ಬೆಂಗಳೂರು: ‘ಬಿಜೆಪಿಗೆ ಅನುಕೂಲ ಮಾಡಲು ಜೆಡಿಎಸ್‌ನವರು ಉತ್ತರ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕುತ್ತಾರೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ‘ಜೆಡಿಎಸ್‌ನವರು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಸೋಲಿಸುವ ಕೆಲಸ ಮಾಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ ಅದನ್ನೇ ಮಾಡಿದ್ದರು. ಮುಸ್ಲಿಮರ ಬಗ್ಗೆ ಕಾಳಜಿ ಇದ್ದರೆ ಸಂಪುಟದಲ್ಲಿ ಯಾಕೆ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ. ಮಂಡ್ಯ, ಮೈಸೂರಿನಲ್ಲಿ ಅಲ್ಪಸಂಖ್ಯಾತರಿಗೆ ಯಾಕೆ ಟಿಕೆಟ್ ಕೊಡಲ್ಲ ‘ ಎಂದು ಪ್ರಶ್ನಿಸಿದರು. ‘ಹಾನಗಲ್‌ನಲ್ಲಿ ಮನೋಹರ ತಹಶೀಲ್ದಾರ್ ಮತ್ತು …
Read More »ಮೈಸೂರು ದಸರಾ| ಎಸ್.ಎಂ. ಕೃಷ್ಣಗೆ ಸರ್ಕಾರದ ಅಧಿಕೃತ ಆಹ್ವಾನ
: ಇದೇ 7ರಿಂದ ಆರಂಭವಾಗುವ ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸುವಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಅಧಿಕೃತವಾಗಿ ಆಹ್ವಾನ ನೀಡಿದರು. ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಯವರು, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಗೌರವಿಸಿದರು. ಶಿವನಿ ಮರದಲ್ಲಿ ಕೆತ್ತನೆ ಮಾಡಿರುವ ಮೈಸೂರು ಅಂಬಾರಿಯ ಕಲಾಕೃತಿಯ ಸ್ಮರಣಿಕೆ ನೀಡಿ ದಸರಾ ಉದ್ಘಾಟನೆಗೆ ಆಹ್ವಾನಿಸಿದರು. ‘ರಾಜ್ಯ ರಾಜಕೀಯದಲ್ಲಿ ಮುತ್ಸದ್ದಿ ನಾಯಕರಾಗಿ …
Read More »ಸೀರೆ ನೋಡಿ ಹೆಂಡತಿ ಬೈಯದಿದ್ರೆ ಸಾಕು!: ಸಿಎಂ ಬಸವರಾಜ ಬೊಮ್ಮಾಯಿ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ದಿ.ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿ ಭವನದ ಖಾದಿ ಮಾರಾಟ ಮಳಿಗೆಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಮಾರು 16 ಸಾವಿರ ರು. ಮೌಲ್ಯದ ಸೀರೆ ಹಾಗೂ ಇತರ ಉಡುಗೆ ಖರೀದಿಸಿದರು. ಅನಂತರ ಸೀರೆ ಸೆಲೆಕ್ಷನ್ ಸರಿ ಹೋಗದಿದ್ದರೆ ತಮ್ಮ ಗೃಹ ಸಚಿವರು ಅರ್ಥಾತ್ ಪತ್ನಿ ಬೈಯದಿದ್ದರೆ ಸಾಕು ಎಂದು …
Read More »ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಯುವಕನಿಂದ ಕರ್ನಾಟಕ ಸೈಕಲ್ ಯಾತ್ರೆ
