Breaking News

ಮೈಸೂರಲ್ಲಿ ದಸರಾ ಸಂಭ್ರಮ.. ರಾತ್ರಿ ಕಟ್ಟುನಿಟ್ಟಿನ ನೈಟ್ ಬೀಟ್​​ಗೆ DCP ಪಾಠ​..!

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಖಾಕಿ ಪಡೆ ಹೈ-ಅಲರ್ಟ್ ಆಗಿದೆ. ರಾತ್ರಿ ವೇಳೆ ಗಸ್ತು ಹೆಚ್ಚಿಸಿ, ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಮುಂದಾಗಿದೆ. ನಗರದಲ್ಲಿ ಕಟ್ಟುನಿಟ್ಟಿನ ನೈಟ್ ಬೀಟ್ ಕಾರ್ಯಾಚರಣೆ ನಡೆಯುತ್ತಿದ್ದು, ಸಾರ್ವಜನಿಕರಿಗೆ ಮೈಸೂರು ಪೊಲೀಸರು ಅಭಯ ನೀಡುತ್ತಿದ್ದಾರೆ. ಜೊತೆಗೆ ನೈಟ್ ಬೀಟ್ ಸಂಬಂಧ ವಿವಿಧ ಠಾಣಾ ಸಿಬ್ಬಂದಿಗೆ ಡಿಸಿಪಿ ಮಾರ್ಗದರ್ಶನ ನೀಡಿದ್ದಾರೆ. ಸಾರ್ವಜನಿಕವಾಗಿ ರಸ್ತೆಯಲ್ಲೇ ಸಿಬ್ಬಂದಿಗೆ ಮಾರ್ಗದರ್ಶನವನ್ನ ಡಿಸಿಪಿ ಗೀತಾಪ್ರಸನ್ನ ನೀಡಿದ್ದಾರೆ. ರಾತ್ರಿ …

Read More »

ಮಹಾರಾಷ್ಟ್ರದಲ್ಲಿ ಮತ್ತೆ ಮಹಾ ಮಳೆ 13 ಸಾವು; 560ಕ್ಕೂ ಹೆಚ್ಚು ಮಂದಿಯ ರಕ್ಷಣೆ

ಮುಂಬೈ: ಗುಲಾಬ್​ ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರದ ಹಲವೆಡೆ ಸುರಿದ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಈವರೆಗೆ ಒಟ್ಟು 13 ಜನ ಸಾವನ್ನಪ್ಪಿದ್ದಾರೆ. ಮರಾಠವಾಡ, ಮಹಾರಾಷ್ಟ್ರದ ಉತ್ತರ ಭಾಗಗಳಲ್ಲಿ ಮಳೆಗೆ ಅಪಾರ ಹಾನಿ ಉಂಟಾಗಿದೆ. ಎನ್​ಡಿಆರ್​ಎಫ್ ಪಡೆ ಸಂಕಷ್ಟದಲ್ಲಿ ಸಿಲುಕಿದ್ದ 560 ಮಂದಿಯನ್ನ ರಕ್ಷಣೆ ಮಾಡಿದೆ. 200ಕ್ಕೂ ಹೆಚ್ಚು ರಾಸುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಕೆಲವು ಮನೆಗಳಿಗೂ ಹಾನಿಯಾಗಿದೆ. ಭಾರೀ ಮಳೆ …

Read More »

ಯಡಿಯೂರಪ್ಪ ಆಪ್ತರಿಗೆ ಆಯಕಟ್ಟಿನ ಸ್ಥಾನಮಾನ: ಮುಖ್ಯಮಂತ್ರಿ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿಗಳಾಗಿ ಇಬ್ಬರ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಬ್ಬ ಮಾಜಿ ಶಾಸಕ ಮತ್ತು ಒಬ್ಬ ಹಾಲಿ ಶಾಸಕರನ್ನು ತಮ್ಮ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಿಕೊಂಡಿದ್ದಾರೆ. ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತು ಶೃಂಗೇರಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದಾರೆ. ಇಬ್ಬರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಎಂ.ಪಿ. ರೇಣುಕಾಚಾರ್ಯ ಮತ್ತು ಡಿ.ಎನ್. ಜೀವರಾಜ್ ಅವರು ಈ ಹಿಂದೆ ಬಿ ಎಸ್‌ ಯಡಿಯೂರಪ್ಪ …

Read More »

