ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಯಾವುದೇ ರೈಲ್ವೇ ನಿಲ್ದಾಣಗಳಲ್ಲಿ 7 ನಿಮಿಷಕ್ಕಿಂತ ಹೆಚ್ಚು ಸಮಯ ವಾಹನ ಪಾ ರ್ಕಿಂಗ್ ಮಾಡಿದರೆ ಭಾರೀ ದಂಡ ತೆರಬೇಕಾಗುತ್ತದೆ. ಬೆಂಗಳೂರು ರೈಲ್ವೆ ಇಲಾಖೆ ಸೋಮವಾರ ಈ ಆದೇಶ ಹೊರಡಿಸಿದ್ದು, ನಿಲ್ದಾಣದ ಮುಂಭಾಗದಲ್ಲಿ ಪ್ರಯಾಣಿಕರನ್ನ ಡ್ರಾಪ್ ಮಾಡುವವರು ಮತ್ತು ಪಿಕಪ್ ಮಾಡುವವರು ಗಂಟೆಗಟ್ಟಲೇ ತಮ್ಮ ವಾಹನವನ್ನುನಿಲ್ಲಿಸುತ್ತಿದ್ದಾರೆ. ಈ ಮೂಲಕ ಸಂಚಾರ ದಟ್ಟಣೆಗೆ ತೊಂದರೆ ಆಗುತ್ತಿದೆ ವಾಹನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ 7 ನಿಮಿಷಕ್ಕಿಂತ …
Read More »ಇಂದಿನಿಂದ ನೈಟ್ ಕರ್ಫ್ಯೂ: ಅನಗತ್ಯವಾಗಿ ಓಡಾಡಿದ್ರೆ ಬೀಳುತ್ತೆ ಕೇಸ್- ಯಾವುದಕ್ಕೆಲ್ಲ ವಿನಾಯಿತಿ?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಘೋಷಿಸಲಾಗಿದೆ. ಇಂದಿನಿಂದ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾತ್ರಿ 10 ಗಂಟೆ ನಂತರ ಅನಗತ್ಯವಾಗಿ ರಸ್ತೆಗಿಳಿಯುವ ಸಾರ್ವಜನಿಕರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಮತ್ತು ಪೊಲೀಸ್ ಇಲಾಖೆ ತಿಳಿಸಿದೆ. ಪೊಲೀಸರು, ಮಾರ್ಷಲ್ಸ್ ನೇತೃತ್ವದಲ್ಲಿ ಇಂದಿನಿಂದ ಕಾರ್ಯಾಚರಣೆ ಆರಂಭವಾಗುತ್ತಿದೆ. ಆದ್ದರಿಂದ ಇಂದು (ಮಂಗಳವಾರ- ಜುಲೈ 3) ರಾತ್ರಿ 10 ಗಂಟೆಯಿಂದ ರಾತ್ರಿ …
Read More »ದಿಢೀರ್ ಇಳಿಕೆ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 30,549 ಕೋವಿಡ್ ಪ್ರಕರಣ ಪತ್ತೆ
ನವದೆಹಲಿ:ಭಾರತದಲ್ಲಿ ದಿಢೀರ್ ಏರಿಕೆ ಕಂಡಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, 30,549 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ(ಆಗಸ್ಟ್ 03) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ. ಕಳೆದ 24ಗಂಟೆಗಳಲ್ಲಿ ಕೋವಿಡ್ 19 ಸೋಂಕಿನಿಂದ 422 ಮಂದಿ ಸಾವನ್ನಪ್ಪಿದ್ದು, 38,887 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,17,26,507ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ 4,25,195ಕ್ಕೆ ತಲುಪಿದೆ. …
