Breaking News

ಹಿರೇಬಾಗೇವಾಡಿ ಬ್ಯಾಂಕ್ ಆಫ್ ಇಂಡಿಯಾಗೆ ಖದೀಮರ ಕನ್ನ:

ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸುವರ್ಣಸೌಧ ಸಮೀಪದಲ್ಲಿಯೇ ಇರುವ ಹಿರೇಬಾಗೇವಾಡಿ ಗ್ರಾಮದ ಪ್ರತಿಷ್ಠಿತ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ಗೆ ನಿನ್ನೆ ರಾತ್ರಿ ಖದೀಮರು ಕನ್ನ ಹಾಕಿದ್ದು. ಕಳ್ಳತನ ವಿಫಲಯತ್ನವಾಗಿದೆ. ಬ್ಯಾಂಕಿನ ಮುಂಬದಿಯ ಬಾಗಿಲನ್ನು ತೆರೆಯದೆ ಹಿಂಭಾಗದ ಬಾಗಿಲ ಮೂಲಕ ಕಳ್ಳತನಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಬ್ಯಾಂಕ್‍ನ ಹಿಂಬಾಗಿಲ ಮೂಲಕ ನುಗ್ಗಿರುವ ಕಳ್ಳರು ಗ್ಯಾಸ್ ಕಟರ್ ಮೂಲಕ ಹಣ ತುಂಬುವ ಯಂತ್ರವನ್ನು ಎಟಿಎಂ …

Read More »

ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ

ಹೈದರಬಾದ್: ತೆಲಂಗಾಣದ ಸಲಿಂಗಕಾಮಿ ಜೋಡಿಯೊಂದು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶನಿವಾರ ಹೈದರಾಬಾದ್‍ನ ಹೊರವಲಯದಲ್ಲಿರುವ ರೆಸಾರ್ಟ್‍ನಲ್ಲಿ ಸಲಿಂಗಕಾಮಿ ಜೋಡಿಯ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿತ್ತು. ಹೋಟೆಲ್ ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್‍ನಲ್ಲಿ ಹಿರಿಯ ಅಧ್ಯಾಪಕರಾದ ಕೋಲ್ಕತ್ತಾ ಮೂಲದ ಸುಪ್ರಿಯೊ ಚಕ್ರವರ್ತಿ(31) ಮತ್ತು ಎಂಎನ್‍ಸಿ ಉದ್ಯೋಗಿಯಾಗಿರುವ ದೆಹಲಿ ಮೂಲಕ ಅಭಯ್ ಡ್ಯಾಂಗ್ (34) ಬಿಳಿ ಸೂಟಿನಲ್ಲಿ ಉಂಗುರ ವಿನಿಮಯ ಮಾಡಿಕೊಳ್ಳುವ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ಬೆಂಗಾಲಿ ಮತ್ತು …

Read More »

ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ ಕತ್ತಿ ವಿರುದ್ಧ ಈಗ ಐದಾರು ಹಳ್ಳಿಗಳ ಜನ ತಿರುಗಿ ಬಿದ್ದಿದ್ದಾರೆ..

ಬೆಳಗಾವಿ. ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ ಕತ್ತಿ ವಿರುದ್ಧ ಈಗ ಐದಾರು ಹಳ್ಳಿಗಳ ಜನ ತಿರುಗಿ ಬಿದ್ದಿದ್ದಾರೆ..   ಜಾಗನೂರ, ಪಾಮಲದಿನ್ನಿ, ಬಡಿಗವಾಡ ಹಾಗೂ ರಾಜಪೂರ ಗ್ರಾಮಸ್ಥರ ಕತ್ತಿ ವಿರುದ್ಧ ಕತ್ತಿ ಮಸೆಯತೊಡಗಿದ್ದಾರೆ ಕತ್ತಿ ಒಡೆತನದವಿಶ್ವರಾಜ್ ಸಕ್ಜರೆ ಕಾರ್ಖಾನೆಯ ವಿಷಪೂರಿತ ರಾಸಾಯನಿಕ ನೀರು ಹಳ್ಳಗಳಿಗೆ ಬಿಡುತ್ತಿರುವ ಹಿನ್ನಲೆ ಜಾನುವಾರುಗಳಿಗೆ ಚರ್ಮ ರೋಗ ಕಾಯಿಲೆ ಬರುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.   ಸಚಿವ ಕತ್ತಿ ಪ್ರಭಾವದಿಂದಾಗಿ ಸ್ಥಳಕ್ಕೆ ತಹಶಿಲ್ದಾರ …

Read More »

