ಚಿಕ್ಕೋಡಿ: ಕೇಸರಿ ಚಪ್ಪಲಿ ಬೇಕಾದರೂ ಧರಿಸಿ ಬರಲಿ ನಮಗೆನೂ ಅಭ್ಯಂತರವಿಲ್ಲ, ಹಿಜಬ್ ಧರಿಸಲು ಅವಕಾಶ ನೀಡಿ ಎಂದು ಗೋಕಾಕ್ ಪಟ್ಟಣದಲ್ಲಿ ಪಿಯು ವಿದ್ಯಾರ್ಥಿನಿಯರು ಪಟ್ಟು ಹಿಡಿದು ತರಗತಿಗಳನ್ನ ಬಹಿಷ್ಕರಿಸಿದ್ದಾರೆ. ಕಾಲೇಜುಗಳಲ್ಲಿ ಬೇರೆ ಕೋಮಿನ ವಿದ್ಯಾರ್ಥಿಗಳು ಕೇಸರಿ ಚಪ್ಪಲಿ ಬೇಕಾದರೂ ಧರಿಸಿ ಬರಲಿ ನಮಗೆನೂ ಅಭ್ಯಂತರವಿಲ್ಲ. ನಮಗೆ ಹಿಜಬ್ ಧರಿಸಲು ಅವಕಾಶ ನೀಡಿ ಎಂದು ಹಿಜಬ್ ಬೆಂಬಲಿತ ವಿದ್ಯಾರ್ಥನಿಯರು ಒತ್ತಾಯಿಸಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದಲ್ಲಿ ಹಿಜಬ್ ವಿವಾದ ಮುಂದುವರೆದಿದ್ದು, ತರಗತಿಗಳಿಗೆ ತೆರಳದೆ …
Read More »ವಿಶ್ವದ ನಂ.1 ಚೆಸ್ ಆಟಗಾರನಿಗೆ ಶಾಕ್ ಕೊಟ್ಟ 16ರ ಭಾರತೀಯ ಬಾಲಕ
ನವದೆಹಲಿ: ಭಾರತದ ಯುವ ಗ್ರ್ಯಾಂಡ್‍ಮಾಸ್ಟರ್ 16 ವರ್ಷದ ಆರ್ ಪ್ರಗ್ನಾನಂದ ಅವರು ಆನ್‍ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಾದ ಏರ್‍ಥಿಂಗ್ಸ್ ಮಾಸ್ಟರ್ಸ್‍ನ ಎಂಟನೇ ಸುತ್ತಿನಲ್ಲಿ ವಿಶ್ವದ ನಂ 1 ಆಟಗಾರ ಮ್ಯಾಗ್ನಸ್ ಕಾರ್ಲ್‍ಸೆನ್ ಅವರನ್ನು ದಂಗುಬಡಿಸಿದ್ದಾರೆ. ಕಾರ್ಲ್‍ಸೆನ್‍ರ ಸತತ ಮೂರು ಗೆಲುವಿನ ಓಟವನ್ನು ನಿಲ್ಲಿಸಲು ಸೋಮವಾರದ ಆರಂಭದಲ್ಲಿ ನಡೆದ ಟಾರ್ರಾಸ್ಚ್ ವಿಭಾಗದ ೮ನೇ ಸುತ್ತಿನ ಆಟದಲ್ಲಿ ಪ್ರಗ್ನಾನಂದ ಅವರು 39 ನಡೆಗಳಲ್ಲಿ ಕಪ್ಪು ಕಾಯಿಗಳೊಂದಿಗೆ ಗೆದ್ದಿದ್ದಾರೆ. ಭಾರತೀಯ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಅವರು, …
Read More »ಮೂವರನ್ನು ಅರೆಸ್ಟ್ ಮಾಡಿದ್ದು, ಶಿವಮೊಗ್ಗದಿಂದ ಸ್ಪ್ರೆಡ್ ಆಗಲು ಬಿಡಲ್ಲ:ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು: ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಶಿವಮೊಗ್ಗದಿಂದ ಸ್ಪ್ರೆಡ್ ಆಗೋಕೆ ಬಿಡಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಹರ್ಷ ಕೊಲೆ ಪ್ರಕರಣ ನಡೆದಿದೆ. ಹರ್ಷನ ಅಂತಿಮ ವಿದಿವಿಧಾನ ನೆರವೇರುತ್ತಿದೆ. ಮೆರವಣಿಗೆ ವೇಳೆ ಸ್ವಲ್ಪ ಗಲಾಟೆ ನಡೆದಿದೆ. ಮುರುಗನ್ ಹಿರಿಯ ಅಧಿಕಾರಿ ಸ್ಥಳದಲ್ಲಿ ಇದ್ದಾರೆ. ಅರೆಸ್ಟ್ ಮಾಡಿರೋದನ್ನು ಇನ್ನು ಮಾಹಿತಿ ಸದ್ಯ ಕಸ್ಟಡಿ ತೆಗೆದುಕೊಂಡಿದ್ದಾರೆ ಎಂದರು.
