ಬೆಳಗಾವಿ: ದುಡಿದ 2000 ರೂಪಾಯಿಯನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬ್ಲೇಡ್ ನಿಂದ ಕುಯ್ದು ಕೊಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ. ಕೊಲೆಯಾದ ವ್ಯಕ್ತಿಯ ಹೆಸರು ಮಹಾದೇವ್ ಜಾಧವ. ವಯಸ್ಸು 55ವರ್ಷ. ಬೆಳಗಾವಿಯ ವಡಗಾಂವ ನಿವಾಸಿ. ಕಳೆದ ಹಲವು ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡಿದ್ದ ಇತ. ಇವತ್ತು ವಡಗಾಂವನ ಯಳ್ಳೂರು ರಸ್ತೆಯಲ್ಲಿ ಹೆಣವಾಗಿ ಬಿದ್ದಿದ್ದಾನೆ. ಹಾಡು ಹಗಲೇ ಜನ ಓಡಾಡುತ್ತಿರುವ ರಸ್ತೆಯಲ್ಲಿಯೇ ಕತ್ತು ಕೊಯ್ದು ಮಹಾದೇವ್ನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. …
Read More »ಪದವಿ ಕಾಲೇಜುಗಳ ಪ್ರವೇಶಾತಿ ಹೆಚ್ಚಳ ನಿರೀಕ್ಷೆ
ಭದ್ರಾವತಿ: ಇಲ್ಲಿನ ಸರ್ಕಾರಿ ಪದವಿ ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶಾತಿ ಕೊರತೆ ಎದುರಿಸುತ್ತಿದ್ದವು. ಆದರೆ, ಈ ಬಾರಿಯ ಪಿಯು ಫಲಿತಾಂಶ ಆ ಕೊರತೆಯನ್ನು ನೀಗಿಸುತ್ತಿದ್ದು, ಸದ್ಯ 400 ಪ್ರವೇಶಾತಿ ಅರ್ಜಿಗಳು ಖಾಲಿಯಾಗಿವೆ. ಈ ಬೆಳವಣಿಗೆ ಪ್ರವೇಶ ಹೆಚ್ಚಳದ ನಿರೀಕ್ಷೆ ಹುಟ್ಟಿಸಿದೆ. ತಾಲ್ಲೂಕಿನ ಸರ್ಕಾರಿ ಪದವಿ ಕಾಲೇಜುಗಳು ಸುಸಜ್ಜಿತ ಕಟ್ಟಡ, ಮೂಲ ಸೌಲಭ್ಯ, ಲೈಬ್ರರಿ, ಲ್ಯಾಬ್ ಸೇರಿ ಉತ್ತಮ ಅಧ್ಯಾಪಕ ವೃಂದ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ಹೊಂದಿದ್ದರೂ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದವು. …
Read More »ಪ್ರವಾಸಿಗರಿಗೆ ಸುರಕ್ಷತೆಯ ಕೊರತೆ
ರಬಕವಿ ಬನಹಟ್ಟಿ: ತಾಲ್ಲೂಕಿನ ಹಿಪ್ಪರಗಿ ಜಲಾಶಯ ಈಗ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರತಿನಿತ್ಯ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಅಥಣಿ ತಾಲ್ಲೂಕಿನ ನೂರಾರು ಜನರು ವೀಕ್ಷಣೆ ಮಾಡಲು ಬರುತ್ತಿದ್ದಾರೆ. ಆದರೆ ಜಲಾಶಯದ ಸುತ್ತಮುತ್ತ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ವೀಕ್ಷಣೆ ಮಾಡಲು ಬಂದ ಜನರು ಜಲಾಶಯದ ಎಲ್ಲ ಕಡೆಗೂ ಓಡಾಡುತ್ತಾರೆ. ಇಲ್ಲಿ ಹಾಕಲಾದ ಕಬ್ಬಿಣ …
Read More »ಶರಾವತಿಗೆ ಕೆಪಿಸಿಯಿಂದ ಬಾಗಿನ ಅರ್ಪಣೆ
ಕಾರ್ಗಲ್: ನಾಡಿಗೆ ಬೆಳಕು ನೀಡಲು ಲಿಂಗನಮಕ್ಕಿ ಅಣೆಕಟ್ಟೆಯ ಒಡಲಿನಲ್ಲಿ ಭರ್ತಿಯಾಗುವ ಶರಾವತಿಗೆ ಸೋಮವಾರ ಕೆಪಿಸಿ ಇಲಾಖೆಯ ಪರವಾಗಿ ಬಾಗಿನ ಸಮರ್ಪಿಸಲಾಗುತ್ತಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ನಾರಾಯಣ ಗಜಕೋಶ್ ತಿಳಿಸಿದರು. ಇಲ್ಲಿಗೆ ಸಮೀಪದ ಲಿಂಗನಮಕ್ಕಿ ಜಲಾಶಯದಲ್ಲಿ ಸೋಮವಾರ ಶರಾವತಿ ನದಿಗೆ ಬಾಗಿನ ಸಮರ್ಪಿಸಿ ಅವರು ಮಾತನಾಡಿದರು. ‘ಸಮುದ್ರ ಮಟ್ಟದಿಂದ ಗರಿಷ್ಠ 1,819 ಅಡಿ ಎತ್ತರದವರೆಗೂ ಜಲಸಂಗ್ರಹ ಸಾಮರ್ಥ್ಯವಿರುವ ಲಿಂಗನಮಕ್ಕಿ ಜಲಾಶಯದಲ್ಲಿ, 1,795 ಅಡಿ ನೀರು ಭರ್ತಿಯಾದಾಗ ಜಲಾಶಯದ ಅರ್ಧ ಭಾಗ …
