Breaking News

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬ್ಯಾನರ್ ಅಂಟಿಸಿ ಆಕ್ರೋಶ..!

ಬೆಳಗಾವಿ: ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಹಾಳಾದ ರಸ್ತೆಯಿಂದ ಬೇಸತ್ತ ಕೆಲ ಅಪರಿಚಿತರು ವ್ಯಂಗ್ಯ ಭಾಷೆಯ ಮೂಲಕ ಅಲ್ಲಲ್ಲಿ ಶಾಸಕಿ ವಿರುದ್ಧ ಬ್ಯಾನರ್​ ಹಾಕಿ ಪ್ರತಿಭಟಿಸಿದ್ದಾರೆ. ಗ್ರಾಮೀಣ ಮತಕ್ಷೇತ್ರದಲ್ಲಿ ಶಾಸಕಿಯ ವಿರುದ್ಧ ಬ್ಯಾನರ್ ವಾರ್ ಶುರುವಾಗಿದ್ದು ಅಪರಿಚಿತರು ಉಚ್ಚಗಾಂವ್, ತಾರಿಹಾಳ ಬೆಳಗಾವಿ ರಸ್ತೆಯಲ್ಲಿ ಬ್ಯಾನರ್ ಹಾಕಿ ಲೇವಡಿ ಮಾಡಿದ್ದಾರೆ. ಬ್ಯಾನರ್​ನಲ್ಲಿ ಒಂದು ಭಾಗದಲ್ಲಿ ಹಾಳಾದ ರಸ್ತೆಯ ಫೋಟೋ ಇನ್ನೊಂದೆಡೆ ವ್ಯಕ್ತಿಯೊರ್ವ ತಲೆ ಮೇಲೆ ಕೈಹೊತ್ತು ಕುಳಿತಿರುವ ಚಿತ್ರ ಹಾಕಲಾಗಿದೆ.   …

Read More »

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 4.29 ಕೋಟಿಗೂ ಹೆಚ್ಚು ಬಳಕೆಯಾಗದ ಕೋವಿಡ್ -19 ಲಸಿಕೆ ಡೋಸ್‌ಗಳು ಇನ್ನೂ ಲಭ್ಯವಿವೆ

ಹೊಸದಿಲ್ಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 4.29 ಕೋಟಿಗೂ ಹೆಚ್ಚು ಬಳಕೆಯಾಗದ ಕೋವಿಡ್ -19 ಲಸಿಕೆ ಡೋಸ್‌ಗಳು ಇನ್ನೂ ಲಭ್ಯವಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ.”80.67 ಕೋಟಿ (80,67,26,335) ಕ್ಕಿಂತ ಹೆಚ್ಚು ಲಸಿಕೆ ಡೋಸ್‌ಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ ಸರ್ಕಾರದ ಮೂಲಕ (ಉಚಿತ ಚಾನೆಲ್) ಮತ್ತು ನೇರ ರಾಜ್ಯ ಸಂಗ್ರಹಣೆ ವರ್ಗದ ಮೂಲಕ ಒದಗಿಸಲಾಗಿದೆ,” ಸರ್ಕಾರವು ವೇಗವನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ಕೋವಿಡ್ -19 …

Read More »

ಕಾಂಗ್ರೆಸ್ ನ 20 ಶಾಸಕರು ಬಿಜೆಪಿಗೆ ಸೇರಲು ಸಿದ್ಧ : ನಳಿನ್ ಕುಮಾರ್ ಕಟೀಲ್ ಹೊಸ ಬಾಂಬ್

ಬೆಂಗಳೂರು : ಕಾಂಗ್ರೆಸ್ ನ 20 ಶಾಸಕರು ಬಿಜೆಪಿಗೆ ಸೇರಲು ಸಿದ್ದರಾಗಿದ್ದಾರೆ. ಅದರ ಜವಾಬ್ದಾರಿಯನ್ನು ಸಚಿವ ಮುನಿರತ್ನ ಅವರಿಗೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.   ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ಏರ್ಪಡಿಸಿದ್ದ ಒಬಿಸಿ ಮೋರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಹಿಂದುಳಿದ ವರ್ಗದವರು ದೂರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಅನೇಕ ನಾಯಕರು ಬಿಜೆಪಿ ಸೇರಲಿದ್ದಾರೆ. ಹಿಂದುಳಿದ ವರ್ಗದವರು …

Read More »

