ನವದೆಹಲಿ: ದೇಶಾದ್ಯಂತ ಕುಡಿದು ವಾಹನ ಚಲಾಯಿಸಿ ಅಪಘಾತಗಳು ಹೆಚ್ಚಾಗುತ್ತಿರುವ ಕಾರಣ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಇನ್ಮುಂದೆ ಹೊಸದಾಗಿ ಮದ್ಯದಂಗಡಿ ಓಪನ್ ಮಾಡಿ ಮದ್ಯ ಮಾರಾಟ ಮಾಡಲು ಪರವಾನಿಗಿ ನೀಡದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಇದು ಅನ್ವಯವಾಗಲಿದೆ. ಹೆದ್ದಾರಿಗಳಿಂದ 500 ಮೀಟರ್ ಅಂತರದೊಳಗೆ ಯಾವುದೇ ರೀತಿಯ ಮದ್ಯದಂಗಡಿಗಳು ಇರುವಂತಿಲ್ಲ ಎಂದಿದೆ. ಇದರ ಜತೆಗೆ 20 ಸಾವಿರಕ್ಕಿಂತಲೂ ಕಡಿಮೆ ಜನರು ವಾಸ ಮಾಡುವ ಸ್ಥಳಗಳಲ್ಲಿರುವ ಹೆದ್ದಾರಿ …
Read More »ಬಿ.ಎಸ್. ಯಡಿಯೂರಪ್ಪ ಅವರ ಕಣ್ಣೀರು ಎಷ್ಟು ಅಪಾಯಕಾರಿ ಗೊತ್ತಾ?
ಬೆಂಗಳೂರು, ಜು. 26: ಬಿ.ಎಸ್. ಯಡಿಯೂರಪ್ಪ ಸಿಟ್ಟು ಕ್ಷಣಿಕ, ಪಟ್ಟು ಹಿಡಿದು ಕೂತರೆ ಮುಗಿಸುವ ತನಕ ಬಿಡದ ಛಲಗಾರ. ಬಿ.ಎಸ್. ಯಡಿಯೂರಪ್ಪ ಅವರ ಕಣ್ಣೀರು ಸುನಾಮಿಯನ್ನೇ ಸೃಷ್ಟಿ ಮಾಡುತ್ತದೆ! ರಾಜೀನಾಮೆ ಕೊಡುವ ಮುನ್ನ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಕಣ್ಣೀರಿನ ಅರೆ ಗಂಟಲಿನ ಧ್ವನಿಯಲ್ಲಿ ಹೊಗಳಿದ್ದಾರೆ. ಆನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದ್ದಾರೆ. ಆದರೆ, ಬಿಎಸ್ ವೈ ಅವರ ಕಣ್ಣೀರಿನ ವಿದಾಯ ಬಿಜೆಪಿಯ ಪಾಲಿಗೆ ದೊಡ್ಡ ಪೆಟ್ಟು ಕೊಡಲಿದೆ ಎಂಬ ಚರ್ಚೆ …
Read More »ಅವಮಾನ ಮಾಡಿ ಬಿಎಸ್ ವೈ ರಾಜೀನಾಮೆ ಪಡೆಯಲಾಗಿದೆ; ಸತೀಶ್ ಜಾರಕಿಹೊಳಿ
ಬೆಳಗಾವಿ: ಬಿಜೆಪಿ ನಾಯಕರು ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ತಂತ್ರದಿಂದ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಸವಣ್ಣನವರ ರೀತಿ ಬಿಎಸ್ ವೈ ಅವರನ್ನು ಕೆಳಗಿಳಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಯಡಿಯೂರಪ್ಪನವರನ್ನು ಇಷ್ಟೊಂದು ಅವಮಾನಗೊಳಿಸಬಾರದಿತ್ತು. ಹಿರಿಯ ನಾಯಕನಿಗೆ ಗೌರವಯುತವಗೈ ಹೋಗಲು ಅವಕಾಶ ನೀಡಬೇಕಿತ್ತು. ಒತ್ತಡ ಹೇರಿ ಹಿರಿಯ ನಾಯಕನನ್ನು ಅಗೌರವದಿಂದ ಕೆಳಗಿಳಿಸಿದ್ದಾರೆ. ಇದನ್ನು ಯಾರೂ ಸಹಿಸಲು ಆಗಲ್ಲ ಎಂದರು. 12ನೇ …
Read More »ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ: ಹಾಲು ಕುಡಿದವರು ಯಾರ್ಯಾರು?