ಕಾರವಾರ: ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕಾನೂನು ರೂಪಿಸಿ , ಹಾಗೂ ಅತ್ಯಾಚಾರಿಗಳಿಗೆ ಗಲ್ಲಿಗೆ ಹಾಕಿ ಎಂದು ಒತ್ತಾಯಿಸಿ , ಯುವಕನೋರ್ವ ಸೈಕಲ್ ಜಾಥ ಆರಂಭಿಸಿದ್ದಾನೆ. ಯುವಕ 17 ಜಿಲ್ಲೆ ಸೈಕಲ್ ಯಾನ ಮುಗಿಸಿ, ಇಂದು ಕಾರವಾರ ಜಿಲ್ಲೆಯಿಂದ ಹಾವೇರಿಯತ್ತ ಪಯಣ ಬೆಳಸಿದ. ಅತ್ಯಾಚಾರಗಳ ವಿರುದ್ಧ ಸರ್ಕಾರದ ಮೇಲೆ ಒತ್ತಡ ಹೇರಲು ಹಾಗೂ ಜನರನ್ನು ಜಾಗೃತಗೊಳಿಸುವ ಸಲುವಾಗಿ ಯುವಕ ‘ಅಖಂಡ ಕರ್ನಾಟಕ ಸೈಕಲ್ ಯಾತ್ರೆ’ ಮಾಡುತ್ತಿದ್ದು ,ಈಗಾಗಲೇ 2000 …
Read More »ಭೂಸ್ವಾಧೀನಕ್ಕೆ ವಿರೋಧ; ಗಾಂಧಿ ವೇಷ ಧರಿಸಿ ಬೀದಿಗಿಳಿದ ಅನ್ನದಾತ; ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು
ಬೆಂಗಳೂರು: ಶಿವರಾಮ್ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿರುವುದಕ್ಕೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಗಾಂಧಿ ವೇಷ ಧರಿಸಿ ವಿನೂತನ ಧರಣಿ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಲಹಂಕ ತಾಲೂಕಿನ 17 ಗ್ರಾಮಗಳ ರೈತರು ಬಿಡಿಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಬಿಳಿ ಪಂಚೆ, ಶಾಲು, ಟೋಪಿ ಮತ್ತು ಕೋಲು ಹಿಡಿದು ಗಾಂಧಿ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಶಿವರಾಮ ಕಾರಂತ ಬಡಾವಣೆಗಾಗಿ ಬಿಡಿಎ …
Read More »ಗ್ರಾಮೀಣ ಜನತೆಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಸಮೀಪದಲ್ಲೇ ಸರ್ಕಾರಿ ಸೇವೆ ಒದಗಿಸಲು ಗ್ರಾಪಂಗಳಲ್ಲಿ ನಾಗರಿಕ ಸೇವಾ ಕೇಂದ್ರ ಸ್ಥಾಪನೆ
ಬೆಂಗಳೂರು: ರಾಜ್ಯದ ಗ್ರಾಮೀಣ ಜನರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಗ್ರಾಮ ಪಂಚಾಯಿತಿಗೆ ಒಂದು ನಾಗರಿಕ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಜನರಿಗೆ ಅಗತ್ಯವಿರುವ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನಾಗರಿಕ ಸೇವಾ ಕೇಂದ್ರ ಆರಂಭಿಸುವಂತೆ ಇ -ಆಡಳಿತ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇ ಆಡಳಿತ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ, ಎಲ್ಲಾ ಗ್ರಾಮ ಪಂಚಾಯಿತಿಗಳ …
Read More »ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾಗೆ ಎದುರಾಯ್ತು ಸಂಕಷ್ಟ.!
ಮಂಡ್ಯ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾಗೆ ಸಂಕಷ್ಟ ಎದುರಾಗಿದೆ. ಗೋದಾಮಿಗೆ ಬಾಡಿಗೆ, ಕಂದಾಯ ಹಣ ಪಾವತಿಸದ ಹಿನ್ನೆಲೆಯಲ್ಲಿ ನಿಶಾ ವಿರುದ್ಧ ಕಾನೂನು ಹೋರಾಟಕ್ಕೆ ಟಿಎಪಿಸಿಎಂಎಸ್ ನಿರ್ಧರಿಸಿದೆ. ನಿಶಾ ಯೋಗೇಶ್ವರ್ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಮಾಲಕಿ. ಕಂಪನಿ 2017ರಲ್ಲಿ ಗೋದಾಮು ಬಾಡಿಗೆಗೆ ನೀಡಿತ್ತು. ಮಂಡ್ಯ ಜಿಲ್ಲೆ ಮದ್ದೂರಿನ ಟಿಎಪಿಸಿಎಂಎಸ್ ಗೆ ಸೇರಿದ ಗೋದಾಮು ಬಾಡಿಗೆ ಪಡೆದುಕೊಂಡಿದ್ದರು. ಆದರೆ ಒಪ್ಪಂದದಂತೆ ನಿಶಾ ಬಾಡಿಗೆ ಹಣ ಹಾಗೂ ಕಂದಾಯಯವನ್ನು ಪಾವತಿ ಮಾಡಿಲ್ಲ. …
