ಮುಂಬೈ (ಜೂನ್ 14): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೀಡಾಗಿ ಇಂದಿಗೆ ಒಂದು ವರ್ಷವಾಗಿದೆ. ಜೂನ್ 14,2020 ರಂದು ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಳೆದ ವರ್ಷ ಬಿಹಾರ ಪೊಲೀಸರು ದಾಖಲಿಸಿದ್ದ ಕೊಲೆ ಪ್ರಕರಣವನ್ನು ವಹಿಸಿಕೊಂಡ ಸಿಬಿಐ ಇದುವರೆಗೆ ತನ್ನ ತನಿಖೆಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಹಾರ ಪೊಲೀಸರು ಪ್ರಕರಣವನ್ನು ವಹಿಸಿಕೊಂಡ ಕೂಡಲೇ ಸಿಬಿಐ ಹಲವಾರು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದರೂ, ಈ …
Read More »5 ಗಂಟೆ ವಿಚಾರಣೆ ಎದುರಿಸಿದ ನರೇಶ್; ಇಂದು ಏನೆಲ್ಲಾ ನಡೀತು?
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಬಹಿರಂಗ ಪ್ರಕರಣದಲ್ಲಿ ಆರೋಪಿಯಾಗಿರುವ ನರೇಶ್ ಗೌಡನ ವಿಚಾರಣೆ ಇಂದು ಕೂಡ ನಡೆಯಿತು. ಐದು ಗಂಟೆಗಳ ಕಾಲ ನಡೆದ ಇಂದಿನ ಎಸ್‌ಐಟಿ ವಿಚಾರಣೆ ಅಂತ್ಯವಾಗಿದೆ. ಅದರಂತೆ 2ನೇ ದಿನದ ವಿಚಾರಣೆ ಮುಗಿಸಿ ವಕೀಲರೊಂದಿಗೆ ನರೇಶ್ ಗೌಡ ತೆರಳಿದ್ದಾರೆ. ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ನನ್ನ ವಿಚಾರಣೆಗೆ ಕರೆಯಲಾಗಿತ್ತು. ಅಗತ್ಯವಿದ್ದಲ್ಲಿ ವಿಚಾರಣೆಗೆ ಕರೆಯುವುದಾಗಿ ಹೇಳಿ ಎಸ್‌ಐಟಿ ಅಧಿಕಾರಿಗಳ ತಂಡ ವಾಪಸ್ …
Read More »ಉಡುಪಿ: ಜಿಲ್ಲೆಯ ತೆಂಕಪೇಟೆಯ ನಿವಾಸಿಯೊಬ್ಬರ ಮೈಗೆ ಕಬ್ಬಿಣ ಸ್ಟೀಲ್ ಇಂಡೋಲಿಯಂ ವಸ್ತುಗಳು ಅಂಟುತ್ತದೆ.
