ಆನಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ನಿಷೇಧಿಸಲು ವಿನೂತನ ಅಭಿಯಾನ… ಇಳಕಲ್ ಸೀರೆಯಲ್ಲಿ ಸಂದೇಶ ನೇಯ್ದು ಪಿಎಂ ಮೋದಿಗೆ ರವಾನೆ…!! ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಹಾವಳಿ ಹೆಚ್ಚಾಗಿದ್ದು, ಯುವಕರು ಬೆಟ್ಟಿಂಗ್ ಆ್ಯಪ್ ಮಾರು ಹೋಗಿ ದುಡ್ಡು ಕಳೆದುಕೊಂಡು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಬಾಗಲಕೋಟೆಯ ಇಳಕಲನ ನೇಕಾರ ಮೇಘರಾಜ್ ಗುದ್ದಟ್ಟಿ ಆನ್‌ಲೈನ್ ಆ್ಯಪ್‌ಗಳನ್ನು ನಿಷೇಧಿಸಿ ಎಂದು ವಿಭಿನ್ನ ಅಭಿಯಾನ ಹಮ್ಮಿಕೊಂಡಿದ್ದಾರೆ. ಕನ್ನಡ ನಾಡಿನ ಹೆಮ್ಮೆಯ ಜಗತ್ಪ್ರಸಿದ್ಧ ಇಳಕಲ್ ಸೀರೆಯ ಸೆರಗಿನಲ್ಲಿ, …
Read More »ತಮ್ಮ ಅಭಿಮಾನಿಗಳ ಜೊತೆ ಚಹಾ ಅಂಗಡಿಯಲ್ಲಿಕಾಲ ಕಳೆದ ಸಾಹುಕಾರ್
ಚಿಕ್ಕ ಅಂಗಡಿಯಲ್ಲಿ ಚಹಾ ಸೇವಿಸಿ ಸರಳತೆ ಮೆರೆದ ಸಾಹುಕಾರ್…. ಚಿಕ್ಕ ಅಂಗಡಿಯಲ್ಲಿ ಚಹಾ ಸೇವಿಸಿ ಸರಳತೆ ಮೆರೆದ ಸಾಹುಕಾರ್…. ಎಂ.ಕೆ. ಹುಬ್ಬಳ್ಳಿ ಬಳಿಯ ಚಹಾ ಅಂಗಡಿ ಸಚಿವ ಸತೀಶ ಜಾರಕಿಹೊಳಿ ಅಭಿಮಾನಿಗಳೊಂದಿಗೆ ಚಹಾ ಸೇವನೆ ಸರಳತೆಯ ಸಾಹುಕಾರ ಎಂದು ಮತ್ತೊಮ್ಮೆ ಸಾಭೀತು ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿಯ ಚಿಕ್ಕದಾದ ಚಹಾ ಅಂಗಡಿಯಲ್ಲಿ ಚಹಾ ಸೇವಿಸುವ ಮೂಲಕ ಮತ್ತೊಮ್ಮೆ ಸರಳತೆಯ ಸಾಹುಕಾರ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಸಾಭೀತು …
Read More »ಕಸ ಗೂಡಿಸಿದ ಖಾನಾಪುರ ಎಂಎಲ್ಎ ಹಾಗೂ ಪ.ಪಂ ಅಧ್ಯಕ್ಷೆ
ಕಸ ಗೂಡಿಸಿದ ಖಾನಾಪುರ ಎಂಎಲ್ಎ ಹಾಗೂ ಪ.ಪಂ ಅಧ್ಯಕ್ಷೆ ಖಾನಾಪೂರ ಮಲಪ್ರಭಾ ನದಿ ದಂಡೆಯಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ಪಟ್ಟಣ ಪಂಚಾಯಿತಿ ಪ್ರತಿನಿಧಿಗಳೊಂದಿಗೆ ಸೇರಿ ಕಸ ಗೂಡಿಸಿ ಸ್ವಚ್ಛಗೊಳಿಸಿದರು. ಮಲಪ್ರಭಾ ನದಿ ದಂಡೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿದ ತ್ಯಾಜ್ಯ ಹಾಗೂ ಪ್ರವಾಸಿಗರು ಬಿಸಾಡಿದ ನೀರಿನ ಬಾಟಲ್ ಸಹಿತ ರಾಶಿಯಾಗಿ ಬಿದ್ದಿದ್ದ ಕಸವನ್ನು ಶಾಸಕ ವಿಠ್ಠಲ ಹಲಗೆಕರ್ ಅವರು ತಮ್ಮ ಕೈಯಿಂದಲೇ ಬುಟ್ಟಿಗೆ ತುಂಬಿದರು. ಅದರಂತೆಯೇ ಪಟ್ಟಣ ಪಂಚಾಯಿತಿಯ …
Read More »ಕನ್ನಡಿಗರ ವಿರುದ್ಧ ಪಿತೂರಿ ಮಾಡುವರರನ್ನು ಹತ್ತಿಕ್ಕಬೇಕಿದೆ…