Read More »ಖಾದಿ ಎಂಪೋರಿಯಂನಲ್ಲಿ ಪತ್ನಿಗಾಗಿ ಭರ್ಜರಿ ಸೀರೆ ಖರೀದಿಸಿದ ಸಿಎಂ
ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ, ಖಾದಿ ಎಂಪೋರಿಯಂ ನಲ್ಲಿ ಪತ್ನಿಗಾಗಿ ಭರ್ಜರಿ ಸೀರೆ ಖರೀದಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇಂದು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಖಾದಿ ಎಂಪೋರಿಯಂ ಗೆ ಭೇಟಿ ನೀಡಿದರು. ಈ ವೇಳೆ ಪತ್ನಿಗಾಗಿ ಸೀರೆ ಖರೀದಿ ಮಾಡಿದರು. ಮೂರು ಸೀರೆಯಲ್ಲಿ ಒಂದನ್ನು ಆಯ್ಕೆ ಮಾಡಿದ ಸಿಎಂ ಪತ್ನಿಗೆ ಸೀರೆ ಖರೀದಿಸಿದರು. ಇದೇ ವೇಳೆ ತಮ್ಮೊಂದಿಗೆ …
Read More »ಮೋದಿಯನ್ನು ಹೀಗೆ ಬಿಟ್ರೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತೆ: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
ಬೆಂಗಳೂರು: ಗಾಂಧೀಜಿಯಿಂದ ವಿಶ್ವದ ಅನೇಕ ದಿಗ್ಗಜರು ಸ್ಫೂರ್ತಿ ಪಡೆದಿದ್ದಾರೆ. ಆದರೆ ಬಿಜೆಪಿಯವರು ಗಾಂಧಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧೀಜಿ ಹಾಗೂ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಬಿಜೆಪಿಯವರು ಅಸತ್ಯ ಹಾಗೂ ಹಿಂಸೆಯಲ್ಲಿ ನಂಬಿಕೆಯಿಟ್ಟವರು. ಮೋದಿ ವಿರುದ್ಧ ಮಾತಾಡಿದರೆ ದೇಶ ವಿರೋಧಿ ಹಣೆಪಟ್ಟಿ ಕಟ್ಟುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ …
Read More »ಸಾಲ, ಬಡ್ಡಿ ಕಂತುಗಳಿಂದ ತತ್ತರಿಸಿದ ರಿಕ್ಷಾ, ಟ್ಯಾಕ್ಸಿ ಚಾಲಕರು
ಬೆಂಗಳೂರು,: ‘ಏಯ್ ಆಟೊ ಬರ್ತಿಯಾ’.. ಅಂದ್ರೆ ‘ಏಲ್ಲಿಗೆ’….ಎಂದು ಗೈರತ್ತಿನಿಂದಲೇ ಪ್ರಶ್ನಿಸುತ್ತಿದ್ದ ರಿಕ್ಷಾ ಚಾಲಕರ ಧ್ವನಿ ಕೋವಿಡ್ ಸೋಂಕಿನ ಸುದೀರ್ಘ ಅವಧಿಯ ಲಾಕ್‌ಡೌನ್, ಪೆಟ್ರೋಲ್, ಅನಿಲ(ಗ್ಯಾಸ್) ಬೆಲೆ ಏರಿಕೆ ಹಾಗೂ ಖಾಸಗಿ ಫೈನಾನ್ಸಿಯರ್‌ಗಳ ತೀವ್ರ ಕಿರುಕುಳದಿಂದ ಕ್ಷೀಣಿಸಿದೆ. ರಿಕ್ಷಾ ಚಾಲಕರ ಜೊತೆಗೆ ಐಟಿ-ಬಿಟಿ, ಸಾಫ್ಟ್‌ವೇರ್ ಕಂಪೆನಿಗಳ ಬೂಮ್ ಕಾರಣಕ್ಕೆ ‘ಬಿಂದಾಸ್’ ಆಗಿ ಜೀವನ ನಡೆಸುತ್ತಿದ್ದ ಟ್ಯಾಕ್ಸಿ ಚಾಲಕರು ಆರ್ಥಿಕ ಸಂಕಷ್ಟದಿಂದಾಗಿ ಫೈನಾನ್ಸಿಯರ್‌ಗಳಿಂದ ಪಡೆದ ಸಾಲದ ಕಂತು ಮತ್ತು ಬಡ್ಡಿ ಕಟ್ಟಲು ಸಾಧ್ಯವಾಗದೆ …
Read More »