ಪೊಲೀಸ್ ಇಲಾಖೆಯಲ್ಲಿ ಶಿಸ್ತು ಪಾಲನೆಗೆ ಖಡಕ್ ಆದೇಶ ಹೊರಡಿಸಲಾಗಿದೆ. ರೌಡಿಶೀಟರ್ಗಳು, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು, ಸಮಾಜಘಾತುಕ ವ್ಯಕ್ತಿಗಳ ಜತೆ ಸಂಪರ್ಕ ಇಟ್ಟುಕೊಳ್ಳಬಾರದು. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಜತೆ ಭಾಗಿಯಾಗಬಾರದು. ಯಾವುದೇ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸೂಕ್ತವಲ್ಲ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಖಡಕ್ ಆದೇಶ ಹೊರಡಿಸಿದ್ದಾರೆ. ಪೊಲೀಸರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ಮುನ್ನ ತಿಳಿದುಕೊಳ್ಳಬೇಕು. ಕಾರ್ಯಕ್ರಮ ಆಯೋಜಿಸಿರುವ ಸಂಸ್ಥೆ, ವ್ಯಕ್ತಿ ಹಿನ್ನೆಲೆ ತಿಳಿಯಬೇಕು ಎಂದು ಪ್ರವೀಣ್ ಸೂದ್ …
Read More »ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೃಹತ ಮತ್ತು ಮಧ್ಯಮ ನೀರಾವರಿ ಖಾತೆ ಬಹುತೇಕ ಸಿಗುವ ಸಾಧ್ಯತೆ.. ?
ಸುಮಾರು ದಿನಗಳಿಂದ ಸಿಎಂ ಬದಲಾವಣೆ ಸುದ್ದಿ ಹರಿದಾಡುತ್ತಿದ್ದು ಕೊನೆಗೂ ಅದಕ್ಕೆ ಅಂತ್ಯ ಬಿದ್ದಿದ್ದೆ . ಇನ್ನು ನೂತನ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರ್ ನೇತೃತ್ವದಲ್ಲಿ ಹೊಸ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ . ಸುಮಾರು ಜನರು ಹಾಗೂ ಮಾಧ್ಯಮದಲ್ಲಿ ಕೂಡ ಸುಮಾರು ಜನರ ಹೆಸರುಗಳು ಕೇಳಿ ಬರುತ್ತಿವೆ ಇಂದು ನಮ್ಮ ವಾಹಿನಿಯ ಸ್ವಲ್ಪ ಜನರಲ್ಲಿ ಹಾಗೂ ಬೆಂಗಳೂರಿನ ಕೆಲವೊಂದು ಆಪ್ತರ ಜೊತೆ ಮಾತುಕತೆ ನಡೆಸಿದ್ದು ಬಾಲಚಂದ್ರ …
Read More »ಯುವತಿಗೆ ಕಿರುಕುಳ ನೀಡುತ್ತಿದ್ದ ಎಂದು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ನೇಹಿತರು
ಬೆಂಗಳೂರು: ಯುವತಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಯುವತಿಯ ಸ್ನೇಹಿತರು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಸಂಜಯನಗರದಲ್ಲಿ ನಡೆದಿದೆ. ಮುನಿರಾಜು ಒದೆ ತಿಂದ ವ್ಯಕ್ತಿ. ಹೆಬ್ಬಾಳ ಮೂಲದ ಯುವತಿಯನ್ನು ಹಿಂಬಾಲಿಸಿದ್ದ ಮುನಿರಾಜು. ಮಾನಸಿಕ, ದೈಹಿಕವಾಗಿ ಯುವತಿಗೆ ಕಿರುಕುಳ ನೀಡಿದ್ದ. ಇದೇ ವೇಳೆ ಈ ಬಗ್ಗೆ ಯುವತಿ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಯುವತಿ ಸ್ನೇಹಿತರು ಮುನಿರಾಜುನನ್ನು ಹಿಂಬಾಲಿಸಿದ್ದಾರೆ. ಬಳಿಕ ಸಂಜಯನಗರಕ್ಕೆ ಬರುತ್ತಿದ್ದಂತೆ ಯುವತಿ ಸ್ನೇಹಿತರು ಮುನಿರಾಜುಗೆ ಮುಖ …
Read More »ಬೊಮ್ಮಾಯಿ ಸಂಪುಟದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸಚಿವ ಸ್ಥಾನ?
