Breaking News

ಆರ್ಯಗೆ ಪರಸ್ತ್ರೀ ಸಂಬಂಧದ ಕಳಂಕ ಬರಲು ಕಾರಣವಾದ ಇಬ್ಬರ ಬಂಧನ; ಪ್ರಕರಣಕ್ಕೆ ಸಿಕ್ತು ದೊಡ್ಡ ಟ್ವಿಸ್ಟ್​

ಮೊಹಮ್ಮದ್​ ಅರ್ಮಾನ್​ ಮತ್ತು ಮೊಹಮ್ಮದ್​​ ಹುಸೇನಿ ಎಂಬ ಇಬ್ಬರು ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಆರ್ಯ ಹೆಸರು ಹೇಳಿಕೊಂಡು ಮಹಿಳೆಗೆ ಮೋಸ ಮಾಡಿರುವುದು ಇವರೇ ಎಂದು ಪೊಲೀಸರು ಶಂಕಿಸಿದ್ದಾರೆ. ಜರ್ಮನಿಯಲ್ಲಿ ನೆಲೆಸಿರುವ ಶ್ರೀಲಂಕಾ ಮೂಲದ ತಮಿಳು ಮಹಿಳೆಗೆ ನಟ ಆರ್ಯ ಅವರು ಮೋಸ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. ತಮ್ಮನ್ನು ಮದುವೆ ಆಗುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು, ಬಳಿಕ ಮೋಸ ಮಾಡಿದ್ದಾರೆ ಎಂದು …

Read More »

ಕೋವಿಡ್‌ ಮೂರನೇ ಅಲೆ ನಿರೀಕ್ಷೆ ಸದ್ಯಕ್ಕೆ ಇಲ್ಲ: ಡಿ. ರಂದೀಪ್‌

ಬೆಂಗಳೂರು: ‘ಮೂರನೇ ಅಲೆ ಬಂದರೆ, ಅದು ಕೊರೋನಾ ವೈರಾಣುವಿನ ಹೊಸ ರೂಪಾಂತರ ತಳಿಯಿಂದ ಎಂದು ತಜ್ಞರು ತಿಳಿಸಿದ್ದಾರೆ. ಉದಾಹರಣೆಗೆ ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್‌ ತಳಿಯಿಂದ ಸೋಂಕು ಹರಡುವಿಕೆ ಹೆಚ್ಚಾದರೆ ಅದು ಮೂರನೇ ಅಲೆ ಎಂದರ್ಥ. ಸದ್ಯಕ್ಕೆ ಕೊರೋನಾ ಮೂರನೇ ಅಲೆಯ ನಿರೀಕ್ಷೆ ಇಲ್ಲ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್‌ ಸ್ಪಷ್ಟಪಡಿಸಿದರು. ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಎಲ್ಲ ವಲಯಗಳಲ್ಲಿ ಕೋವಿಡ್‌ ಪರೀಕ್ಷೆಗೆ ಬಂದ ಶೇ …

Read More »

ಡಿಎಸ್‌ಎಸ್‌ ಅಧ್ಯಕ್ಷ ರಘು ವಿರುದ್ಧ ನಟ ಜಗ್ಗೇಶ್‌ ಮಾನನಷ್ಟ ಮೊಕದ್ದಮೆ

ಬೆಂಗಳೂರು: ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವೆಟರ್ ನೀಡದೇ ವಂಚನೆ ನಡೆಸಲಾಗಿದೆ ಎನ್ನುವ ಆರೋಪದಲ್ಲಿ ಸಂಬಂಧವಿಲ್ಲದೇ ತಮ್ಮ ಹಾಗೂ ಆರ್‌.ಅಶೋಕ್‌ ಅವರ ಹೆಸರನ್ನು ತೆಗೆದು ದಲಿತ ಸಂಘರ್ಷ ಸಮಿತಿ(ಡಿಎಸ್‌ಎಸ್‌) ಅಧ್ಯಕ್ಷ ಸಿ.ಎಸ್‌.ರಘು ಅವರು ಅಪಮಾನಿಸಿದ್ದಾರೆ. ಹೀಗಾಗಿ ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದೇನೆ ಎಂದು ನಟ ಜಗ್ಗೇಶ್‌ ಟ್ವೀಟ್‌ ಮೂಲಕ ಹೇಳಿದ್ದಾರೆ. ‘ಬಿಬಿಎಂಪಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವೆಟರ್‌ಗಳನ್ನು ಕರ್ನಾಟಕ ಕೈಮಗ್ಗ ನಿಗಮದಿಂದ (ಕೆಎಚ್‌ಡಿಸಿ) ಖರೀದಿಸಲಾಗಿದೆ. ಕೆಟಿಪಿಪಿ ಕಾಯ್ದೆಯ 4ಜಿ …

Read More »

ಗುರುವಾರ (ಆಗಸ್ಟ್ 26) ಮಲೆಮಹದೇಶ್ವರ ಬೆಟ್ಟದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದೆ. ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದೆ.

ಮೈಸೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಮತ್ತೆ ಸಮುದಾಯದ ಸ್ವಾಮೀಜಿಗಳ ಕೂಗು ಕೇಳಿಬಂದಿದೆ. ಬಸವ ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ಮತ್ತೆ ಹೋರಾಟ ನಡೆಯಲಿದೆ. ಗುರುವಾರ (ಆಗಸ್ಟ್ 26) ಮಲೆಮಹದೇಶ್ವರ ಬೆಟ್ಟದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದೆ. ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದೆ. ನಾಳೆಯಿಂದ ಅಕ್ಟೋಬರ್ 1 ರವರೆಗೆ ಹೋರಾಟ ನಡೆಯಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಬೇಡಿಕೆ ವಿಚಾರವಾಗಿ ಮೈಸೂರಿನಲ್ಲಿ ಬಸವ …

Read More »

ಸೆಪ್ಟೆಂಬರ್‌ನಲ್ಲಿ ದಿನವೂ 5 ಲಕ್ಷ ಜನರಿಗೆ ಲಸಿಕೆ: ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್‌ನಿಂದ ಪ್ರತಿ ದಿನ 5 ಲಕ್ಷ ಜನರಿಗೆ ಕೋವಿಡ್‌ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ ಹೇಳಿದರು. ರಾಜಭವನದಲ್ಲಿ ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಸುಸ್ಥಿರ ಗುರಿಗಳ ಸಹಕಾರ ಹಾಗೂ ಗೀವ್‌ ಇಂಡಿಯಾ ಪ್ರತಿಷ್ಠಾನದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವ್ಯಾಕ್ಸಿನೇಟ್‌ ಇಂಡಿಯಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗ ಪ್ರತಿ ದಿನ 3.5 ರಿಂದ 4 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಕೇಂದ್ರ …

Read More »

ಉತ್ತರ ಪ್ರದೇಶ, ಕಾಶ್ಮೀರದಿಂದ ಬಂದು ಸರ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಸೆರೆ!

ಬೆಂಗಳೂರು: ಉತ್ತರ ಪ್ರದೇಶ ಮತ್ತು ಕಾಶ್ಮೀರದಿಂದ ನಗರಕ್ಕೆ ಬಂದು ಸರ ಕಳವು ಮಾಡುತ್ತಿದ್ದ ನಾಲ್ವರನ್ನು ಪಶ್ಚಿಮ ವಿಭಾಗ ಪೊಲೀಸರು ಬಂಧಿಸಿದ್ದಾರೆ. ರಾಹುಲ್, ಗೌರವ್, ನಿತಿನ್, ರಿಯಾಜ್ ಅಹ್ಮದ್ ಮೀರ್, ಕಮಲ್ ಬಂಧಿತರು. ವಿಜಯನಗರ ದಲ್ಲಿ ಪಾದಚಾರಿ ಮಹಿಳೆ ಬಳಿ ಬೈಕ್ ನಲ್ಲಿ ಬಂದ ಆರೋಪಿಗಳ ಚಿನ್ನದ ಸರ ಕದ್ದು ಪರಾರಿ ಆಗಿದ್ದರು. ಇದರ ತನಿಖೆ ಕೈಗೊಂಡ ಪಶ್ಚಿಮ ವಿಭಾಗ ಪೊಲೀಸರು ಆರೋಪಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ಯಿಂದ ವಿಜಯನಗರ, ಕೆಂಗೇರಿ, …

Read More »

ರಾಗಿಣಿ, ಸಂಜನಾ ಡ್ರಗ್ಸ್ ಸೇವನೆ ದೃಢ

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಇತರರು ಮಾದಕ ವಸ್ತು ಸೇವನೆ ಮಾಡಿದ್ದ ಸಂಗತಿ ‘ಕೂದಲು ಮಾದರಿ’ ಪರೀಕ್ಷೆಯಿಂದ ದೃಢಪಟ್ಟಿದೆ. ಅದರ ವರದಿ ಸಮೇತ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿದ್ದಾರೆ. ತಮ್ಮದೇ ಜಾಲ ರೂಪಿಸಿಕೊಂಡು ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಆರೋಪಿಗಳು, ಡ್ರಗ್ಸ್ ಸೇವನೆ ಹಾಗೂ ಮಾರಾಟ ಮಾಡುತ್ತಿದ್ದರು. ಕೆಲ ನಟ-ನಟಿಯರು, ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಗಣ್ಯ …

Read More »

‘ಆನಂದ’ ಇಲ್ಲದೇ ಸಿಂಗ್ ಅಧಿಕಾರ ಸ್ವೀಕಾರ!

