Breaking News

ಲೋಕಸಭಾಧ್ಯಕ್ಷರಿಗೆ ಅಗೌರವ ಸಲ್ಲದು: ಎಚ್‌.ಡಿ. ಕುಮಾರಸ್ವಾಮಿ

ಬೆಂಗಳೂರು: ‘ಲೋಕಸಭಾಧ್ಯಕ್ಷರು ಮತ್ತು ಅವರು ಅಲಂಕರಿಸಿರುವ ಪೀಠಕ್ಕೆ ಅಗೌರವ ತೋರಬಾರದು ಎನ್ನುವ ಕಾರಣಕ್ಕೆ ಓಂ ಬಿರ್ಲಾ ಅವರ ಭಾಷಣದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯದ ಸಂಸದೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭಾಧ್ಯಕ್ಷರು ಲೋಕಸಭೆಯ ಸಭಾಧ್ಯಕ್ಷರನ್ನು ಕರೆಸಿದ್ದಾರೆ. ಇಂತಹ ಅಪರೂಪದ ಸಂದರ್ಭದಲ್ಲಿ ಗೈರಾಗುವುದು ಲೋಕಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದಂತೆ. ಆ ರೀತಿ ಆಗುವುದು …

Read More »

ರಿಯಾಲಿಟಿ ಶೋನಲ್ಲಿ ಆಲ್ಕೋಹಾಲ್ ಸೇವನೆ.. ಕಪಿಲ್ ಶರ್ಮಾ ವಿರುದ್ಧ FIR

ರಿಯಾಲಿಟಿ ಶೋ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸುವ ಕಪಿಲ್ ಶರ್ಮಾಗೆ ಇದೀಗ ಸಂಕಷ್ಟ ಎದುರಾಗಿದೆ. ಕಪಿಲ್ ಶರ್ಮಾ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ತನ್ನ ರಿಯಾಲಿಟಿ ಶೋನ ಶೂಟ್ ಒಂದರಲ್ಲಿ ಕೋರ್ಟ್ ಸೀನ್ ಶೂಟ್ ಮಾಡುವಾಗ ಮದ್ಯ ಸೇವಿಸಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ದೂರು ನೀಡಲಾಗಿದ್ದು ಎಫ್​ಐಆರ್ ದಾಖಲಾಗಿದೆ. ಮಧ್ಯಪ್ರದೇಶದ ವಕೀಲರೊಬ್ಬರು ಸಿಜೆಎಂ ಕೋರ್ಟ್​ನಲ್ಲಿ ಈ ಎಫ್​ಐಆರ್ ದಾಖಲಿಸಿದ್ದಾರೆ. ಅಕ್ಟೋಬರ್ 1 ರಂದು ಪ್ರಕರಣದ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ದೂರು ನೀಡಿರುವ ವಕೀಲರು.. …

Read More »

ಮೊದಲ ಅಧಿವೇಶನ ಪರೀಕ್ಷೆ ಗೆದ್ದ ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ಅನಿರೀಕ್ಷಿತ ವಾಗಿ ದೊರೆತ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಿ, ಹತ್ತು ದಿನಗಳ ಮೊದಲ ಅಧಿವೇಶನವನ್ನು ಸದ್ದುಗದ್ದಲವಿಲ್ಲದೆ ನಡೆಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಬೊಮ್ಮಾಯಿ ತಮ್ಮ ಸರಳ ನಡೆ ಹಾಗೂ ಚುರುಕಿನ ಆಡಳಿತದಿಂದ ಜನರ ವಿಶ್ವಾಸ ಗಳಿಸುತ್ತಿದ್ದು, ಅಧಿವೇಶನ ದಲ್ಲೂ ವಿಪಕ್ಷಗಳನ್ನು ಯಶಸ್ವಿಯಾಗಿ ಎದುರಿಸಿ, ನಾಯಕತ್ವದ ಬಗ್ಗೆ ಬಿಜೆಪಿ ನಾಯಕರಿಗಿದ್ದ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ. ದಾಖಲೆಗಳ ಮೂಲಕವೇ ಉತ್ತರ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯ ಹಾಗೂ …

Read More »

ದಿನಗೂಲಿ ಕಾರ್ಮಿಕನ ಖಾತೆಗೆ ಜಮಾ ಆಯ್ತು ಬರೋಬ್ಬರಿ ₹9.99 ಕೋಟಿ; ಹೇಗೆ ಗೊತ್ತಾ?