ಹರಸಾಹಸ ಪಟ್ಟು ಅಧಿಕಾರಕ್ಕೇರಿದ ಯಡಿಯೂರಪ್ಪನವರಿಗೆ ಅಧಿಕಾರಕ್ಕೆ ಬಂದ ದಿನದಿಂದ, ರಾಜೀನಾಮೆ ನೀಡಿದ ಜುಲೈ 26ರ ವರೆಗಿನ ಎರಡು ವರ್ಷದ ಅವಧಿ ತಂತಿಯ ಮೇಲಿನ ನಡಿಗೆಯೇ. ಅವರೇ ಹೇಳಿದಂತೆ ಪ್ರತೀದಿನ ಅಗ್ನಿಪರೀಕ್ಷೆ. ಯಡಿಯೂರಪ್ಪನವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕೆಂದು ದೆಹಲಿಯಲ್ಲಿ ನಡೆಯುತ್ತಿದ್ದ ಲಾಬಿ ಕೊನೆಗೂ ಕೈಗೂಡಿದೆ. ಯಡಿಯೂರಪ್ಪನವರ ವಿರೋಧಿ ಪಾಳಯದಲ್ಲಿ ಇರುವವರಿಗೆ ಇಂದು ಹೊಟ್ಟೆ ತುಂಬಾ ಹಾಲು ಕುಡಿದಷ್ಟು ಸಂಭ್ರಮವಾಗಿರಬಹುದು. ಹಂಗಾಮೀ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ವಿದಾಯದ ಭಾಷಣದಲ್ಲಿ ಹೇಳಿದಂತೆ, ಆರಂಭ …
Read More »ಒಂದು ವಾರದಿಂದ ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಸದ್ಯ ಶಾಂತವಾಗಿದ್ದು ಜನತೆ ಜನ ನಿಟ್ಟುಸಿರು ಬಿಡುವಂತಾಗಿದೆ.
ಬೆಳಗಾವಿ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಸದ್ಯ ಶಾಂತವಾಗಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ತಗ್ಗಿದ ಪರಿಣಾಮ ಜಿಲ್ಲೆಯ ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ನದಿ ನೀರಿನ ಮಟ್ಟದಲ್ಲಿ ಇಳಿಕೆ ಕಂಡಿದೆ. ಮುಳುಗಡೆ ಭೀತಿಯಲ್ಲಿದ್ದ ಗೋಕಾಕ, ಹುಕ್ಕೇರಿ, ರಾಮದುರ್ಗ ತಾಲೂಕಿನಲ್ಲಿ ಸದ್ಯ ಪ್ರವಾಹ ಆತಂಕ ದೂರವಾಗಿದೆ. ಹಿಡಕಲ್, ನವೀಲುತೀರ್ಥ ಜಲಾಶಯದಲ್ಲೂ ನೀರಿನ ಒಳ ಹರಿವು ಕ್ಷೀಣಿಸಿದ್ದು, ಪ್ರವಾಹದಿಂದ ಬಂದ್ ಆಗಿದ್ದ ಸೇತುವೆಗಳು, ರಸ್ತೆಗಳು …
Read More »ರಾಜೀನಾಮೆ ನೀಡ್ತಿದ್ದಂತೆ ಬಿಎಸ್‌ವೈ ಭಾವಚಿತ್ರವಿದ್ದ ಕೋವಿಡ್ ಜಾಗೃತಿ ಬ್ಯಾನರ್ ತೆರವು
ದಾವಣಗೆರೆ: ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೆ ನಗರಸಭೆ ಮುಂದೆ ಹಾಕಲಾಗಿದ್ದ ಅವರ ಬ್ಯಾನರ್ ತೆರವು ಮಾಡಲಾಗಿದೆ. ಹರಿಹರ ನಗರಸಭೆ ಮುಂದೆ ನಿರ್ಗಮಿತ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರವುಳ್ಳ ಕೋವಿಡ್ ಜಾಗೃತಿ ಮೂಡಿಸುವ ಬ್ಯಾನರ್ ಹಾಕಲಾಗಿತ್ತು. ಇತ್ತ ಇಂದು ಯಡಿಯೂರಪ್ಪನವರು ರಾಜೀನಾಮೆ ಘೋಷಿಸುತ್ತಿದ್ದಂತೆ ನಗರ ಸಭೆ ಸಿಬ್ಬಂದಿ ಬ್ಯಾನರನ್ನು ತೆರವು ಮಾಡಿದ್ದಾರೆ.