ಮೈಶುಗರ್ ಕಾರ್ಖಾನೆ ಖಾಸಗೀಕರಣ ಮಾಡಿದರೆ ರಕ್ತಪಾತ: ಜೆಡಿಎಸ್ ಶಾಸಕ

ಬೆಂಗಳೂರು, ಸೆಪ್ಟೆಂಬರ್ 22: ಮಂಡ್ಯ ಮೈಶುಗರ್ ಕಾರ್ಖಾನೆ ಖಾಸಗೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಸುರೇಶ್‌ ಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, “ಕಾರ್ಖಾನೆ ಖಾಸಗೀಕರಣ ಮಾಡಿದರೆ ರಕ್ತಪಾತವಾಗುತ್ತದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಮೈಶುಗರ್ ಕಾರ್ಖಾನೆ ಖಾಸಗೀಕರಣದ ಬಗ್ಗೆ ಮಾತನಾಡಿದ ಅವರು, “ಮಂಡ್ಯ ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಸರ್ಕಾರ ತಮಾಷೆ ಮಾಡಬಾರದು. ಸರ್ಕಾರಕ್ಕೆ ನಿರ್ವಹಣೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ನಿಮಗೆ ಮಾಡಲು ಸಾಧ್ಯವಾಗದಿದ್ದರೆ ನಮಗೆ ಬಿಟ್ಟುಕೊಡಿ. …

Read More »

ಮಾರಲು ಇನ್ಯಾವ ಆಸ್ತಿಯ ಪಟ್ಟಿ ನೋಡುತ್ತಿದ್ದೀರಿ?: ಮೋದಿಗೆ ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರು: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಕಡತಗಳನ್ನು ಪರಿಶೀಲಿಸುತ್ತಿರುವ ಫೊಟೋಗೆ ಕಮೆಂಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ‘ಫೋಟೋ ಶೂಟ್‌ ಚೆನ್ನಾಗಿದೆ ನರೇಂದ್ರ ಮೋದಿ ಅವರೇ, ಆದರೆ ಲೈಟಿಂಗ್‌ ಕಳಪೆಯಾಗಿದೆ!’ ಎಂದು ಛೇಡಿಸಿದೆ. ‘ಟಾರ್ಚ್‌ ಬೆಳಕು ಬಳಸುವ ಬದಲು ನಿಮ್ಮ ಹೊಚ್ಚ ಹೊಸ 8,500 ಕೋಟಿ ಬೆಲೆಯ ವಿಮಾನದಲ್ಲಿ ಫೋಟೋಶೂಟ್‌ಗಾಗಿಯೇ ಪ್ರತ್ಯೇಕ ಲೈಟಿಂಗ್‌ ವ್ಯವಸ್ಥೆ ಮಾಡಿಕೊಳ್ಳಿ!’ ಎಂದು ಕಾಂಗ್ರೆಸ್‌ ಮೋದಿ ಅವರಿಗೆ ವ್ಯಂಗ್ಯದ ಸಲಹೆ ನೀಡಿದೆ. ‘ಅಂದ …

Read More »

ಉಡಾನ್‌ಗೆ ಶಿವಮೊಗ್ಗ ವಿಮಾನ ನಿಲ್ದಾಣ; ಎಲ್ಲೆಲ್ಲಿಗೆ ವಿಮಾನ ಹಾರಾಟ?

ಶಿವಮೊಗ್ಗ, ಸೆಪ್ಟೆಂಬರ್ 23; “ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿ 3,200 ಮೀಟರ್ ಅತಿ ಉದ್ದನೆಯ ರನ್‍ವೇ ನಿರ್ಮಾಣವಾಗಲಿದೆ. ಏಪ್ರಿಲ್‍ನಲ್ಲಿ ಕಾಮಗಾರಿ ಪೂರ್ಣಗೊಂಡು ಜೂನ್ ಹೊತ್ತಿಗೆ ವಿಮಾನ ನಿಲ್ದಾಣದ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ” ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ ಜಂಟಿಯಾಗಿ ಆಯೋಜಿಸಿದ್ದ ‘ಆಜಾದಿ …

Read More »

ಚಾಣಕ್ಯ ವಿವಿಗೆ ಜಮೀನು: ದೊಡ್ಡ ಹಗರಣ

ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರದ ವತಿಯಿಂದ ಅರ್ಹತೆ ಹಾಗೂ ಆನುಭವ ಇಲ್ಲದ ಸೆಸ್‌ ಎಂಬ ಸಂಸ್ಥೆಗೆ ಕಡಿಮೆ ದರದಲ್ಲಿ 116.16 ಎಕರೆ ಜಮೀನು ನೀಡಿದ್ದು ಸರ್ಕಾರ ಆ ತೀರ್ಮಾನ ಕೈ ಬಿಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್‌ ಒತ್ತಾ ಯಿಸಿದ್ದಾರೆ. ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಏರೋಸ್ಪೇಸ್‌ ಹಾಗೂ ಡಿಫೆನ್ಸ್‌ ಪಾರ್ಕ್‌ಗಾಗಿ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನು ಆರ್‌ …

Read More »

