸೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ತಮ್ಮದೇ ಉಸ್ತುವಾರಿ ಜಿಲ್ಲೆಯಲ್ಲಿ …

Read More »

ರಾಜ್ಯ ಸರ್ಕಾರ ಜನರಿಗೆ ಆಸೆ ತೋರಿಸುವ ಕೆಲಸ ಮಾಡ್ತಿದೆ ಎಂದ ಮಾಜಿ ಸಚಿವ ರಾಮಲಿಂಗಾರೆಡ್ಡಿ

ಮೈಸೂರು : ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನಪ್ಪಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರಕ್ಕೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ. ಚಾಮರಾಜನಗರದ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಎಲ್ಲಾ ಜಿಲ್ಲೆಗಳ್ಲಲೂ ಇದೇ ರೀತಿಯ ಪರಿಸ್ಥಿತಿ ಇದೆ. ಸರ್ಕಾರ ಜನರಿಗೆ ಆಸೆ ತೋರಿಸುವ ಕೆಲಸ ಮಾಡ್ತಿದೆ. ಆದರೆ ಬಹುತೇಕ ರೋಗಿಗಳಿಗೆ ಚಿಕಿತ್ಸೆಯೇ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ ಕೊವಿಡ್ ಮೊದಲ ಅಲೆಯ …

Read More »

ಜಿಲ್ಲಾವಾರು ಕೋವಿಡ್-19 ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆಗಳು

  ಬಾಗಲಕೋಟೆ – 08354-236240, 08354-236240/1077 ಬಳ್ಳಾರಿ – 08392-1077, 08392-277100, 8277888866 (Whatsapp no) ಬೆಳಗಾವಿ – 0831-2407290(1077), 0831-2424284 ಬೆಂಗಳೂರು ನಗರ – 080-1077, 080-22967200 ಬೆಂಗಳೂರು ಗ್ರಾಮಾಂತರ – 080-29781021 ಬೀದರ್ – 18004254316 ಚಾಮರಾಜನಗರ – 08226-1077, 08226-223160 ಚಿಕ್ಕಬಳ್ಳಾಪುರ – 08156-1077/277071 ಚಿಕ್ಕಮಗಳೂರು – 08262-238950, 08262-1077 ಚಿತ್ರದುರ್ಗ – 08194-222050/222044/222027/222056/222035 ದಾವಣಗೆರೆ – 08192-234034, 08192-1077 ಧಾರವಾಡ – 0836-1077/2447547 ಗದಗ …

Read More »

ಸರ್ಕಾರದ ಬೇಜವಾಬ್ದಾರಿಗೆ ಜನರು ಪ್ರಾಣಕಳೆದುಕೊಳ್ಳುವ ಸ್ಥಿತಿ ಬಂದಿದೆ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿರುವ ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಈ ಸಾವಿಗೆ ಯಾರು ಹೊಣೆ. ಸರ್ಕಾರದ ಬೇಜವಾಬ್ದಾರಿಗೆ ಜನರು ಪ್ರಾಣಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಆಕ್ಸಿಜನ್ ಪೂರೈಸಲೂ ಸರ್ಕಾರಕ್ಕೆ ಸಾಧ್ಯವಾಗದ ಸ್ಥಿತಿಬಂದಿದೆ ಇದೆಂತಹ ಸರ್ಕಾರ? ಬಿಜೆಪಿ ನಾಯಕರಿಗೆ ಪ್ರಚಾರ ಮುಖ್ಯವೇ ಹೊರತು ಜನರ ಜೀವಗಳು ಮುಖ್ಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. …

Read More »

ಬೆಳಗಾವಿ ಉಪ ಚುನಾವಣೆ: ಗೆಲುವಿನ ಅಂತರ ಕಡಿಮೆ; ಕಾರಣಗಳೇನು?