Read More »ಮಹಿಳೆಯೊಂದಿಗೆ ಪೋನ್ ನಲ್ಲಿ ಅಶ್ಲೀಲ ಸಂಭಾಷಣೆ ; ಮಹಿಳೆಯರಿಂದ ಪಾಲಿಕೆ ನೌಕರನಿಗೆ ಗೂಸ
ಮೈಸೂರು: ಕಚೇರಿಗೆ ಕೆಲಸಕ್ಕಾಗಿ ಬಂದಿದ್ದ ಮಹಿಳೆಯೊಬ್ಬರ ಫೋನ್ ನಂಬರ್ ಪಡೆದು ಕಾಮಾಸಕ್ತಿಯಿಂದ ಮಹಿಳೆಯೊಂದಿಗೆ ಮೊಬೈಲ್‌ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದ ಪಾಲಿಕೆಯ ನೌಕರನೊಬ್ಬನು ಮಹಿಳೆಯರಿಂದಲೇ ಹೊಡೆತ ತಿಂದಿರುವ ಘಟನೆ ಶಾರದಾದೇವಿ ನಗರದ ಪಾಲಿಕೆಯ ವಲಯ ಕಚೇರಿಯಲ್ಲಿ ನಡೆದಿದೆ. ಈ ಸಂಬಂಧ ನೌಕರನ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಘಟನೆಯ ವೈರಲ್ ವಿಡಿಯೋಸರ್ಕಾರಿ ಸಿಬ್ಬಂದಿಯಾಗಿ ಸಾರ್ವಜನಿಕರ ಜೊತೆ ಸೌಜನ್ಯ ಮತ್ತು ಉತ್ತಮ ನಡತೆ ಮರೆತ ದ್ವಿತೀಯ ದರ್ಜೆ ಸಹಾಯಕ ವಿಷಕಂಠ ಮಹಿಳೆಯರ …
Read More »ಅಭಯ್ ಪಾಟೀಲ ಹಾಗೂ ಬಾಲಚಂದ್ರ ಜಾರಕಿಹೊಳಿ ಹೊಸ ಸಂಪುಟದಲ್ಲಿ ಮಂತ್ರಿ ಗಳಾಗತಾರ….?
