Breaking News

26 ಸಾವಿರ ಕೋಟಿಗೆ ಎಸ್‌ಬಿ ಎನರ್ಜಿ ಇಂಡಿಯಾ ಕಂಪನಿ ಅದಾನಿ ತೆಕ್ಕೆಗೆ

ನವದೆಹಲಿ: ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ (ಎಜಿಇಎಲ್‌) ಕಂಪನಿಯು ₹26 ಸಾವಿರ ಕೋಟಿಗೆ (3.5 ಶತಕೋಟಿ ಡಾಲರ್) ಎಸ್‌ಬಿ ಎನರ್ಜಿ ಇಂಡಿಯಾ ಕಂಪನಿಯನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ‘ಜಗತ್ತಿನ ಅತಿದೊಡ್ಡ ಸೌರ ವಿದ್ಯುತ್‌ ಅಭಿವೃದ್ಧಿ ಕಂಪನಿಯಾದ ಎಜಿಇಎಲ್‌ ಯಶಸ್ವಿಯಾಗಿ ಎಸ್‌ಬಿ ಎನರ್ಜಿ ಹೋಲ್ಡಿಂಗ್ಸ್‌ ಲಿಮಿಟೆಡ್‌ (ಎಸ್‌ಬಿ ಎನರ್ಜಿ ಇಂಡಿಯಾ) ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದೆ. ಎಲ್ಲಾ ನಗದು ವ್ಯವಹಾರವನ್ನೇ ಒಳಗೊಂಡ ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ ಮೇ 8ರಂದೇ ಖಚಿತಗೊಳಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು’ …

Read More »

ಅನೇಕ ವರ್ಷಗಳಾದರೂ ಉದ್ಯಮ ಸ್ಥಾಪಿಸದ ಸಂಸ್ಥೆಗಳ ಭೂಮಿ ಮಂಜೂರಾತಿ ರದ್ದು : ಬಸವರಾಜ ಬೊಮ್ಮಾಯಿ

ಬೆಂಗಳೂರು: ಸರ್ಕಾರದಿಂದ ಭೂಮಿ ಪಡೆದು ಅನೇಕ ವರ್ಷಗಳಾದರೂ ಉದ್ಯಮ ಸ್ಥಾಪಿಸದ ಸಂಸ್ಥೆಗಳ ಭೂಮಿ ಮಂಜೂರಾತಿ ರದ್ದು ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕೆ ಉದ್ದೇಶಕ್ಕೆ ಭೂಮಿ ಹಂಚಿಕೆಯಾಗಿದ್ದರೂ ಕಾರ್ಯಾರಂಭ ಮಾಡದೆ ಇದ್ದರೆ ಪುನರ್ ಪರಿಶೀಲನೆ ನಡೆಸಿ ಭೂಮಿ ಹಂಚಿಕೆಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದ್ದಾರೆ. ಬಳ್ಳಾರಿ ಭಾಗದಲ್ಲಿ ಭೂಮಿ, ನೀರು ಹಂಚಿಕೆಯಾಗಿ ಹತ್ತು ಹನ್ನೆರಡು ವರ್ಷಗಳು ಕಳೆದರೂ ಕೈಗಾರಿಕೆಗಳು ಪ್ರಾರಂಭವಾಗಿಲ್ಲ. ಇದರ ಬಗ್ಗೆ …

Read More »

ಎರಡು ಕ್ಷೇತ್ರಗಳಿಗೆ 6 ಹೆಸರು ಸೂಚಿಸಿದ ರಾಜ್ಯ ಬಿಜೆಪಿ

ಬೆಂಗಳೂರು: ಈ ತಿಂಗಳ 30ರಂದು ನಡೆಯಲಿರುವ ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳಿಗೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳನ್ನು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ನಡೆದ ರಾಜ್ಯ ಕೋರ್‌ ಕಮಿಟಿ ಸಭೆ ರವಿವಾರ ಅಂತಿಮಗೊಳಿಸಿದ್ದು, ಒಟ್ಟು ಆರು ಮಂದಿಯ ಹೆಸರನ್ನು ವರಿಷ್ಠರಿಗೆ ಕಳುಹಿಸಲು ತೀರ್ಮಾನಿಸಿದೆ. ಸ್ಥಳೀಯವಾಗಿ ನಡೆಸಿದ ಸಮೀಕ್ಷೆ ಹಾಗೂ ಕೋರ್‌ ಕಮಿಟಿ ಸದಸ್ಯರ ಅಭಿಪ್ರಾಯದ ಹಿನ್ನೆಲೆಯಲ್ಲಿ ಹಾನಗಲ್‌ಗೆ ಸಂಸದ ಶಿವಕುಮಾರ್‌ ಉದಾಸಿ ಪತ್ನಿ ರೇವತಿ, ಕಲ್ಯಾಣ ಕುಮಾರ್‌ ಶೆಟ್ಟರ್‌ ಹಾಗೂ …