MES ಪುಂಡಾಟದ ಹಿಂದಿನ ಡೈರೆಕ್ಟರ್​ & ಪ್ರೊಡ್ಯೂಸರ್​ DK ಶಿವಕುಮಾರ್; CT ರವಿ ವಾಗ್ದಾಳಿ

ಬೆಳಗಾವಿ: ಜಿಲ್ಲೆಯಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸಿದ ಪುಂಡಾಟಕ್ಕೆ ಡಿ.ಕೆ ಶಿವಕುಮಾರ್​ ಅವ್ರೇ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್​ನವ್ರು ಹತಾಶೆಯ ಭಾವದಲ್ಲಿದ್ದಾರೆ. ಹೀಗಾಗಿ ದೇಶದಲ್ಲಿ ಸಂಘರ್ಷ ಉಂಟು ಮಾಡಿ ರಾಜಕೀಯ ದುರ್ಲಾಭ ಪಡೆಯುವ ಷಡ್ಯಂತ್ರ ನಡೆಸಿದ್ದಾರೆ ಎಂದು ಟೀಕಿಸಿದ್ದಾರೆ. ಜೊತೆಗೆ ಇದೆಲ್ಲದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಇದ್ದು, ಅವರೇ ಈ ಪುಂಡಾಟದ ಹಿಂದಿನ ಅಸಲಿ ನಿರ್ದೇಶಕ …

Read More »

ಸಿಎಂ ಬೊಮ್ಮಾಯಿ 1 ತಿಂಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ.. ನಮ್ಮ ಶಾಪ ತಟ್ಟದೇ ಇರಲ್ಲ.. ಬಸವಪ್ರಕಾಶ ಸ್ವಾಮೀಜಿ

: ಬೆಳಗಾವಿ : ಮುಂಬರುವ ಒಂದು ತಿಂಗಳ ಅವಧಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಕೂಡಲ ಸಂಗಮ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ ಶಾಪ ಹಾಕಿದರು.  ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಪೊಲೀಸರನ್ನು ಚೂ‌ ಬಿಟ್ಟು ಕಾವಿ ಕುಲಕ್ಕೆ ಅವಮಾನ ಮಾಡಿದೆ. ಈ‌ ಅನ್ಯಾಯವನ್ನು ಲಿಂಗಾಯತ ಸಮುದಾಯ ಸಹಿಸಿಕೊಳ್ಳುವುದಿಲ್ಲ. ಸ್ವಾಮೀಜಿಗಳನ್ನು, ಲಿಂಗನಿಷ್ಠ ಪರವಾಗಿರುವ ಕಾರ್ಯಕರ್ತರನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಾವೆಲ್ಲರೂ …

Read More »

ಎಂಇಎಸ್ ಹಾಗೂ ಶಿವಸೇನೆಯನ್ನು ಕರ್ನಾಟಕದಿಂದ ನಿಷೇಧಿಸಿವಂತೆ ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಪ್ರತಿಭಟನೆ

ಹುಬ್ಬಳ್ಳಿ : ಬೆಳಗಾವಿ ಜಿಲ್ಲೆ ಅನಗೋಳ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಅಪಮಾನ ಮಾಡಿದನ್ನು ಖಂಡಿಸಿ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕರ್ನಾಟಕದ ಧ್ವಜವನ್ನು ಸುಟ್ಟು ಹಾಕಿದ ಪುಂಡರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಎಂಇಎಸ್ ಹಾಗೂ ಶಿವಸೇನಾ ಪಕ್ಷವನ್ನು ಬ್ಯಾನಗೆ ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ವತಿಯಿಂದ ಪ್ರತಿಭಟನೆ ಮಾಡಲಾಯಿತು.   ಹುಬ್ಬಳ್ಳಿಯ ದುರ್ಗದ ಬೈಲ್ ವೃತದಲ್ಲಿ ಪ್ರತಿಭಟನೆ ನಡೆಸಿ. ಎಂಇಎಸ್ ಹಾಗೂ ಶಿವಸೇನಾ ಪಕ್ಷ ವಿರುದ್ಧ …

Read More »

ನಾನು ಸತ್‌ ಹೋಗಿದ್ದೀನ್ರಿ. ನನ್ನನ್ಯಾಕೆ ಮಾತನಾಡಿಸ್ತೀರಿ. ಜೀವಂತ ಇರೋರನ್ನು ಮಾತನಾಡಿಸಿ ಹೋಗಿ.’

