Breaking News

ಮಂಗಳವಾರದಿಂದ ಲಾಠಿ ಏಟಿನ ಬದಲಾಗಿ, ಅನಗತ್ಯ ಸಂಚಾರಿಗಳಿಗೆ ದಂಡ ವಿಧಿಸುವುದು ಮತ್ತು ವಾಹನಗಳನ್ನು ವಶಕ್ಕೆ ಪಡೆಯುವುದನ್ನು ವ್ಯಾಪಕ

ರಾಯಚೂರು: ಲಾಕ್‌ಡೌನ್‌ ಜಾರಿ ಬಿಗಿಗೊಳಿಸಿರುವ ಪೊಲೀಸರು ಮಂಗಳವಾರದಿಂದ ಲಾಠಿ ಏಟಿನ ಬದಲಾಗಿ, ಅನಗತ್ಯ ಸಂಚಾರಿಗಳಿಗೆ ದಂಡ ವಿಧಿಸುವುದು ಮತ್ತು ವಾಹನಗಳನ್ನು ವಶಕ್ಕೆ ಪಡೆಯುವುದನ್ನು ವ್ಯಾಪಕಗೊಳಿಸಿದ್ದಾರೆ. ಕೋವಿಡ್‌-19 ಎರಡನೇ ಅಲೆ ನಿಯಂತ್ರಣ ಕ್ರಮಗಳ ಜಾರಿಯು ಜನವರಿ 1 ರಿಂದ ಆರಂಭವಾಗಿದ್ದು, ಮೇ 10 ರವರೆಗೂ ಒಟ್ಟು 4,322 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೇ 10 ರಂದು ಒಂದೇ ದಿನ ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರ ವಿರುದ್ಧ 699 ಪ್ರಕರಣಗಳು , ಸಾಮಾಜಿಕ …

Read More »

ವಾಹನ ಬಳಕೆ ನಿರ್ಬಂಧ: ಪೊಲೀಸರ ದಬ್ಬಾಳಿಕೆ: ದಲಿತ ಸಂಘರ್ಷ ಸಮಿತಿ ಆರೋಪ

ಬೆಂಗಳೂರು: ಕೋವಿಡ್ ಲಾಕ್‌ಡೌನ್ ನೆಪದಲ್ಲಿ ನಾಗರಿಕರ ವಾಹನ ಬಳಕೆಗೆ ಪೊಲೀಸರು ನಿರ್ಬಂಧಿಸುತ್ತಿದ್ದು, ನಾಗರಿಕರ ಮೇಲೆ ಪೊಲೀಸರು ನಡೆಸುತ್ತಿರುವ ದಬ್ಬಾಳಿಕೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಆರೋಪಿಸಿದ್ದಾರೆ. ವಾಹನ ಬಳಸದೆ ನಡೆದುಕೊಂಡೇ ಅಗತ್ಯ ವಸ್ತುಗಳ ಖರೀದಿಗೆ ಹೋಗುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಕೃಷಿ ಚಟುವಟಿಕೆ ಅವಕಾಶ ಇದ್ದರೂ, ಜಮೀನಿಗೆ ತೆರಳಲು ರೈತರು ಪರದಾಡಬೇಕಾಗಿದೆ. ಕೃಷಿ ಇಲಾಖೆಯಿಂದ ಪಾಸ್ ಪಡೆದುಕೊಂಡಿದ್ದರೂ ವಾಹನದಲ್ಲಿ ಹೋಗಲು ಅವಕಾಶ …

Read More »