ಬೆಂಗಳೂರು – ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಕುರಿತು ವಿಶೇಷ ಪ್ರೀತಿ ಹೊಂದಿದ್ದರು. ಹಾಗಾಗಿಯೇ ಅವರ ಸಂಪುಟದಲ್ಲಿ ನಾಲ್ವರಿಗೆ ಸಚಿವಸ್ಥಾನ ನೀಡಲಾಗಿತ್ತು. ಜೊತೆಗೆ 10ಕ್ಕೂ ಹೆಚ್ಚು ಜನರಿಗೆ ಬೇರೆ ಬೇರೆ ಹುದ್ದೆ ನೀಡಲಾಗಿತ್ತು. ಬೆಳಗಾವಿ ಜಿಲ್ಲೆಯ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ ಅವರಿಗೆ ಮಂತ್ರಿಸ್ಥಾನ ನೀಡಲಾಗಿತ್ತು. ಜೊತೆಗೆ, ಶಂಕರಗೌಡ ಪಾಟೀಲ ಅವರಿಗೆ ದೆಹಲಿ ಪ್ರತಿನಿಧಿ ಸ್ಥಾನ, ಆನಂದ ಮಾಮನಿಗೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ, ಪಿ.ರಾಜೀವ, …
Read More »ಚಿಕ್ಕೊಳಿ ಪರಸಿ ರೊಡ ಬ್ರಿಡ್ಜ್ ಕಾಮಗಾರಿ ಸರಿಯಾಗಿದೆ ,ಸತೀಶ್ ಜಾರಕಿಹೊಳಿ ಅವರನ್ನ ಬ್ರಿಡ್ಜ್ ಮೇಲೆ ನೋಡಿ ಯುವಕರ ಗುಂಪು ಸೆಲ್ಫಿ ಹಾಗೂ ಅವರ್ ಭೇಟಿ ಗಾಗಿಗಿ ಮುಗಿಬಿದ್ದಿದ್ದಾರೆ..
ಗೋಕಾಕ : ಗೋಕಾಕ ನಗರದಲ್ಲಿ ಸತತ ಸುರಿಯುತ್ತಿದ್ದ ಮಳೆಯಿಂದ ಗೋಕಾಕ ನಗರ ಮಿನಿ ದ್ವೀಪ ದಂತೆ ಆಗಿತ್ತು ಕಳೆದ ಎರಡು ದಿನದಿಂದ ಸ್ವಲ್ಪ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ಜನರು ಸ್ವಲ್ಪ ನಿರಾಳ ವಾಗಿದ್ದರೆ ಇಂದು ಚಿಕ್ಕೊಳಿ ಪರಸಿ ರೊಡ ಅಥವಾ ಗೋಕಾಕ ಫಾಲ್ಸ್ ಗೆ ಹೋಗುವ ಬ್ರಿಜ ಅಂತಾರೆ ಇದರ ಪರಿಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮಳೆಯಿಂದ ಕೆಟ್ಟಿದ್ದ ರಸ್ತೆಯನ್ನು ಇಂದು ಪ್ಯಾಚ್ ಅಪ್ ಮಾಡಿಸುವ ಮೂಲಕ ಸರಿಪಡಿಸಿದ್ದಾರೆ …
Read More »ರಾಜ್ಯಪಾಲರ ಹುದ್ದೆ ಅಲಂಕರಿಸಲ್ಲ, ಪಕ್ಷ ಸಂಘಟನೆ ಮಾಡುತ್ತೇನೆ: ಬಿಎಸ್‌ವೈ
ಬೆಂಗಳೂರು: ರಾಜೀನಾಮೆ ನೀಡುವಂತೆ ದೆಹಲಿಯಿಂದ ನನಗೆ ಯಾವುದೇ ಒತ್ತಡ ಇಲ್ಲ ನಾನೇ ಸ್ವಯಂ ನಿರ್ಧಾರ ಮಾಡಿ ರಾಜೀನಾಮೆ ನೀಡಿದ್ದೇನೆ, ರಾಜ್ಯಪಾಲು ಹುದ್ದೆ ಸೇರಿ ಯಾವುದೇ ಸ್ಥಾನಮಾನ ಪಡೆಯದೇ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ ಎಂದು ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ರಾಜಭವನದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಎರಡು ವರ್ಷ ತುಂಬಿದ ಈ ಸಂದರ್ಭದಲ್ಲಿ ರಾಜೀನಾಮೆ ಕೊಟ್ಟು ಬೇರೆಯವರಿಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಸಿಗಬೇಕು ಎಂದು ನಾನು ಸ್ವಯಂ ಪ್ರೇರಿತವಾಗಿ …
Read More »