ಬೆಂಗಳೂರು: ಕೋವಿಡ್ ಮೂರನೇ ಅಲೆ ಆತಂಕ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯೋತ್ಸವನ್ನ ಈ ಬಾರಿ ಸರಳವಾಗಿ ಆಚರಿಸಲು ಬಿಬಿಎಂಪಿ ನಿರ್ಧರಿಸಿದೆ. ಅದರಂತೆ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಭೆ ಕರೆದಿದ್ದಾರೆ. ಇಂದು ಬೆಳಗ್ಗೆ 11ಕ್ಕೆ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆಗಳ ಬಗ್ಗೆ ಸಭೆ ನಡೆಯಲಿದೆ. ಸಭೆಯಲ್ಲಿ ವಲಯವಾರು ಬಿಬಿಎಂಪಿ ಅಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಸೋಂಕು ಹರಡದಂತೆ ಸರಳವಾಗಿ ಯಾವ ರೀತಿ ಆಚರಿಸಬೇಕು. …
Read More »ಎಸ್ಎಸ್ಎಲ್ಸಿ ಫಲಿತಾಂಶ ಆಗಸ್ಟ್ 9 ರ ಸೋಮವಾರ ಪ್ರಕಟ
ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿರುವ ಎಸ್ಎಸ್ಎಲ್ಸಿ ಫಲಿತಾಂಶ ಆಗಸ್ಟ್ 9 ರ ಸೋಮವಾರ ಪ್ರಕಟವಾಗಲಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ಸೋಮವಾರ ಮಧ್ಯಾಹ್ನ 3:30 ಕ್ಕೆ ಪರೀಕ್ಷೆಯ ಫಲಿತಾಂಶ ಹೊರಬೀಳಲಿದೆ. ವಿದ್ಯಾರ್ಥಿಗಳ ಮೊಬೈಲ್ಗಳಿಗೆ ನೇರವಾಗಿ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನ ಕಳುಹಿಸಲಾಗುವುದು ಎಂದು ಹೇಳಲಾಗಿದೆ. ಅಂದು ಮಧ್ಯಾಹ್ನ 3:30ಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸಚಿವರಿಗೆ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳು ಸಾಥ್ ನೀಡಲಿದ್ದಾರೆ.
Read More »ರಾಜ್ಯದ ಯಾವ್ಯಾವ ಕಡೆ ಎಷ್ಟಿದೆ ಪೆಟ್ರೋಲ್, ಡೀಸೆಲ್ ಬೆಲೆ
ಬೆಂಗಳೂರು, ಆಗಸ್ಟ್ 07: ದೇಶದಲ್ಲಿ ಸತತ 20 ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದ್ದು, ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಆಗಸ್ಟ್ 7ರಂದು ಕೂಡ ಇಂಧನ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಜುಲೈ ತಿಂಗಳಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಳಿತ ಕಂಡುಬಂದಿತ್ತು. ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 40 ಬಾರಿ ಹಾಗೂ ಡೀಸೆಲ್ 37 ಬಾರಿ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲೇ 21 ಬಾರಿ ಬೆಲೆ …
Read More »ಚಿನ್ನ ಖರೀದಿಗೆ ಒಳ್ಳೆ ಅವಕಾಶ; ಆಗಸ್ಟ್ 7ರಂದು ಭಾರೀ ಇಳಿಕೆಯಾಗಿದೆ ಬೆಲೆ