ಪಾಟ್ನಾ: ಇತ್ತೀಚೆಗೆ ಬಿಹಾರದಲ್ಲಿ ಇಬ್ಬರು ಮಕ್ಕಳ ಖಾತೆಗೆ ಸುಮಾರು 900 ಕೋಟಿ ರೂಪಾಯಿಗೂ ಹೆಚ್ಚು ಹಣ ಜಮಾ ಆಗಿತ್ತು. ಈ ಬೆನ್ನಲ್ಲೇ ರೈತನೋರ್ವನ ಖಾತೆಗೆ 50 ಕೋಟಿ ರೂಪಾಯಿ ಜಮೆಯಾದ ಬಳಿಕ ಈಗ ದಿನಗೂಲಿ ಕಾರ್ಮಿಕ ಬ್ಯಾಂಕ್​​ ಅಕೌಂಟ್​​ಗೆ 9.99 ಕೋಟಿ ರೂ. ಠೇವಣಿಯಾದ ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಖಾತೆ ತೆರೆಯಲು ಹೋದ ದಿನಗೂಲಿ ಕಾರ್ಮಿಕನ ಅಚ್ಚರಿ ಕಾದಿತ್ತು. ತನ್ನ ಖಾತೆಯಲ್ಲಿ 9.99 …

Read More »

ಕ್ಷುಲ್ಲಕ ಕಾರಣಕ್ಕೆ ಕೊಲೆ

ಕಲಬುರಗಿ: ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯ ಹೈಕೋರ್ಟ್ ಮುಂಭಾಗದಲ್ಲಿ ಗುರುವಾರ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಓರ್ವನ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. 35 ವರ್ಷದ ಗುರುರಾಜ್ ಕುಲಕರ್ಣಿ ಕೊಲೆಯಾದವರು. ಪವನ್ ಜಹಾಗೀರದಾರ್ ಕೊಲೆ ಮಾಡಿದ ಆರೋಪಿ. ಎರಡು ದಿನಗಳ ಹಿಂದೆ ಕೂಡ ಇದೇ ಕಾರಣಕ್ಕೆ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ಈ ವಿಚಾರವಾಗಿ ಸಂಧಾನ ಮಾಡಿಕೊಳ್ಳೋಣ ಬಾ ಎಂದು ಪವನ್ ಹಾಗೂ ಆತನ ಗೆಳೆಯರು ಗುರುರಾಜ ಅವರನ್ನು …

Read More »

ಬೀದಿ ನಾಯಿ ವಿಚಾರಕ್ಕೆ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

ಕಲಬುರಗಿ: ಹಳೆ ವೈಷಮ್ಯ, ಪ್ರೀತಿ, ಆಸ್ತಿ ಸೇರಿದಂತೆ ನಾನಾ ಕಾರಣಗಳಿಗಾಗಿ ಕೊಲೆ ಪ್ರಕರಣಗಳು ನಡೆಯೋದು ಸದ್ಯ ಸಾಮಾನ್ಯ ಸಂಗತಿಯಾಗಿದೆ. ಆದರೆ ಇಂದು ಕಲಬುರಗಿಯಲ್ಲಿ ಬೀದಿ ನಾಯಿ ಕುರಿತಂತೆ ಶುರುವಾದ ಜಗಳದ ಯುವಕನೋರ್ವನ ಬರ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಗುರುರಾಜ್ ಕುಲ್ಕರ್ಣಿ (35) ಕೊಲೆಯಾದ ವ್ಯಕ್ತಿ. ಕಲಬುರಗಿ ನಗರದ ಹೈಕೋರ್ಟ್ ಮುಂಭಾಗದ ಅಕ್ಕಮಹಾದೇವಿ ಕಾಲೋನಿ ನಿವಾಸಿಯಾಗಿರುವ ಗುರುರಾಜ್​ ಕುಲ್ಕರ್ಣಿ, ತಾನಾಯಿತು ತನ್ನ ಕೆಲಸದ ಜೊತೆ ಜೊತೆಗೆ ಸಮಾಜ ಸೇವೆ ಮಾಡುತ್ತಿದ್ದರು. ಗುರುರಾಜ್ ಕುಲ್ಕರ್ಣಿ …

Read More »

ರಾಷ್ಟ್ರ, ರಾಷ್ಟ್ರೀಯತೆ, ಆರ್‍ಎಸ್‍ಎಸ್ ಒಂದೇ : ಬೊಮ್ಮಾಯಿ

ಬೆಂಗಳೂರು : ರಾಷ್ಟ್ರ, ರಾಷ್ಟ್ರೀಯತೆ, ಆರ್‍ಎಸ್‍ಎಸ್ ಇವೆಲ್ಲಾ ಒಂದೇ. ಆರ್‍ಎಸ್‍ಎಸ್ ಅಂದ್ರೆ ರಾಷ್ಟ್ರೀಯತೆ. ರಾಷ್ಟ್ರೀಯ ಶಿಕ್ಷಣ ಪಾಲಿಸಿ, ಆರ್‍ಎಸ್‍ಎಸ್ ಇದ್ರೂ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಇಂದು ಅಧಿವೇಶದಲ್ಲಿ ಕಾಂಗ್ರೆಸ್ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ-ಕಾಂಗ್ರೆಸ್ ಶಾಸಕರ ಮಧ್ಯೆ ವಾಗ್ಯುದ್ಧ ನಡೆಯಿತು.. ಕಾಂಗ್ರೆಸ್ …

Read More »

ಅಸ್ಪೃಶ್ಯತೆ ನಿವಾರಣೆಗೆ ಪಣತೊಟ್ಟ ಕೊಪ್ಪಳ ಪೊಲೀಸರು; ಹಳ್ಳಿ ಹಳ್ಳಿಗೂ ತೆರಳಿ ಜನರಿಂದ ಪ್ರತಿಜ್ಞೆ

