ಬೆಳಗಾವಿ: ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕನೊಬ್ಬ 10ನೇ ತರಗತಿ ವಿದ್ಯಾರ್ಥಿನಿಯನ್ನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಳಗಾವಿಯ ರಾಯಭಾಗದಲ್ಲಿ ನಡೆದಿದೆ. ಆರೋಪಿ ಅಮೀರ್ ದಾರ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಆರೋಪಿ ಯುವತಿಗೆ ತನ್ನನ್ನು ಪ್ರೀತಿಸುವಂತೆ ಬಲವಂತ ಮಾಡಿ ಪೀಡಿಸುತ್ತಿದ್ದ. ಯುವತಿ ನಿರಾಕರಿಸಿದ್ದಾಳೆ. ಟ್ಯೂಷನ್ ಮುಗಿಸಿ ಶಿಕ್ಷಕರ ಮನೆಯಿಂದ ವಾಪಸ್ ಅಗುತ್ತಿದ್ದ ವಿದ್ಯಾರ್ಥಿನಿಯನ್ನು ಯುವಕ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
Read More »ಯಡಿಯೂರಪ್ಪನ್ನು ತೆಗೆದು ಹಾಕಿದ್ದು ವಯಸ್ಸಾಗಿದೆ ಎಂದಲ್ಲ; ಅಪ್ಪ-ಮಗ ಸೇರಿ ಲೂಟಿ ಮಾಡಿದ್ರು ಅಂತಾ ತೆಗೆದ್ರು: ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಿದ್ದಾರೆ. ವಯಸ್ಸು ಆಗಿದೆ ಎಂದು ತೆಗೆದಿಲ್ಲ. ಬದಲಾಗಿ ದುಡ್ಡು ಹೊಡೆದ್ರು ಅಂತಾ ತೆಗೆದಿದ್ದು. ಅಪ್ಪ-ಮಗ ಜೋಡಿ ಲೂಟಿ ಮಾಡಿದರು ಅಂತಾ ತೆಗೆದರು ಎಂದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಐಟಿ, ಇಡಿ ಇದೆ ಎಂದು ಹೇಳಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದಾರೆ. ಆರ್ಟಿಜಿಎಸ್ ಮೂಲಕ ಯಡಿಯೂರಪ್ಪ ಹಣ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ಮದುವೆ ಊಟ ಮಾಡೇ ಇಲ್ಲ. …
Read More »ಆಟೋ ಗ್ಯಾಸ್ ದರ ಹೆಚ್ಚಳ; ಆಟೋ ಮೀಟರ್ ಮಿನಿಮಮ್ ದರ ಹೆಚ್ಚಿಸಲು ಸರ್ಕಾರಕ್ಕೆ ಮನವಿ
ಬೆಂಗಳೂರು: ಆಟೋ ಗ್ಯಾಸ್ ದರ ಏರಿಸಿರುವ ಸರ್ಕಾರದ ನಡೆಗೆ ಆಟೋ ಚಾಲಕರು ಮತ್ತು ಮಾಲೀಕರ ಅಸೋಸಿಯೇಷನ್‌ಗಳು ಖಂಡನೆ ವ್ಯಕ್ತಪಡಿಸಿದ್ದು, ಆಟೋ ಪ್ರಯಾಣದ ಕನಿಷ್ಠ ದರವನ್ನು ಹೆಚ್ಚಿಸಲು ಆಗ್ರಹಿಸಿವೆ. ಆಟೋ ಗ್ಯಾಸ್ ದರ (Auto Gas Rate) ಏರಿಕೆ ಮಾಡಿರುವುದು ಹೊರೆಯಾಗಿ ಪರಿಣಮಿಸುತ್ತಿದೆ. ಹೀಗಾಗಿ, ಆಟೋ ಮೀಟರ್ ಮಿನಿಮಮ್ ದರ ಏರಿಸಬೇಕು ಎಂದು ಸಹ ಅಸೋಸಿಯೇಶನ್ ಆಗ್ರಹಿಸಿದೆ. ಆಟೋ ಮೀಟರ್ ಕನಿಷ್ಠ ದರವನ್ನು 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆ ಮಾಡುವಂತೆ …
