ಹುಬ್ಬಳ್ಳಿ (ಜು. 23): ಕೆಲ ದಿನಗಳಿಂದ ತಣ್ಣಗೆ ಸುರಿಯುತ್ತಿದ್ದ ಮಳೆ ಇಂದು ಏಕಾಏಕಿ ಅಬ್ಬರಿಸಿದೆ. ರಾತ್ರಿಯಿಂದಲೂ ಧಾರವಾಡ ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹುಬ್ಬಳ್ಳಿ ಸಮೀಪದ ಬೆಣ್ಣೆ ಹಳ್ಳ, ಕಲಘಟಗಿ ತಾಲೂಕಿನ ಬೇಡ್ತಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಹಲವು ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ಕೆಲವೆಡೆ ಕೆರೆಗಳು ಒಡೆದು, ಜಮೀನಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯ ಭೀತಿ ಸೃಷ್ಟಿಯಾಗಿದೆ. ಹುಬ್ಬಳ್ಳಿ ಸುತ್ತಮುತ್ತಲಿನ …
Read More »ಮಹಾರಾಷ್ಟ್ರದಲ್ಲಿ ‘ಮಹಾ’ ಪ್ರವಾಹ – ಸೂಕ್ಷ್ಮ ಪ್ರದೇಶಗಳಲ್ಲಿನ ಜನರ ಸ್ಥಳಾಂತರ..!
ಮುಂಬೈ : ನೆರೆಯ ಮಾಹಾರಾಷ್ಟ್ರದಲ್ಲಿ ಬಾರೀ ಮಳೆಯಾಗ್ತಾಯಿದ್ದು, ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಮಹಾರಾಷ್ಟ್ರಕ್ಕೆ ಒಂದು ರೀತಿ ಮಳೆ ಹಾಗೂ ಕೊರೊನಾ ಶಾಪವಾಗಿದ್ದು, ಮಳೆಯ ಪ್ರಬಾವೂ ಇಲ್ಲಿಯೇ ಹೆಚ್ಚಾಗಿ ಬೀರಿದ್ರೆ , ಕೊರೊನಾ ಪರಿಣಾಮವನ್ನ ಹೆಚ್ಚಾಗಿ ಅನುಭವಿಸಿದ ರಾಜ್ಯವೂ ಇದೇ ಆಗಿದೆ.. ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಆದ್ರೆ ವರುಣ ಮಾತ್ರ ಶಾಂತನಾಗುವ ಲಕ್ಷಣ ಕಾಣುತ್ತಿಲ್ಲ.. ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.. ರಸ್ತೆಗಳು ಕೆರೆಯಂತೆ …
Read More »ಭಾರಿ ಮಳೆ: ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ
ಪುಣೆ: ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ರಸ್ತೆಗಳು ಜಲಾವೃತಗೊಂಡಿರುವುದರಿಂದ, ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಕೊಲ್ಹಾಪುರದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನೆರೆಯ ರಾಜ್ಯಗಳಿಗೆ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ. ಕೊಲ್ಹಾಪುರ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪಂಚಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಜಿಲ್ಲೆಯ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿನ ಸಂಚಾರ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ ಕೊಲ್ಹಾಪುರದ ಜಿಲ್ಲಾ …