Read More »ಈಶ್ವರಪ್ಪ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕಿಡಿ
ಚಿಕ್ಕೋಡಿ: ಶಿವಮೊಗ್ಗದಲ್ಲಿ ಮುಸ್ಲಿಂ ಗೂಂಡಾಗಳಿಂದ ಹತ್ಯೆ ಆಗಿದೆ ಎಂಬ ಸಚಿವ ಈಶ್ವರಪ್ಪ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆ ಇವರೇ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಸಲೆಂದೇ ಪೊಲೀಸ್ ಇಲಾಖೆ ಇದೆ. ಪೊಲೀಸರು ತನಿಖೆ ಮಾಡಲಿ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ ಎಂದು ನೀವೇ ನೋಡುತ್ತಿದ್ದೀರಾ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಜನ …
Read More »ನೀರಿನ ವಿಷಯಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮತ್ತು ಪಕ್ಕದ ಮನೆಯವರ ಜೊತೆ ಮಾರಾಮಾರಿ
ಹುಬ್ಬಳ್ಳಿ: ನೀರಿನ ವಿಷಯಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮತ್ತು ಪಕ್ಕದ ಮನೆಯವರ ಜೊತೆ ಮಾರಾಮಾರಿ ನಡೆದಿದ್ದು, ಎರಡು ಕುಟುಂಬಗಳು ಪರಸ್ಪರ ಮಾರಾಣಾಂತಿಕವಾಗಿ ಹಲ್ಲೆ ಮಾಡಿಕೊಂಡಿದ್ದಾರೆ. ಹಳೇ ಹುಬ್ಬಳ್ಳಿಯ ಸಹದೇವನಗರದಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪುರಾಣಿಕಮಠ್ ಹೆಡ್ ಕಾನ್ಸ್‍ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುರಾಣಿಕಮಠ್ ಅವರ ಮನೆಯ ಪಕ್ಕದಲ್ಲಿರುವ ಭರತೇಶ್ ಅವರ ಜೊತೆಗೆ ಕುಡಿಯುವ ನೀರಿನ ಸಲುವಾಗಿ ಜಗಳ ಆರಂಭವಾಗಿದೆ. ಜಗಳ ತಾರಕ್ಕೇರಿ ಇಬ್ಬರು ಇಟ್ಟಿಗೆ ಮತ್ತು …
Read More »ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ.