Read More »ಕಾಫಿ ವ್ಯಾಪಾರದಲ್ಲಿ 1 ಕೋಟಿ ನಷ್ಟ: ಚಿಕ್ಕಮಗಳೂರಿನ ವ್ಯಾಪಾರಿ ಬೆಂಗಳೂರಿನಲ್ಲಿ ಆತ್ಮಹತ್ಯೆ
ಬೆಂಗಳೂರು: ಕಾಫಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಕಾರಣ ಶಾಕೀರ್ ಅಹ್ಮದ್(28) ಎಂಬ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ನಿವಾಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಖಾಸಗಿ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 1 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದ ಶಾಕೀರ್ ಅಹ್ಮದ್ ಜುಲೈ 13ರಿಂದ ನಾಪತ್ತೆಯಾಗಿದ್ದಾರೆಂದು ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜುಲೈ 29ರಿಂದ ವಜ್ರೇಶ್ವರಿ ಲಾಡ್ಜ್ನಲ್ಲಿ ತಂಗಿದ್ದ ಶಾಕೀರ್, ಇಂದು ಮಧ್ಯಾಹ್ನ ಊಟಕ್ಕೆ ಹೊರ ಬರದಿದ್ದಾಗ ಲಾಡ್ಜ್ ಸಿಬ್ಬಂದಿ …
Read More »ಹೆಂಡತಿಯೊಂದಿಗೆ ಜಗಳವಾಡಿ, ಕುತ್ತಿಗೆಗೆ ಇರಿದು ಕೊಂದ ಗಂಡ..
ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚೂರಿಯಿಂದ ಪತ್ನಿಯ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ ಪತಿಯನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಚಂದ್ರ ಲೇಔಟ್‌ನ ಗಂಗೊಂಡನಹಳ್ಳಿ ನಿವಾಸಿ ಸೈಯದ್ ಶಕೀರ್ (25) ಬಂಧಿತ. ಆತನ ಪತ್ನಿ ಬೇಬಿ ಆಯೇಷಾ (20) ಹತ್ಯೆಯಾದ ಮಹಿಳೆ. ಆರೋಪಿ ಸೈಯದ್ ಕೆಲ ವರ್ಷಗಳ ಹಿಂದೆ ಆಯೇಷಾಳನ್ನು ವಿವಾಹವಾಗಿದ್ದ. ದಂಪತಿಗೆ 3 ಹಾಗೂ 5 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರು ಕೋಲಾರದ ಬಾಗೆಪಲ್ಲಿಯಿಂದ ಕೆಲ ಸಮಯದ …
Read More »ಚಿತ್ರದುರ್ಗ: ಅತ್ಯಾಚಾರ ಪ್ರಕರಣದ ಬಗ್ಗೆ ವದಂತಿ ಹಬ್ಬಿಸಿ ಜೈಲು ಸೇರಿದ ಯುವಕ
ಚಿತ್ರದುರ್ಗ: ತಾಲ್ಲೂಕಿನ ಭರಮಸಾಗರ ಠಾಣೆಯ ವ್ಯಾಪ್ತಿಯ 13 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿ ಗೊಂದಲ ಸೃಷ್ಟಿಸಿದ ಆರೋಪದ ಮೇರೆಗೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ರಾಜೇಂದ್ರನಗರದ ನಿವಾಸಿ ಎಸ್.ದರ್ಶನ್ (21) ಬಂಧಿತ ಆರೋಪಿ. ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ‘ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವ ಸಿಕ್ಕಿಬಿದ್ದ. ಆದರೆ, ಅವನಿಗೆ ₹ 10 ಸಾವಿರ ದಂಡ ಹಾಗೂ ಎರಡು …
Read More »ಸಚಿವರ ಪಟ್ಟಿ ಫೈನಲ್: ನಾಳೆ ಪ್ರಮಾಣವಚನ ಸ್ವೀಕಾರ; ಸಂಪುಟಕ್ಕೆ 20-24 ಮಂತ್ರಿಗಳ ಸೇರ್ಪಡೆ..
