ನವದೆಹಲಿ, ಅಕ್ಟೋಬರ್ 06: ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ದೆಹಲಿಯ ನಿವಾಸದಲ್ಲಿ ಮಂಗಳವಾರ ಭೇಟಿಯಾಗಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಹಾಗೂ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಯ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಭೆಯ ನಂತರ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ, “ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದೆ. ಕೇಂದ್ರ ಸರ್ಕಾರದ ಮೂರು …
Read More »“ಜಲಿಯನ್ ವಾಲಾಬಾಗ್’ ಪ್ರಸ್ತಾಪಿಸಲು ಪರದಾಟ! ಡಿಕೆಶಿ ಮಾತನಾಡಿದ್ದ ವಿಡಿಯೋ ವೈರಲ್!
ಬೆಂಗಳೂರು, ಅ. 05: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆಯನ್ನು ಕಾಂಗ್ರೆಸ್ ಪಕ್ಷ ಉಗ್ರವಾಗಿ ವಿರೋಧಿಸಿದೆ. ಘಟನೆ ಖಂಡಿಸಿ ಕಾಂಗ್ರೆಸ್ ನಾಯಕರು ದೇಶದಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ರೈತರ ಕುಟುಂಬಗಳಿಗೆ ಸಾಂತ್ವಾನ ಹೇಳಲು ಪಂಜಿನ ಮೆರವಣಿಗೆಯನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ. ಜೊತೆಗೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಕಾಂಗ್ರೆಸ್ ನಾಯಕರು ಮನವಿಯನ್ನೂ ಸಲ್ಲಿಸಿದ್ದಾರೆ. ಆ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದೆ ಎಂಬ …
Read More »ಹಾನಗಲ್, ಸಿಂದಗಿ ಉಪ ಚುನಾವಣ: ಶ್ರೀನಿವಾಸ ಮಾನೆ, ಮನಗೂಳಿಗೆ ಕಾಂಗ್ರೆಸ್ ಟಿಕೆಟ್
ನವದೆಹಲಿ: ರಾಜ್ಯದ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ನಡೆಯಲಿರುವ ಉಪ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ ಮಂಗಳವಾರ ಸಂಜೆ ಘೋಷಿಸಿದೆ. ಹಾನಗಲ್‌ನಿಂದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಸಿಂದಗಿಯಿಂದ ಅಶೋಕ ಮನಗೂಳಿ ಅವರಿಗೆ ಟಿಕೆಟ್ ನೀಡಲಾಗಿದೆ. ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರೇ ಪಕ್ಷದ ಅಭ್ಯರ್ಥಿ ಎಂದು ಈ ಮೊದಲೇ ಮೌಖಿಕವಾಗಿ ಘೋಷಿಸಲಾಗಿತ್ತಾದರೂ, ಇದೀಗ …
Read More »ಹೆಚ್‌ಡಿಡಿ, ಹೆಚ್‌ಡಿಕೆಗೆ ಕುರಿ ಉಡುಗೊರೆ ನೀಡಿದ ಕುರುಬ ಕಾರ್ಯಕರ್ತರು!
ರಾಮನಗರ: ಮೂರು ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಹೆಚ್.ಡಿ.ಕೋಟೆಯ ಕುರುಬ ಸಮುದಾಯದ ಜೆಡಿಎಸ್ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರಿಗೆ ಕುರಿಗಳ ಉಡುಗೊರೆ ನೀಡಿದ್ದಾರೆ. 7 ನೇ ದಿನದ ಜೆಡಿಎಸ್ ಕಾರ್ಯಾಗಾರದಲ್ಲಿ ದೇವೇಗೌಡರು ಭಾಗಿಯಾದ ವೇಳೆ ರಾಮನಗರ ಜಿಲ್ಲೆಯ ಬಿಡದಿಯ ತೋಟದ ಮನೆಯಲ್ಲಿ ಕಪ್ಪು ಕಂಬಳಿ ಹೊದಿಸಿದ 11 ಕುರಿಗಳನ್ನು ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿಗೆ ಉಡುಗೊರೆಯಾಗಿ ನೀಡಿದ್ದಾರೆ. ನೀಡಿದ ಕಾರ್ಯಕರ್ತರು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರಾಗಿದ್ದ ಇವರು ಮುಖಂಡ …
Read More »ರಾಜ್ಯ ಉಪಚುನಾವಣೆ; ಹಾನಗಲ್, ಸಿಂದಗಿಯತ್ತ ತಲೆ ಹಾಕದೆ ಶೆಟ್ಟರ್ ದೂರ ಉಳಿದಿದ್ಯಾಕೆ?