ಕೋವಿಡ್-19 ಆನ್​ ಡ್ಯೂಟಿ ಸೌಲಭ್ಯ ದುರ್ಬಳಕೆ; ಆಚಾರ್ಯರಿಂದ ಕಾರು ಸೀಜ್‌

ವಿಜಯಪುರ: ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿಗೊಳಿಸಿ ಪೊಲೀಸರು ಎಲ್ಲೆಡೆ ನಾಕಾ ಬಂದಿ ಹಾಕಿ ಕಾವಲು ಕಾಯುತ್ತಿದ್ದಾರೆ. ಇಷ್ಟಾಗಿಯೂ ಕೆಲವು ಮಂದಿ ಕಾನೂನು ಹಾಗೂ ಕಟ್ಟುನಿಟ್ಟು ನಿಯಮಗಳನ್ನು ತಪ್ಪಿಸಿ ಓಡಾಡಲು ಪ್ರಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆಗಳು ಕೇಳಿಬರುತ್ತಿವೆ. ಇಂತಹದ್ದೇ ಮತ್ತೊಂದು ವಿಜಯಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಅರ್ಜೆಂಟ್ ಕೋವಿಡ್-19 ಆನ್​ ಡ್ಯೂಟಿ’ ಎಂದು ಕಾರಿಗೆ ಬೋರ್ಡ್ ಹಾಕಿಕೊಂಡು ಅರ್ಚಕರನ್ನು ಕರೆದೊಯ್ಯುತ್ತಿದ್ದ ಕಾರು ಕಂಡುಬಂದಿದ್ದು, ಅದನ್ನು …

Read More »

ಕರ್ನಾಟಕಕ್ಕೆ ಆಕ್ಸಿಜನ್ ನೆರವು ನೀಡಿದ ಇಸ್ರೇಲ್

ಬೆಂಗಳೂರು: ಕೊರೊನಾದಿಂದ ಬಳಲುತ್ತಿರುವ ಕರ್ನಾಟಕಕ್ಕೆ ಇಸ್ರೇಲ್ ದೇಶದಿಂದ ಇಂದು ರಾಜ್ಯಕ್ಕೆ 2 ಆಕ್ಸಿಜನ್ ಜನರೇಟರ್‌ಗಳನ್ನು ನೀಡುವ ಮೂಲಕವ ನೆರವು ನೀಡಿದೆ. ಇಂಡಿಯಾಕ್ಕೆ ಸಾಕಷ್ಟು ಬೆಂಬಲವನ್ನು ನೀಡಬಲ್ಲವು ಎಂದು ಹೆಮ್ಮೆಪಡುತ್ತವೆ. ಆಕ್ಸಿಜನ್ ಜನರೇಟರ್‌ಗಳನ್ನು ನಾವು ಕರ್ನಾಟಕಕ್ಕೆ ನೀಡುತ್ತೇವೆ. 100 ಕ್ಕಿಂತ ಹೆಚ್ಚು ರೋಗಿಗಳಿಗೆ ಸಾಕಾಗುಷ್ಟು ಆಕ್ಸಿಜನ್ ಉತ್ಪಾದಿಸುತ್ತೇವೆ ಎಂದು ಇಸ್ರೇಲ್ ರಾಯಭಾರಿ ಮಾಹಿತಿ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಇಸ್ರೇಲ್ ಆಕ್ಸಿಜನ್ ಸಿಲಿಂಡರ್‌ಗಳನ್ನು ರಾಜ್ಯಕ್ಕೆ ಕಳುಹಸುತ್ತಿರುವುದಕ್ಕೆ ಧನ್ಯವಾದಗಳು. ಈ ಆಕ್ಸಿಜನ್ ಸಿಲಿಂಡರ್‌ಗಳಿಂದಾಗಿ ರಾಜ್ಯದಲ್ಲಿ …

Read More »