Read More »

ನಾವು ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಜಾತಿ ಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯ

ಬೆಂಗಳೂರು: ‘ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ವರದಿಯನ್ನು ಈಗಿನ ಸರ್ಕಾರ ಸ್ವೀಕರಿಸುವಂತೆ ಕಾಣುತ್ತಿಲ್ಲ. ಹೀಗಾಗಿ, ನಾವು (ಕಾಂಗ್ರೆಸ್‌) ಮತ್ತೆ ಅಧಿಕಾರಕ್ಕೆ ಬಂದ ಮೇಲೆ ವರದಿ ಸ್ವೀಕರಿಸುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ದೇವನಹಳ್ಳಿಯಲ್ಲಿ ಭಾನುವಾರ ನಡೆದ ಗಾಣಿಗ ಸಮುದಾಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ನನ್ನ ಅವಧಿಯಲ್ಲಿ ವರದಿ ಸಿದ್ಧಗೊಂಡಿರಲಿಲ್ಲ. ಈಗ ವರದಿ ಸಿದ್ಧವಾಗಿದೆ. ಆದರೆ, ಈಗಿನ …

Read More »

ಗಾಂಜಾ ಸೇದಲು ಬೆಂಕಿ ಪೊಟ್ಟಣ ಕೊಡದೇ ಇದ್ದಿದ್ದಕ್ಕೆ ಕುರಿಗಾಹಿಗಳ ಮೇಲೆ ಹಲ್ಲೆ

ತುಮಕೂರು: ಗಾಂಜಾ ಸೇದಲು ಬೆಂಕಿ ಪೊಟ್ಟಣ ಕೊಡದೇ ಇದ್ದಿದ್ದಕ್ಕೆ ಕುರಿಗಾಹಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿ‌ನ ಹುಚ್ಚನಹಟ್ಟಿ ಬಳಿ ನಡೆದಿದೆ. 6 ಜನರ ಯುವಕರ ಗುಂಪೊಂದು ಕುರಿಗಾಹಿಗಳನ್ನು ನೂಕಿದ್ದು, ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ತಿಪಟೂರು ನಗರದ ಗಗನ್, ರಾಕೇಶ್, ಅರ್ಜುನ್, ಸ್ವರೂಪ್ ಸೆರಿದಂತೆ ಒಟ್ಟು 6 ಜನ ಸೇರಿ ಕುರಿಗಾಹಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕುರಿ ಮೇಯಿಸಲು ಬಂದಿದ್ದವರ ಮೇಲೆ ರಾಕ್ಷಸನಂತೆ ಎರಗಿದ …

Read More »

ಶಾರೂಖ್ ಖಾನ್ ಮಗ ಅರೆಸ್ಟ್! ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ..

ಹಡಗಿನಲ್ಲಿ ಮಾದಕ ಪಾರ್ಟಿ ಮಾಡಿದ ಆರೋಪದ ಅಡಿಯಲ್ಲಿ ಬಾಲಿವುಡ್ ಬಾದ್​ಶಾ ಶಾರುಖ್ ಖಾನ್ ಮಗ ಆರ್ಯನ್ ಖಾನ್​​ರನ್ನು ಎನ್​ಸಿಬಿ ಅಂದ್ರೆ ಮಾದಕ ವಸ್ತು ನಿಗ್ರಹ ದಳ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಮುಂಬೈನಿಂದ ಗೋವಾಗೆ ಹೋಗ್ತಿದ್ದ ಈ ಹಡಗಿನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಇದ್ರ ಬಗ್ಗೆ ಮಾಹಿತಿ ಪಡೆದ ಎನ್​ಸಿಬಿ ಪೊಲೀಸರು ನಿನ್ನೆ ರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ಹಡಗಿನಲ್ಲಿ ಪಾರ್ಟಿ ನಡೆಯುತ್ತಿದ್ದ ಜಾಗದಲ್ಲಿ ಅಪಾರ ಪ್ರಮಾಣದ ಮಾದಕ ವಸ್ತುಗಳು …

Read More »

ಶಾರುಖ್​ಗೆ ಸಂಕಷ್ಟ ಎದುರಾಗಿರುವುದರಿಂದ ಗೆಳೆಯನಿಗೆ ಸಹಾಯ ಮಾಡಲು ಸಲ್ಮಾನ್​ ಖಾನ್​ ಆಗಮಿಸಿದ್ದಾರೆ.