ಉಡುಪಿ: ಜಿಲ್ಲೆಯ ತೆಂಕಪೇಟೆಯ ನಿವಾಸಿಯೊಬ್ಬರ ಮೈಗೆ ಕಬ್ಬಿಣ ಸ್ಟೀಲ್ ಇಂಡೋಲಿಯಂ ವಸ್ತುಗಳು ಅಂಟುತ್ತದೆ. ಇದೊಂದು ಕೌತುಕ.. ವಿಸ್ಮಯ.. ಮೈಯ್ಯಲ್ಲಿ ಅಯಸ್ಕಾಂತೀಯ ಶಕ್ತಿಯಿದೆ. ಹೀಗಂತ ಒಂದು ವೀಡಿಯೋ ಉಡುಪಿಯಲ್ಲಿ ಶೇರ್ ಆಗುತ್ತಿದೆ. ವೈರಲ್ ಆಗುತ್ತಿರುವ ವೀಡಿಯೋದಲ್ಲಿರುವ ವ್ಯಕ್ತಿ ರಾಮದಾಸ್ ಶೆಟ್ ಎಂದು ಗುರುತಿಸಲಾಗಿದ್ದು, ಉಡುಪಿಯ ತೆಂಕಪೇಟೆ ಪೂರ್ಣಪ್ರಜ್ಞ ಕಾಲೇಜು ಸಮೀಪದವರಾಗಿದ್ದಾರೆ. ಟಿವಿಯಲ್ಲಿ ಈ ಹಿಂದೆ ಪ್ರಸಾರವಾದ ವೀಡಿಯೋಗಳನ್ನು ನೋಡಿ, ಮನೆಯಲ್ಲೇ ಇದ್ದ ರಾಮದಾಸ್ ತನ್ನನ್ನು ಪ್ರಯೋಗಕ್ಕೆ ಒಳಪಡಿಸಿದ್ದಾರೆ. ಈ ವೇಳೆ ಕೆಲವೊಂದು …
Read More »ಬಳ್ಳಾರಿ: ಜಿಲ್ಲೆಯಲ್ಲಿ ರೈತರ ಮೇಲೆ ಲಾಠಿ ಪ್ರಹಾರ
ಬಳ್ಳಾರಿ: ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಬೀಜ ಖರೀದಿಗೆಂದು ಬಂದ ರೈತರು ನೂಕು-ನುಗ್ಗಲು ನಡೆಸಿದ್ದಾರೆ. ಈ ವೇಳೆ ರೈತರ ಮೇಲೆ ಪೊಲೀಸರು ಲಾಠಿ ಬೀಸಿರುವ ಘಟನೆ ನಡೆದಿದೆ. ಜಿಲ್ಲೆಯ ತಹಶೀಲ್ದಾರ ಕಚೇರಿ ಆವರಣದಲ್ಲಿರೋ ರೈತ ಸಂಪರ್ಕ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ರೈತರಿಗೆ ಸಮರ್ಪಕವಾಗಿ ಬೀಜ ನೀಡ್ತಿಲ್ಲ ಅಂತಾ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಇಂದು ಮೆಣಸಿನಕಾಯಿ ಬೀಜ ಖರೀದಿಗೆ ಬಂದಿದ್ದ ರೈತರು ಅಲ್ಲಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಈ …
Read More »ಸ್ಟಾರ್ ಪೊಲೀಸರ ಚೇಸ್ಟೇ ಜಾಸ್ತಿಯಾಗಿದೆ : ಡಿ.ಕೆ.ಶಿವಕುಮಾರ್
ಕೆಆರ್ ಪುರ, ಜೂ.14 : ಸ್ಟಾರ್ ಪೊಲೀಸರ ಚೇಸ್ಟೇ ಜಾಸ್ತಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪೊಲೀಸರ ವಿರುದ್ಧ ಹರಿಹಾಯ್ದರು. ರಾಮಮೂರ್ತಿನಗರ ವಾರ್ಡ್ ನ ಕಲ್ಕೆರೆಯಲ್ಲಿ ರೇಷನ್ ಕಿಟ್ ಗಳನ್ನು ವಿತರಸಿ ಅವರು ಮಾತನಾಡಿದರು. ಒಳ್ಳೆಯ ಪೊಲೀಸರು ಇದ್ದಾರೆ ಕಾನ್ಸ್ ಟೇಬಲ್ ಗಳು ಪಾಪ ಏನೂ ಮಾಡೋದಿಲ್ಲ ಆದರೆ ಸ್ಟಾರ್ ಗಳನ್ನು ಹಾಕಿಕೊಂಡವರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುತ್ತಾರೆ ಎಂದು ಆರೋಪಿಸಿದರು. ಜನರ ಕಷ್ಟಗಳಿಗೆ ಸ್ಪಂದನೆ ಮಾಡುವುದಕ್ಕಾಗಿಯೇ ಕಾಂಗ್ರೆಸ್ ಪಕ್ಷದ ವತಿಯಿಂದ …