ಧಾರವಾಡ: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾವು ಜೋರಾಗಿದೆ. ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಉಪಚುನಾವಣೆ ಗೆಲ್ಲಲು ಬಿಜೆಪಿ ಭಾರೀ ಸರ್ಕಸ್ ನಡೆಸುತ್ತಿದ್ದಾರೆ. ಹೀಗಿರುವಾಗಲೇ ತೆರೆಮರೆಯಲ್ಲೇ ಉಪಚುನಾವಣೆಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ರಾಜ್ಯ ಬಿಜೆಪಿ ಯಾವುದೇ ಜವಾಬ್ದಾರಿ ನೀಡಿಲ್ಲ. ಜಗದೀಶ್ ಶೆಟ್ಟರ್ ತವರು ಜಿಲ್ಲೆ ಧಾರವಾಡ ಪಕ್ಕದ ಜಿಲ್ಲೆಗಳಲ್ಲೇ ಉಪಚುನಾವಣೆ ಎದುರಾಗುತ್ತಿದೆ. ಹೀಗಿದ್ದರೂ ಶೆಟ್ಟರ್ಗೆ ಬಿಜೆಪಿ ಯಾವುದೇ …
Read More »ಶ್ರೀ ಗ್ರಾಮ ದೇವತಾ ಜಾತ್ರಾ ಕಮೀಟಿ ಗೋಕಾಕ ಪ್ಲೇವನಾಮ ಸಂವತ್ಸರ, ಅಶ್ವಿಜ ಮಾಸ ಶ್ರವನ್ನರಾತ್ರಾ ಕಾರ್ಯಕ್ರಮಗಳು
* ಶ್ರೀ ಗ್ರಾಮ ದೇವತಾ ಜಾತ್ರಾ ಕಮೀಟಿ ಗೋಕಾಕ ಪ್ಲೇವನಾಮ ಸಂವತ್ಸರ, ಅಶ್ವಿಜ ಮಾಸ ಶ್ರವನ್ನರಾತ್ರಾ ಕಾರ್ಯಕ್ರಮಗಳು 06/10/2021 ಬುಧವಾರ : ಅಶ್ವಿಜ ಶುದ್ಧ ಪ್ರತಿಪದಾ ನವರಾತ್ರಿ ಪ್ರಾರಂಭ 07/10/2021 ಗುರುವಾರ : ಘಟಸ್ಥಾಪನೆ 10/10/2021 ಭಾನುವಾರ : ಲಲಿತಾ ಪಂಚಮಿ 13/10/2021 ಬುಧವಾರ ( ಉಪಾಂಗ ಲಲಿತಾ ವೃತ್ತಂ ) : ದುರ್ಗಾಷ್ಟಮಿ – ನವಚಂಡಿ ಹವನ ರಾತ್ರಿ ಪ್ರಾರಂಭ …
Read More »ಜಿಲ್ಲಾಡಳಿತದ ವಿರೋಧದ ಮಧ್ಯೆಯೂ ಮೈಸೂರಲ್ಲಿ ಮಹಿಷಾ ದಸರಾ ಆಚರಣೆ
ಮೈಸೂರು: ಜಿಲ್ಲಾಡಳಿತದ ವಿರೋಧದ ನಡುವೆಯೂ ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಮಷಿಷಾ ದಸರಾಗೆ ಚಾಲನೆ ಸಿಕ್ಕಿದ್ದು ನಗರದ ಬುದ್ಧ ವಿಹಾರದಿಂದ ಮಹಿಷಾ ಮೆರವಣಿಗೆ ಆರಂಭವಾಗಿದೆ. ಮೊದಲ ಬಾರಿಗೆ ಮಹಿಷಾಸುರ ಪ್ರತಿಮೆ ನಿರ್ಮಿಸಿ ಮೆರವಣಿಗೆ ಮಾಡಲಾಗುತ್ತಿದ್ದು, ಮಹಿಷಾಸುರ ಪಂಚಲೋಹದ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬುದ್ದವಿಹಾರದಿಂದ ಅಶೋಕಪುರಂ ಪಾರ್ಕ್‌ವರೆಗೆ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಕಾರ್ಯಕ್ರಮದಲ್ಲಿ ಉರಿಲಿಂಗಪೆದ್ದಿ ಮಠದ ಪೀಠಾಧಿಪಾತಿ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್ …