ನಾಲಾಯಕ್ ಇಡು ಫೋನ್ ದೊಡ್ಡ ಕಿಸಾಮತಿ ಮಾಡ್ತಿ : ಸಿದ್ದು ಸವದಿ

ಬಾಗಲಕೋಟೆ: ಕೊರೊನಾದಿಂದ ಸಹೋದರನನ್ನು ಕಳೆದುಕೊಂಡ ವ್ಯಕ್ತಿ ಶಾಸಕರಿಗೆ ಕರೆ ಮಾಡಿ ಆಕ್ಸಿಜನ್ ವ್ಯವಸ್ಥೆ ಮಾಡಬೇಕು, ಸರ್ಕಾರಿ ಆಸ್ಪತ್ರೆಯ ಮುಂದೆ ಕೂರಬೇಕು ಹೇಳಿದ್ದಕ್ಕೆ ನಾಲಾಯಕ್ ಇಡು ಫೋನ್ ಎಂದು ತೆರದಾಳ ಶಾಸಕ ಸಿದ್ದು ಸವದಿ ಉದ್ದಟತನದ ಮಾತುಗಳನ್ನಾಡಿದ್ದಾರೆ. ಸಂಜಯ್ ದೊಂಡಿಬಾಗ ಗಾಯಕವಾಡ(41) ಕೊರೊನಾ ದಿಂದ ಶನಿವಾರ ಸಾವನ್ನಪ್ಪಿದ್ದಾರೆ. ಇವರು ರಬಕವಿಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮದ ನಿವಾಸಿಯಾಗಿದ್ದಾರೆ. ಆಕ್ಸಿಜನ್ ಸಿಗದೇ ಸಂಜಯ್ ಸಾವನ್ನಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಂಜಯ್ ಅವರನ್ನು ಉಳಿಸಿಕೊಳ್ಳಲು ಕುಟುಂಬದವರು ಬಾಗಲಕೋಟೆ …

Read More »

ಧಾರವಾಡದ 240 ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ

ಹುಬ್ಬಳ್ಳಿ: ಜಿಲ್ಲೆಯ ಪತ್ರಕರ್ತರ ಭವನದಲ್ಲಿ ಇಂದು 249 ಮಾಧ್ಯಮ ಪ್ರತಿನಿಧಿಗಳು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಅನುಮತಿಸಿದೆ. ಈ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‍ರವರ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 240 ಮಾಧ್ಯಮ ಪ್ರತಿನಿಧಿಗಳು ಲಸಿಕೆಯನ್ನು ಸ್ವೀಕರಿಸಿದ್ದಾರೆ. …

Read More »

ಪೊಲೀಸರು ಅನಗತ್ಯ ಬಲ ಪ್ರಯೋಗ ಮಾಡಬಾರದು: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಪೊಲೀಸರು ಅನಗತ್ಯ ಬಲಪ್ರಯೋಗ ಮಾಡುವುದು ಬೇಡವೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಜ್ಯದಲ್ಲಿ ಲಾಕ್ ಡೌನ್ ಮೊದಲ ದಿನ ಪೊಲೀಸರು ನಡೆಸಿದ ದೌರ್ಜನ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಹೈಕೋರ್ಟ್ ಅನಗತ್ಯ ಬಲಪ್ರಯೋಗ ಮಾಡುವುದು ಬೇಡವೆಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಕೋವಿಡ್ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ …

Read More »

ಕೊರೊನಾ ಸೋಂಕಿತೆ ಶವವನ್ನ ನಡುಬೀದಿಯಲ್ಲಿ ಬಿಟ್ಟ ಆರೋಗ್ಯ ಸಿಬ್ಬಂದಿ..!

ಕೋವಿಡ್​ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವವನ್ನ ಆರೋಗ್ಯ ಸಿಬ್ಬಂದಿ ಮರದಡಿಯಲ್ಲೇ ಬಿಟ್ಟು ಹೋದ ಅಮಾನವೀಯ ಘಟನೆ ತುಮಕೂರು ಜಿಲ್ಲೆ ಪಾವಗಡದ ಮರಡಿಪಾಳ್ಯದಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಕೋವಿಡ್​ ಸೋಂಕಿಗೆ ಒಳಗಾಗಿದ್ದ ಮಹಿಳೆಯನ್ನ ಪಾವಗಡದ ಕ್ವಾರಂಟೈನ್ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಮಹಿಳೆ ಕ್ವಾರಂಟೈನ್​ ಕೇಂದ್ರದಲ್ಲೇ ಸಾವನ್ನಪ್ಪಿದ್ದರು. ಮಹಿಳೆಯ ಮೃತದೇಹವನ್ನ ತೆಗೆದುಕೊಂಡು ಹೋಗಿ ಕೊರೊನಾ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ಮಾಡೋದು ಬಿಟ್ಟು ಆರೋಗ್ಯ ಸಿಬ್ಬಂದಿ ಸೋಂಕಿತೆಯ …