ದೆಹಲಿ : ರಾಜ್ಯದ ಸಚಿವ ಸಂಪುಟ ರಚನೆ ಸಂಬಂಧ ದೆಹಲಿಗೆ ಹೋಗಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ 9 ಗಂಟಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಈ ನಡುವೆ ತಮ್ಮ ಪುತ್ರ ವಿಜಯೇಂದ್ರರಿಗೆ ಸಚಿವ ಸ್ಥಾನ ನೀಡುವಂತೆ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ್ ಗೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ರಚನೆ ಕುರಿತಂತೆ ಈಗಾಗಲೇ ದೆಹಲಿಗೆ ತೆರಳಿರುವ ಸಿಎಂ ಬೊಮ್ಮಾಯಿ ಅವರು …
Read More »ಸಂಪುಟ ರಚನೆಗೆ ಇಂದು ಗ್ರೀನ್ ಸಿಗ್ನಲ್ ಸಾಧ್ಯತೆ;
ಸಚಿವ ಸಂಪುಟ ರಚನೆ ಸಂಬಂಧ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಮಧ್ಯರಾತ್ರಿವರೆಗೂ ಸಿಎಂ ದೆಹಲಿಯ ಅಜ್ಞಾತ ಸ್ಥಳದಲ್ಲಿದ್ದರು. ಬೆಂಗಾವಲು ಪಡೆ ಬಿಟ್ಟು ಬೊಮ್ಮಾಯಿ ತೆರಳಿದ್ದರು. ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಬೊಮ್ಮಾಯಿ ಚರ್ಚಿಸುತ್ತಾರೆ.ದೆಹಲಿಗೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಸಚಿವರ ಪಟ್ಟಿಯೊಂದಿಗೆ ರಾಜ್ಯಕ್ಕೆ ವಾಪಸ್ ಆಗುವ ಸಾಧ್ಯತೆಯಿದೆ.
Read More »ನಗ್ನ ವಿಡಿಯೋ ಮೂಲಕ ಬ್ಲ್ಯಾಕ್ ಮೇಲ್ ಬೆಳಗಾವಿಯಲ್ಲಿ ಹೆಚ್ಚಿದ ಸೈಬರ್ ವಂಚನೆ;
: ಸೈಬರ್ ವಂಚಕರು ಫೇಸ್ ಬುಕ್ ನಲ್ಲಿ ಯುವತಿಯರ ಹೆಸರಲ್ಲಿ ಫ್ರೆಂಡ್ ರಿಕ್ವೆಷ್ಟಗಳನ್ನು ಸಾರ್ವಜನಿಕರಿಗೆ ಕಳುಹಿಸಿ ಬಳಿಕ ನಗ್ನ ವಿಡಿಯೋ ಕರೆಗಳನ್ನು ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣ ಕುಂದಾನಗರಿ ಬೆಳಗಾವಿಯಲ್ಲೂ ಬೆಳಕಿಗೆ ಬಂದಿದೆ. ಫೇಸ್ ಬುಕ್ ನಲ್ಲಿ ಯುವತಿಯರ ರೂಪದಲ್ಲಿ ವಂಚಕರು ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿ ಸಾರ್ವಜನಿಕರ ಸಂಪರ್ಕ ಸಾಧಿಸುತ್ತಾರೆ. ರಿಕ್ವೆಸ್ಟ್ ಸ್ವೀಕರಿಸಿದ ನಂತರ ಅವರೊಂದಿಗೆ ಫೇಸ್ಬುಕ್ ಮೆಸೆಂಜರ್ನಲ್ಲಿ ಚಾಟ್ ಮಾಡಿ ಅವರ ವ್ಯಾಟ್ಸ್ಅಪ್ ನಂಬರ್ ಪಡೆದುಕೊಳ್ಳುತ್ತಾರೆ. ನಂತರ …
Read More »ಐತಿಹಾಸಿಕ ಪ್ರವಾಸಿ ತಾಣಗಳ ಭೇಟಿಗೆ ಚಾಲುಕ್ಯ ದರ್ಶನ -ಬಾಗಲಕೋಟೆಯಲ್ಲಿ KSRTC ಪ್ರವಾಸಿ ಬಸ್ ಸೇವೆ
ಬಾಗಲಕೋಟೆ: ಜಿಲ್ಲೆಯ ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ಬಾಗಲಕೋಟೆ ಕೆ ಎಸ್ ಆರ್ ಟಿ ಸಿ ವತಿಯಿಂದ ವಿಶೇಷ ಪ್ರವಾಸಿ ಬಸ್ಗಳ ಸೇವೆ ಆರಂಭಿಸಲಾಗಿದೆ. ಕೇವಲ 240 ರೂಪಾಯಿಯಲ್ಲಿ 10ಕ್ಕೂ ಅಧಿಕ ಐತಿಹಾಸಿಕ ಪ್ರವಾಸಿ ತಾಣಗಳ ದರ್ಶನವನ್ನು ಚಾಲುಕ್ಯ ದರ್ಶನ ವಿಶೇಷ ಬಸ್ ಮೂಲಕ ಮಾಡಬಹುದಾಗಿದೆ. ಬಾಗಲಕೋಟೆಯ ಐತಿಹಾಸಿಕ ಪ್ರವಾಸಿ ತಾಣಗಳ ಭೇಟಿಗೆ ಚಾಲುಕ್ಯ ದರ್ಶನ ಬಾಗಲಕೋಟೆ ಜಿಲ್ಲೆ ಹೆಚ್ಚು ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿದ ಪ್ರಮುಖ ಜಿಲ್ಲೆ. ಶಕ್ತಿದೇವತೆ …