Read More »ಕುರ್ಚಿ ದಾಹ ಬಿಡ್ರಿ, ಸರಿಯಾಗಿ ಕೆಲಸ ಮಾಡಿ: ಎಂ.ಬಿ.ಪಾಟೀಲ್ ಕಿಡಿ
ಹಾವೇರಿ: ಕೊರೊನಾ ಸಂಕಷ್ಟದ ಸಮಯದಲ್ಲಿ ಕೊರೊನಾ ನಿರ್ವಹಣೆ ಬಿಟ್ಟು ಅಧಿಕಾರ ದಾಹ ಪ್ರದರ್ಶನ ಮಾಡುತ್ತಿದ್ದಾರೆ. ಕುರ್ಚಿ ದಾಹ ಬಿಡ್ರಿ, ಸರಿಯಾಗಿ ಕೆಲಸ ಮಾಡಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಒಬ್ಬರಿಗೊಬ್ಬರು ತಾಳ ಮೇಳ ಇಲ್ಲ. ಸಿಎಂ ಬದಲಾವಣೆ ಮಾಡಬೇಕು ಅಂತಾರೆ. ಪರಸ್ಪರ ಸಹಕಾರವಿಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸೋ ಕೆಲಸ ಮಾಡಬೇಕು ಎಂದು ಎಂ.ಬಿ.ಪಾಟೀಲ್ ಅವರು ಸರ್ಕಾರದ ವಿರುದ್ಧ …
Read More »38 ಹೆಂಡ್ತಿಯರ ಮುದ್ದಿನ ಗಂಡ, 89 ಮಕ್ಕಳ ತಂದೆ ಇನ್ನಿಲ್ಲ! ಇವರ ವೈವಾಹಿಕ ಬದುಕೇ ಕುತೂಹಲ
ಮಿಜೋರಾಂ: ಬರೋಬ್ಬರಿ 38 ಮಹಿಳೆಯರನ್ನು ಮದುವೆ ಆಗಿದ್ದ, 89 ಮಕ್ಕಳಿಗೆ ಜನ್ಮ ನೀಡಿದ್ದ, 33 ಮೊಮ್ಮಕ್ಕಳ ಅಜ್ಜ ಜಿಯೋನಾ ಚನಾ ಭಾನುವಾರ ನಿಧನರಾದರು. ಜಗತ್ತಿನ ಅತಿದೊಡ್ಡ ಕುಟುಂಬದ ವಾರಸ್ದಾರ ಎಂದೇ ಗುರುತಿಸಿಕೊಂಡಿದ್ದ ಜಿಯೋನಾ ಚನಾರ ವೈವಾಹಿಕ ಬದುಕೇ ಎಲ್ಲರಿಗೂ ಕುತೂಹಲ ಮೂಡಿಸಿತ್ತು. ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿ 181 ಸದಸ್ಯರನ್ನ ಹೊಂದಿತ್ತು ಜಿಯೋನಾ ಕುಟುಂಬ. ಮಿಜೋರಾಂನ ಬಕ್ತಾಂಗ್ನಲ್ಲಿ ಜಿಯಾನ್ರ ನಾಲ್ಕಂತಸ್ತಿನ ಆಕರ್ಷಕ ಬಂಗಲೆ ಇದೆ. ಅಲ್ಲಿಯೇ ಜಿಯೋನಾ ವಾಸವಿದ್ದರು. ಇದು …
Read More »ಎಂಟು ಮಕ್ಕಳ ತಂದೆಗೆ ನೆರೆಮನೆಯಾಕೆ ಮೇಲೆ ಕಣ್ಣು, ತೋಟದಲ್ಲಿ ಕೈ ಹಿಡಿದು ಎಳೆದು ಹೆಣವಾದ