ತಾಲಿಬಾನ್ ಹೇಳಿಕೆ ನೀಡಿದ ಸಿದ್ದರಾಮಯ್ಯ ಮಾನಸಿಕತೆ ಬಗ್ಗೆ ನೋವಿದೆ- ಕೋಟ ಶ್ರೀನಿವಾಸ ಪೂಜಾರಿ

ಬೀದರ್: ರಾಷ್ಟ್ರ ಭಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾನಸಿಕತೆ ಬಗ್ಗೆ ನೋವಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರು ಆರ್‌ಎಸ್‌ಎಸ್‌ನ್ನು ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಸಿದ್ದರಾಮಯ್ಯನವರು ಕಾಂಗ್ರೆಸ್‌ನ್ನು ಪರಂಪರೆಯನ್ನು ಒಪ್ಪಿಕೊಂಡವರು ಮತ್ತು ನೆಹರು ಅವರನ್ನು ಗೌರವಿಸುತ್ತಾರೆ ಎಂದಾದರೆ ಆರ್‌ಎಸ್‌ಎಸ್‌ನ್ನು …

Read More »

ಲೇ ನೀವೆಲ್ಲ ಹೀರೋಗಳಾ…ಹಿಂದೂಗಳೇ ಎಲ್ಲೋಗಿದ್ದೀರಾ? ವಿಜಯಲಕ್ಷ್ಮಿ ಪರಿಸ್ಥಿತಿ ಕಂಡು ವಕೀಲ ಜಗದೀಶ್ ಗರಂ

ನಮ್ಮ ತಾಯಿ ಆರೋಗ್ಯ ಸರಿಯಿಲ್ಲ, ನಮ್ಮ ಅಕ್ಕನ ಆರೋಗ್ಯ ಸರಿಯಲ್ಲ, ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿ ಬೇಡುತ್ತಿದ್ದ ನಟಿ ವಿಜಯಲಕ್ಷ್ಮಿ ಅವರು ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. 75 ವರ್ಷದ ವಿಜಯಾ ಸುಂದರಂ ಅವರು ಸೆಪ್ಟಂಬರ್ 29ರಂದು ಕೊನೆಯುಸಿರೆಳೆದರು. ವಿಜಯಲಕ್ಷ್ಮಿ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತಾಯಿಯನ್ನು ಕಳೆದುಕೊಂಡ ನಟಿ ವಿಜಯಲಕ್ಷ್ಮಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಇಂಥ ಕಷ್ಟದ ಪರಿಸ್ಥಿತಿಯಲ್ಲೂ, ಅಸಹಾಯಕ ಸ್ಥಿತಿಯಲ್ಲಿ ಕಣ್ಣೀರಿಡುತ್ತಿದ್ದ ಕುಳಿತ್ತಿದ್ದ ಹೆಣ್ಣುಮಗಳ ಸಹಾಯಕ್ಕೆ ಯಾರು …

Read More »

2022ರ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಲಿದೆ: ನಡ್ಡಾ ವಿಶ್ವಾಸ

ಡೆಹ್ರಾಡೂನ್‌: ಉತ್ತರಾಖಂಡ ರಾಜ್ಯದಲ್ಲಿ ‘ಡಬಲ್‌ ಎಂಜಿನ್‌’ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೊಂದಿಗೆ 2022ರ ವಿಧಾನಸಭಾ ಚುನಾವವಣೆಯಲ್ಲಿ ಬಿಜೆಪಿ ಪಕ್ಷ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರತಿಪಾದಿಸಿದರು. ಬುಧವಾರ ವರ್ಚುವಲ್‌ ಸಭೆಯಲ್ಲಿ ಪಕ್ಷದ ಶಕ್ತಿ ಕೇಂದ್ರದ ಸಂಚಾಲಕರು ಮತ್ತು ಉಸ್ತುವಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪಕ್ಷದ ಚುನಾವಣಾ ಕಾರ್ಯಗಳಲ್ಲಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ನಿರ್ಣಾಯಕ ಪಾತ್ರವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಳಮಟ್ಟದ ಕಾರ್ಯಕರ್ತರನ್ನು ಬಲವರ್ಧನೆಗೊಳಿಸುವಂತೆ ಸೂಚಿಸಿದರು. ಬೂತ್ …

Read More »

ಗೋವಾದಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ: ಶಿವಸೇನೆ

ಪಣಜಿ: ಗೋವಾದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 22 ಕ್ಷೇತ್ರಗಳಲ್ಲಿ ಶಿವಸೇನೆಯು ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಫರ್ಧಿಸಲಿದೆ ಎಂದು ಸಂಜಯ್ ರಾವುತ್ ಬುಧವಾರ ಹೇಳಿಕೆ ನೀಡಿದ್ದಾರೆ. ಗೋವಾದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಿವಸೇನೆಯ ಪ್ರಭಾರಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವ ರನ್ನು ಗೋವಾ ಶಿವಸೇನೆಯ ಪ್ರಮುಖ ಜಿತೇಶ್ ಕಾಮತ್ ಹಾಗೂ ಸುಭಾಷ ಕೇರಕರ್ ರವರು ಸ್ವಾಗತಿಸಿದರು . ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಸಂಜಯ್ ರಾವುತ್, …

Read More »

ಕಿಚ್ಚನ ಕೋಟಿಗೊಬ್ಬ-3ಗೆ ಪೈರಸಿ ಭಯ..!