ಶಾರುಖ್ ಖಾನ್​ ಪುತ್ರ ಆರ್ಯನ್​ ಖಾನ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈನ ಕಡಲ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಮಾಡಿ ಅವರು ಸಿಕ್ಕಿ ಬಿದ್ದಿದ್ದಾರೆ. ಎನ್​ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಅವ​ರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದರಿಂದ ಶಾರುಖ್​ ಖಾನ್​ಗೆ ಟೆನ್ಷನ್​ ಹೆಚ್ಚಿದೆ. ತಮ್ಮ ಸಿನಿಮಾಗಳ ಶೂಟಿಂಗ್ ಕ್ಯಾನ್ಸಲ್​ ಮಾಡಿಕೊಂಡಿರುವ ಕಿಂಗ್ ಖಾನ್​ ಅವರು ಮಗನ ರಕ್ಷಣೆಗಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅವರ ಸ್ನೇಹಿತ ಸಲ್ಮಾನ್​ ಖಾನ್​ ಕೂಡ …

Read More »

ಬೆಳಗಾವಿ: ಅನ್ಯ ಧರ್ಮದ ಯುವತಿಯೊಂದಿಗೆ ಪ್ರೇಮ, ಮುಸ್ಲಿಂ ಯುವಕನ ಹತ್ಯೆ

ಬೆಳಗಾವಿ: ಖಾನಪುರದ ರೈಲ್ವೆ ಹಳಿಯ ಮೇಲೆ 24 ವರ್ಷದ ಮುಸ್ಲಿಂ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು, ಅನ್ಯ ಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದರಿಂದ ಆತನನ್ನು ಹತ್ಯೆ ಮಾಡಿರಬಹುದೆಂಬ ಅನುಮಾನ ಉಂಟಾಗಿದೆ. ಮೃತನನ್ನು ಅರ್ಬಾಜ್ ಅಫ್ತಾಬ್ ಮುಲ್ಲಾ ಎಂದು ಗುರುತಿಸಲಾಗಿದೆ. ಈತ ಬೇರೆ ಧರ್ಮಕ್ಕೆ ಸೇರಿದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಐಪಿಸೆ ಸೆಕ್ಷನ್ 302ರ ಅಡಿಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಆತ ಬೇರೆ ಧರ್ಮಕ್ಕೆ ಸೇರಿದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂಬ ಮಾಹಿತಿ ಆಧಾರದ ಮೇಲೆ …

Read More »

ಯುಪಿಎ ಅವಧಿಯಲ್ಲೇ ಹಗರಣಗಳು ಹೆಚ್ಚು : ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ದೇಶದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದೇ 10 ವರ್ಷಗಳ ಯುಪಿಎ ಸರಕಾರದ ಅವಧಿಯಲ್ಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಆಡಳಿತದಲ್ಲಿ 1 ಲಕ್ಷ 76 ಸಾವಿರ ಕೋಟಿ ರೂ. 2ಜಿ, 2 ಲಕ್ಷ 84 ಸಾವಿರ ಕೋಟಿ ರೂ. ಕಲ್ಲಿದ್ದಲು, ಸ್ಪೆಕ್ಟ್ರಂ, ಕ್ರೀಡೆ ಸೇರಿದಂತೆ ಪ್ರತಿಯೊಂದರಲ್ಲೂ ಸಹಿತ ಭ್ರಷ್ಟಾಚಾರ-ಹಗರಣ ಮಾಡಿದರು. ಈಗ ಪ್ರಧಾನಿ ಮೋದಿ …

Read More »

ಉಪಚುನಾವಣೆಗಳಿಗೆ ಬಿಜೆಪಿ ಉಸ್ತುವಾರಿ ನೇಮಕ | ವಿಜಯೇಂದ್ರಗೆ ಸಿಗದ ಸ್ಥಾನ

ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ ಇಂದು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಎರಡೂ ಕ್ಷೇತ್ರಗಳ ಉಸ್ತುವಾರಿ ಪಟ್ಟಿಯಲ್ಲಿ ಮಾಜಿ ಸಿಎಂ ಬಿಎಸ್‍ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಸ್ಥಾನ ಸಿಗದಿರುವುದು ಇದೀಗ ಗಮನ ಸೆಳೆಯುತ್ತಿದೆ. ಸಿಂಧಗಿ ವಿಧಾನ ಸಭೆ ಕ್ಷೇತ್ರಕ್ಕೆ ಗೋವಿಂದ್ ಕಾರಜೋಳ, ವಿ.ಸೋಮಣ್ಣ, ಸಿ.ಸಿ ಪಾಟೀಲ್, ಶಶಿಕಲಾ ಜೊಲ್ಲೆ, ರಮೇಶ್ ಜಿಗಜಿಣಗಿ, ಬಸನಗೌಡ ಪಾಟೀಲ್ ಯತ್ನಾಳ, ಲಕ್ಷ್ಮಣ ಸವದಿ, ಸೋಮನಗೌಡ ಪಾಟೀಲ್, ಎ.ಎಸ್. ಪಾಟೀಲ್ …

Read More »