ರಾಜ್ಯದ ಮುಖ್ಯಮಂತ್ರಿಯಾದ ದಿನದಿಂದ ಬಸವರಾಜ ಬೊಮ್ಮಾಯಿ ಅವರಿಗೆ ಕಬ್ಬಿಣದ ಕಡಲೆಯಾಗಿ ಕಾಡುತ್ತಿದ್ದ ಸಂಪುಟ ವಿಸ್ತರಣೆಗೆ ಕಡೆಗೂ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಬುಧವಾರ 20ರಿಂದ 24 ಸಚಿವರು ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತ ಎಂದು ಪಕ್ಷದ ಉನ್ನತ ಮೂಲಗಳಿಂದ ಗೊತ್ತಾಗಿದೆ. ಸೋಮವಾರ ರಾತ್ರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ …
Read More »ಆತ್ಮಹತ್ಯಾ ತಡೆ ಸಹಾಯವಾಣಿ ‘ಸಹಾಯ್’ಗೆ ಕರೆಗಳ ಹೆಚ್ಚಳ
ಘಟನೆ 1: 2020ರ ಏಪ್ರಿಲ್-ಮೇ ತಿಂಗಳಲ್ಲಿ ಕೋವಿಡ್ ಲಾಕ್‌ಡೌನ್ ಆದ ಸಂದರ್ಭ. ವಿಮಾನ, ರೈಲು ಸೇವೆಗಳೆಲ್ಲ ಬಂದ್ ಆಗಿದ್ದವು. ಆಗ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರ ಫ್ಲ್ಯಾಟ್‌ನಲ್ಲಿ ಇದ್ದು ಓದುತ್ತಿದ್ದ ಯುವಕನೊಬ್ಬನಿಗೆ ಎಲ್ಲೂ ಓಡಾಡಲಾಗದ ಸನ್ನಿವೇಶ ಜುಗುಪ್ಸೆ ತರಿಸಿತು. ಮನಸ್ಸಿನಲ್ಲಿ ಆತ್ಮಹತ್ಯೆಯ ಆಲೋಚನೆ ಸುಳಿಯಿತು. ನವದೆಹಲಿಯಲ್ಲಿದ್ದ ತಂದೆ-ತಾಯಿಗೆ ಕರೆ ಮಾಡಿದ ಆತ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿರುವುದಾಗಿ ಹೇಳಿದ. ತಕ್ಷಣ ಆತನ ತಂದೆ-ತಾಯಿ ‘ಸಹಾಯ್’ ಹೆಲ್ಪ್‌ಲೈನ್ (08025497777)ಗೆ ಕರೆ ಮಾಡಿ ವಿಷಯ …
Read More »ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ
ಹುಬ್ಬಳ್ಳಿ: ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅಭಿಮಾನಿಯೊಬ್ಬರು ದೀರ್ಘದಂಡ ನಮಸ್ಕಾರ ಸಲ್ಲಿಸಿದರು. ಇಲ್ಲಿನ ಶ್ರೀ ಸಿದ್ಧಾರೂಢ ದೇವಸ್ಥಾನದಲ್ಲಿ ಬೆಲ್ಲದ ಅಭಿಮಾನಿ ರಾಘು ಹಿರೇಗೌಡರ ಎನ್ನವವರು ದೀರ್ಘ ದಂಡ ನಮಸ್ಕಾರ ಸೇವೆ ಸಲ್ಲಿಸಿದರು. ನಂತರ ವಿಶೇಷ ಪೂಜೆ ಸಲ್ಲಿಸಿ ಬೆಲ್ಲದ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಪ್ರಾರ್ಥನೆ ಮಾಡಿದರು. ಅರವಿಂದ ಬೆಲ್ಲದ ಅವರು ಈ ಭಾಗದ ಅಭಿವೃದ್ಧಿಗೆ ಸೂಕ್ತ ವ್ಯಕ್ತಿಯಾಗಿದ್ದಾರೆ. ವಿಶೇಷ ಹಾಗೂ ವಿನೂತನ …
Read More »