ಬೆಂಗಳೂರು: ಬಿಡುಗಡೆಗೂ ಮುನ್ನವೇ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾಗೆ ಪೈರಸಿ ಕಾಟ ಶುರುವಾಗಿದೆ. ಸಿನಿಮಾವನ್ನು ಬಿಡುಗಡೆಗೂ ಮುನ್ನ ಪೈರಸಿ ಮಾಡೋದಾಗಿ ಕೋಟಿಗೊಬ್ಬ 3 ಸಿನಿಮಾ ನಿರ್ಮಾಪಕ ಸೂರಪ್ಪಬಾಬುಗೆ ಟೆಲಿಗ್ರಾಂನಲ್ಲಿ ಬೆದರಿಕೆಗಳು ಬಂದಿವೆಯಂತೆ. ಈ ಹಿನ್ನೆಲೆ ಸೂರಪ್ಪ ಬಾಬು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪತ್ರ ಬರೆದಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ಅಕ್ಟೋಬರ್ 1 ರಂದು ರಿಲೀಸ್ ಆಗಲಿದೆ. ಆದ್ರೆ ಅದಕ್ಕೂ ಮುನ್ನ ಇದೀಗ ಪೈರಸಿಯ ಬೆದರಿಕೆ ಬಂದಿದ್ದು ಮುನ್ನೆಚ್ಚರಿಕೆ …

Read More »

ಹಾನಗಲ್ ಬೈಎಲೆಕ್ಷನ್: ಬಿಜೆಪಿಯಿಂದ BSY-ಬೊಮ್ಮಾಯಿ; ಕಾಂಗ್ರೆಸ್​ನ ಜೋಡೆತ್ತು ಯಾರು ?

ಹಾವೇರಿ: ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳಿಗೆ ನಡೆಯಬೇಕಾಗಿದ್ದ ಉಪಚುನಾವಣೆಯನ್ನ ಅಕ್ಟೋಬರ್ 30 ರಂದು ನಡೆಸಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ತಂತ್ರ-ಪ್ರತಿತಂತ್ರದ ಬಗ್ಗೆ ಚರ್ಚೆಗಳು ಶುರುವಾಗಿದೆ. ಜೋಡೆತ್ತುಗಳ ಹೋರಾಟ ಮೂಲಗಳ ಪ್ರಕಾರ ಹಾನಗಲ್​ನಲ್ಲಿ ಜೋಡೆತ್ತುಗಳ ಪಾಲಿಟಿಕ್ಸ್ ಜೋರಾಗಲಿದ್ಯಂತೆ. ಚುನಾವಣಾ ಅಖಾಡದಲ್ಲಿ ತೊಡೆತಟ್ಟಲು ಘಟಾನುಘಟಿ ನಾಯಕರು ಸಜ್ಜಾಗಿದ್ದಾರೆ ಎನ್ನಲಾಗಿದೆ. ಅದರಂತೆ ಬಿಜೆಪಿಯಿಂದ ಬಿಎಸ್​ವೈ ಮತ್ತು ಬಸವರಾಜ್ ಬೊಮ್ಮಾಯಿ ಹಾಗೂ ಕಾಂಗ್ರೆಸ್​ನಿಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ …

Read More »

ಕೋರ್ಟ್​ ಆವರಣದಲ್ಲೇ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪತಿ

ಬೆಳಗಾವಿ: ಕೋರ್ಟ್ ಆವರಣದಲ್ಲಿ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದಿವಾಣಿ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಬೈಲಹೊಂಗಲ ತಾಲೂಕಿನ ನನಗುಂಡಿಕೊಪ್ಪದ ನಿವೃತ್ತ ಸೈನಿಕ ಶಿವಪ್ಪ ಅಡಕಿ (35) ಪತ್ನಿ ಜಯಮಾಲಾ (33) ಮೇಲೆ ಹಲ್ಲೆ ಮಾಡಿದ್ದು, ಮಾರಕಾಸ್ತ್ರದಿಂದ ಪತ್ನಿಯ ತಲೆ ಹಾಗೂ ಕಾಲಿಗೆ ಕೊಚ್ಚಿದ ಕೊಲೆ ಮಾಡಲು ಯತ್ನಿಸಿದ್ದಾನೆ.     ಪತಿ-ಪತ್ನಿಯ ಕೌಟುಂಬಿಕ ಕಲಹದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. …

Read More »