Read More »

ಬೆಳಗಾವಿಯಲ್ಲಿ  ಶಿವಸೇನೆ – ಎಂಇಎಸ್ ಇದೀಗ ಕೊರೋನಾ ಸೋಂಕಿತರಿಗಾಗಿ ಆಕ್ಸಿಜನ್ ಪೂರೈಕೆ ಆರಂಭ

ಬೆಳಗಾವಿ – ಬೆಳಗಾವಿಯಲ್ಲಿ  ಶಿವಸೇನೆ – ಎಂಇಎಸ್ ಇದೀಗ ಮರಾಠಾ ಭಾಷಿಕ ಕೊರೋನಾ ಸೋಂಕಿತರಿಗಾಗಿ ಆಕ್ಸಿಜನ್ ಪೂರೈಕೆ ಆರಂಭಿಸಿದೆ. ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ ಏಕನಾಥ ಶಿಂಧೆ ಬೆಳಗಾವಿ ಮರಾಠಿಗರಿಗಾಗಿ 2 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಪೂರೈಸಿದ್ದು, ಇನ್ನೂ 8 ಪೂರೈಸುವುದಾಗಿ ತಿಳಿಸಿದ್ದಾರೆ ಎಂದು ಎಂಇಎಸ್ ಮುಖಂಡ ಶುಭಂ ಶೇಳಕೆ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲಾಡಳಿತ ಇಲ್ಲಿಯ ಎನ್ ಜಿ ಓ ಗಳಿಗೆ  ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆಯಾಗಿದೆ. ಹಾಗಾಗಿ ಮಹಾರಾಷ್ಟ್ರದ …

Read More »

ಆಸ್ಪತ್ರೆ ಮುಂದೆ ಹೋಗಿ ವ್ಯಾಕ್ಸಿನ್ ಗಾಗಿ ಬೊಬ್ಬೆಯ ಹೊಡೆಯಬೇಡಿ:B.S.Y..

ಬೆಂಗಳೂರು: ಆಸ್ಪತ್ರೆ ಮುಂದೆ ಹೋಗಿ ವ್ಯಾಕ್ಸಿನ್ ಗಾಗಿ ಬೊಬ್ಬೆಯ ಹೊಡೆಯಬೇಡಿ. ವ್ಯಾಕ್ಸಿನ್ ಬರ್ತಾ ಇದ್ದಂತೆ ಎಲ್ಲರಿಗೂ ಕೊಡ್ತೇವೆ, ಸಹಕರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಕ್ಸಿನ್ ಬಗ್ಗೆ ಸಮಸ್ಯೆ ಇಲ್ಲ. ಗೊಂದಲ ಬೇಡ, ಆತಂಕ ಬೇಡ ಎಂದು ಮನವಿ ಮಾಡಿಕೊಂಡರು. ವಾರ್ ರೂಂಗಳಿಗೆ ಭೇಟಿ ಕೊಡ್ತೀನಿ. ಕೊರೊನಾ ಸ್ವಲ್ಪ ಕಂಟ್ರೋಲ್ ಗೆ ಬರ್ತಿದೆ, ಜನ ಸಹಕಾರ ಕೊಟ್ಟರೆ ಅನುಕೂಲ. ದೇಶದಲ್ಲಿ ಕೊರೊನಾ ಹೆಚ್ಚಳ …

Read More »