ಬೆಂಗಳೂರು,ನ.13- ಒಂದು ಕಡೆ ಬಿಟ್ ಕಾಯಿನ್ ಪ್ರಕರಣ ಇನ್ನೊಂದು ಕಡೆ ವಲಸಿಗರಿಗೆ ವಿಶೇಷ ಮನ್ನಣೆ ಹಾಕುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆಗೆ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಎದ್ದಿದೆ. ಪಕ್ಷಕ್ಕೆ ದುಡಿದ ನಿಷ್ಠಾವಂತರನ್ನು ಕಡೆಗಣಿಸಿ ಅಕಾರದ ಆಸೆಗಾಗಿ ಪಕ್ಷಕ್ಕೆ ಬಂದವರಿಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿರುವುದರಿಂದ ಸಿಎಂ ನಡವಳಿಕೆ ಕಮಲ ಪಾಳೆಯದಲ್ಲಿ ಬೇಸರ ಹುಟ್ಟಿಸಿದೆ. ಹೀಗಾಗಿಯೇ ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ದಿನ ಕಳೆದಂತೆ ಬಿಜೆಪಿ ಮೇಲೆ ಮುಗಿ ಬೀಳುತ್ತಿದ್ದರೂ …
Read More »ಅಪ್ಪನ ಕಾರ್ಯ ಮುಗಿದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ಪುನೀತ್ ಪುತ್ರಿ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 12 ನೇ ದಿನದ ಕಾರ್ಯಗಳೆಲ್ಲಾ ಮುಗಿದ ಬೆನ್ನಲ್ಲೇ ಹಿರಿಯ ಪುತ್ರಿ ಧೃತಿ ಮತ್ತೆ ತಮ್ಮ ವಿದ್ಯಾಭ್ಯಾಸದ ಸಲುವಾಗಿ ಅಮೆರಿಕಾಗೆ ತೆರಳಿದ್ದಾರೆ. ಇಂದು ಧೃತಿ ಮತ್ತೆ ವಿದೇಶದ ವಿಮಾನವೇರಿದ್ದಾರೆ. ಪವರ್ ಸ್ಟಾರ್ ಅಕಾಲಿಕ ನಿಧನರಾದ ಸುದ್ದಿ ತಿಳಿದು ಮಗಳು ಓಡೋಡಿ ಅಮೆರಿಕಾದಿಂದ ಬಂದಿದ್ದಳು. ಇದೀಗ ತಂದೆಯ ಕಾರ್ಯಮುಗಿಸಿಕೊಂಡು ಓದಿನ ಕಡೆಗೆ ಗಮನ ಕೊಡಲು ಹಿಂತಿರುಗಿದ್ದಾರೆ. ಇನ್ನು, ಪುನೀತ್ ಕಿರಿಯ ಪುತ್ರಿ ಕೂಡಾ ಎಸ್‌ಎಸ್‌ಎಲ್ …
Read More »ಬಸ್ ಮೇಲಿನ ಪುನೀತ್ ಫೋಟೋಕ್ಕೆ ಮುತ್ತಿಟ್ಟು ಕಣ್ಣೀರು ಸುರಿಸಿದ ವೃದ್ದೆ : ವಿಡಿಯೋ ಇಲ್ಲಿದೆ ನೋಡಿ
ನಟ ಪುನೀತ್‌ರಾಜ್‌ಕುಮಾರ್ ಅವರು ನಮ್ಮನ್ನು ಆಗಲಿ ಎರಡು ವಾರ ಕಳೆಯುತ್ತಿದ್ದ ಬಂದರು ಕೂಡ ಮರೆಯದ ನೋವನ್ನು ನಮ್ಮೆಲ್ಲರಿಗೂ ಕಾಡುತ್ತಿದೆ. ಈ ನಡುವೆ ಕೊಪ್ಪಳ ಜಿಲ್ಲೆಯ ಕುಕನೂರು ಬಸ್ ನಿಲ್ದಾಣದಲ್ಲಿ ಬಸ್‌ವೊಂದರ ಮೇಲಿದ್ದ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ವೃದ್ದೆಯೊಬ್ಬರು, ಮುತ್ತಿಟ್ಟು ಕಣ್ಣೀರು ಹಾಕಿರುವ ವಿಡಿಯೋವೊಂದು ವೈರಲ್ ಆಗಿದೆ.
Read More »ರಮೇಶ್ ಜಾರಕಿಹೊಳಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದು ಯಾಕೆ…?
ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್ ಆಕಾಂಕ್ಷಿಗಳ ಲಾಬಿ ಜೋರಾಗಿದೆ. ಸಹೋದರ ಲಖನ್ ಜಾರಕಿಹೊಳಿಗೆ ಪರಿಷತ್ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಇದೀಗ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಿಎಂ ಜೊತೆ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ. ಮೊನ್ನೆ ದೆಹಲಿಯ ಕರ್ನಾಟಕ ಭವನದಲ್ಲಿ ಕೂಡ ರಮೇಶ್, …
Read More »ಚಿಕನ್ ಪ್ರಿಯರಿಗೆ ಸಿಹಿ ಸುದ್ದಿ: ನಾಲ್ಕು ತಿಂಗಳ ಬಳಿಕ ಇಳಿಕೆಯಾಯ್ತು ಕೋಳಿ ಮಾಂಸದ ಬೆಲೆ
ಬೆಂಗಳೂರು: ಕಳೆದ ನಾಲ್ಕೈದು ತಿಂಗಳಿಂದ ಚಿಕನ್ ಬೆಲೆ ಜೇಬು ಸುಡುವಂತಿದೆ. ಮೊದಲೆಲ್ಲ 200 ರೂ. ಒಳಗೆ ಇರುತ್ತಿದ್ದ ಒಂದು ಕೆಜಿ ಚಿಕನ್ ಬೆಲೆ ಇದೀಗ 200 ರೂ. ದಾಟಿದ್ದು, ಜನ ಸಾಮಾನ್ಯರಿಗೆ ಹೊರೆಯಾಗಿದೆ. ಆದರೆ, ಚಿಕನ್ ಪ್ರಿಯರಿಗೆ ಇದೀಗ ಸಿಹಿ ಸುದ್ದಿಯೊಂದ ಹೊರಬಿದ್ದಿದೆ. ಅದೇನೆಂದರೆ ಚಿಕನ್ ಬೆಲೆಯಲ್ಲಿ ಇಳಿಕೆ ಕಂಡಿದೆ. ಕೆಜಿಗೆ 240 ರೂಪಾಯಿ ಇದ್ದ ಚಿಕನ್ ಬೆಲೆ ಇದೀಗ 170ಕ್ಕೆ ಇಳಿದಿದೆ. ಅದಕ್ಕೆ ಕಾರಣ ಕಾರ್ತಿಕ ಮಾಸ. ಕೆಲವರು ಈ …
Read More »ಅಕ್ರಮಗಳ ಸರದಾರರಾದ ನೀವು ಬಿಟ್ ಕಾಯಿನ್ ಹಗರಣದಲ್ಲಿ ಪಾಲು ಪಡೆದಿರುವಿರೆ? ಎಷ್ಟು ದಿನ ಸಿದ್ದರಾಮಯ್ಯಗೆ ರಾಜಕೀಯ ದಾಳವಾಗುತ್ತೀರಿ?
ಬೆಂಗಳೂರು: ಬಿಟ್ ಕಾಯಿನ್ ಹಗರಣ ಸಂಬಂಧ ಭಾರತೀಯ ಜನತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಸಂಬಂಧ ಟ್ವೀಟ್ ಮಾಡಿರು ಬಿಜೆಪಿ, ಅಂದು ಕೇಂದ್ರೀಯ ತನಿಖಾ ಸಂಸ್ಥೆಗಳು ಅಕ್ರಮ ಆದಾಯ ಸಂಬಂಧಿತವಾಗಿ ನಿಮ್ಮ ಮೇಲೆ ದಾಳಿ ನಡೆಸಿದಾಗ ಈ ಲೋಕಜ್ಞಾನ ಎಲ್ಲಿ ಹೋಗಿತ್ತು, ಅಕ್ರಮಗಳ ಸರದಾರರಾದ ನೀವು ಬಿಟ್ ಕಾಯಿನ್ ಹಗರಣದಲ್ಲೂ ಬೆಂಬಲಿಗರ ಮೂಲಕ ಪಾಲು ಪಡೆದಿರುವ ಬಗ್ಗೆ ರಾಜ್ಯದ ಜನತೆಗೆ ಅನುಮಾನವಿದೆ, ನಿಜವೇ? ಎಂದು …
Read More »ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಹ್ಯಾಕರ್ ಶ್ರೀಕಿ ಪುರಾಣ
ಬೆಂಗಳೂರು: ಹ್ಯಾಕರ್ ಶ್ರೀಕಿ ಬಂಧನದ ಬಳಿಕ ಏನೇನು ನಡೆಯಿತು ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ್ ಖರ್ಗೆ ವಿವರಿಸಿದ್ದು ಹೀಗೆ… 2020 ನವೆಂಬರ್ 14ಕ್ಕೆ ಶ್ರೀಕೃಷ್ಣ ಸಿಸಿಬಿ ಮುಂದೆ ಶರಣಾಗುತ್ತಾನೆ. 3 ದಿನ ರಿಪೋರ್ಟಿಂಗ್ ಆಗುವುದೇ ಇಲ್ಲ. 17ರಂದು ಬಂಧನ ಎಂದು ತೋರಿಸುತ್ತಾರೆ, ಹ್ಯಾಕಿಂಗ್ ದೂರಿನ ಮೇರೆಗೆ 14 ದಿನ ಕಸ್ಟಡಿಗೆ ಕಳಿಸುತ್ತಾರೆ. ವಿದೇಶದಿಂದ ಹೈಡ್ರೋ ಗಾಂಜಾವನ್ನು ಬಿಟ್ ಕಾಯಿನ್ ಮೂಲಕ ತರಿಸುತ್ತಿದ್ದಾರೆಂದು ಡಿ.2ರಂದು ಮತ್ತೆ 12 ದಿನ ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ. ಗೇಮಿಂಗ್ ವೆಬ್ಸೈಟ್ …