ಬಾಗಲಕೋಟೆ: ರಾತ್ರಿ ಪ್ರಶಾಂತವಾಗಿದ್ದ ಬಾದಾಮಿ ತಾಲೂಕಿನ ನೆರನೂರು ಗ್ರಾಮ ಬೆಳಗ್ಗೆ ಅಷ್ಟ್ರಲ್ಲಿ ದಂಗಾಗಿತ್ತು. ಪೊಲೀಸರ ಎಂಟ್ರಿ ಆಗಿತ್ತು. ಗ್ರಾಮಸ್ಥರೆಲ್ಲಾ ಒಂದ್ಕಡೆ ಸೇರಿ ಆತಂಕದಿಂದ ನೋಡ್ತಿದ್ರು. ಅಷ್ಟಕ್ಕೂ ನೆರನೂರು ಗ್ರಾಮದಲ್ಲಿ ಇಂತಹ ಸನ್ನಿವೇಶ ಸೃಷ್ಟಿಯಾಗಲು ಕಾರಣ ಇದೇ ಊರಿನ ಲಕ್ಷ್ಮಣ. ಲಕ್ಷ್ಮಣನಿಗೆ ರೇಣುಕಾ ಅನ್ನೋರ ಜತೆ ಮದ್ವೆಯಾಗಿತ್ತು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಏಳು ಹೆಣ್ಣು ಮಕ್ಕಳು, ಒಂದು ಗಂಡು ಮಗುವಿದೆ. ಆದ್ರೂ ಇದೇ ಊರಿನ ಮತ್ತೊಬ್ಬಳು ರೇಣುಕಾ ಅನ್ನೋಳ ಜೊತೆ ಅನೈತಿಕ …
Read More »ಹುಬ್ಬಳ್ಳಿಯ ಕಿಮ್ಸ್ನಲ್ಲಿ ಕೊರೊನಾ ಸೋಂಕಿತ ಆತ್ಮಹತ್ಯೆ
ಹುಬ್ಬಳ್ಳಿ: ಕೊರೊನಾದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ರಾಜ್ಯದಲ್ಲಿ ಸಾವು, ನೋವು ಹೆಚ್ಚಾಗುತ್ತಿದೆ. ಕೊರೊನಾ ಸೋಂಕು ತಗುಲುತ್ತಿದ್ದಂತೆ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹುಬ್ಬಳ್ಳಿಯ ಕಿಮ್ಸ್ನಲ್ಲಿ ಕೊರೊನಾ ಸೋಂಕಿತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿಮ್ಸ್ ಕೊವಿಡ್ ವಾಡ್೯ ನಂ.303ರ ಬಾತ್ರೂಮ್ನಲ್ಲಿ ಸೋಂಕಿತ ನೇಣಿಗೆ ಶರಣಾಗಿದ್ದಾರೆ. ಸೋಂಕಿತ ವ್ಯಕ್ತಿ ಕಳೆದ ಕೆಲ ದಿನಗಳಿಂದ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. …
Read More »ಸಗಟು ಹಣದುಬ್ಬರ ದಾಖಲೆ ಮಟ್ಟ ಶೇ.12.94ಕ್ಕೆ ಏರಿಕೆ
ನವದೆಹಲಿ: ಸಗಟು ಮಾರಾಟ ದರ ಆಧರಿಸಿದ ಹಣದುಬ್ಬರ ಸೂಚ್ಯಂಕವು (ಡಬ್ಲ್ಯುಪಿಐ) ಮತ್ತೆ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು, ಮೇ ತಿಂಗಳಿನಲ್ಲಿ ಶೇ.10.49ಕ್ಕೆ ತಲುಪಿದೆ. ಹಾಲಿ ಪರಿಸ್ಥಿತಿಗೆ ತಯಾರಾದ ಉತ್ಪನ್ನಗಳು ಹಾಗೂ ತೈಲ ಬೆಲೆಯಲ್ಲಿ ಆದ ಹೆಚ್ಚಳ ಹಣದುಬ್ಬರವೇ ಈ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷದ ಏಪ್ರಿಲ್ ನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 10.49ರಷ್ಟಿತ್ತು. ಹಿಂದಿನ ವರ್ಷದ ಮೇ ತಿಂಗಳಿನಲ್ಲಿ ಇದು ಶೇ (-)3.37ರಷ್ಟಾಗಿತ್ತು. ಸಗಟು …
Read More »