Read More »ಏಕಲವ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ದೇವನಹಳ್ಳಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2020ನೇ ಸಾಲಿನ ಏಕಲವ್ಯ ಪ್ರಶಸ್ತಿ ಮತ್ತು ನಗದು ಪುರಸ್ಕಾರಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏಕಲವ್ಯ ಪ್ರಶಸ್ತಿಗೆ ಕಳೆದ 5 ವರ್ಷದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಜಿಲ್ಲೆಯ ಕ್ರೀಡಾಪಟುಗಳು ಹಾಗೂ 2020ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯ ಪ್ರತಿನಿಧಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ …
Read More »ಯಾವ ಸ್ಥಾನ ನೀಡಿದ್ರೂ ನಿಭಾಯಿಸುವೆ-ಮಹೇಶ್ ಕುಮಟಳ್ಳಿ
ಬೆಳಗಾವಿ: ಯಾವುದೇ ಸ್ಥಾನ ನೀಡಿದರೂ ನಾನು ನಿಭಾಯಿಸುವೆ. ಮಂತ್ರಿಗಿರಿಗಾಗಿ ಯಾವುದೇ ಲಾಭಿ ಮಾಡಲ್ಲ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಅಥಣಿ ತಾಲೂಕಿನ ಪ್ರವಾಹ ಸಂತ್ರಸ್ತರ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ಗ್ರಾಮಗಳ ಸ್ಥಳಾಂತರಕ್ಕೆ ಜಮೀನಿನ ಕೊರತೆ ಇದೆ. ಅದಕ್ಕಾಗಿ ಪುನರ್ವಸತಿ ಕಾರ್ಯ ವಿಳಂಬವಾಗುತ್ತಿದೆ. ಶೀಘ್ರದಲ್ಲೇ ವಿಶೇಷ ಪ್ರಕರಣದಡಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು …
Read More »ಬೀದಿಯಲ್ಲಿ ಫೋಟೋ ಹಾಕಿ ಪೋಸ್ ಕೊಡುವ ಮೋದಿಗೆ ಲಸಿಕೆ ಪೂರೈಸುವ ಜ್ಞಾನವಿಲ್ಲವೆ : ಗುಂಡೂರಾವ್
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಭೀತಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ರಾಜ್ಯದ ಬಹುತೇಕ ಕಡೆ ಕೋವಿಡ್ ಲಸಿಕೆಯ ಅಭಾವವಿದೆ. ರಾಜ್ಯಗಳಿಗೆ ಅಗತ್ಯ ಪ್ರಮಾಣದ ಲಸಿಕೆ ಒದಗಿಸುವುದು ಕೇಂದ್ರದ ಜವಬ್ಧಾರಿ. ಆದರೆ ಕೇಂದ್ರ ಲಸಿಕೆ ಪೂರೈಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರದ ವಿರುದ್ಧ ಗುಡುಗಿದ್ದಾರೆ. ಲಸಿಕಾ ಅಭಿಯಾನದ ಬಗ್ಗೆ ಹಾದಿ ಬೀದಿಯಲ್ಲಿ ಫೋಟೋ ಹಾಕಿಕೊಂಡು ಪೋಸ್ ಕೊಡುವ …
Read More »ಭೀಕರ ಅಪಘಾತ; ದುರ್ಘಟನೆ ಬಳಿಕ ಹೊತ್ತಿಕೊಂಡ ಬೆಂಕಿಯಿಂದ ಇಬ್ಬರು ಪಾರಾಗಿದ್ದೇ ಪವಾಡ
ತುಮಕೂರು: ಬೆಳ್ಳಂಬೆಳಗ್ಗೆ ಎರಡು ಲಾರಿಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪೊಲೀಸರ ಸಮಯ ಪ್ರಜ್ಞೆಯಿಂದ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಶಿರಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಳ್ಳಂಬೆಳ್ಳ ಬಳಿ ನಡೆದಿದೆ. ಬೆಂಗಳೂರು ಕಡೆ ತೆರಳುತ್ತಿದ್ದ ಸಿಮೆಂಟ್ ಪೈಪ್‌ಗಳನ್ನು ಹೊತ್ತಿದ್ದ ಲಾರಿ ಮತ್ತು ಕಟ್ಟಿಗೆ ತುಂಬಿದ ಲಾರಿ ಪರಸ್ಪರ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಪರಿಣಾಮ ಕಟ್ಟಿಗೆ ತುಂಬಿದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ …
Read More »ಮೃತ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಬಿಎಸ್‌ವೈ
ಗುಂಡ್ಲುಪೇಟೆ: ಸಿಎಂ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬೊಮ್ಮಲಾಪುರ ರವಿ ಅವರ ಕುಟುಂಬದವರಿಗೆ ಯಡಿಯೂರಪ್ಪ ಅವರು ಶುಕ್ರವಾರ ಸಾಂತ್ವನ ಹೇಳಿ ವೈಯಕ್ತಿಕವಾಗಿ 5 ಲಕ್ಷ ರೂ. ನೆರವು ನೀಡಿದರು. ರವಿ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಯಡಿಯೂರಪ್ಪ ಸಾಂತ್ವನ ಹೇಳಿದರು. ಮನೆಯವರು ಸಂಕಷ್ಟದಲ್ಲಿರುವುದನ್ನು ಅರಿತು ಮನೆ ನಿರ್ಮಾಣಕ್ಕೂ ಮುಂದೆ 5 ಲಕ್ಷ ರೂ. ನೆರವು ನೀಡುವುದಾಗಿ ಭರವಸೆ ನೀಡಿದರು. ಗುಂಡ್ಲುಪೇಟೆಗೆ ಹೆಲಿಕಾಪ್ಟರ್ ಮುಖಾಂತರ ಆಗಮಿಸಿದ್ದ …
Read More »ಐ ಲವ್ ಯೂ, ಯೂ ಮಸ್ಟ್ ಲವ್ ಮೀ ಅಂತ ಯುವತಿ ಮೇಲೆ ಹಲ್ಲೆ ಮಾಡಿದ ಮ್ಯಾನೇಜರ್
ಬೆಂಗಳೂರ: ಪಿಜ್ಜಾಹಟ್ನಲ್ಲಿ ಯುವತಿ ಮೇಲೆ ಹಲ್ಲೆ ನಡೆಸಿರೋ ಘಟನೆ ಬಸವನಗುಡಿಯ ರಾಮಕೃಷ್ಣ ಆಶ್ರಮದ ಬಳಿ ನಡೆದಿದೆ. ರಾಮಕೃಷ್ಣ ಆಶ್ರಮದ ರಸ್ತೆಯಲ್ಲಿರೋ ಪಿಜ್ಜಾ ಹಟ್ನಲ್ಲಿ ಮ್ಯಾನೇಜರ್ ಯುವತಿಯ ಕಪಾಳಕ್ಕೆ ಮನಸೋ ಇಚ್ಚೆ ಥಳಿಸಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಸಂತ್ರಸ್ತೆಯನ್ನ ಲವ್ ಮಾಡುವಂತೆ ಮ್ಯಾನೇಜರ್ ಪೀಡಿಸ್ತಿದ್ದ, ಆದ್ರೆ ಯುವತಿ ನಿರಾಕರಿಸಿ ಮತ್ತೊಬ್ಬ ಯುವಕನನ್ನ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಷಯ ತಿಳಿದು ಯುವತಿ ಮೇಲೆ ಮ್ಯಾನೇಜರ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ, ಯುವತಿಗೆ …
Read More »ರಸ್ತೆ ಅಪಘಾತ: ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಸಾವು
ಮಡಿಕೇರಿ : ಕಾರು ಅಪಘಾತದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರವೀಂದ್ರನ್ ಮೃತಪಟ್ಟಿರುವ ಘಟನೆ ಹುಣಸೂರು ಸಮೀಪದ ಚಿಲ್ಕುಂದ ಗ್ರಾಮದ ಸಮೀಪ ನಡೆದಿದೆ. ಕರ್ತವ್ಯಕ್ಕಾಗಿ ತಮ್ಮ ಕಾರಿನಲ್ಲಿ ಮೈಸೂರಿನಿಂದ ಸೋಮವಾರಪೇಟೆಗೆ ತೆರಳುತ್ತಿದ್ದ ಸಂದರ್ಭ ಚಿಲ್ಕುಂದ ಗ್ರಾಮದ ಸಮೀಪ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಪರಿಣಾಮ ತೀವ್ರಗಾಯ ಗೊಂಡಿದ್ದರು. ತಕ್ಷಣವೇ ಮೈಸೂರಿನ ಅಪಲೋ ಆಸ್ಪತ್ರೆಗೆ ಸಾಗಿಸಲಾಯಿತಾದರು ದಾರಿ ಮಧ್ಯೆ ಮೃತಪಟ್ಟಿದ್ದರು. ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ತಂಗಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ …
Read More »