Read More »ಮೀಸಲಾತಿ ವಿಚಾರ: ‘ಒಂದು ನಾನಿರ್ಬೇಕು, ಇಲ್ಲ ನೀವಿರ್ಬೇಕು’ -CMಗೆ ಪ್ರಸನ್ನಾನಂದಪುರಿ ಶ್ರೀ ಎಚ್ಚರಿಕೆ
ದಾವಣಗೆರೆ: ಇದೇ ತಿಂಗಳು 20ರ ಒಳಗಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿಯನ್ನ ನೀಡಬೇಕು. ಇಲ್ಲವಾದಲ್ಲಿ ನಾನು ಹೋರಾಟದ ನಿರ್ಧಾರ ಪ್ರಕಟ ಮಾಡಿದ್ರೆ ಒಂದು ನಾನಿರಬೇಕು. ಇಲ್ಲ, ನೀವು ಇರಬೇಕು ಎಂದು ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಿದೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಬೆನ್ನಲ್ಲೆ ಸರ್ಕಾರಕ್ಕೆ ಮತ್ತೊಂದು ಮೀಸಲಾತಿ ತಲೆ ಬಿಸಿ ಶುರುವಾಗಿದೆ. ಅದರಂತೆ ಇದೀಗ ಬೊಮ್ಮಾಯಿ ಸರ್ಕಾರಕ್ಕೆ ವಾಲ್ಮೀಕಿ …
Read More »ಹೂವಿನ ಹಡಗಲಿ ಕಲುಷಿತ ನೀರು ಕುಡಿದು 6 ಸಾವು; 3 ಲಕ್ಷ ರೂಪಾಯಿ ಪರಿಹಾರ ಘೋಷಣೆ
ವಿಜಯನಗರ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರ ಸಂಖ್ಯೆ 6 ಕ್ಕೇರಿದೆ. ಇದೀಗ ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರವನ್ನ ಘೋಷಣೆ ಮಾಡಿದೆ. ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ.. ಕಲುಷಿತ ನೀರು ಕುಡಿದು ಸಾವು ಪ್ರಕರಣ ದುಃಖದ ಸಂಗತಿಯಾಗಿದೆ. ಈ ವಿಚಾರವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಮಗ್ರ ತನಿಖೆ ನಡೆಸಿ, ವರದಿ ನೀಡಲು ಸೂಚನೆ …
Read More »ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಯುವಕ ಸ್ಥಳದಲ್ಲೇ ಸಾವು..
ಗೋಕಾಕ : ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಗೋಕಾಕ ತಾಲೂಕಿನ ಕನಸಗಿರಿ ರಸ್ತೆ ಬಳಿ ನಡೆದಿದೆ ಬೈಕ್ ಹಾಗೂ ಮುಖಾ ಮುಖಿ ಡಿಕ್ಕಿಯಾದ ರಭಸಕ್ಕೆ ಎಲ್ಲ ಪುಡಿ ಪುಡಿ ಯಾಗಿದೆ. ಇನ್ನು ಆಕ್ಸಿಡೆಂಟ್ ಆಡ ರಭಸಕ್ಕೆ ಬಸವರಾಜ ದೇಸಾಯಿ ಮೃತ ಪಟ್ಟಿದ್ದು ಅವರ್ ಸ್ನೇಹಿತ ಮಹಾಂತೇಶ್ ಬೇನವಾಡ ಗಂಭೀರವಾಗಿ ಗಾಯ ಗೊಂಡಿದ್ದಾರೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಬಸವರಾಜ ದೇಸಾಯಿ ಅಡುಗೆ ಕೆಲಸ ಮಾಡುತ್ತಿದ್ದು ಗೋಕಾಕ …
Read More »
Laxmi News 24×7