ಗೃಹ ಸಚಿವರ ಹೇಳಿಕೆ ಅವಿವೇಕತನದ ಪರಿಮಾವಧಿ; ಬಿ.ವೈ ವಿಜಯೇಂದ್ರ ಬೆಳಗಾವಿಯಲ್ಲಿ ನಡೆದ ಘಟನೆಯನ್ನು ಯಾರೂ ಕೂಡ ಕ್ಷಮಿಸಲು ಸಾಧ್ಯವಿಲ್ಲ. ಕನ್ನಡಿಗರ ತೇಜೋವಧೆ ಸರಿಯಲ್ಲ. ಪಿತೂರಿಗಳನ್ನು ನಡೆಸುವವರನ್ನು ಹತ್ತಿಕ್ಕುವ ಕೆಲಸವನ್ನು ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ನೆಲದ ನೀರು, ಗಾಳಿ ಮತ್ತು ಅನ್ನವನ್ನು ಸೇವಿಸಿ ರಾಜ್ಯದ ವಿರುದ್ಧ ಪಿತೂರಿ ನಡೆಸುತ್ತಿರುವುದನ್ನ ಯಾರೂ ಕೂಡ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯಲ್ಲಿ ನಡೆದ ಘಟನೆಯನ್ನು ಯಾರೂ …
Read More »ಮಾಜಿ ಶಾಸಕ ದಿವಂಗತ ವಿ.ವೈ. ಚವಾಣ್ ಅವರ ಪತ್ನಿ ಅನ್ನಪೂರ್ಣ ಚವಾಣ್ ನಿಧನರಾದರು.
ಮಾಜಿ ಶಾಸಕ ದಿವಂಗತ ವಿ.ವೈ. ಚವಾಣ್ ಅವರ ಪತ್ನಿ ಅನ್ನಪೂರ್ಣ ಚವಾಣ್ ನಿಧನರಾದರು. ಖಾನಾಪೂರದ ಸ್ಟೇಷನ್ ರಸ್ತೆಯ ನಿವಾಸಿ ಮತ್ತು ಮಾಜಿ ಶಾಸಕ ದಿವಂಗತ. ವಿ.ವೈ. ಚವಾಣ್ ಅವರ ಪತ್ನಿ ಅನ್ನಪೂರ್ಣ ವಿಠ್ಠಲರಾವ್ ಚವಾಣ್ (87 ವರ್ಷ), ಭಾನುವಾರ ಬೆಳಿಗ್ಗೆ 6.30 ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರು ನಾಲ್ಕು ಮಕ್ಕಳು, ಇಬ್ಬರು ವಿವಾಹಿತ ಹೆಣ್ಣುಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳನ್ನು ಒಳಗೊಂಡ ದೊಡ್ಡ ಕುಟುಂಬವನ್ನು ಅಗಲಿದ್ದಾರೆ. ಮಹಾರಾಷ್ಟ್ರ ಏಕೀಕರಣ …
Read More »ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಹಾಗೂ ಚಾಲಕರ ಮೇಲೆ ನಡೆದ ಹಲ್ಲೆ ಆರೋಪ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುವ ಬಸ್‌ಗಳ ಸಂಖ್ಯೆ ಕಡಿಮೆ
ಬೆಳಗಾವಿ : ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಹಾಗೂ ಚಾಲಕರ ಮೇಲೆ ನಡೆದ ಹಲ್ಲೆ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ (ಬೆಳಗಾವಿ) ಬರುವ ಬಸ್‌ಗಳ ಸಂಖ್ಯೆ ಶನಿವಾರ ಕಡಿಮೆಯಾಗಿತ್ತು. ಸದ್ಯಕ್ಕೆ ಗಡಿವರೆಗೆ ಮಾತ್ರ ಬಸ್ಗಳು ಓಡಾಡುತ್ತಿವೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ಮಾಹಿತಿ ನೀಡಿದ್ದಾರೆ. ಕೊಲ್ಹಾಪುರ ಮಾರ್ಗವಾಗಿ ಪ್ರತಿದಿನವೂ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯಿಂದ 30 ಬಸ್ ಬರುತ್ತಿದ್ದವು. ಆದರೆ, ಶನಿವಾರ 20 ಬಸ್ …
Read More »ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯೊಂದು ಸಂಪೂರ್ಣವಾಗಿ ಸುಟ್ಟು ಕರಕಲ