Read More »ಕೆಲವು ಶಾಸಕರು ಮಂತ್ರಿಯಾಗಲೂ ಬೆಂಗಳೂರಿನಲ್ಲಿ ಠಿಖಾಣಿ ಹೂಡಿದ್ದಾರೆ.ಶಾಸಕ ಅಭಯ ಪಾಟೀಲ ಮಾತ್ರ ಬೆಳಗಿನ ಜಾವ ಕ್ಷೇತ್ರದಲ್ಲಿ ಸುತ್ತಾಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಬೆಳಗಾವಿ- ರಾಜ್ಯದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.ಜನಜೀವನ ಅಸ್ತವ್ಯಸ್ತವಾಗಿದ್ದು ಜೊತೆಗೆ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ. ಆದರೆ ಕೆಲವು ಶಾಸಕರು ಮಂತ್ರಿಯಾಗಲೂ ಬೆಂಗಳೂರಿನಲ್ಲಿ ಠಿಖಾಣಿ ಹೂಡಿದ್ದಾರೆ.ಶಾಸಕ ಅಭಯ ಪಾಟೀಲ ಮಾತ್ರ ಬೆಳಗಿನ ಜಾವ ಕ್ಷೇತ್ರದಲ್ಲಿ ಸುತ್ತಾಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಇಂದು ಬೆಳಗಿನ ಜಾವ ಕೈಯಲ್ಲಿ ಛತ್ರಿ ಹಿಡಿದು ನಡೆದಾಡಿಕೊಂಡೇ ಕ್ಷೇತ್ರ ದರ್ಶನ ಮಾಡಿ, ಮಳೆಯಿಂದ ಆಗಿರುವ ಅನಾಹುತಗಳನ್ನು, ಸಮಸ್ಯೆಗಳನ್ನು ಖುದ್ದಾಗಿ ಪರಶೀಲಿಸಿ, ಜನರ ಸಮಸ್ಯೆಗಳನ್ನು ಆಲಿಸಿ,ಸಮಸ್ಯೆ ಗಳನ್ನು ಸ್ಥಳದಲ್ಲೇ …
Read More »ಬೆಳಗಾವಿ: ಕುಡಚಿ-ಉಗಾರ ಸೇತುವೆಯಲ್ಲಿ ಸಂಚಾರ ಬಂದ್
ಬೆಳಗಾವಿ: ರಾಯಬಾಗ ತಾಲ್ಲೂಕಿನಾದ್ಯಂತ ಶನಿವಾರವೂ ಜಿಟಿಜಿಟಿ ಮಳೆ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದಾಗಿ ಕೃಷ್ಣಾ ನದಿಗೆ ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದಾಗಿ, ರಾಯಬಾಗ ತಾಲ್ಲೂಕಿನ ಕುಡಚಿ-ಉಗಾರ ಸೇತುವೆ ಮುಳುಗಡೆಯಾಗಿದ್ದು, ನೆರೆಯ ಮಹಾರಾಷ್ಟ್ರ ರಾಜ್ಯದ ಸಂಪರ್ಕ ಕಡಿತಗೊಂಡಿದೆ. ಕುಡಚಿ ಸೇತುವೆ ಮೇಲೆ ಬೆಳಿಗ್ಗೆಯಿಂದಲೇ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರೈತರು, ವ್ಯಾಪಾರಿಗಳು, ಮೀರಜ್ ಆಸ್ಪತ್ರೆಗೆ ಹೋಗುವವರು ತೊಂದರೆ ಅನುಭವಿಸುವಂತಾಗಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಪ್ರಮುಖ …
Read More »ಧುಮ್ಮಿಕ್ಕಿ ಹರಿದ ದೂಧಸಾಗರ ಜಲಪಾತ : ಬೆಳಗಾವಿ-ಗೋವಾ ರೈಲು ಸಂಚಾರ ಸ್ಥಗಿತ
ಪಣಜಿ: ಗೋವಾ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗೋವಾದ ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು ಈ ಭಾಗದಲ್ಲಿ ದಟ್ಟ ಮಂಜು ಆವರಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಳಗಾವಿ-ಗೋವಾ ರೈಲು ಸಂಚಾರ ಸ್ಥಗಿತಗೊಂಡಿದೆ. ಗೋವಾದ ದೂಧಸಾಗರ ಜಲಪಾತದ ಬಳಿ ಭಾರಿ ಪ್ರಮಾಣದಲ್ಲಿ ಮಂಜುಗಟ್ಟಿದ್ದು ಶುಕ್ರವಾರ ಬೆಳಿಗ್ಗೆ ಬೆಳಗಾವಿ -ವಾಸ್ಕೊಡಗಾಮಾ ರೈಲು ಸಂಚಾರ ಜಲಪಾತದ ಬಳಿಯೇ ಸ್ಥಗಿತಗೊಂಡಿದೆ. ಕೊಂಕಣ ರೈಲು ಹಳಿಗಳ ಮೇಲೆ ಮಳೆಗೆ ಗುಡ್ಡ ಕುಸಿತವುಂಟಾಗಿರುವುದರಿಂದಲೂ ಮುಂಬಯಿ ಮತ್ತು …
Read More »ಖಾನಾಪುರದ ಕೆಎಸ್‌ಆರ್‌ಪಿ ಮೈದಾನಕ್ಕೂ ನೀರು; ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಸುತ್ತ ಜಲಾವೃತ
ಬೆಳಗಾವಿ: ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಖಾನಾಪುರ ಪಟ್ಟಣಕ್ಕೆ ಮಲಪ್ರಭಾ ನದಿ ನೀರು (Heavy Rain) ನುಗ್ಗುತ್ತಿದೆ. ಇದರಿಂದಾಗಿ ಖಾನಾಪುರ ಪಟ್ಟಣದ ಹೊರವಲಯದ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ನಿರಂತರ ಮಳೆಯಿಂದ ಖಾನಾಪುರ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಖಾನಾಪುರ ಪಟ್ಟಣದ ಹೊರವಲಯದ ಮೀನಿನ ಮಾರುಕಟ್ಟೆಗೆ ನೀರು ನುಗ್ಗಿದೆ. ಅಲ್ಲದೆ ಪಟ್ಟಣದ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದ ಮೈದಾನಕ್ಕೆ ನೀರು ನುಗ್ಗಿದ್ದು, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಎದುರಿನ ಪ್ರದೇಶ …