Read More »ಮಂಗಗಳ ಮಾರಣ ಹೋಮ ಪ್ರಕರಣ; 40 ಸಾವಿರಕ್ಕೆ ಗುತ್ತಿಗೆ ಪಡೆದು ಕೃತ್ಯವೆಸಗಿದ್ದ ಪಾಪಿಗಳು
ಹಾಸನ: ಮಂಗಗಳ ಮಾರಣ ಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ 3 ದಿನಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಸನದ ಉಗಾನೆ ಗ್ರಾಮದ ಪ್ರಸನ್ನ, ರುದ್ರೇಗೌಡ, ಚಾಲಕ ಮಂಜು, ಮಂಗಗಳನ್ನು ಸೆರೆ ಹಿಡಿದಿದ್ದ ಯಶೋಧ, ರಾಮು ದಂಪತಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬೆಳೆ ಹಾನಿ ಮಾಡುತ್ತಿವೆ ಎಂದು ಕೋತಿಗಳ ಸೆರೆ ಹಿಡಿಯಲು ಜಮೀನಿನ ಮಾಲೀಕ ಪ್ರಸನ್ನ, ರುದ್ರೇಗೌಡ ಅವರು ಯಶೋಧ ಹಾಗೂ ರಾಮು ದಂಪತಿಗೆ …
Read More »ಅಸಭ್ಯ ವರ್ತನೆ ತೋರಿದ್ದಕ್ಕೆ ಸ್ಕೂಟರ್ ಎತ್ತಿ ಚರಂಡಿಗೆ ಎಸೆದ ಮಹಿಳೆ; ನೆಟ್ಟಿಗರಿಂದ ಶ್ಲಾಘನೆ
ಮಹಿಳೆಯರು ಅವಮಾನ, ಲೈಂಗಿಕ ದೌರ್ಜನ್ಯ ಈ ರೀತಿಯ ಕೃತ್ಯಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಅವಮಾನಿಸಿದ ವ್ಯಕ್ತಿಗೆ ಇರ್ಲೋರ್ವ ಮಹಿಳೆ ತಕ್ಕ ಪಾಠ ಕಲಿಸಿದ್ದಾಳೆ. ಘಟನೆ ಅಸ್ಸಾಂನಲ್ಲಿ(Assam) ನಡೆದಿದೆ. ಫೊಟೋದ ಜತೆಗೆ, ನಡೆದ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹೇಳುತ್ತಿದ್ದಂತೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. ಗುಹಾವಟಿಯಲ್ಲಿ ಭಾವನಾ ಕಶ್ಯಪ್ ನಿಂತಿದ್ದರು. ಅಡ್ರೆಸ್ ಕೇಳುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿ ಅಸಭ್ಯವರ್ತನೆ ತೋರಿದ್ದಾನೆ. ನನಗೆ ಅಡ್ರೆಸ್ ಕುರಿತಾದ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಂತೆಯೇ ಮಹಿಳೆಯ …
Read More »ಸಾರ್ವಜನಿಕರಿದ್ದ ಸ್ಥಳದಲ್ಲೇ ವ್ಯಕ್ತಿಯ ಮೇಲೆ ಮಾರಾಣಾಂತಿಕ ಹಲ್ಲೆ..!
ಬೆಂಗಳೂರು: ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನ ಅಡ್ಡಗಟ್ಟಿ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಸಂಜಯನಗರದಲ್ಲಿ ನಡೆದಿದೆ. ಮುನಿರಾಜು ಎಂಬಾತ ಬೈಕ್ ನಲ್ಲಿ ಹೋಗುತ್ತಿದ್ದ. ಆ ವೇಳೆ ಅಡ್ಡ ಬಂದ ಹೆಲ್ಮೆಟ್ ಹಾಕಿದ್ದ ವ್ಯಕ್ತಿಗಳು ಆತನನ್ನ ತಡೆದಿದ್ದಾರೆ. ಗಾಡಿಯಿಂದ ಕೆಳಕ್ಕೆ ಬೀಳಿಸಿ, ಕಬ್ಬಿಣದ ಸಲಾಕೆ, ಕ್ರಿಕೆಟ್ ಆಡುವ ವಿಕೆಟ್ ನಿಂದ ಜೋರು ಹಲ್ಲೆ ನಡೆಸಿದ್ದಾರೆ. ಮುನಿರಾಜು ಜೊತೆ ಇದ್ದ ಮಹಿಳೆ ಕಿರುಚಿಕೊಂಡರು ಬಿಟ್ಟಿಲ್ಲ. ಮೃಗೀಯವಾಗಿ ವರ್ತಿಸಿದ್ದಾರೆ. ಘಟನೆಯಲ್ಲಿ ರಾಮಮೂರ್ತಿ ನಗರದ …
Read More »