ಕೊಡಗು: ಇವರಿಬ್ಬರು ಮದುವೆಯಾಗಿ ಬರೀ ಹತ್ತು ತಿಂಗಳುಗಳಷ್ಟೇ ಆಗಿದ್ದವು. ಆದರೆ ಅಷ್ಟರಲ್ಲಾಗಲೇ ದುರಂತ ಸಂಭವಿಸಿದ್ದು, ಒಬ್ಬರ ಹಿಂದೊಬ್ಬರಂತೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಬಿರುನಾಣಿಯಲ್ಲಿ ಈ ಪ್ರಕರಣ ನಡೆದಿದ್ದು, ಯುವರಾಜ್ (25), ಪತ್ನಿ ಶಿಲ್ಪಾ (22) ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಯುವರಾಜ್ ದಂಪತಿ, ಹತ್ತು ತಿಂಗಳ ಹಿಂದೆ ಶಿಲ್ಪಾಳನ್ನು ಮದುವೆಯಾಗಿದ್ದರು. ಆ ಬಳಿಕ ಇಬ್ಬರೂ ಪೊನ್ನಂಪೇಟೆಯ ಬಿರುನಾಣಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಫಾರೆಸ್ಟ್ ಗಾರ್ಡ್ ಆಗಿರುವ …
Read More »ಮಾರ್ಚ್ ನಲ್ಲಿ 13 ದಿನ ರಜೆ, RBI ನಿಂದ ಪಟ್ಟಿ ಬಿಡುಗಡೆ
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಮಾರ್ಚ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವು ಮಾರ್ಚ್ ತಿಂಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಬಯಸಿದರೆ, ನಂತರ ಶಾಖೆಗೆ ಹೋಗುವ ಮೊದಲು, ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿ. ಆರ್‌ಬಿಐ ಬಿಡುಗಡೆ ಮಾಡಿರುವ ಈ ಪಟ್ಟಿಯ ಪ್ರಕಾರ, ಮಾರ್ಚ್ 2022 ರಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಒಟ್ಟು 13 ದಿನಗಳಲ್ಲಿ ಎಂದಿನಂತೆ 4 …
Read More »ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ. ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ ಮಾಡಲಿದ್ದಾರೆ: ಜೊಲ್ಲೆ
ಹೊಸಪೇಟೆ: ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ. ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮುಜರಾಯಿ ಮತ್ತು ವಕ್ಫ್ ಸಚಿವೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಮುಜರಾಯಿ ಇಲಾಖೆಯಿಂದ ದಾಖಲೆ, ಪುರಾವೆ ಸಂಗ್ರಹಿಸಲಾಗುತ್ತಿದೆ. ರಾಮಾಯಣದಲ್ಲಿ ಇಲ್ಲಿನ ಕಿಷ್ಕಿಂಧೆ ಬಗ್ಗೆ ಉಲ್ಲೇಖವಿದೆ. ಆದರೆ, ತಿರುಪತಿಯಲ್ಲಿ ಹನುಮನ ಜನ್ಮಸ್ಥಳವಿದೆ ಎನ್ನಲು ಐತಿಹಾಸಿಕ ಪುರಾವಿಯಿಲ್ಲ ಎಂದು ಭಾನುವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅಯೋಧ್ಯೆಯ ಶ್ರೀರಾಮ ಮಂದಿರ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟ …
Read More »ಈಶ್ವರಪ್ಪ ರಾಜೀನಾಮೆಗೆ ಪಟ್ಟು : 5ನೇ ದಿನವೂ ಸದನದಲ್ಲಿ ಕೈ ನಾಯಕರ ಅಹೋರಾತ್ರಿ ಧರಣಿ
ಬೆಂಗಳೂರು: ಭವಿಷ್ಯದಲ್ಲಿ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಾಡಬಹುದು ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ, ರಾಷ್ಟ್ರಧ್ವಜಕ್ಕೆ ( National Flag) ಅವಮಾನ ಮಾಡಿದಂತ ಸಚಿವ ಈಶ್ವರಪ್ಪ ( Minister K S Eshwarappa) ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ, ಕಾಂಗ್ರೆಸ್ ನಾಯಕರ ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ರಾಷ್ಟ್ರಧ್ವಜ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ …
Read More »ಚನ್ನಪಟ್ಟಣದ 50ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ಇಂದು ಬಿಜೆಪಿ ಸೇರ್ಪಡೆ; ಎಚ್‌ಡಿಕೆಗೆ ಸಿಪಿವೈ ಟಕ್ಕರ್
ರಾಮನಗರ, ಫೆಬ್ರವರಿ 21: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಚುನಾವಣೆಗೆ ವರ್ಷ ಇರುವಾಗಲೇ ಪಕ್ಷಾಂತರ ಜಿಗಿತ ಬಲು ಜೋರಾಗಿದೆ. ತೆನೆ ಇಳಿಸಿ ನೂರಾರು ಮುಖಂಡರು ಕಮಲ ಹಿಡಿಯುತ್ತಿದ್ದಾರೆ. ಇಷ್ಟಾದರೂ ದಳಪತಿ ಎಚ್‌ಡಿಕೆ ಮಾತ್ರ ಕೂಲ್ ಆಗಿದ್ದಾರೆ. ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ನೆಲೆ ಉಳಿಸಿಕೊಂಡಿದೆ. ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕಿನಲ್ಲಿ ಜೆಡಿಎಸ್ ಜೆಡಿಎಸ್ ಶಾಸಕರಿದ್ದಾರೆ. …
Read More »
Laxmi News 24×7