ಧಾರವಾಡ : ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದವ್ವ ಹನುಮಂತಪ್ಪ ದಾನಪ್ಪನವರ ಎಂಬುವರ ಮನೆ ಅಗ್ನಿಗಾಹುತಿಯಾಗಿದೆ. ಮಧ್ಯಾಹ್ನ ಅಡುಗೆ ಮಾಡುವಾಗ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಹೊರಗೆ ಬರುತ್ತಿದ್ದಂತೆಯೇ ಇಡೀ ಮನೆಗೆ ಬೆಂಕಿ ಆವರಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದ ಮನೆಯೊಳಗಿನ ಸಾಮಗ್ರಿಗಳೆಲ್ಲ …
Read More »ಪತ್ನಿ ಜೊತೆ ಅಕ್ರಮ ಸಂಬಂಧಪತ್ನಿಯೊಂದಿಗೆ ಸರಸವಾಡಿದ ಸ್ನೇಹಿತನ ಕೊಂದ ಪತಿ
ಬೆಂಗಳೂರು: ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿರುವ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಂದು ಹಾಕಿದ ಘಟನೆ ವರ್ತೂರು ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಶಿರಾದ ಕಿಶೋರ್ ಕುಮಾರ್ (34) ಕೊಲೆಯಾದವ. ಕೃತ್ಯ ಎಸಗಿದ ಆರೋಪಿ ಸತೀಶ್ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಪತ್ನಿಯೊಂದಿಗೆ ಕಿಶೋರ್ ಕುಮಾರ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡಿದ್ದ ಸತೀಶ್ ರೆಡ್ಡಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಪೂರ್ಣ ವಿವರ: “ಕೆಜಿಎಫ್‌ನ ಸತೀಶ್ ರೆಡ್ಡಿ …
Read More »ಸಿ ಐ ಟಿ ಯು ದಿಂದ ಮಾರ್ಚ್ 3 ರಿಂದ 7 ರವರೆಗೆ ಬೆಂಗಳೂರು ಚಲೋ ಮುಷ್ಕರ
ಸಿ ಐ ಟಿ ಯು ದಿಂದ ಮಾರ್ಚ್ 3 ರಿಂದ 7 ರವರೆಗೆ ಬೆಂಗಳೂರು ಚಲೋ ಮುಷ್ಕರ ಅಂಗನವಾಡಿ ಸೇರಿದಂತೆ ವಿವಿಧ ಸಂಘಟಿತ ಅಸಂಘಟಿತ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 3 ರಿಂದ 7 ರವರೆಗೆ ಬೆಂಗಳೂರು ಚಲೋ ಮುಷ್ಕರ ಹಮ್ಮಿಕೊಂಡಿದ್ದಾರೆ ಸಿಐಟಿಯು ರಾಜ್ಯ ಸಮಿತಿಯ ಕರೆಯ ಮೇರೆಗೆ ಹಮ್ಮಿಕೊಳ್ಳಲಾಗಿರುವ ಈ ಮುಷ್ಕರವು ಮಾರ್ಚ್ 3 ರಿಂದ 7 ರವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿದೆ ಎಂದು ಈ …
Read More »ಪುಂಡಾಟಿಕೆ ಮೆರೆದವರನ್ನು ಗಡಿ ಪಾರು ಮಾಡಿ…ರಾಮಲಿಂಗಾ ರೆಡ್ಡಿ
ಬಸ್ಸಿಗಳಿಗೆ 2 ರಾಜ್ಯದಲ್ಲೂ ಮಸಿ ಬಳಿಯುವುದು ತಪ್ಪು; ಸಚಿವ ರಾಮಲಿಂಗಾರೆಡ್ಡಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪುಂಡಾಟಿಕೆ ಮೆರೆಯುವವರನ್ನು ಗಡಿಪಾರು ಮಾಡಬೇಕು. ಎರಡು ರಾಜ್ಯಗಳಲ್ಲಿಯೂ ಬಸ್ಸುಗಳಿಗೆ ಕಪ್ಪು ಮಸಿ ಬಳಿಯುವುದು ತಪ್ಪು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯುವಕನ ಹೆಸರಿಗೆ ಉಚಿತ ಟಿಕೇಟ್ ಪಡೆದಾಗ …
Read More »