ಬೆಂಗಳೂರು : ಪ್ರಬಲ ಖಾತೆಗಾಗಿ ಮುನಿಸಿಕೊಂಡು ಬೆಂಗಳೂರಿನತ್ತ ತಲೆ ಹಾಕದೇ ಹೊಸಪೇಟೆಯಲ್ಲೇ ಬೀಡು ಬಿಟ್ಟಿದ್ದ ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಅವರು ಮಂಗಳವಾರ ಮಧ್ಯಾಹ್ನ ‘ದಿಢೀರ್‌’ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕಾರ ಕ್ರಿಯೆಯೇ ಒಂದು ರೀತಿಯಲ್ಲಿ ಪ್ರಹಸನದಂತೆ ನಡೆಯಿತು. ಬಾಯಿ ಮಾತಿನಲ್ಲಿ ತಮಗೆ ಅಸಮಾಧಾನ ಇಲ್ಲ ಎಂದು ಹೇಳುತ್ತಲೇ ಒಲ್ಲದ ಮನಸ್ಸಿನಿಂದಲೇ ಆನಂದ್‌ಸಿಂಗ್‌ ಅಧಿಕಾರ ಸ್ವೀಕರಿಸಿದರು. ಪೂರ್ವ ನಿಗದಿಯಾದ ಯಾವುದೇ ‘ಕಾರ್ಯಕ್ರಮ’ಗಳಲ್ಲಿದೇ ಏಕಾಏಕಿ ಸಚಿವಗಿರಿ ಸ್ವೀಕರಿಸಿದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ …

Read More »

ಇದೊಂದು ಹಗರಣ, ಭ್ರಷ್ಟಾಚಾರಗಳ ಸರ್ಕಾರ: ಡಿ.ಕೆ.ಶಿವಕುಮಾರ್ ಆಕ್ರೋಶ

ಬೆಂಗಳೂರು, ಆ.25: ‘ಈ ಸರ್ಕಾರ ಆರೋಗ್ಯ ಕ್ಷೇತ್ರ, ಔಷಧ, ವೆಂಟಿಲೇಟರ್, ಆಯಂಬುಲೆನ್ಸ್ ವಿಚಾರವಾಗಿ ಹಗರಣ ಮಾಡುತ್ತಿದೆ ಎಂದು ನಾನು ಆಂಭದಿಂದಲೇ ಹೇಳುತ್ತಾ ಬಂದಿದ್ದೇನೆ. ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರಕಾರವಾಗಿದೆ. ಕೇಂದ್ರ ಸರ್ಕಾರ 4 ಕೋಟಿ ರುಪಾಯಿಗೆ ಖರೀದಿಸಿದ್ದನ್ನು, ರಾಜ್ಯ ಸರ್ಕಾರ 22 ಕೋಟಿ ರುಪಾಯಿಗೆ ಖರೀದಿ ಮಾಡುವಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈಗ ಮಕ್ಕಳಿಗೆ ನೀಡುವ ಸ್ವೆಟರ್ ನಲ್ಲೂ ಹಗರಣ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ …

Read More »

ಕ್ರಿಶ್ಚಿಯನ್​ ಹೆಸರುಗಳ ಹಿಂದೆ ಬಿದ್ದಿರುವುದೇಕೆ ಸ್ಯಾಂಡಲ್​ವುಡ್​? ಗಾಂಧಿನಗರದಲ್ಲಿ ಇದು ಹೊಸ ಟ್ರೆಂಡ್​​

ಸದ್ಯದ ಪರಿಸ್ಥಿತಿ ಗಮನಿಸಿದರೆ ಗಾಂಧಿನಗರದಲ್ಲಿ ಕ್ರಿಶ್ಚಿಯನ್​ ಹೆಸರುಗಳನ್ನು ಸಿನಿಮಾಗೆ ಶೀರ್ಷಿಕೆಯನ್ನಾಗಿರುವ ಟ್ರೆಂಡ್​ ಚಾಲ್ತಿಗೆ ಬಂದಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ಈ ರೀತಿಯ ಹೆಸರುಗಳನ್ನು ಇಟ್ಟುಕೊಳ್ಳುತ್ತಿವೆ. ಒಂದು ಸಿನಿಮಾದ ಶೀರ್ಷಿಕೆ ಆಕರ್ಷಕವಾಗಿದ್ದರೆ ಆ ಸಿನಿಮಾ ಅರ್ಧ ಗೆದ್ದಂತೆಯೇ ಸರಿ. ಹಾಗಾಗಿ ತಮ್ಮ ಚಿತ್ರಕ್ಕೆ ಟೈಟಲ್​ ಇಡುವಾಗ ನಿರ್ದೇಶಕರು ಸಖತ್​ ಎಚ್ಚರಿಕೆ ವಹಿಸುತ್ತಾರೆ. ಇನ್ನೂ ಕೆಲವೊಮ್ಮೆ ಫ್ಯಾನ್ಸಿ ಟೈಟಲ್​ಗಳ ಮೊರೆ ಹೋಗಲಾಗುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ಸಿನಿಮಾ ಹೆಸರುಗಳ ಟ್ರೆಂಡ್​ ಬದಲಾಗುತ್ತವೆ. …

Read More »