Read More »ಬೆಳಗಾವಿ: ಕೃಷ್ಣೆಗೆ 1.56 ಲಕ್ಷ ಕ್ಯುಸೆಕ್ ನೀರು, ಪ್ರವಾಹ ಭೀತಿ ಹೆಚ್ಚಳ
ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶ ಮತ್ತು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನದಿ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕೃಷ್ಣಾ ನದಿಗೆ 1.56 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದರೊಂದಿಗೆ ತೀರದಲ್ಲಿ ಪ್ರವಾಹ ಭೀತಿಯೂ ಹೆಚ್ಚಾಗ ತೊಡಗಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸದಲಗಾ-ಬೋರಗಾಂವ ಸೇತುವೆ ಮುಳುಗಡೆಯಾಗಿದೆ. ಕೊಯ್ನಾ ಜಲಾಶಯದಿಂದ ಹೊರಬಿಡಲಾದ 10ಸಾವಿರ ಕ್ಯುಸೆಕ್, ದೂಧ್‌ಗಂಗಾ ನದಿಯಿಂದ 34,320 ಕ್ಯುಸೆಕ್ ಮತ್ತುಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ …
Read More »ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ; ವಾಘವಾಡೆ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ವಾಘವಾಡೆ ಬಳಿ ಏಕಾಏಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದ ಹಿನ್ನೆಲೆಯಲ್ಲಿ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಳ್ಳದ ನೀರಿನಲ್ಲಿ ಸಿಲುಕಿ ಕೊಚ್ಚಿ ಹೋಗುತ್ತಿದ್ದ. ಈ ವೇಳೆ ಹಗ್ಗ ಎಸೆದು ಯುವಕನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ನಂದಗಡ ಡ್ಯಾಂಗೆ ಹರಿದು ಬರುತ್ತಿರುವ ನೀರು ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದುರ್ಗಾಡಿ ಬೆಟ್ಟ ಪ್ರದೇಶದಿಂದ ಧಾರಾಕಾರವಾಗಿ ಮಳೆ ನೀರು …
Read More »ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ
ಬೆಳಗಾವಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಿರುವ ಹಿನ್ನಲೆಯಲ್ಲಿ, ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಎಂಟು ಗಂಟೆಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು,10 ಗಂಟೆ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನು ಮಧ್ಯಾಹ್ನ ಎರಡು ಗಂಟೆಗೆ 50ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುವುದು. ಸದ್ಯ ಕೃಷ್ಣಾ ನದಿಯಲ್ಲಿ 1.34 ಲಕ್ಷ ಕ್ಯೂಸೆಕ್ ನೀರಿನ ಹರಿವು ಇದೆ. ಇಂದು ರಾತ್ರಿ …
Read More »