ದೇಶದಲ್ಲೇ ಮೂರು ಕೈಗಾರಿಕಾ ಕಾರಿಡಾರ್ ಗಳನ್ನು ಹೊಂದಿದ ಏಕೈಕ ರಾಜ್ಯ ಕರ್ನಾಟಕ: ಸಚಿವ ನಿರಾಣಿ

ಬೆಂಗಳೂರು: ಕರ್ನಾಟಕವು ಜಾಗತಿಕ ಹೂಡಿಕೆದಾರರಿಗೆ ಅತ್ಯುತ್ತಮ ತಾಣವಾಗಿದ್ದು, ದೇಶದಲ್ಲೇ ಮೂರು ಕೈಗಾರಿಕಾ ‌ಕಾರಿಡಾರ್ ಗಳನ್ನು ‌ಹೊಂದಿದ ಏಕೈಕ ರಾಜ್ಯವಾಗಿದೆ ಎಂದು ‌ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಗುರುವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕೆಐಎಡಿಬಿ ಆಯೋಜಿಸಿದ್ದ ಭಾರತದ 75 ನೇ ಸ್ವಾತಂತ್ರ್ಯವದ ಸವಿನೆನಪಿಗಾಗಿ ಸಪ್ತಾಹದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಹೂಡಿಕೆ ಮಾಡುವ ಜಾಗತಿಕ ಉದ್ಯಮಿಗಳಿಗೆ ಕರ್ನಾಟಕ ಯಾವಾಗಲೂ ಅತ್ಯುತ್ತಮ …

Read More »

ಕೌಟುಂಬಿಕ ಕಲಹ – ಪತ್ನಿ, ಮಗಳನ್ನೇ ಕೊಲೆ ಮಾಡಿದ ಪಾಪಿ ತಂದೆ!

ಸೇಡಂ : ಪತ್ನಿ ಹಾಗೂ ಮಗಳನ್ನು ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿಯ ವಿಶ್ವನಗರ ಬಡಾವಣೆಯಲ್ಲಿ ನಡೆದಿದೆ. ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ ಕಲಬುರಗಿಯ ನಿವಾಸಿಯಾಗಿದ್ದ ದಿಗಂಬರ ಹನುಮಂತಪ್ಪ ಗಾಂಜಲಿ(47) ಕೊಲೆ ಮಾಡಿರುವ ಆರೋಪಿ. ಈ ಪಾಪಿ ಪತ್ನಿ ಜಗದೇವಿ(35) ಹಾಗೂ ಮಗಳು ಪ್ರಿಯಾಂಕಾ(11) ಕೊಲೆ ಮಾಡಿದ್ದಾನೆ. ಕೆಲವು ತಿಂಗಳ ಹಿಂದೆಯಷ್ಟೇ ಕಲಬುರಗಿಯಿಂದ ಈ ಕುಟುಂಬ ಪಟ್ಟಣಕ್ಕೆ ಬಂದು ನೆಲೆಸಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆಯನ್ನು ಪೊಲೀಸರು …

Read More »

ಯುವತಿಯ ಸಂಕಲ್ಪಕ್ಕೆ ಸಂದ ಜಯ: ಗ್ರಾಮಕ್ಕೆ ರಸ್ತೆಯೂ ಆಯ್ತು, ಬಸ್ಸೂ ಬಂತು​.. ಮದ್ವೆಯೊಂದೇ ಬಾಕಿ..!

ದಾವಣಗೆರೆ: ಗ್ರಾಮದಲ್ಲಿ ರಸ್ತೆ ಆಗೋವರೆಗೂ ಮದುವೆಯಾಗಲ್ಲ ಎಂದು ಯುವತಿಯೊಬ್ಬಳು ಮಾಡಿದ ಸಂಕಲ್ಪಕ್ಕೆ ಫಲ ಸಿಕ್ಕಿದ್ದು ಗ್ರಾಮಕ್ಕೆ ರಸ್ತೆಯ ಜೊತೆ ಬಸ್​ ಕೂಡ ಆಗಮಿಸಿದ್ದು ಯವತಿ ಮಾಡಿದ ಸಂಕಲ್ಪದಿಂದ ಗ್ರಾಮದ ಬಹುದಿನಗಳ ಆಸೆ ಈಡೇರಿದಂತಾಗಿದೆ. ಹೌದು ಜಿಲ್ಲೆಯ ಹೆಚ್​.ರಾಂಪುರದ ಯುವತಿಯೊಬ್ಬಳು ತನ್ನ ಗ್ರಾಮಕ್ಕೆ ರಸ್ತೆಯಾಗಬೇಕು ಅಲ್ಲಿಯವರೆಗೆ ತಾನು ಮದುವೆಯಾಗಲ್ಲ ಎಂದು ವಿಭಿನ್ನವಾಗಿ ತನ್ನ ಆಕ್ರೋಶ ಹೊರಹಾಕಿದ್ದಳು. ಈ ಕುರಿತು ನ್ಯೂಸ್​ಫಸ್ಟ್​ ಸೆಪ್ಟೆಂಬರ್​ 14 ರಂದು ವಿಸ್ತೃತ ವರದಿ ಬಿತ್ತರಿಸಿತ್ತು.   ವರದಿಯಿಂದ ಎಚ್ಚೆತ್ತುಕೊಂಡ …

Read More »