ಕೊಪ್ಪಳ: ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಇನ್ನೂ ಅಸ್ಪೃಶ್ಯತೆ ಜೀವಂತವಾಗಿ ಉಸಿರಾಡುತ್ತಿದೆ. ಇದಕ್ಕೆ ಉದಾಹರಣೆಯೇ ಇತ್ತೀಚೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ದೇವರ ದರ್ಶನಕ್ಕಾಗಿ ಹನುಮಂತ ದೇವರ ದೇವಸ್ಥಾನಕ್ಕೆ ಪ್ರವೇಶ ಮಾಡಿದ ದಲಿತ ಬಾಲಕನಿಗೆ ದಂಡ ವಿಧಿಸಿದ್ದಾರೆ. ಹೀಗಿರುವಾಗಲೇ ಅಸ್ಪೃಶ್ಯತೆ ನಿವಾರಣೆಗಾಗಿ ಕೊಪ್ಪಳ ಪೊಲೀಸರು ಪಣತೊಟ್ಟಿದ್ದಾರೆ. ಹೌದು, ಇನ್ನೂ ಕೊಪ್ಪಳದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆ ನಿವಾರಣೆಗೆ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿಯೇ ಜಿಲ್ಲೆಯ ಹಳ್ಳಿ ಹಳ್ಳಿಗೂ ತೆರಳಿ ಅಸ್ಪೃಶ್ಯತೆ ನಿವಾರಣೆಗೆ ಪ್ರತಿಜ್ಞೆ ಮಾಡಿಸುತ್ತಿದ್ದಾರೆ. …

Read More »

ಮದ್ಯ ಪ್ರಿಯರಿಗೆ ಗುಡ್​​ನ್ಯೂಸ್​​​; ಅ.3ರಿಂದ ಪಬ್, ಕ್ಲಬ್ ಆರಂಭ

ಬೆಂಗಳೂರು: ಮಾರಕ ಕೊರೋನಾದಿಂದ ಹೇರಲಾಗಿದ್ದ ಲಾಕ್ಡೌನ್​​​ ಸಡಿಲಗೊಳಿಸಿ ಸಿಎಂ ಬಸವರಾಜ್​​ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಈಗ ಮದ್ಯ ಪ್ರಿಯರಿಗೆ ಗುಡ್​​ನ್ಯೂಸ್​​ ನೀಡಿರುವ ಸಿಎಂ ಬಸವರಾಜ್​​ ಬೊಮ್ಮಾಯಿ ಅಕ್ಟೋಬರ್​​​ 3ನೇ ತಾರೀಕಿನಿಂದಲೇ ಕ್ಲಬ್​​​, ಪಬ್​​​​​ ತೆರೆಯಲು ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಬಸವರಾಜ್​​ ಬೊಮ್ಮಾಯಿ, ರಾಜ್ಯದಲ್ಲಿ ಸರಾಸರಿ 0.66 ಕೋವಿಡ್ ಪ್ರಮಾಣ ಇದೆ. ಸದ್ಯ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಪಾಸಿಟಿವಿ ರೇಟ್​​ ಶೇ.1 ಕ್ಕಿಂತ …

Read More »

ರೋಹಿಣಿ ಕೋರ್ಟ್ ಆವರಣದಲ್ಲಿ ಎದುರಾಳಿ ಗ್ಯಾಂಗ್‌ನಿಂದ 2 ಗ್ಯಾಂಗ್‌ಸ್ಟರ್ ಗೋಗಿ ಗುಂಡಿನ ದಾಳಿ

ಹೊಸದಿಲ್ಲಿ: ದೆಹಲಿಯ ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ದುಷ್ಕರ್ಮಿಗಳಿಂದ ಗುಂಡು ಹಾರಿಸಿದ ಗ್ಯಾಂಗ್‌ಸ್ಟರ್ ಜಿತೇಂದರ್ ಮನ್ ‘ಗೋಗಿ’ ಮೃತಪಟ್ಟಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.”ದರೋಡೆಕೋರ ಜಿತೇಂದರ್ ಮನ್ ‘ಗೋಗಿ’ ಅವರನ್ನು ಪೊಲೀಸರು ವಿಚಾರಣೆಗೆ ದೆಹಲಿಯ ರೋಹಿಣಿ ನ್ಯಾಯಾಲಯಕ್ಕೆ ಕರೆತಂದಾಗ ಅವರ ಮೇಲೆ ಗುಂಡು ಹಾರಿಸಿದರು. ಪ್ರತೀಕಾರವಾಗಿ ಮೂವರು ದಾಳಿಕೋರರು ಹತರಾದರು” ಎಂದು ಡಿಸಿಪಿ ರೋಹಿಣಿ ಹೇಳಿದರು. ನ್ಯಾಯಾಲಯದ ಆವರಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ.ನ್ಯಾಯಾಲಯದ ಆವರಣದಲ್ಲಿ ಭದ್ರತಾ ಲೋಪವನ್ನು …

Read More »