Read More »ಎಂಎಲ್‌ಸಿ ಟಿಕೆಟ್ ರೇಸ್‌ನಲ್ಲಿ ಸೊಸೆ, ಮೊಮ್ಮಗ: ನನಗೆ ಕೆಟ್ಟ ಹೆಸರು ತರಬೇಡಿ ಎಂದ ದೇವೇಗೌಡ
ಹಾಸನ, ನವೆಂಬರ್ 12: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿಯೂ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಹಾಸನ ಜಿಲ್ಲೆಯ ರಾಜಕೀಯ ಭದ್ರಕೋಟೆಯಾಗಿರುವ ಪ್ರಮುಖ ಪ್ರಾದೇಶಿಕ ಪಕ್ಷ ಎಂದರೆ ಜೆಡಿಎಸ್. ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೇ ಇಲ್ಲಿ ಪ್ರಾಬಲ್ಯ ಹೊಂದಿದೆ. ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಕೇವಲ ಮೂರು ಸಾವಿರದ ಐದುನೂರಷ್ಟು ಮಾತ್ರ ಮತದಾರರಿದ್ದು, ಈ …
Read More »ನಟ ಪುನೀತ್‌ಗೆ ಅವಮಾನ : ಸಾರಿ ಕೇಳಿದ ನಿರ್ದೇಶಕ ಪ್ರೇಮ್, ಒಪ್ಪದ ಅಪ್ಪು ಪ್ರೇಮಿಗಳು
ಬೆಂಗಳೂರು: ಇತ್ತೀಚಿಗೆ ನಟಿ ರಕ್ಷಿತಾ ಅವರ ತಮ್ಮ ನಾಯಕ ನಟನಾಗಿ ಅಭಿನಯ ಮಾಡುತ್ತಿರುವ ಸಿನಿಮಾವೊಂದರ ಸಂಭ್ರಮದ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆಯಲ್ಲಿ ಅಲ್ಲಿದ್ದ ನಟಿ ರಕ್ಷಿತಾ , ನಟಿ ರಚಿತರಾಮ್, ಆಂಕರ್ ಅಕುಲ್ ಬಾಲಾಜಿ ಮಾಡಿರುವ ಯಡವಟ್ಟು ಈಗ ವಿವಾದಕ್ಕೆ ಕಾರಣವಾಗಿದೆ. ಹೌದು, ಚಿತ್ರತಂಡದವರಿಂದ ಇದೇ ವೇಳೇ ನಟ ಪುನೀತ್ ಅವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿದರು ಅರ್ಪಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರದ ಎದುರು ಶಾಪೆಂನ್ ಬಾಟಲ್ ಒಪನ್ …
Read More »ಜನರಿಗೆ ಪಂಗನಾಮ ಹಾಕಲು ವಂಚಕರು ಹೊಸ ಹೊಸ ದಾರಿ
ಇಡೀ ದೇಶ ಕ್ಯಾಶ್ಲೆಸ್ ವ್ಯವಹಾರದ ಕಡೆ ತಿರುಗುತ್ತಿದ್ದು, ಆನ್ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರಿಗೆ ಪಂಗನಾಮ ಹಾಕಲು ವಂಚಕರು ಹೊಸ ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. Googlepay, phonepe ಮತ್ತು paytm ಇಂದ ಹಣ ಪಾವತಿಸುವುದನ್ನು ನೋಡಿದ್ದೇವೆ. ಹಣ ಪಾವತಿ ಆಗಿದೆಯೋ? ಇಲ್ಲವೋ? ಎಂಬುದನ್ನು ಪ್ರತಿ ಪೇಮೆಂಟ್ ವೇಳೆ ಖಾತರಿಪಡಿಸಿಕೊಳ್ಳುತ್ತೇವೆ. ಆದರೆ, ಇದೀಗ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಆನ್ಲೈನ್ ವಂಚಕರ ಕೈಚಳಕ ನೋಡಿ ಜನರು ಶಾಕ್ ಆಗಿದ್ದಾರೆ. ಹಣ …
Read More »
Laxmi News 24×7