ನವದೆಹಲಿ, ಆಗಸ್ಟ್ 07: ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ ತಿಂಗಳ ಮೊದಲ ವಾರವಿಡೀ ಚಿನ್ನದ ವಹಿವಾಟು ನಿರಂತರ ಕುಸಿತ ಕಂಡಿದ್ದು, ಆಗಸ್ಟ್ 7ರ ಶನಿವಾರ ಕೂಡ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಹಬ್ಬದ ಸಮಯ ಹತ್ತಿರ ಬರುತ್ತಿದ್ದು, ಚಿನ್ನ ಖರೀದಿಸಲು ಗ್ರಾಹಕರಿಗೆ ಇದು ಉತ್ತಮ ಅವಕಾಶವೂ ಆಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಶನಿವಾರ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆ ಕೂಡ ಸತತ ಇಳಿಕೆಯಾಗಿದೆ. ಶನಿವಾರದ ಈ …
Read More »ಮಾಜಿ ಸಿಎಂ ಯಡಿಯೂರಪ್ಪಗೆ ಸಂಪುಟ ದರ್ಜೆಯ ಸ್ಥಾನ; ಸರ್ಕಾರದಿಂದ ಅಧಿಕೃತ ಆದೇಶ
ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಸಂಪುಟ ದರ್ಜೆ ಸಚಿವರ ಸೌಲಭ್ಯ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕಾರಾವಧಿ ಇರುವವರೆಗೆ ಬಿ.ಎಸ್. ಯಡಿಯೂರಪ್ಪನವರಿಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಈ ಆದೇಶ ಹೊರಡಿಸಲಾಗಿದ್ದು, ಇನ್ಮುಂದೆ ಬಿ.ಎಸ್.ವೈ.ಗೆ ಸಚಿವರಿಗೆ ಸಿಗುವ ಎಲ್ಲಾ ಸೌಲಭ್ಯ ಹಾಗೂ ಅಧಿಕಾರ ಕೂಡ ಸಿಗಲಿದೆ.
Read More »ಈ ಬಾರಿಯೂ ಸರಳ ದಸರಾ ಆಚರಣೆಗೆ ಚಿಂತನೆ: ಎಸ್.ಟಿ. ಸೋಮಶೇಖರ್
ಮೈಸೂರು, ಆಗಸ್ಟ್ 7: “ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿಯೂ ಸರಳವಾಗಿ ಆಚರಿಸಲು ಚಿಂತಿಸಲಾಗಿದೆ,” ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಸಹಕಾರ ಮತ್ತು ಮೈಸೂರು ಜಿಲ್ಲಾ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕು ಬಾವಲಿ ಚೆಕ್‌ಪೋಸ್ಟ್ ಪರಿಶೀಲನೆ ವೇಳೆ ದಸರಾ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಸಚಿವ ಸೋಮಶೇಖರ್ …
Read More »ಬಿಎಸ್ವೈ-ಬೊಮ್ಮಾಯಿ ಇಬ್ಬರೂ ನನಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ: ಎಂಟಿಬಿ ನಾಗರಾಜ್ ಆಕ್ರೋಶ
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಆನಂದ್ ಸಿಂಗ್ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು. ಇದೀಗ ಎಂಟಿಬಿ ನಾಗರಾಜ್ ಕೂಡ ಇದೇ ಹಾದಿ ತುಣಿದಿದ್ದು, ಇನ್ನೆರಡು ದಿನದಲ್ಲಿ ಮುಂದಿನ ನಿರ್ಧಾರ ಪ್ರಕಟಿಸುವೆ ಎಂದು ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ. ನಾನು ಕೇಳಿರೋದೇ ಒಂದು, ಕೊಟ್ಟಿರೋದೇ ಮತ್ತೊಂದು. ನನಗೆ ಕೊಟ್ಟಿರುವ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ …
Read More »ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಯತ್ನ ದ್ವೇಷದ ರಾಜಕಾರಣ: ಸಿದ್ದರಾಮಯ್ಯ
ಬೆಂಗಳೂರು: ‘ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಪ್ರಯತ್ನ ದ್ವೇಷದ ರಾಜಕಾರಣವಾಗುತ್ತದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಇಂದಿರಾ ಕ್ಯಾಂಟೀನ್‍ಗೆ ಅನ್ನಪೂರ್ಣ ಎಂಬ ಹೆಸರಿಡಬೇಕೆಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಸ್ತೆ, ಕ್ರೀಡಾಂಗಣ, ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ನಾಯಕರ ಹೆಸರು ನಾಮಕರಣ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಬೆಂಗಳೂರಿನ ಮೇಲ್ಸೇತುವೆಗೆ ದೀನದಯಾಳ್ ಉಪಾಧ್ಯಾಯ, ನಗರ ಸಾರಿಗೆಗೆ ವಾಜಪೇಯಿ, …
Read More »ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ಮಾಡ್ತಿರುವ ನಿಮ್ಹಾನ್ಸ್ ಹಾಸ್ಪಿಟಲ್ ನ ಕಾಂಟ್ರಾಕ್ಟ್ ಸಿಬ್ಬಂದಿ
ಬೆಂಗಳೂರು:ನಿಮ್ಹಾನ್ಸ್ ಹಾಸ್ಪಿಟಲ್ ನ ಕಾಂಟ್ರಾಕ್ಟ್ ಸಿಬ್ಬಂದಿಗಳು ಕೆಲಸದ ಟೈಮಿಂಗ್ ವಿಚಾರವಾಗಿ ನಿಮ್ಹಾನ್ಸ್ ಹಾಸ್ಪಿಟಲ್ ಒಳಗೆ ಪ್ರತಿಭಟನೆ ನಡೆಸಿದರು. ಸಿಬ್ಬಂದಿಗಳು ರೇಡಿಯಾಲಜಿ ಡಿಪಾರ್ಟ್ಮೆಂಟ್ ನಲ್ಲಿ ಹೌಸ್ ಕೀಪಿಂಗ್ ಹಾಗೂ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಬಹುತೇಕ ಸಿಬ್ಬಂದಿ ಹೆಣ್ಣು ಮಕ್ಕಳು ಆಗಿರುವುದರಿಂದ ರಾತ್ರಿ ವೇಳೆ ಕೆಲಸ ಮಾಡುವುದು ತೊಂದರೆ ಆಗುತ್ತಿದೆ. ಹೀಗಾಗಿ ಸಂಜೆ ಏಳು ಗಂಟೆಯವರೆಗೆ ಕೆಲಸ ಮಾಡಲು ಕೇಳಿದರು ಇದಕ್ಕೆ ಒಪ್ಪದ ಹಾಸ್ಪಿಟಲ್ ವಿರುದ್ದ ಒಂದು ತಿಂಗಳಿನಿಂದ ಮಳೆ ಬಿಸಿಲು …
Read More »ಜೋಗ: ಅಧಿಕಾರಿಗಳ ಹಾಗೂ ಪ್ರವಾಸಿಗರ ಸಂಘರ್ಷ
ಕಾರ್ಗಲ್: ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ದೃಢೀಕರಣ ಕಡ್ಡಾಯಗೊಳಿಸಿರುವ ಜಿಲ್ಲಾಧಿಕಾರಿ ಆದೇಶ ಶುಕ್ರವಾರ ಸಂಘರ್ಷಕ್ಕೆ ಕಾರಣವಾಗಿತ್ತು. ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಬಂದಿದ್ದ ಭಾರಿ ಸಂಖ್ಯೆಯ ಪ್ರವಾಸಿಗರು, ‘ಆರ್‌ಟಿಪಿಸಿಆರ್ ಪರೀಕ್ಷಾ ವರದಿ ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿಲ್ಲ. ಈ ಬಗ್ಗೆ ಎಲ್ಲಿಯೂ ಮುಂಚಿತವಾಗಿ ಮಾಹಿತಿ ನೀಡಿಲ್ಲ. ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವ ಆಶಯದಿಂದ ನೂರಾರು ಕಿ.ಮೀ. ದೂರದಿಂದ ನಿರೀಕ್ಷೆಯೊಂದಿಗೆ ಬರುವ ನಮಗೆ ನಿರಾಸೆ ಮೂಡಿಸಿದಂತಾಗಿದೆ. …
Read More »