ಬೆಳಗಾವಿ: ಜನರು ಪ್ರಧಾನಿ ಮೋದಿಯವರ ಕಾರ್ಯತತ್ಪರತೆಗೆ ಹಾಗೂ ಬೆಳಗಾವಿಯ ಅಭಿವೃದ್ಧಿ ಗಾಗಿ ಬಿಜೆಪಿಗೆ ಪ್ರಚಂಡ ಬೆಂಬಲ ವನ್ನು ನೀಡಿ ಆಶೀರ್ವದಿಸಿದ್ದಾರೆ ಎಂದು ಬೆಳಗಾವಿ ಮಹಾನಗರ ಚುನಾವಣಾ ಉಸ್ತುವಾರಿ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ನಾವು ಪ್ರಗತಿ ಬಗ್ಗೆ ಮಾತಾಡಿದೆವು. ಬೆಳಗಾವಿ ಮಹಾನಗರವನ್ನು ಸರ್ವಾಂಗ ಸುಂದರವಾಗಿ ರೂಪಿಸಲು ಜನರು ಆಶಿರ್ವದಿಸಿದ್ದಾರೆ. ನಾವು ಎಲ್ಲ ಸಮುದಾಯದವರನ್ನು ನಮ್ಮ ಜೊತೆಗೆ ಸೇರಿಸಿ ಅವರ ಹಿತದ ಬಗ್ಗೆ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ. ಕಾಂಗ್ರೆಸ್ ದಲಿತರನ್ನು …
Read More »20 ವರ್ಷಗಳಿಂದ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಜನಿಯರ್ ಕೊನೆಗೂ ಎತ್ತಂಗಡಿ
ಬೆಳಗಾವಿ: ಕಳೆದ ಹಲವು ವರ್ಷಗಳಿಂದ ಒಂದೇ ಜಾಗದಲ್ಲಿ ಜಾಂಡ ಹೂಡಿದ್ದ ಎಂಜನಿಯರ್ನನ್ನು 20 ವರ್ಷಗಳ ಬಳಿಕ ಕೊನೆಗೂ ಎತ್ತಂಗಡಿ ಮಾಡಲಾಗಿದೆ. ಎಸ್.ಆರ್ .ಚೌಗಲಾ ಎಂಬ ದಿನಗೂಲಿ ಎಂಜನಿಯರ್, 1995ರಲ್ಲಿ ದಿನಗೂಲಿ ಆಧಾರದ ಮೇಲೆ ಜ್ಯೂನಿಯರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಬಳಿಕ ಚೌಗಲಾ ತಮ್ಮ ಪ್ರಭಾವ ಬಳಸಿ ಇಪ್ಪತ್ತು ವರ್ಷಗಳಿಂದ ಬಹುತೇಕ ಕಾಲ ರಾಯಭಾಗ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಕುಡಚಿ ಪುರಸಭೆ, ರಾಯಭಾಗ ಪಟ್ಟಣ ಪಂಚಾಯಿತಿ, ಮುಗಳಖೋಡ, …
Read More »ಬೆಳಗಾವಿಯಲ್ಲಿ ಬಿಜೆಪಿ, ಕಾಂಗ್ರೆಸ್ ಗೆ ಮೊದಲ ಗೆಲುವು
ಬೆಳಗಾವಿ – ಬೆಳಗಾವಿಯ 2 ವಾರ್ಡ್ ಗಳ ಫಲಿತಾಂಶ ಪ್ರಕಟವಾಗಿದೆ. ವಾರ್ಡ್ 15ರಲ್ಲಿ ಬಿಜೆಪಿಯ ನೇತ್ರಾವತಿ ಭಾಗ್ವತ್, ಮತ್ತು ವಾರ್ಡ್ 3ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಕಡೋಲ್ಕರ್ ಗೆಲುವು ಸಾಧಿಸಿದ್ದಾರೆ. ವಾರ್ಡ್ 11ರಲ್ಲಿ ಸಹ ಕಾಂಗ್ರೆಸ್ ಮುನ್ನಡೆಯಲ್ಲಿದೆ. ನೇತ್ರಾವತಿ 40 ಮಗಳಿಂದ ಗೆಲುವು ಸಾಧಿಸಿದ್ದಾರೆ, ಜ್ಯೋತಿ ಹೆಚ್ಚಿನ ಅಂತರದಿಂದ ಗೆದ್ದಿದ್ದಾರೆ. ಬಹುತೇಕ ವಾರ್ಡ್ ಗಳಲ್ಲಿ ಪಕ್ಷೇತರರು ಮನ್ನಡೆಯಲ್ಲಿದ್ದಾರೆ.