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರು 5,240 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಅವರು ತಮ್ಮ ಪತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಏ.17ರಂದು ಮತದಾನ ನಡೆದಿತ್ತು. ಮತ ಎಣಿಕೆಯು ಇಲ್ಲಿನ ಆರ್.ಪಿ.ಡಿ. ಕಾಲೇಜಿನಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಜರುಗಿತು. ವಿಜೇತ ಅಭ್ಯರ್ಥಿ ಮಂಗಲಾ ಜಿಲ್ಲಾ ಚುನಾವಣಾ ಅಧಿಕಾರಿ …

Read More »

ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನೆ

ಬೆಂಗಳೂರು: ಮೂರು ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಫ‌ಲಿತಾಂಶ ರಾಜ್ಯ ಬಿಜೆಪಿ ನಾಯಕರ ಬೆವರಿಳಿಯುವಂತೆ ಮಾಡಿದೆ. ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯವೂ ಫ‌ಲಿತಾಂಶದ ಮೇಲೆ ಪರಿಣಾಮ ಬೀರಿದಂತಿದೆ. ಬಸವಕಲ್ಯಾಣ ವಿಧಾನಸಭೆ ಮತ್ತು ಬೆಳಗಾವಿ ಲೋಕಸಭೆಯಲ್ಲಿ ನಿರಾಯಾಸ ಗೆಲುವು ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದ್ದ ಆಡಳಿತ ಪಕ್ಷ ಬಿಜೆಪಿಗೆ ಬೆಳಗಾವಿ ಕ್ಷೇತ್ರದ ಮತ ಎಣಿಕೆಯ ಹಾವು ಏಣಿ ಆಟ ಬಿಜೆಪಿ ನಾಯಕರು ಉಸಿರು ಬಿಗಿ ಹಿಡಿಯುವಂತೆ …

Read More »

ಕಮಾಲ್ ಮಾಡದ ಕಮಲ್- ಅಣ್ಣಾಮಲೈ, ಮೆಟ್ರೋ ಮ್ಯಾನ್ ಶ್ರೀಧರನ್‍ಗೆ ಸೋಲಿನ ಕಹಿ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮಕ್ಕಳ್ ನಿಧಿ ಮಯಂ ಪಕ್ಷದಿಂದ ಕೊಯಂಬತ್ತೂರು ದಕ್ಷಿಣದಿಂದ ಸ್ಪರ್ಧಿಸಿದ್ದ ಕಮಲ್ ಹಾಸನ್ 43,451 ಮತಗಳನ್ನು ಪಡೆಯುವ ಮೂಲಕ ಜಯ ಗಳಿಸಿದರು. ಆದರೆ ತಮಿಳುನಾಡಿನ ಉಳಿದ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇದರಿಂದ ಕಮಲ್‍ಗೆ ನಿರಾಸೆಯಾಗಿದೆ. ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿಜೆಪಿಯ ರತ್ನಪ್ರಭಾಗೆ ಠೇವಣಿ ನಷ್ಟವಾಗಿದೆ. ತಿರುಪತಿ ಲೋಕಸಭಾ ಕ್ಷೇತ್ರದಲ್ಲಿ ಮದಿಲ್ಲ ಗುರುಮೂರ್ತಿ 6,26,108 …

Read More »

ಗೋವಾ : ಲಾಕ್ ಡೌನ್ ತೆರವು ಮಾಡಿ ಕಠಿಣ ನಿಯಮಗಳನ್ನು ಮುಂದುವರೆಸಿದ ಸರ್ಕಾರ

ಪಣಜಿ: ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಗೋವಾದಲ್ಲಿ ಲಾಕ್‍ಡೌನ್ ತೆರವುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ. ಆದರೆ ಕೋವಿಡ್-19 ನಿರ್ಬಂಧಗಳು ಇನ್ನೂ ಒಂದು ವಾರ ಮುಂದುವರೆಯಲಿದೆ. ಲಾಕ್‍ಡೌನ್ ಎಂದು ಹೆಸರಿಸದೆಯೇ ಗೋವಾ ಸರ್ಕಾರ ಲಾಕ್‍ಡೌನ್ ಮುಂದುವರೆಸಿದೆ. ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಎಂ ಸಾವಂತ್- ರಾಜ್ಯದಲ್ಲಿ ಲಾಕ್‍ಡೌನ್ ವಿಸ್ತರಿಸುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಕಠಿಣ ನಿರ್ಬಂಧವನ್ನು ಮುಂದುವರೆಸಲಾಗುವುದು. ಮೇ 3ರ ಬೆಳಿಗ್ಗೆ 6 ಗಂಟೆಗೆ …

Read More »