ಬೆಳಗಾವಿ: ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವರ ವಿರೋಧ ಕಟ್ಟಿಕೊಂಡಿರುವ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದವರು ಪ್ರಶ್ನೆ ಕೇಳಲು ಹೋದಾಗ ಅವರನ್ನು ತಡೆದ ರಮೇಶ್‌ ಕುಮಾರ್‌, ‘ಹೋಗ್ರಿ, ನನ್ನನ್ನೇಕೆ ಮಾತನಾಡಿಸುವಿರಿ? ಜೀವಂತ ಇರೋರನ್ನು ಮಾತಾಡಿಸಿ, ನಾನು ಜೀವಂತ ಇಲ್ಲ. ನಾಲ್ಕು ದಿನಗಳ ಹಿಂದೆಯೇ ನಾನು ಸತ್ತು ಹೋಗಿದ್ದೇನೆ’ ಎಂದು ಆಕ್ರೋಶದಿಂದ ಹೇಳಿದರು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕನ್ನಡಿಗರ ಮೇಲೆ …

Read More »

ರಾಜ್ಯದ ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ : ಇನ್ಮುಂದೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಜಾತಿ, ಆದಾಯ, ಸಂಧ್ಯಾ ಸುರಕ್ಷಾ ಪ್ರಮಾಣ ಪತ್ರ

ಹಾವೇರಿ : ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ ಸೇರಿದಂತೆ ಹಲವಾರು ಸೇವೆಗಳನ್ನು ತಾಲ್ಲೂಕು ಕಚೇರಿಗಳಿಂದ ಬೇರ್ಪಡಿಸಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.   ಹಾವೇರಿ ಜಿಲ್ಲೆಯ ಶಿಗ್ಗಾಂವ್‍ನ ಬಿಸನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಗ್ರಾಮೀಣ ಭಾಗದ ಜನರು ಕೆಲವು ಸೇವೆಗಳಿಗಾಗಿ ತಾಲ್ಲೂಕು ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸುವ ಸಲುವಾಗಿ …

Read More »

ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಘೋಷಿಸಿದ್ದಾರೆ.

: ಎಂಇಎಸ್ ಪುಂಡರ ವಿರುದ್ಧ ಖಂಡನಾ ನಿರ್ಣಯ ಮಂಡಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ರಾಯಣ್ಣ ಪ್ರತಿಮೆ ವಿರೂಪಗೊಳಿಸಿದವರ ವಿರುದ್ಧ ದೇಶದ್ರೋಹ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಘೋಷಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಎಂಇಎಸ್ ಪುಂಡಾಟ ಪ್ರಕರಣದ ಬಗ್ಗೆ ಚರ್ಚೆಯಾಗಿದ್ದು, ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ವಪಕ್ಷಗಳ ನಾಯಕರು ಸರ್ಕಾರವನ್ನು ಒಕ್ಕೋರಲಿನಿಂದ ಒತ್ತಾಯಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಭಾಷೆಯ ನೆಪದಲ್ಲಿ ಶಾಂತಿ ಕಡಡಲು ಯತ್ನಿಸಿರುವ ಎಂಇಎಸ್ ಪುಂಡರ …

Read More »

ಎಂಇಎಸ್ ನಿಂದ ಶಾಂತಿ ಸುವ್ಯವಸ್ಥೆ ಹಾಳಾಗುತ್ತಿದೆ. ಇಂತಹ ಸಂಘಟನೆಯನ್ನು ಮೊದಲು ನಿಷೇಧಿಸಬೇಕು: ಸಿದ್ದರಾಮಯ್ಯ

ಬೆಳಗಾವಿ: ಎಂಇಎಸ್ ನಿಂದ ಶಾಂತಿ ಸುವ್ಯವಸ್ಥೆ ಹಾಳಾಗುತ್ತಿದೆ. ಇಂತಹ ಸಂಘಟನೆಯನ್ನು ಮೊದಲು ನಿಷೇಧಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಅವರಿಗೆ ಮಾನ, ಮರ್ಯಾದೆ ಏನೂ ಇಲ್ಲ. ಅಂತವರಿಂದ ನೆಮ್ಮದಿ ಹಾಳಾಗುತ್ತದೆ. ನಾವು ಹೋಗಿ ಮಹಾರಾಷ್ಟ್ರದಲ್ಲಿ ಗಲಾಟೆ ಮಾಡುತ್ತೇವಾ? ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ವಿಧಾನಸಭೆಯಲ್ಲಿ ಎಂಇಎಸ್ ಪುಂಡಾಟ ಪ್ರಕರಣದ ಬಗ್ಗೆ ವಿಷಯ ಪ್ರಸ್ತಾಪವಾಗಿದ್ದು, ಈ ಕುರಿತು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಂಇಎಸ್ ಪುಂಡರು …

Read More »