Read More »ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿರೋ ರಾಜ್ಯದ 3 ಮಹಾನಗರ ಪಾಲಿಕೆಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿರೋ ರಾಜ್ಯದ 3 ಮಹಾನಗರ ಪಾಲಿಕೆಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬೆಳಗಾವಿ, ಕಲಬುರ್ಗಿ ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಚುನಾವಣಾ ಮತ ಎಣಿಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಪಾಲಿಕೆಯ ಗದ್ದುಗೆ ಏರೋದ್ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಮತಎಣಿಕೆಗೆ ಕ್ಷಣಗಣನೆ ಬೆಳಗ್ಗೆ 8 ಗಂಟೆಯಿಂದ ಮೂರು ಮಹಾನಗರ ಪಾಲಿಕೆಗಳ ಮತ ಎಣಿಕೆ ಆರಂಭ ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಮೂರೂ ಮಹಾನಗರ ಪಾಲಿಕೆಗಳ …
Read More »ಬೆಳಗಾವಿಯಲ್ಲಿ ಬಾಧಿಸುತ್ತಿದೆ ಡೆಂಗಿ, ಚಿಕೂನ್‌ಗುನ್ಯಾ
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ಭೀತಿಯಿಂದಾಗಿ ಕಂಗೆಟ್ಟಿರುವ ಜನರನ್ನು ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ಮೊದಲಾದ ಕಾಯಿಲೆಗಳು ಬಾಧಿಸುತ್ತಿವೆ. ಒಬ್ಬರು ಶಂಕಿತ ಡೆಂಗಿಯಿಂದ ಸಾವಿಗೀಡಾದುದು ವರದಿಯಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದರಿಂದಾಗಿ, ಇತರ ಕಾಯಿಲೆಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಾಗುತ್ತಿದೆ. ಈ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ ಮತ್ತು ಸೊಳ್ಳೆಗಳ ಉತ್ಪಾದನೆಗೆ ಕಡಿವಾಣ …
Read More »ಕೇಂದ್ರ ಸರ್ಕಾರಕ್ಕೆ ಬಿಗ್ ಶಾಕ್: ರೈತ ಹೋರಾಟಕ್ಕೆ ಬಿಜೆಪಿ ಸಂಸದ ಬೆಂಬಲ
ದೆಹಲಿ: ʼಅವರು ನಮ್ಮದೇ ಮಾಂಸ ಮತ್ತು ರಕ್ತ’ ಎಂದು ರೈತರ ಪ್ರತಿಭಟನೆಗೆ ಪಿಲಿಭಿತ್ ನ ಬಿಜೆಪಿ ಸಂಸದ ವರುಣ್ ಗಾಂಧಿ ಬೆಂಬಲ ನೀಡಿದ್ದಾರೆ. ಬಿಜೆಪಿ ಸಂಸದರಾಗಿದ್ದರೂ ಕೇಂದ್ರ ಸರಕಾರವನ್ನು ಗುರಿಯಾಗಿಸಿಕೊಂಡು ವರುಣ್ ಗಾಂಧಿ ಕಿಸಾನ್ ಮಹಾ ಪಂಚಾಯತ್ ಅನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ರೈತರೊಂದಿಗೆ ಮಾತುಕತೆಗೆ ಮರುಪ್ರವೇಶಿಸಲು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. “ಮುಜಾಫರ್ ನಗರದಲ್ಲಿ ಇಂದು ಲಕ್ಷಾಂತರ ರೈತರು ಪ್ರತಿಭಟನೆಯಲ್ಲಿ ಜಮಾಯಿಸಿದ್ದಾರೆ. ಅವರು ನಮ್ಮದೇ ಮಾಂಸ ಮತ್ತು ರಕ್ತ. ನಾವು ಅವರೊಂದಿಗೆ …
Read More »ಸಾಲದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಸಾಲದ ಹೊರೆ ಇಳಿಸಲಿದೆ ಸರ್ಕಾರ -ಹೊಲದಲ್ಲೇ ಸಾಲ ವಿತರಣೆ