Read More »ಬಿಎಸ್‍ವೈ ನಿವಾಸದಲ್ಲಿ ಇಂದೂ ಮುಂದುವರೆದ ಸಚಿವಾಕಾಂಕ್ಷಿಗಳ ಲಾಬಿ
ಬೆಂಗಳೂರು,ಆ.3- ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮಾಜಿ ಸಿಎಂ ಯಡಿಯೂರಪ್ಪನವರ ನಿವಾಸ ಕಾವೇರಿ ನಿವಾಸಕ್ಕೆ ಸಚಿವ ಆಕಾಂಕ್ಷಿಗಳ ದಂಡು ಇಂದೂ ಕೂಡ ಧಾವಿಸಿ ಲಾಬಿ ಮುಂದುವರೆಸಿದೆ. ಬೆಳಗ್ಗೆ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಕಾವೇರಿ ನಿವಾಸಕ್ಕೆ ಆಗಮಿಸಿ ಸುಮಾರು ಹೊತ್ತು ಚರ್ಚೆ ನಡೆಸಿ ಅಲ್ಲಿಂದ ನಿರ್ಗಮಿಸಿದರು. ಆದರೆ ಅವರು ಸಂಪುಟಕ್ಕೆ ತೆಗೆದುಕೊಳ್ಳುವಂತೆ ತಮ್ಮ ತಂದೆಯ ಬಳಿ ಮನವಿ ಮಾಡಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಲಿಲ್ಲ. ಇನ್ನು ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಗಂಗಾವತಿಯ …
Read More »ಯಡಿಯೂರಪ್ಪ ಮುಂದೆ ದೆಹಲಿ ಹೈಕಮಾಂಡ್ ಮಂಡಿಯೂರಿ ಶರಣಾಗಿದೆಯೇ? ಧೃತರಾಷ್ಟ್ರ ಪುತ್ರಪ್ರೇಮವೇ ಕುರುಕ್ಷೇತ್ರಕ್ಕೆ ಕಾರಣ!
ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿ ಸಿಎಂ ಪುತ್ರನನ್ನು ಸಿಎಂ ಮಾಡಿದ ಹೆಗ್ಗಳಿಕೆಯೊಂದಿಗೆ ಈಗ ಚುನಾಯಿತ ಪ್ರತಿನಿಧಿಯೇ ಅಲ್ಲದ ಬಿವೈ ವಿಜಯೇಂದ್ರ ಅವರನ್ನು ಸಚಿವರನ್ನಾಗಿಸಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮುಂದೆ ದೆಹಲಿ ಹೈಕಮಾಂಡ್ ಮಂಡಿಯೂರಿ ಶರಣಾಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಹಿಂಬಾಗಿಲಲ್ಲಿ ಆಡಳಿತ ನಡೆಸುತ್ತಿದ್ದ ‘ಸೂಪರ್ ಸಿಎಂ’ ವಿಜಯೇಂದ್ರ …
Read More »ರೈಲ್ವೆ ನಿಲ್ದಾಣಗಳಲ್ಲಿ ವಾಹನ ನಿಲ್ಲಿಸಿದರೆ ಭಾರೀ ದಂಡ!
ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಯಾವುದೇ ರೈಲ್ವೇ ನಿಲ್ದಾಣಗಳಲ್ಲಿ 7 ನಿಮಿಷಕ್ಕಿಂತ ಹೆಚ್ಚು ಸಮಯ ವಾಹನ ಪಾ ರ್ಕಿಂಗ್ ಮಾಡಿದರೆ ಭಾರೀ ದಂಡ ತೆರಬೇಕಾಗುತ್ತದೆ. ಬೆಂಗಳೂರು ರೈಲ್ವೆ ಇಲಾಖೆ ಸೋಮವಾರ ಈ ಆದೇಶ ಹೊರಡಿಸಿದ್ದು, ನಿಲ್ದಾಣದ ಮುಂಭಾಗದಲ್ಲಿ ಪ್ರಯಾಣಿಕರನ್ನ ಡ್ರಾಪ್ ಮಾಡುವವರು ಮತ್ತು ಪಿಕಪ್ ಮಾಡುವವರು ಗಂಟೆಗಟ್ಟಲೇ ತಮ್ಮ ವಾಹನವನ್ನುನಿಲ್ಲಿಸುತ್ತಿದ್ದಾರೆ. ಈ ಮೂಲಕ ಸಂಚಾರ ದಟ್ಟಣೆಗೆ ತೊಂದರೆ ಆಗುತ್ತಿದೆ ವಾಹನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ 7 ನಿಮಿಷಕ್ಕಿಂತ …
Read More »ಇಂದಿನಿಂದ ನೈಟ್ ಕರ್ಫ್ಯೂ: ಅನಗತ್ಯವಾಗಿ ಓಡಾಡಿದ್ರೆ ಬೀಳುತ್ತೆ ಕೇಸ್- ಯಾವುದಕ್ಕೆಲ್ಲ ವಿನಾಯಿತಿ?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಘೋಷಿಸಲಾಗಿದೆ. ಇಂದಿನಿಂದ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾತ್ರಿ 10 ಗಂಟೆ ನಂತರ ಅನಗತ್ಯವಾಗಿ ರಸ್ತೆಗಿಳಿಯುವ ಸಾರ್ವಜನಿಕರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಮತ್ತು ಪೊಲೀಸ್ ಇಲಾಖೆ ತಿಳಿಸಿದೆ. ಪೊಲೀಸರು, ಮಾರ್ಷಲ್ಸ್ ನೇತೃತ್ವದಲ್ಲಿ ಇಂದಿನಿಂದ ಕಾರ್ಯಾಚರಣೆ ಆರಂಭವಾಗುತ್ತಿದೆ. ಆದ್ದರಿಂದ ಇಂದು (ಮಂಗಳವಾರ- ಜುಲೈ 3) ರಾತ್ರಿ 10 ಗಂಟೆಯಿಂದ ರಾತ್ರಿ …
Read More »ದಿಢೀರ್ ಇಳಿಕೆ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 30,549 ಕೋವಿಡ್ ಪ್ರಕರಣ ಪತ್ತೆ
ನವದೆಹಲಿ:ಭಾರತದಲ್ಲಿ ದಿಢೀರ್ ಏರಿಕೆ ಕಂಡಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, 30,549 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ(ಆಗಸ್ಟ್ 03) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ. ಕಳೆದ 24ಗಂಟೆಗಳಲ್ಲಿ ಕೋವಿಡ್ 19 ಸೋಂಕಿನಿಂದ 422 ಮಂದಿ ಸಾವನ್ನಪ್ಪಿದ್ದು, 38,887 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,17,26,507ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ 4,25,195ಕ್ಕೆ ತಲುಪಿದೆ. …
Read More »ಏಕಲವ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ದೇವನಹಳ್ಳಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2020ನೇ ಸಾಲಿನ ಏಕಲವ್ಯ ಪ್ರಶಸ್ತಿ ಮತ್ತು ನಗದು ಪುರಸ್ಕಾರಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏಕಲವ್ಯ ಪ್ರಶಸ್ತಿಗೆ ಕಳೆದ 5 ವರ್ಷದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಜಿಲ್ಲೆಯ ಕ್ರೀಡಾಪಟುಗಳು ಹಾಗೂ 2020ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯ ಪ್ರತಿನಿಧಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ …
Read More »ಯಾವ ಸ್ಥಾನ ನೀಡಿದ್ರೂ ನಿಭಾಯಿಸುವೆ-ಮಹೇಶ್ ಕುಮಟಳ್ಳಿ
ಬೆಳಗಾವಿ: ಯಾವುದೇ ಸ್ಥಾನ ನೀಡಿದರೂ ನಾನು ನಿಭಾಯಿಸುವೆ. ಮಂತ್ರಿಗಿರಿಗಾಗಿ ಯಾವುದೇ ಲಾಭಿ ಮಾಡಲ್ಲ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಅಥಣಿ ತಾಲೂಕಿನ ಪ್ರವಾಹ ಸಂತ್ರಸ್ತರ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ಗ್ರಾಮಗಳ ಸ್ಥಳಾಂತರಕ್ಕೆ ಜಮೀನಿನ ಕೊರತೆ ಇದೆ. ಅದಕ್ಕಾಗಿ ಪುನರ್ವಸತಿ ಕಾರ್ಯ ವಿಳಂಬವಾಗುತ್ತಿದೆ. ಶೀಘ್ರದಲ್ಲೇ ವಿಶೇಷ ಪ್ರಕರಣದಡಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು …
Read More »