ಬೆಂಗಳೂರು: ರೈತರ ಸಾಲದ ಹೊರೆ ಇಳಿಸಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮದುವೆ, ಕಾಯಿಲೆ ಮೊದಲಾದ ಕಾರಣಗಳಿಂದ ರೈತರಲ್ಲಿ ಸಾಲದ ಹೊರೆ ಹೆಚ್ಚಾಗುತ್ತಿದ್ದು, ಇದನ್ನು ಇಳಿಸಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಹೇಳಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿದೆ. ರೈತರ ಮಕ್ಕಳ ಶಿಕ್ಷಣ, ಮದುವೆ, ಕುಟುಂಬದ ಆರೋಗ್ಯ ಮೊದಲಾದವುಗಳಿಗೆ ಹೆಚ್ಚಿನ ಖರ್ಚು …
Read More »ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಕಳ್ಳ
ಹುಬ್ಬಳ್ಳಿ: ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿ ತನ್ನ ಮನೆತನದ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿ ಪಟ್ಟಣದ ಮಂಗೇಶ ಕೆರೆ ದಂಡೆಯ ಬಳಿ ನಡೆದಿದೆ. ಹನುಮಂತ ಈಶ್ವರಪ್ಪ ಧಾರವಾಡ ಮೃತನಾಗಿದ್ದಾನೆ. ಈತ ಕಲಘಟಗಿ ಪಟ್ಟಣದ ನಿವಾಸಿಯಾಗಿದ್ದಾನೆ. ಹನುಮಂತ ಹಾಗೂ ಆತನ ಗೆಳೆಯ ಮಲ್ಲಯ್ಯ ಹೆಬ್ಬಳ್ಳಿಮಠ ಜೊತೆಗೆ ಸೇರಿ ಅಂದಾಜು 2500 ಖಾಲಿ ಗೋಣಿ ಚೀಲಗಳನ್ನು ಆಗಸ್ಟ್ 28 ರಂದು ಕಳ್ಳತನ ಮಾಡಿ ಹುಬ್ಬಳ್ಳಿ ಎಪಿಎಂಸಿಯಲ್ಲಿ ಮಾರಿದ್ದರು. ಈ ಕುರಿತು …
Read More »ಈ ರಾಷ್ಟ್ರದ ಶಿಲ್ಪಿಗಳು ಶಿಕ್ಷಕರು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ
ಮೂಡಲಗಿ : ಶಿಕ್ಷಕರು ಈ ರಾಷ್ಟ್ರದ ಶಿಲ್ಪಿಗಳು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ನಿಮಿತ್ಯ ಇಲ್ಲಿಯ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ನೀಡಿರುವ ಅವರು, ಶಿಕ್ಷಕರಿಂದ ಮಾತ್ರ ಈ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವೆಂದು ಹೇಳಿದರು. ಕಳೆದ ಒಂದೂವರೆ ದಶಕದಿಂದ ಅರಭಾವಿ ಮತಕ್ಷೇತ್ರದಲ್ಲಿ ಶಿಕ್ಷಣದ …
Read More »5 ದಿನಗಳ ಕಾಲ ಸರಳವಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ
ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಿರುವ ರಾಜ್ಯ ಸರ್ಕಾರ ಸರಳವಾಗಿ ಗಣೇಶ ಹಬ್ಬ ಆಚರಿಸುವಂತೆ ಸೂಚನೆ ನೀಡಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ಈಬಾರಿ 5 ದಿನಗಳ ಕಾಲ ಸರಳವಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲ ಷತ್ತುಗಳನ್ನು ವಿಧಿಸಲಾಗಿದೆ ಎಂದರು. ಹೊಸ ಗೈಡ್ ಲೈನ್: * ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತದ ಅನುಮತಿ ಕಡ್ಡಾಯ …
Read More »